Darbar first song out: ಚುಮ್ಮಾ ಕಿಳಿ...ಸೂಪರ್ ಸ್ಟಾರ್ ರಜನಿಕಾಂತ್ ದರ್ಬಾರ್​ ಶುರು..!

Darbar first song out: ಕೆಲ ತಿಂಗಳ ಹಿಂದೆಯಷ್ಟೇ ದರ್ಬಾರ್ ಚಿತ್ರದಲ್ಲಿನ ರಜನಿಕಾಂತ್ ಪಾತ್ರದ ಫೋಟೋ ಝಲಕ್​ಗಳನ್ನು ಮುರುಗದಾಸ್ ಬಹಿರಂಗ ಪಡಿಸಿದ್ದರು. ಈ ಚಿತ್ರದಲ್ಲಿ ರಜನಿ ಖಡಕ್ ಖಾಕಿಯಲ್ಲಿ ಮಿಂಚಲಿದ್ದು, ಹಾಗೆಯೇ ಚಿತ್ರದ ಮತ್ತೊಂದು ಪೋಸ್ಟರ್​ನಲ್ಲಿ ರಾಯಲ್ ಲುಕ್ ಕಾಣಿಸಿಕೊಂಡಿದ್ದರು.

zahir | news18-kannada
Updated:November 28, 2019, 3:49 PM IST
Darbar first song out: ಚುಮ್ಮಾ ಕಿಳಿ...ಸೂಪರ್ ಸ್ಟಾರ್ ರಜನಿಕಾಂತ್ ದರ್ಬಾರ್​ ಶುರು..!
Darbar
  • Share this:
'ಕಬಾಲಿ' ಡ ಎಂದು ಘರ್ಜಿಸಿದ್ದ ಸೂಪರ್ ಸ್ಟಾರ್ ಬಳಿಕ​ 'ಕಾಳ'ನಾಗಿ ಮೆರೆದಿದ್ದರು. ಇದರ ಬೆನ್ನಲ್ಲೇ 'ಪೆಟ್ಟಾ' ಮೂಲಕ ತಮ್ಮ ಹಳೆಯ ಲುಕ್​ಗೆ ರಜನಿಕಾಂತ್ ಮರಳಿದ್ದರು. ಇನ್ಯಾವುದು ರಜನಿ ಅವತಾರ ಎಂಬ ಪ್ರಶ್ನೆ ಮೂಡುತ್ತಿದ್ದಂತೆ ನಿರ್ದೇಶಕ ಎ.ಆರ್ ಮುರುಗದಾಸ್ ತಲೈವಾ ಜೊತೆಗೂಡಿ ಬಾಕ್ಸಾಫೀಸ್​ನಲ್ಲಿ 'ದರ್ಬಾರ್' ಮಾಡುವುದಾಗಿ ತಿಳಿಸಿದ್ದರು.

ಅದರಂತೆ ಚಿತ್ರತಂಡ ಮುಂಬೈನಲ್ಲಿ 'ದರ್ಬಾರ್' ಕೂಡ ಆರಂಭಿಸಿತ್ತು. ರಜನಿ 'ದರ್ಬಾರ್' ಆರಂಭವಾಗುತ್ತಿದ್ದಂತೆ ಸೂಪರ್ ಸ್ಟಾರ್ ಲುಕ್ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇಂತಹ ಕುತೂಹಲಕ್ಕೆ ನಿರ್ದೇಶಕರು ಕೆಲ ತಿಂಗಳ ಹಿಂದೆಯೇ ತೆರೆ ಎಳೆದಿದ್ದರು.

ಇದೀಗ ಚಿತ್ರ ಟೈಟಲ್ ಟ್ರ್ಯಾಕ್​ನ್ನು ದರ್ಬಾರ್ ತಂಡ ಬಿಡುಗಡೆ ಮಾಡಿದೆ. ಮಾಸ್ ಪ್ರೇಕ್ಷಕರಿಗಾಗಿಯೇ ಬ್ಯಾಂಡ್ ಬಜಾಯಿಸಿರುವ ಸಂಗೀತ ನಿರ್ದೇಶಕ ಅನಿರುದ್ಧ್ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಚುಮ್ಮ ಕಿಳಿ... ಗೀತೆಯನ್ನು ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ತಮಿಳು ಹಾಡಿಗೆ ಗಾನ ಗಂಧರ್ವ ಎಸ್​.ಬಿ ಬಾಲಸುಬ್ರಮಣ್ಯಂ ಧ್ವನಿ ನೀಡಿರುವುದು ವಿಶೇಷ. ಈ ಗೀತೆ ಯುಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿದ್ದು, ಲಿರಿಕಲ್ ವಿಡಿಯೋ ಹಾಡನ್ನು ಈಗಾಗಲೇ 70 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇನ್ನು ಚುಮ್ಮಾ ಕಿಳಿ... ಗೀತೆಯು ರಜನಿಯ ಡೈಲಾಗ್​ನೊಂದಿಗೆ ಆರಂಭವಾಗುತ್ತಿದ್ದು, ಕೊಲೆವೆರಿ, ಅಲುಮಾ ಡೋಲುಮಾ ಮೂಲಕ ಚಿತ್ರಮಂದಿರಲ್ಲಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಅನಿರುದ್ಧ್ ದರ್ಬಾರ್​ನಲ್ಲೂ ಅದನ್ನು ಪುನರಾವರ್ತಿಸಲಿದ್ದಾರೆ ಎನ್ನಲಾಗುತ್ತಿದೆ.

ಕೆಲ ತಿಂಗಳ ಹಿಂದೆಯಷ್ಟೇ 'ದರ್ಬಾರ್' ಚಿತ್ರದಲ್ಲಿನ ರಜನಿಕಾಂತ್ ಪಾತ್ರದ ಫೋಟೋ ಝಲಕ್​ಗಳನ್ನು ಮುರುಗದಾಸ್ ಬಹಿರಂಗ ಪಡಿಸಿದ್ದರು. ಈ ಚಿತ್ರದಲ್ಲಿ ರಜನಿ ಖಡಕ್ ಖಾಕಿಯಲ್ಲಿ ಮಿಂಚಲಿದ್ದು, ಹಾಗೆಯೇ ಚಿತ್ರದ ಮತ್ತೊಂದು ಪೋಸ್ಟರ್​ನಲ್ಲಿ ರಾಯಲ್ ಲುಕ್ ಕಾಣಿಸಿಕೊಂಡಿದ್ದರು. ಹೀಗಾಗಿ 'ದರ್ಬಾರ್'​ನಲ್ಲಿ ರಜನಿ ದ್ವಿಪಾತ್ರದಲ್ಲಿ ಬಾಕ್ಸಾಫೀಸ್ 'ದರ್ಬಾರ್'​ ಮಾಡಲಿದ್ದಾರಾ ಎಂಬ ಪ್ರಶ್ನೆಯೊಂದಿದೆ.

ಹಾಗೆಯೇ ದರ್ಬಾರ್ ಮೂಲಕ ಎರಡು ದಶಕದ ನಂತರ ರಜನಿಕಾಂತ್ ಪೊಲೀಸ್ ಪಾತ್ರದೊಂದಿಗೆ ಮರಳುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಹಾಗೆಯೇ ಸೂಪರ್ ಸ್ಟಾರ್​ಗೆ ಚಿತ್ರದಲ್ಲಿ ನಾಯಕಿಯಾಗಿರುವುದು ಕಾಲಿವುಡ್​ನ ಲೇಡಿ ಸೂಪರ್ ಸ್ಟಾರ್ ನಯನತಾರ. ಇನ್ನುಳಿದಂತೆ ನಯನತಾರ ಬಾಲಿವುಡ್​ ನಟರುಗಳಾದ ಸುನೀಲ್ ಶೆಟ್ಟಿ ಮತ್ತು ಪ್ರತೀಕ್ ಬಬ್ಬರ್ ಸಹ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ರಜನಿಕಾಂತ್ ಅವರ 'ರೋಬೋ' ಹಾಗೂ '2.O' ಚಿತ್ರಗಳನ್ನು ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ಸ್​ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಅದೇ ರೀತಿ 'ಕತ್ತಿ' ಎಂಬ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ್ದ ಎ.ಆರ್ ಮುರುಗದಾಸ್ 'ದರ್ಬಾರ್' ಮೂಲಕ ಮತ್ತೊಮ್ಮೆ ಸಕ್ಸಸ್ ಟ್ರ್ಯಾಕ್​ಗೆ ಮರಳುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: ಹಿಡ್ಕ ಹಿಡ್ಕ ಎಂದು ಹಾಡಿದರೂ ಒಂದು ಬಾರಿ ಕೂಡ ಅಪ್ಪಿಕೊಂಡಿಲ್ವಂತೆ..!
First published: November 28, 2019, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading