Darbar Second Look poster: ಮತ್ತೆ ಚಿರಯೌವ್ವನಕ್ಕೆ ಮರಳಿದ ರಜನಿ; ‘ಪೆಟ್ಟಾ’ ಮೀರಿಸುತ್ತಾ ದರ್ಬಾರ್?

ಎರಡು ದಶಕದ ಬಳಿಕ ರಜನಿಕಾಂತ್ ಪೊಲೀಸ್ ಪಾತ್ರದೊಂದಿಗೆ ಮರಳುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಹಾಗೆಯೇ ಸೂಪರ್ ಸ್ಟಾರ್​ಗೆ ಚಿತ್ರದಲ್ಲಿ ನಾಯಕಿಯಾಗಿರುವುದು ಕಾಲಿವುಡ್​ನ ಲೇಡಿ ಸೂಪರ್ ಸ್ಟಾರ್ ನಯನತಾರ.

Rajesh Duggumane | news18-kannada
Updated:September 11, 2019, 9:56 PM IST
Darbar Second Look poster: ಮತ್ತೆ ಚಿರಯೌವ್ವನಕ್ಕೆ ಮರಳಿದ ರಜನಿ; ‘ಪೆಟ್ಟಾ’ ಮೀರಿಸುತ್ತಾ ದರ್ಬಾರ್?
ರಜನಿಕಾಂತ್​
  • Share this:
‘ಪೆಟ್ಟಾ’ ಸಿನಿಮಾ ನೋಡಿದ ನಂತರ ಅಭಿಮಾನಿಗಳಿಗೆ 90ರ ದಶಕದ ರಜನಿ ನೆನಪಾಗಿದ್ದರು. ಈ ಸಿನಿಮಾದಲ್ಲಿ ರಜನಿ ನಟನೆ, ಅವರ ಹಾವ ಭಾವ, ಅವರ ಸ್ಟೈಲ್​ ಎಲ್ಲವೂ ರಜನಿಯ ಹಳೆಯ ಸಿನಿಮಾಗಳನ್ನು ನೆಪಿಸಿತ್ತು. ಈಗ ಅವರ ನಟನೆಯ ‘ದರ್ಬಾರ್​’ ಸಿನಿಮಾದ ಹೊಸ​ ಪೋಸ್ಟರ್​ ರಿಲೀಸ್​ ಆಗಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಈ ಮೊದಲು ರಿಲೀಸ್​ ಆಗಿದ್ದ ಪೋಸ್ಟರ್​ನಲ್ಲಿ ರಜನಿ ಖಡಕ್ ಖಾಕಿಯಲ್ಲಿ ಮಿಂಚಿದ್ದರು. ಮತ್ತೊಂದು ಪೋಸ್ಟರ್​ನಲ್ಲಿ ರಾಯಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಈಗ ಬಿಡುಗಡೆ ಆಗಿರುವ ಅವರ ಲುಕ್​ ತುಂಬಾನೇ ಭಿನ್ನವಾಗಿದೆ. ಹಳೆಯ ಗೋಡಾನ್​ ಒಂದರಲ್ಲಿ ರಜನಿ ಕಬ್ಬಿಣದ ಸಲಾಕೆ ಹಿಡಿದು ನಿಂತಿದ್ದಾರೆ. ಅವರ ದೇಹದ ಫಿಟ್​ನೆಸ್​, ರಗಡ್​ ಲುಕ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನು ಪೋಸ್ಟರ್​ ನೋಡಿದ ಅವರ ಅಭಿಮಾನಿಗಳಿಗೆ ಹಳೆಯ ರಜನಿ ನೆನಪಾಗಿದ್ದಾರೆ. 'ಪೆಟ್ಟಾ' ಸಿನಿಮಾವನ್ನು 'ದರ್ಬಾರ್​' ಮೀರಿಸಲಿದೆ ಎಂದು ಅನೇಕರು ಭವಿಷ್ಯ ನುಡಿದಿದ್ದಾರೆ.

ಎರಡು ದಶಕದ ಬಳಿಕ ರಜನಿಕಾಂತ್ ಪೊಲೀಸ್ ಪಾತ್ರದೊಂದಿಗೆ ಮರಳುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಹಾಗೆಯೇ ಸೂಪರ್ ಸ್ಟಾರ್​ಗೆ ಚಿತ್ರದಲ್ಲಿ ನಾಯಕಿಯಾಗಿರುವುದು ಕಾಲಿವುಡ್​ನ ಲೇಡಿ ಸೂಪರ್ ಸ್ಟಾರ್ ನಯನತಾರ.

ಇದನ್ನೂ ಓದಿ: ವಿಭಿನ್ನ ಗೆಟಪ್​ನಲ್ಲಿ ಸೂಪರ್ ಸ್ಟಾರ್ ರಜನಿಯ ದರ್ಬಾರ್

ಈ ಹಿಂದೆ ರಜನಿಕಾಂತ್ ಅವರ 'ರೋಬೋ' ಹಾಗೂ '2.O' ಚಿತ್ರಗಳನ್ನು ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ಸ್​ ಈ ಚಿತ್ರಕ್ಕೂ ಬಂಡವಾಳ ಹೂಡಿದೆ. ಅದೇ ರೀತಿ 'ಕತ್ತಿ' ಹೆಸರಿನ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ್ದ ಎ.ಆರ್ ಮುರುಗದಾಸ್ 'ದರ್ಬಾರ್' ಮೂಲಕ ಮತ್ತೊಮ್ಮೆ ಸಕ್ಸಸ್ ಟ್ರ್ಯಾಕ್​ಗೆ ಮರಳುವ ವಿಶ್ವಾಸದಲ್ಲಿದ್ದಾರೆ.

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ