ಮತ್ತೆ ಬರ್ತಿದ್ದಾರೆ `ಹಂಬಲ್​ ಪೊಲಿಟಿಷಿಯನ್​ ನೊಗ್​ರಾಜ್​​’: ವೂಟ್​ ಸೆಲೆಕ್ಟ್​ನ ಹೊಸ ವೆಬ್​ ಸೀರೀಸ್​ ಟೀಸರ್​ ಔಟ್​!

“ಹಂಬಲ್ ಪೊಲಿಟೀಷಿಯನ್ ನೊಗ್‌ರಾಜ್” ವೆಬ್ ಸೀರಿಸ್‌ (Web Series)ನ ಮೊದಲ ಟೀಸರ್ ಡಿಸೆಂಬರ್​ 17ರಂದು ಬಿಡುಗಡೆಯಾಗಿದ್ದು, ಜನವರಿ 6ಕ್ಕೆ ಅದ್ಧೂರಿಯಾಗಿ ವೂಟ್ ಸೆಲೆಕ್ಟ್‌ (Voot Select)ನಲ್ಲಿ ಬಿಡುಗಡೆಯಾಗಲಿದೆ.

ನಟ ದಾನಿಶ್​ ಸೇಠ್​

ನಟ ದಾನಿಶ್​ ಸೇಠ್​

  • Share this:
ದಾನಿಶ್​ ಸೇಠ್​ (Danish Sait) ಅವರ ಬಗ್ಗೆ ಪರಿಚಯ ಮಾಡಿಸಿಕೊಡುವ ಅವಶ್ಯಕತೆ ಇಲ್ಲ. ನಟ (Actor), ನಿರೂಪಕ (Anchor)ರಾಗಿ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ಆರ್​ಸಿಬಿ (RCB)  ತಂಡ ಇನ್​ಸೈಡರ್​ ಮಿಸ್ಟರ್​ ನಾಗ್ಸ್​ ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಹೀರೋ ಆಗಿಯೂ ದಾನಿಶ್​ ಸೇಠ್​ ಕಾಣಿಸಿಕೊಂಡಿದ್ದಾರೆ. ಅವರು ಅಭಿನಯಿಸಿರುವ ‘ಫ್ರೆಂಚ್​​ ಬಿರಿಯಾನಿ’, ‘ಹಂಬಲ್ ಪೊಲಿಟಿಷಿಯನ್ ನೊಗ್​ರಾಜ್​​’ (Humble Politician Nograj) ಚಿತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಇವರ ಮೊದಲ ಸಿನಿಮಾ ಹಂಬಲ್​ ಪೊಲಿಟಿಷಿಯನ್​ ನೊಗ್​ರಾಜ್​​ ಸಿನಿಮಾ ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತು. “ಹಂಬಲ್ ಪೊಲಿಟೀಷಿಯನ್ ನೊಗ್​ರಾಜ್” ಈ ಸಿನಿಮಾ ಮೂಲಕ ಎಲ್ಲರನ್ನು ರಂಜಿಸಿದ್ದ ಇದೇ ಚಿತ್ರತಂಡ ಈಗ ವೆಬ್‌ಸೀರಿಸ್ ಮೂಲಕ ಮತ್ತೊಮ್ಮೆ ರಂಜಿಸಲು ಬರುತ್ತಿದೆ. “ಹಂಬಲ್ ಪೊಲಿಟೀಷಿಯನ್ ನೊಗ್‌ರಾಜ್” ವೆಬ್ ಸೀರಿಸ್‌ (Web Series)ನ ಮೊದಲ ಟೀಸರ್ ಡಿಸೆಂಬರ್​ 17ರಂದು ಬಿಡುಗಡೆಯಾಗಿದ್ದು, ಜನವರಿ 6ಕ್ಕೆ ಅದ್ಧೂರಿಯಾಗಿ ವೂಟ್ ಸೆಲೆಕ್ಟ್‌ (Voot Select) ನಲ್ಲಿ ಬಿಡುಗಡೆಯಾಗಲಿದೆ.

ಸಖತ್​ ಮನರಂಜನೆ ನೀಡಲಿದೆ ಹೊಸ ವೆಬ್​ ಸೀರೀಸ್​!

ಹಂಬಲ್ ಪೊಲಿಟೀಷಿಯನ್ ನೊಗ್​ರಾಜ್​ ಕಾಮಿಡಿ ಆಧಾರಿತ ವೆಬ್‌ಸೀರಿಸ್ ಆಗಿದ್ದು, ಒಟ್ಟು 10 ಎಪಿಸೋಡ್ ಹೊಂದಿದೆ. ನಟರಾದ ಪ್ರಕಾಶ್ ಬೆಳಬಾಡಿ, ವಿನಯ್ ಚೆಂಡೂರ್ ಮತ್ತು ದಿಶಾ ಮದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾದ್‌ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಡ್ಯಾನಿಶ್ ಸೇಟ್ ಒಬ್ಬ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ. ನಂತರ ರೆಸಾರ್ಟ್ ರಾಜಕೀಯ, ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡಲಿದ್ದಾರೆ ಹಾಗೂ ಅಧಿಕಾರಿ ದುರಾಸೆ, ಭ್ರಷ್ಟಾಚಾರ ವನ್ನು ವಿಡಂನಾತ್ಮಕವಾಗಿ ತೆಗೆದುಕೊಂಡು ಹೋಗುವ ಮೂಲಕ ರೋಲರ್ ಕೋಸ್ಟರ್ ಆಗಿ ನೋಗರಾಜ್ ಜನರನ್ನು ರಂಜಿಸಲಿದ್ದಾರೆ. 10 ಎಪಿಸೋಡ್‌ನ ಈ ವೆಬ್‌ಸೀರಿಸ್ ಪೂರ್ತಿ ಪಂಚಿಂಗ್ ಡೈಲಾಗ್ ಹಾಗೂ ನಗುವಿಕೆ‌ ಕೊರತೆ ಇಲ್ಲ.

ಇದನ್ನು ಓದಿ :

ಟೀಸರ್​​ನಲ್ಲೆ ಕಮಾಲ್​ ಮಾಡಿದ ನೊಗ್​ರಾಜ್​!

ಪೊಲಿಟಿಷಿಯನ್​ ನೊಗ್​ರಾಜ್​ ಟೀಸರ್​ನಲ್ಲೇ ಸಖತ್ ಕಮಾಲ್​ ಮಾಡಿದೆ. ಇನ್ನೂ ಸೀರೀಸ್​ನಲ್ಲಿ ಹಾಸ್ಯ ರಸದೌತಣ ಇರೋದು ಪಕ್ಕಾ ಎನಿಸಿದೆ. ಅವರ ಡೈಲಾಗ್​ ಡೆಲಿವರಿ, ಮ್ಯಾನರಿಸಂ ಸಖತ್​ ಮಜಾ ನೀಡುತ್ತೆ. ಸಿನಿಮಾದಲ್ಲೇ ನಕ್ಕು ನಲಿಸಿದ ದಾನಿಶ್​, ಈ ಸೀರೀಸ್​ ಮೂಲಕ ಮತ್ತೆ ಜನರನ್ನು ರಂಜಿಸುವುದರಲ್ಲಿ ಅನುಮಾನನೇ ಇಲ್ಲ. ‘ನಮಸ್ಕಾರ್​ ಡಿಯರ್​ ಫ್ರೆಂಡ್ಸ್​ ಐ  ಆ್ಯಮ್​ ಯುವರ್​ ಹಂಬಲ್​ ಪೊಲಿಟಿಷಿಯನ್​ ನೊಗ್​ರಾಜ್​’ ಎಂಬ ಡೈಲಾಗ್​ ಸಖತ್​ ಫೇಮಸ್​ ಆಗಿತ್ತು. ಇದೀಗ ರಿಲೀಸ್​ ಆಗಿರುವ ಟೀಸರ್​​ನಲ್ಲೂ ಈ ಡೈಲಾಗ್​ ಕೇಳಿ ಇವರ ಅಭಿಮಾನಿಗಳಿಗೆ ಥ್ರಿಲ್​ ಆಗಿದ್ದಾರೆ. ಜೊತೆಗೆ ಟೀಸರ್​ನಲ್ಲಿ ‘ಐ ಆ್ಯಮ್​ ಕೇಮಿಂಗ್​’ ಎಂಬ ಡೈಲಾಗ್​ ನಗು ತರಿಸುತ್ತೆ.

ಇದನ್ನು ಓದಿ :

ಸಂತಸ ಹಂಚಿಕೊಂಡ ದಾನಿಶ್​ ಸೇಠ್​

ದಾನಿಶ್ ಸೇಠ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಖತ್​ ಫೇಮಸ್​. ಕಾಮಿಡಿ ವಿಡಿಯೋಗಳ ಮೂಲಕ ಅವರು ಆಗಾಗ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಅವರ ಹಾಸ್ಯಪ್ರಜ್ಞೆಗೆ ಎಲ್ಲರೂ ಫಿದಾ ಆಗುತ್ತಾರೆ. ಈಗ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್​’ ವೆಬ್​ ಸಿರೀಸ್​ ವೀಕ್ಷಣೆಗೆ ಲಭ್ಯವಾಗುತ್ತಿರುವ ಕುರಿತು ದಾನಿಶ್​ ಅವರು ಸಂತಸ ಹಂಚಿಕೊಂಡಿದ್ದಾರೆ.
View this post on Instagram


A post shared by Danish sait (@danishsait)

 ಇನ್ನೂ ಫ್ರೆಂಚ್​ ಬಿರಿಯಾನಿ ಸಿನಿಮಾದಲ್ಲಿ ಕಮಾಲ್​ ಮಾಡಿದ್ದ ದಾನಿಶ್ ಹಾಗೂ ದಿಶಾ ಜೋಡಿ, ಈ ವೆಬ್​ ಸೀರೀಸನಲ್ಲಿ ಮತ್ತೆ ಒಂದಾಗಿದೆ. ಇದರಿಂದ ಫ್ಯಾನ್ಸ್​​ಗಳಲ್ಲಿ ಈ ಸೀರೀಸ್​ ಬಗ್ಗೆ ಹೆಚ್ಚು ನಿರೀಕ್ಷೆ ಇದೆ.
Published by:Vasudeva M
First published: