Darbar Motion Poster: ಖಾಕಿ ತೊಟ್ಟ ಸೂಪರ್​ಸ್ಟಾರ್​ ದರ್ಬಾರ್​; ಯೂಟ್ಯೂಬ್​ನಲ್ಲಿ ರಜನಿಕಾಂತ್ ಅಬ್ಬರ ಶುರು

Darbar Movie Motion Poster: ಇಂದು ಸಂಜೆ ದರ್ಬಾರ್ ಸಿನಿಮಾದ ತಮಿಳು, ತೆಲುಗು, ಮಲೆಯಾಳಂ, ಹಿಂದಿ ಮೋಷನ್ ಪೋಸ್ಟರ್​ಗಳು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ. ರಿಲೀಸ್ ಆಗಿ 2 ಗಂಟೆಯೊಳಗೆ ದರ್ಬಾರ್ ತಮಿಳು ಮೋಷನ್ ಪೋಸ್ಟರ್ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಜನರಿಂದ ನೋಡಲ್ಪಟ್ಟಿದೆ.

Sushma Chakre | news18-kannada
Updated:November 7, 2019, 8:50 PM IST
Darbar Motion Poster: ಖಾಕಿ ತೊಟ್ಟ ಸೂಪರ್​ಸ್ಟಾರ್​ ದರ್ಬಾರ್​; ಯೂಟ್ಯೂಬ್​ನಲ್ಲಿ ರಜನಿಕಾಂತ್ ಅಬ್ಬರ ಶುರು
ದರ್ಬಾರ್ ಸಿನಿಮಾದಲ್ಲಿ ರಜಿನಿಕಾಂತ್ ಲುಕ್
Sushma Chakre | news18-kannada
Updated: November 7, 2019, 8:50 PM IST
ಸೂಪರ್​ಸ್ಟಾರ್ ರಜನಿಕಾಂತ್​ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬ. ವಯಸ್ಸಾಗುತ್ತಿದ್ದರೂ ರಜನಿಕಾಂತ್ ಬೇಡಿಕೆಯೇನೂ ಕಡಿಮೆಯಾಗಿಲ್ಲ. ತಮ್ಮ ಸ್ಟೈಲ್, ಮ್ಯಾನರಿಸಂ ಮೂಲಕ ಇಂದಿಗೂ ಹಳೇ ಚಾರ್ಮ್ ಉಳಿಸಿಕೊಂಡಿರುವ ರಜನಿಕಾಂತ್​ಗೆ ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲ ಇಡೀ ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ.

ಮೂಲತಃ ಬೆಂಗಳೂರಿನವರಾದ ರಜನಿಕಾಂತ್ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಂತರ ಸೂಪರ್​ಸ್ಟಾರ್ ಆದರು.  ಅವರ 'ಕಬಾಲಿ' ಸಿನಿಮಾ ಬಳಿಕ ತೆರೆಕಂಡ 'ಕಾಲ' ಮತ್ತು '2.0' ಸಿನಿಮಾಗಳೆರಡೂ ಹೆಚ್ಚು ಸದ್ದು ಮಾಡಿರಲಿಲ್ಲ. ಇದೇ ವರ್ಷ ಜನವರಿಯಲ್ಲಿ ತೆರೆಕಂಡ 'ಪೆಟ್ಟ ಸಿನಿಮಾ ರಜನಿಕಾಂತ್ ಇನ್ನೂ ತಮ್ಮ ಚಾರ್ಮ್​ ಕಳೆದುಕೊಂಡಿಲ್ಲ ಎಂಬುದನ್ನು ಸಾಬೀತುಪಡಿಸಿತ್ತು. ಸೂಪರ್ ಹಿಟ್ ಆಗಿದ್ದ 'ಪೆಟ್ಟ' ಸಿನಿಮಾ ರಜನಿಕಾಂತ್ ಅವರ ಹಳೇ ಲುಕ್​ ಅನ್ನು ಮರಳಿ ಕೊಟ್ಟಿತ್ತು.



ಇದೀಗ ರಜನಿಕಾಂತ್ ಅಭಿನಯದ 'ದರ್ಬಾರ್' ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇಂದು ಸಂಜೆ ದರ್ಬಾರ್ ಸಿನಿಮಾದ ತಮಿಳು, ತೆಲುಗು, ಮಲೆಯಾಳಂ, ಹಿಂದಿ ಮೋಷನ್ ಪೋಸ್ಟರ್​ಗಳು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ. ರಿಲೀಸ್ ಆಗಿ 2 ಗಂಟೆಯೊಳಗೆ ದರ್ಬಾರ್ ತಮಿಳು ಮೋಷನ್ ಪೋಸ್ಟರ್ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಜನರಿಂದ ನೋಡಲ್ಪಟ್ಟಿದೆ. ಈ ಪೋಸ್ಟರ್​ನಲ್ಲಿ ರಜನಿಯ ಲುಕ್ ನೋಡಿದವರು ಖುಷಿಯಾಗಿದ್ದಾರೆ.



ಈ ಸಿನಿಮಾದಲ್ಲಿ ರಜನಿಕಾಂತ್​ಗೆ ಜೋಡಿಯಾಗಿ ನಯನತಾರಾ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್​ ಅಡಿಯಲ್ಲಿ ತೆರೆಗೆ ಬರಲಿರುವ 'ದರ್ಬಾರ್' ಸಿನಿಮಾ ಮೋಷನ್ ಪೋಸ್ಟರ್​ ಹಿನ್ನೆಲೆ ಸಂಗೀತ ನೀಡಿರುವ ರಜನಿಕಾಂತ್ ಸಂಬಂಧಿ ಅನಿರುದ್ಧ್​ ರವಿಚಂದರ್ ಕುರಿತೂ ಸಾಕಷ್ಟು ಮೆಚ್ಚುಗೆಗಳು ಕೇಳಿಬಂದಿವೆ. ತಮಿಳು ನಟ ಕಮಲ್ ಹಾಸನ್, ತೆಲುಗು ನಟ ಮಹೇಶ್ ಬಾಬು ರಜನಿಕಾಂತ್ ಹೊಸ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡು ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.



ತಮಿಳು, ತೆಲುಗು, ಮಲೆಯಾಳಂ, ಹಿಂದಿ ಮೋಷನ್ ಪೋಸ್ಟರ್​ಗಳನ್ನು ಇಂದು ಸಂಜೆ ಕಮಲ್ ಹಾಸನ್, ಮಹೇಶ್ ಬಾಬು, ಮೋಹನ್ ಲಾಲ್ ಮತ್ತು ಸಲ್ಮಾನ್ ಖಾನ್ ಆಯಾ ಭಾಷೆಗಳಲ್ಲಿ ರಿಲೀಸ್ ಮಾಡಿದ್ದಾರೆ. ಸ್ಟೈಲಿಶ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ರಜನಿಕಾಂತ್ ಈ ಸಿನಿಮಾ ಮೂಲಕ ಮತ್ತೊಂದು ಪಕ್ಕಾ ಕಮರ್ಷಿಯಲ್ ಮನರಂಜನಾತ್ಮಕ ಸಿನಿಮಾ ಕೊಡುವುದರಲ್ಲಿ ಅನುಮಾನವೇ ಇಲ್ಲ.


ಪೊಲೀಸ್ ಆಫೀಸರ್ ಆಗಿ ದರ್ಬಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ರಜನಿಕಾಂತ್ 25 ವರ್ಷಗಳ ಬಳಿಕ ಮತ್ತೊಮ್ಮೆ ಖಾಕಿ ಧರಿಸಿದ್ದಾರೆ. ದರ್ಬಾರ್ ಸಿನಿಮಾದಲ್ಲಿ 2 ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಳ್ಳಲಿದ್ದಾರೆ. ಪೊಲೀಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತನಾಗಿ 2 ಬಗೆಯ ಶೇಡ್​ನಲ್ಲಿ ರಜನಿಕಾಂತ್ ದರ್ಬಾರ್ ನಡೆಸಲಿದ್ದಾರೆ.



2020ರ ಜನವರಿ 10ಕ್ಕೆ ಸಂಕ್ರಾಂತಿ ವೇಳೆಗೆ ದರ್ಬಾರ್ ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ. ಈ ಸಿನಿಮಾವನ್ನು ಎ.ಆರ್. ಮುರುಗದಾಸ್ ನಿರ್ದೇಶಿಸಿದ್ದಾರೆ.
First published:November 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...