Dilpasand Darling Krishna: ದೋ ದಿಲ್ ಏಕ್ ಪಸಂದ್-ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ನಾಯ್ಡು ಬೇಜಾನ್ ಫನ್ !

ಇಲ್ಲಿ ದಿಲ್​ಪಸಂದ್ ಅಂತಲೇ ಟೈಟಲ್ ಇದ್ದರೂ ಬೇಕರಿ ಲವ್ ಸ್ಟೋರಿ ಏನೂ ಇಲ್ಲ. ಇಲ್ಲಿ ಬೇರೆ ರೀತಿಯ ಕಥೆಯನ್ನ ಡೈರೆಕ್ಟರ್ ಶಿವ ತೇಜಸ್ ಹೇಳಿದ್ದಾರೆ.

ದಿಲ್​ಪಸಂದ್ ಚಿತ್ರದ ಪ್ರಣಯದ ಚಿತ್ರಣ

ದಿಲ್​ಪಸಂದ್ ಚಿತ್ರದ ಪ್ರಣಯದ ಚಿತ್ರಣ

  • Share this:
ಡಾರ್ಲಿಂಗ್ ಕೃಷ್ಣ (Darling Krishna) ಅಭಿನಯದಲ್ಲಿ ಇನ್ನೂ ಒಂದು ಸಿನಿಮಾ ರಿಲೀಸ್ ಗೆ ರೆಡಿ ಆಗುತ್ತಿದೆ. ಈ ಚಿತ್ರದ ಟೈಟಲ್ ವಿಶೇಷ ಅನಿಸುತ್ತದೆ. ಅದರಲ್ಲೂ ಇದು ಲವ್ ಸ್ಟೋರಿ ಇರೋ (Cinema) ಸಿನಿಮಾ. ಟೈಟಲ್​ಗೂ ಸಿನಿಮಾ ಕಥೆಗೂ ಎಲ್ಲಿಂದ ಎಲ್ಲಿ ಲಿಂಕ್..? ಹೀಗೆ ಕೇಳೋರಿಗೆ ಇಲ್ಲೊಂದಷ್ಟು ಉತ್ತರ ಸಿಕ್ಕಿದೆ. ಸ್ವತಃ ಚಿತ್ರದ ನಿರ್ಮಾಪಕರೂ (Producer) ಆಗಿರೋ ಸುಮಂತ್ ಕ್ರಾಂತಿ ತಮ್ಮ ಈ ಚಿತ್ರದ ಇನ್ನೂ ಹಲವು ವಿಷಯಗಳನ್ನ ಬಿಟ್ಟುಕೊಟ್ಟಿದ್ದು, ಚಿತ್ರದ ರಿಲೀಸ್ ಡೇಟ್ (Film Release Date) ಅನ್ನೂ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಅದರಂತೆ ಈಗ ಕೃಷ್ಣನ ಈ ಒಂದು ದಿಲ್​ಪಸಂದ್ ಸಿನಿಮಾ ಇದೇ ವರ್ಷ ನವೆಂಬರ್-11 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ.

ದಿಲ್​ಪಸಂದ್ ಟೈಟಲ್ ತುಂಬಾ ಮಜವಾಗಿದ್ದು ಚಿತ್ರದ ಟೈಟಲ್ ನೋಡಿದಾಕ್ಷಣ ಇಲ್ಲವೇ ಕೇಳಿದಾಕ್ಷಣ ಬೇಕರಿ ನೆನಪಾಗುತ್ತದೆ. ತುಂಬಾ ವಿಶೇಷ ಅನಿಸೋ ದಿಲ್​ಪಸಂದ್ ನೆನಪಿಗೆ ಬಂದೇ ಬರುತ್ತದೆ. ಆದರೆ, ಇಲ್ಲಿ ದಿಲ್​ಪಸಂದ್ ಅಂತಲೇ ಟೈಟಲ್ ಇದ್ದರೂ ಬೇಕರಿ ಲವ್ ಸ್ಟೋರಿ ಏನೂ ಇಲ್ಲಿ ಇಲ್ಲ. ಇಲ್ಲಿ ಬೇರೆ ರೀತಿಯ ಕಥೆಯನ್ನೆ ಡೈರೆಕ್ಟರ್ ಶಿವ ತೇಜಸ್ ಹೇಳಿದ್ದಾರೆ. ಅದಕ್ಕೆನೆ ದಿಲ್​ಪಸಂದ್ ಅಂತಲೇ ಟೈಟಲ್ ಇಟ್ಟಿದ್ದಾರೆ.

ದಿಲ್​ಪಸಂದ್ ಚಿತ್ರದಲ್ಲಿ ಲವೂ ಇದೆ ಭಾವನೆಗಳ ನೋವು ಇದೆ
ದಿಲ್​ಪಸಂದ್ ಒಂದು ರೀತಿಯ ಲವ್ಲಿ ಕಥೆ ಇರೋ ಸಿನಿಮಾನೇ. ಆದರೆ ಇಲ್ಲಿ ಲವ್​ ಜೊತೆಗೆ ಎಮೋಷನ್ಸ್ ಕೂಡ ಇವೆ. ಭಾವನಾತ್ಮಕ ಸೆಳತವೂ ಇಲ್ಲಿ ಎದ್ದು ಕಾಣುತ್ತದೆ. ದಿಲ್​ಪಸಂದ್ ನಲ್ಲಿ ಫ್ರೂಟ್ಸ್ ಮತ್ತು ಸಿಹಿ ಎರಡೂ ಇರುತ್ತದೆ. ಅದೇ ರೀತಿ ಇಲ್ಲಿ ಪ್ರೀತಿ, ಫನ್ ಹಾಗೂ ಎಮೋಷನ್ ಹೀಗೆ ಎಲ್ಲವೂ ಇಲ್ಲಿ ಮಿಕ್ಸ್ ಆಗಿಯೇ ಎಂಟರಟೈನ್ ಮಾಡಲು ದಿಲ್​ಪಸಂದ್ ರೆಡಿ ಆಗಿದೆ.

Kannada Dilpasand Release On this year November-11
ದಿಲ್ ಪಸಂದ್ ಇದೇ ನವೆಂಬರ್ 11 ಕ್ಕೆ ರಿಲೀಸ್


ದಿಲ್​ ಪಸಂದ್ ಚಿತ್ರದಲ್ಲೊಂದಿದೆ  ಸರ್ಪ್ರೈಜ್
ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ಅಭಿನಯದ ಈ ಚಿತ್ರದಲ್ಲಿ ಒಂದಷ್ಟು ವಿಶೇಷತೆಗಳು ಇವೆ. ಅದರಲ್ಲೂ ಈ ಚಿತ್ರದಲ್ಲಿ ಒಬ್ಬ ಬಿಗ್ ಸ್ಟಾರ್​ ಕೂಡ ಅಭಿನಯಿಸಿದ್ದಾರೆ. ಆದರೆ, ಈ ವಿಷಯವನ್ನ ಸಿನಿಮಾ ತಂಡ ಈಗಲೇ ಬಿಟ್ಟುಕೊಟ್ಟಿಲ್ಲ. ನಂತರವೇ ಸಿನಿಮಾ ತಂಡ ಇದನ್ನ ರಿವೀಲ್ ಮಾಡಲಿದೆ.

ದಿಲ್​ಪಸಂದ್ ಚಿತ್ರದ ಹಿಂದೆ ಇರೋ ಟೆಕ್ನಿಷನ್​ಗಳು ಯಾರು
ಕಿಕ್ ಸ್ಟಾರ್ಟ್ ಲವ್ ಅಂತಲೇ ಉಪ ಶೀರ್ಷಿಕೆ ಹೊಂದಿರೋ ಕನ್ನಡದ ಈ ದಿಲ್​ಪಸಂದ್​ ಹಿಂದೆ ಒಳ್ಳೆ ಟೀಮ್ ಕೆಲಸ ಮಾಡಿದೆ. ಅರ್ಜುನ್ ಜನ್ಯರಂತಹ ಸಂಗೀತ ನಿರ್ದೇಶಕರು ಚಿತ್ರಕ್ಕಾಗಿ ಐದು ಹಾಡುಗಳನ್ನೇ ಮಾಡಿಕೊಟ್ಟಿದ್ದಾರೆ. ಶಿವ ತೇಜಸ್ ರಂತಹ ನಿರ್ದೇಶಕರು ಇದಕ್ಕಾಗಿಯೇ ಕೆಲಸ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಎಲ್ಲ ಕೆಲಸಗಳು ಪೂರ್ಣಗೊಂಡಿದೆ.

ಸೆನ್ಸಾರ್ ಗೆ ಹೋಗ್ತಾಯಿದೆ ಕನ್ನಡದ ದಿಲ್​ಪಸಂದ್ ಸಿನಿಮಾ
ದಿಲ್​ಪಸಂದ್ ಸಿನಿಮಾದ ಎಲ್ಲ ಕೆಲಸಗಳೂ ಆಲ್​ ಮೋಸ್ಟ್ ಮುಗಿದಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಸುಮಂತ್ ಕ್ರಾಂತಿ ಸೆನ್ಸಾರ್​ಗೂ ಹೋಗಿದ್ದಾರೆ. ಸೆನ್ಸಾರ್​ಗೂ ಮುಂಚೇನೆ ಚಿತ್ರದ ರಿಲೀಸ್​ ಡೇಟ್​ ಕೂಡ ಅನೌನ್ಸ್ ಮಾಡಿದ್ದಾರೆ.

ನವೆಂಬರ್​-11 ಕ್ಕೆ ದಿಲ್ ಪಸಂದ್ ಸಿನಿಮಾ ರಿಲೀಸ್
ದಿಲ್​ಪಸಂದ್ ಸಿನಿಮಾವನ್ನ ಸಿನಿಮಾ ತಂಡ ಬೆಂಗಳೂರಿನಲ್ಲಿಯೇ ಬಹುತೇಕ ಭಾಗ ಚಿತ್ರೀಕರಿಸಿದೆ. ಇಂತಹ ಈ ಚಿತ್ರವನ್ನ ಇದೇ ವರ್ಷ ನವೆಂಬರ್ 11 ಕ್ಕೆ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದ್ದು, ಅತೀ ಶೀಘ್ರದಲ್ಲಿಯೇ ಚಿತ್ರದ ಹಾಡುಗಳೂ ರಿಲೀಸ್ ಆಗುತ್ತಿವೆ. ವೇಟ್ ಮಾಡಿ.
First published: