ದಾನಿಶ್ ಸೇಠ್ (Danish Sait) ಅವರ ಬಗ್ಗೆ ಪರಿಚಯ ಮಾಡಿಸಿಕೊಡುವ ಅವಶ್ಯಕತೆ ಇಲ್ಲ. ನಟ (Actor), ನಿರೂಪಕ (Anchor)ರಾಗಿ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ಆರ್ಸಿಬಿ (RCB) ತಂಡ ಇನ್ಸೈಡರ್ ಮಿಸ್ಟರ್ ನಾಗ್ಸ್ ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಹೀರೋ ಆಗಿಯೂ ದಾನಿಶ್ ಸೇಠ್ ಕಾಣಿಸಿಕೊಂಡಿದ್ದಾರೆ. ಅವರು ಅಭಿನಯಿಸಿರುವ ‘ಫ್ರೆಂಚ್ ಬಿರಿಯಾನಿ’, ‘ಹಂಬಲ್ ಪೊಲಿಟಿಷಿಯನ್ ನೊಗ್ರಾಜ್’ (Humble Politician Nograj) ಚಿತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಇವರ ಮೊದಲ ಸಿನಿಮಾ ‘ಹಂಬಲ್ ಪೊಲಿಟಿಷಿಯನ್ ನೊಗ್ರಾಜ್’ ಸಿನಿಮಾ ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತು. “ಹಂಬಲ್ ಪೊಲಿಟೀಷಿಯನ್ ನೊಗ್ರಾಜ್” ಈ ಸಿನಿಮಾ ಮೂಲಕ ಎಲ್ಲರನ್ನು ರಂಜಿಸಿದ್ದ ಇದೇ ಚಿತ್ರತಂಡ ಈಗ ವೆಬ್ಸೀರಿಸ್ ಮೂಲಕ ಮತ್ತೊಮ್ಮೆ ರಂಜಿಸಲು ಬರುತ್ತಿದೆ. “ಹಂಬಲ್ ಪೊಲಿಟೀಷಿಯನ್ ನೊಗ್ರಾಜ್” ವೆಬ್ ಸೀರೀಸ್ (Web Series)ನ ಟ್ರೈಲರ್(Trailer) ರಿಲೀಸ್ ಆಗಿದೆ. ಜನವರಿ 6 ಕ್ಕೆ ಈ ವೆಬ್ ಸೀರೀಸ್ ಬಿಡುಗಡೆಯಾಗಲಿದೆ. ಟ್ರೈಲರ್ನಲ್ಲೇ ಸಖತ್ ಮಜಾ ಕೊಟ್ಟಿದ್ದಾರೆ ದಾನಿಶ್ ಸೇಠ್. ಅವರ ವಿಶಿಷ್ಟ ಮ್ಯಾನರಿಸಿಂ ಮಂದಿಯನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತೆ.
ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸ್ತಾರೆ ದಾನಿಶ್ ಸೇಠ್!
ಹಂಬಲ್ ಪೊಲಿಟೀಷಿಯನ್ ನೊಗ್ರಾಜ್ ಕಾಮಿಡಿ ಆಧಾರಿತ ವೆಬ್ಸೀರಿಸ್ ಆಗಿದ್ದು, ಒಟ್ಟು 10 ಎಪಿಸೋಡ್ ಹೊಂದಿದೆ. ನಟರಾದ ಪ್ರಕಾಶ್ ಬೆಳಬಾಡಿ, ವಿನಯ್ ಚೆಂಡೂರ್ ಮತ್ತು ದಿಶಾ ಮದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾದ್ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಡ್ಯಾನಿಶ್ ಸೇಟ್ ಒಬ್ಬ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ. ನಂತರ ರೆಸಾರ್ಟ್ ರಾಜಕೀಯ, ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡಲಿದ್ದಾರೆ ಹಾಗೂ ಅಧಿಕಾರಿ ದುರಾಸೆ, ಭ್ರಷ್ಟಾಚಾರ ವನ್ನು ವಿಡಂನಾತ್ಮಕವಾಗಿ ತೆಗೆದುಕೊಂಡು ಹೋಗುವ ಮೂಲಕ ರೋಲರ್ ಕೋಸ್ಟರ್ ಆಗಿ ನೋಗರಾಜ್ ಜನರನ್ನು ರಂಜಿಸಲಿದ್ದಾರೆ. 10 ಎಪಿಸೋಡ್ನ ಈ ವೆಬ್ಸೀರಿಸ್ ಪೂರ್ತಿ ಪಂಚಿಂಗ್ ಡೈಲಾಗ್ ಹಾಗೂ ನಗುವಿಕೆ ಕೊರತೆ ಇಲ್ಲ.
ಇದನ್ನು ಓದಿ : ಮತ್ತೆ ಬರ್ತಿದ್ದಾರೆ `ಹಂಬಲ್ ಪೊಲಿಟಿಷಿಯನ್ ನೊಗ್ರಾಜ್’: ವೂಟ್ ಸೆಲೆಕ್ಟ್ನ ಹೊಸ ವೆಬ್ ಸೀರೀಸ್ ಟೀಸರ್ ಔಟ್!
ಟ್ರೈಲರ್ನಲ್ಲೇ ಕಮಾಲ್ ಮಾಡಿದ ನೊಗ್ರಾಜ್!
ಪೊಲಿಟಿಷಿಯನ್ ನೊಗ್ರಾಜ್
ಟ್ರೈಲರ್ನಲ್ಲೇ ಸಖತ್ ಕಮಾಲ್ ಮಾಡಿದೆ. ಇನ್ನೂ ಸೀರೀಸ್ನಲ್ಲಿ ಹಾಸ್ಯ ರಸದೌತಣ ಇರೋದು ಪಕ್ಕಾ ಎನಿಸಿದೆ. ಅವರ ಡೈಲಾಗ್ ಡೆಲಿವರಿ, ಮ್ಯಾನರಿಸಂ ಸಖತ್ ಮಜಾ ನೀಡುತ್ತೆ. ಸಿನಿಮಾದಲ್ಲೇ ನಕ್ಕು ನಲಿಸಿದ ದಾನಿಶ್, ಈ ಸೀರೀಸ್ ಮೂಲಕ ಮತ್ತೆ ಜನರನ್ನು ರಂಜಿಸುವುದರಲ್ಲಿ ಅನುಮಾನನೇ ಇಲ್ಲ. ‘ನಮಸ್ಕಾರ್ ಡಿಯರ್ ಫ್ರೆಂಡ್ಸ್ ಐ ಆ್ಯಮ್ ಯುವರ್ ಹಂಬಲ್ ಪೊಲಿಟಿಷಿಯನ್ ನೊಗ್ರಾಜ್’ ಎಂಬ ಡೈಲಾಗ್ ಸಖತ್ ಫೇಮಸ್ ಆಗಿತ್ತು. ಇದೀಗ ರಿಲೀಸ್ ಆಗಿರುವ ಟ್ರೈಲರ್ನಲ್ಲೂ ಈ ಡೈಲಾಗ್ ಕೇಳಿ ಇವರ ಅಭಿಮಾನಿಗಳಿಗೆ ಥ್ರಿಲ್ ಆಗಿದ್ದಾರೆ. ಜೊತೆಗೆ ಟ್ರೈಲರ್ನಲ್ಲಿ ‘ಐ ಆ್ಯಮ್ ಕೇಮಿಂಗ್’ ಎಂಬ ಡೈಲಾಗ್ ನಗು ತರಿಸುತ್ತೆ.
ಇದನ್ನು ಓದಿ: ಈ ವರ್ಷ ಚಿತ್ರರಂಗದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ಸಿನಿಮಾಗಳು ಇವೆ..
ಸೀರಿಯಸ್ ಮ್ಯಾಟರ್,ಕಾಮಿಡಿ ಸ್ಕ್ರೀನ್ ಪ್ಲೇ!
ಹೌದು, ರಾಜಕೀಯದಲ್ಲಿ ಇಂದು ಏನೇನು ಆಗುತ್ತಿದೆ ಎಂಬುದನ್ನು ಹೇಳಬೇಕಿಲ್ಲ. ಎಲ್ಲರಿಗೂ ಗೊತ್ತೆ ಇದೆ. ರೆಸಾರ್ಟ್ ರಾಜಕಾರಣ ಅಂತೂ ಯಾರಿಗೆ ಗೊತ್ತಿಲ್ಲ ಹೇಳಿ. ಇಂತಹ ರಿಯಲ್ ಲೈಫ್ ಇನ್ಸಿಡೆಂಟ್ಗಳನ್ನು ಇಟ್ಟುಕೊಂಡು ಸೀರೀಸ್ ಮಾಡಲಾಗಿದೆ. ಸೀರಿಯಸ್ ವಿಷಯವನ್ನು ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ವೆಬ್ ಸೀರೀಸ್ನಲ್ಲಿ ನಗಿಸುತ್ತಾ ಹೇಳಲಾಗಿದೆ. ಕಾಮಿಡಿ ಮೂಲಕ ಜನರಿಗೆ ತಿಳಿಸಬೇಕಿರುವ ವಿಷಯವನ್ನು ಸಾದ್ ಖಾನ್ ತಿಳಿಸಲಿದ್ದಾರೆ.
ಇನ್ನೂ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಕಮಾಲ್ ಮಾಡಿದ್ದ ದಾನಿಶ್ ಹಾಗೂ ದಿಶಾ ಜೋಡಿ, ಈ ವೆಬ್ ಸೀರೀಸನಲ್ಲಿ ಮತ್ತೆ ಒಂದಾಗಿದೆ. ಇದರಿಂದ ಫ್ಯಾನ್ಸ್ಗಳಲ್ಲಿ ಈ ಸೀರೀಸ್ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ