ನಾಳೆಯಿಂದ ಸಿನಿರಸಿಕರಿಗೆ ಹಬ್ಬದೂಟ; ರಿಲೀಸ್ ಆಗ್ತಿದೆ ನಾಲ್ಕು ಸ್ಟಾರ್ ನಟರ ಸಿನಿಮಾ

ನಾಳೆಯಿಂದ ಭಾನುವಾರದವರೆಗೆ ದಿನಕ್ಕೆ ಒಂದರಂತೆ ನಾಲ್ಕು ದೊಡ್ಡ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಇವುಗಳಲ್ಲಿ ಯಾವ ಸಿನಿಮಾ ಗೆಲ್ಲಲಿದೆ ಎನ್ನುವ ಕುತೂಹಲ ಕೂಡ ಮೂಡಿದೆ. ಇನ್ನು, ಈ ಬಾರಿಯ ಸಂಕ್ರಾಂತಿ ಕನ್ನಡ ಪ್ರೇಕ್ಷಕರ ಪಾಲಿಗೆ ತುಸು ಕಹಿಯನ್ನೇ ನೀಡಿದ್ದು, ಯಾವುದೇ ದೊಡ್ಡ ಬಜೆಟ್​ ಚಿತ್ರಗಳು ಬಿಡುಗಡೆ ಕಾಣುತ್ತಿಲ್ಲ.

Rajesh Duggumane | news18-kannada
Updated:January 8, 2020, 1:42 PM IST
ನಾಳೆಯಿಂದ ಸಿನಿರಸಿಕರಿಗೆ ಹಬ್ಬದೂಟ; ರಿಲೀಸ್ ಆಗ್ತಿದೆ ನಾಲ್ಕು ಸ್ಟಾರ್ ನಟರ ಸಿನಿಮಾ
ನಾಳೆಯಿಂದ ಭಾನುವಾರದವರೆಗೆ ದಿನಕ್ಕೆ ಒಂದರಂತೆ ನಾಲ್ಕು ದೊಡ್ಡ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಇವುಗಳಲ್ಲಿ ಯಾವ ಸಿನಿಮಾ ಗೆಲ್ಲಲಿದೆ ಎನ್ನುವ ಕುತೂಹಲ ಕೂಡ ಮೂಡಿದೆ. ಇನ್ನು, ಈ ಬಾರಿಯ ಸಂಕ್ರಾಂತಿ ಕನ್ನಡ ಪ್ರೇಕ್ಷಕರ ಪಾಲಿಗೆ ತುಸು ಕಹಿಯನ್ನೇ ನೀಡಿದ್ದು, ಯಾವುದೇ ದೊಡ್ಡ ಬಜೆಟ್​ ಚಿತ್ರಗಳು ಬಿಡುಗಡೆ ಕಾಣುತ್ತಿಲ್ಲ.
  • Share this:
ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಸ್ಟಾರ್​ ನಟರ ಸಿನಿಮಾಗಳು ತೆರೆಗೆ ಬರುವುದು ವಾಡಿಕೆ. ಈ ವೇಳೆ ಬಾಕ್ಸ್​ ಆಫೀಸ್​ನಲ್ಲಿ ಸ್ಟಾರ್​ ವಾರ್​ ನಡೆಯೋದು ಸಾಮಾನ್ಯ. ಅಂತೆಯೇ ಈ ಬಾರಿಯ ಸಂಕ್ರಾಂತಿ ಸಿನಿ ರಸಿಕರ ಪಾಲಿಗೆ ವಿಶೇಷವಾಗಲಿದೆ. ಕಾರಣ ಈ ಹಬ್ಬದ ಪ್ರಯುಕ್ತ ಸ್ಟಾರ್​ ನಟರ ನಾಲ್ಕು ಸಿನಿಮಾಗಳು ತೆರೆಗೆ ಬರುತ್ತಿವೆ.

ಹೌದು, ನಾಳೆಯಿಂದ ಭಾನುವಾರದವರೆಗೆ ದಿನಕ್ಕೆ ಒಂದರಂತೆ ನಾಲ್ಕು ದೊಡ್ಡ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಇವುಗಳಲ್ಲಿ ಯಾವ ಸಿನಿಮಾ ಗೆಲ್ಲಲಿದೆ ಎನ್ನುವ ಕುತೂಹಲ ಕೂಡ ಮೂಡಿದೆ. ಇನ್ನು, ಈ ಬಾರಿಯ ಸಂಕ್ರಾಂತಿ ಕನ್ನಡ ಪ್ರೇಕ್ಷಕರ ಪಾಲಿಗೆ ತುಸು ಕಹಿಯನ್ನೇ ನೀಡಿದ್ದು, ಯಾವುದೇ ದೊಡ್ಡ ಬಜೆಟ್​ ಚಿತ್ರಗಳು ಬಿಡುಗಡೆ ಕಾಣುತ್ತಿಲ್ಲ.

ಗುರುವಾರ ರಜನಿ ನಟನೆಯ 'ದರ್ಬಾರ್', ಶುಕ್ರವಾರ ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್​', ಶನಿವಾರ ಮಹೇಶ್​ ಬಾಬು ಹಾಗೂ ರಶ್ಮಿಕಾ ಮಂದಣ್ಣ ಒಟ್ಟಾಗಿ ಕಾಣಿಸಿಕೊಂಡ  ಸರಿಲೇರು ನೀಕೆವ್ವರು ಶನಿವಾರ ಭಾನುವಾರ ಅಲ್ಲು ಅರ್ಜುನ್​ ನಟನೆಯ ಅಲಾ ವೈಕುಂಠಪುರಂಲೋಬಿಡುಗಡೆ ಕಾಣುತ್ತಿವೆ.

ಇದನ್ನೂ ಓದಿ: ಅತಿ ಎತ್ತರದ ಯಶ್ ಕಟೌಟ್ ನಿಲ್ಲಿಸುವಾಗ ನಡೆಯಿತು ಅವಘಡ; ವಿಶ್ವದಾಖಲೆ ಕನಸು ಭಗ್ನ

ರಜನಿ ದರ್ಬಾರ್​:
ಗುರುವಾರದಿಂದ ರಜನಿಕಾಂತ್​ ದರ್ಬಾರ್​ ಆರಂಭವಾಗಲಿದೆ. ಅರ್ಥಾತ್​ ನಾಳೆ ರಜನಿ ಅಭಿನಯದ ದರ್ಬಾರ್​ ಸಿನಿಮಾ ರಿಲೀಸ್​ ಆಗುತ್ತಿದೆ. ಎರಡು ದಶಕದ ಬಳಿಕ ರಜನಿಕಾಂತ್ ಪೊಲೀಸ್ ಪಾತ್ರದೊಂದಿಗೆ ಮರಳುತ್ತಿರುವುದು ಮತ್ತೊಂದು ವಿಶೇಷ. ಹಾಗೆಯೇ ಸೂಪರ್ ಸ್ಟಾರ್​ಗೆ ಚಿತ್ರದಲ್ಲಿ ನಾಯಕಿಯಾಗಿರುವುದು ಕಾಲಿವುಡ್​ನ ಲೇಡಿ ಸೂಪರ್ ಸ್ಟಾರ್ ನಯನತಾರ. ಈ ಎಲ್ಲ ಕಾರಣಕ್ಕೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.

‘ಪೆಟ್ಟಾ’ ಸಿನಿಮಾ ನೋಡಿದ ನಂತರ ಅಭಿಮಾನಿಗಳಿಗೆ 90ರ ದಶಕದ ರಜನಿ ನೆನಪಾಗಿದ್ದರು. ಆ ಚಿತ್ರದಲ್ಲಿ ರಜನಿ ನಟನೆ, ಅವರ ಹಾವ ಭಾವ, ಅವರ ಸ್ಟೈಲ್​ ಎಲ್ಲವೂ ರಜನಿಯ ಹಳೆಯ ಸಿನಿಮಾಗಳನ್ನು ನೆಪಿಸಿತ್ತು. ಈಗ ಈ ಚಿತ್ರ ಪೆಟ್ಟಾವನ್ನು ಮೀರಿಸಲಿದೆಯೇ ಎನ್ನುವ ಕುತೂಹಲ ಮೂಡಿದೆ.ಈ ಹಿಂದೆ ರಜನಿಕಾಂತ್ ಅವರ 'ರೋಬೋ' ಹಾಗೂ '2.O' ಚಿತ್ರಗಳನ್ನು ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ಸ್​ ಈ ಚಿತ್ರಕ್ಕೂ ಬಂಡವಾಳ ಹೂಡಿದೆ. 'ಕತ್ತಿ' ಹೆಸರಿನ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ್ದ ಎ.ಆರ್ ಮುರುಗದಾಸ್ 'ದರ್ಬಾರ್' ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಜೆಎನ್​ಯು ಪ್ರತಿಭಟನೆಗೆ ದೀಪಿಕಾ ಬೆಂಬಲ; ಚಪಾಕ್ ಸಿನಿಮಾ​ ಬಹಿಷ್ಕರಿಸಲು ಟ್ವಿಟ್ಟರ್​ನಲ್ಲಿ ಆಂದೋಲನ

ಆ್ಯಸಿಡ್​ ದಾಳಿ ಸಂತ್ರಸ್ತೆಯ ಕತೆ ಚಪಾಕ್:

‘ಪದ್ಮಾವತ್​’ ತೆರೆಕಂಡ ನಂತರ ದೀಪಿಕಾ ಪಡುಕೋಣೆ ‘ಚಪಾಕ್​’ ಮೂಲಕ ತೆರೆಮೇಲೆ ಬರುತ್ತಿದ್ದಾರೆ. ಆ್ಯಸಿಡ್ ಸಂತ್ರಸ್ತೆ, ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮೀ ಅಗರ್​ವಾಲ್ ಜೀವನಾಧಾರಿತ ಸಿನಿಮಾ ಇದಾಗಿದ್ದು, ಲಕ್ಷ್ಮೀ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ.

ಮೇಘನಾ ಗುಲ್ಜಾರ್ ನಿರ್ದೇಶನದ 'ಚಪಾಕ್' ಚಿತ್ರಕ್ಕೆ ದೀಪಿಕಾ ಪಡುಕೋಣೆ ಕೂಡ ಬಂಡವಾಳ ಹೂಡಿದ್ದಾರೆ ಎಂಬುದು ವಿಶೇಷ. ಇದುವರೆಗೂ ಪೌರಾಣಿಕ ಹಿನ್ನೆಲೆಯುಳ್ಳ ಮತ್ತು ಕಮರ್ಷಿಯಲ್ ಸಿನಿಮಾಗಳಲ್ಲೇ ಕಾಣಿಸಿಕೊಂಡಿದ್ದ ದೀಪಿಕಾ ಮೊದಲ ಬಾರಿಗೆ ಬಯೋಪಿಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು, ಜೆಎನ್​ಯು ಪ್ರತಿಭಟನೆಗೆ ದೀಪಿಕಾ ಬೆಂಬಲ ನೀಡಿದ ನಂತರ #boycottchhapaak ಹಾಗೂ #boycottdeepika ಹೆಸರಿನ ಹ್ಯಾಶ್​ಟ್ಯಾಗ್​ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆಗಿದೆಇದು ‘ಚಪಾಕ್​’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ಟಾಲಿವುಡ್​ನಲ್ಲಿ ಸ್ಟಾರ್​ ಸಿನಿಮಾಗಳ ವಾರ್​:

ಟಾಲಿವುಡ್​ನಲ್ಲಿ ಸಂಕ್ರಾಂತಿ ನಿಮಿತ್ತ ಎರಡು ಸ್ಟಾರ್​ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿವೆ. ಮಹೇಶ್​ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಶನಿವಾರ ಹಾಗೂ ಅಲ್ಲು ಅರ್ಜುನ್​ ನಟನೆಯ ‘ಅಲಾ ವೈಕುಂಠಪುರಂಲೋ’ ಚಿತ್ರ ಭಾನುವಾರ ತೆರೆಗೆ ಬರುತ್ತಿದೆ. ಹೀಗಾಗಿ ತೆಲುಗು ಬಾಕ್ಸ್​ ಆಫೀಸ್​ನಲ್ಲಿ ಬಿಗ್​ ಫೈಟ್​ ನಡೆಯೋದು ಪಕ್ಕಾ ಎನ್ನಲಾಗಿದೆ.

‘ಸರಿಲೇರು ನೀಕೆವ್ವರು’ ಸಿನಿಮಾಗೆ ಅನಿಲ್​ ರವಿಪುಡಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇವರು ಈ ಮೊದಲು ‘ಎಫ್​ 2’ ಸಿನಿಮಾ ನಿರ್ದೇಶನ ಮಾಡಿ ಹೆಸರು ಮಾಡಿದ್ದಾರೆ. ಈ ಚಿತ್ರದಲ್ಲಿ ಮಹೇಶ್​ ಬಾಬುಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಇನ್ನು, ‘ಅಲಾ ವೈಕುಂಠಪುರಂಲೋ’ ಚಿತ್ರವನ್ನು ತ್ರಿವಿಕ್ರಂ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
First published:January 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ