No Time To Die Teaser: ಮೈನವಿರೇಳಿಸುವ ಸ್ಟಂಟ್​ ಮಾಡಿದ ಡೇನಿಯಲ್​ ಕ್ರೇಗ್​: ಇಲ್ಲಿದೆ ಜೇಮ್ಸ್ ಬಾಂಡ್ ಸರಣಿಯ​ 'ನೋ ಟೈಮ್ ಟು ಡೈ' ಚಿತ್ರದ ಟೀಸರ್​..!

No Time To Die Teaser: ಕಾಸ್ಲಿ ಸೂಟು... ಬೂಟು... ದುಬಾರಿ ಹೈಫೈ ಗ್ಯಾಜೆಟ್​ಗಳಿರುವ ಈ ಬಾಂಡ್​ ಸರಣಿ ಸಿನಿಮಾಗಳಲ್ಲಿ ಸ್ಟಂಟ್​ಗಳಿಗೇನೂ ಕಡಿಮೆ ಇಲ್ಲ. ಡೇನಿಯಲ್​ ಕ್ರೇಗ್​ ಅಭಿನಯದ 'ನೋ ಟೈಮ್​ ಟು ಡೈ' ಚಿತ್ರದಲ್ಲೂ ಇಂತಹ ಮೈನವಿರೇಳಿಸುವ ಸ್ಟಂಟ್​ಗಳಿವೆ.

'ನೋ ಟೈಮ್​ ಟು ಡೈ' ಸಿನಿಮಾದಲ್ಲಿ ಡ್ಯಾನಿಯಲ್​ ಕ್ರೇಗ್​

'ನೋ ಟೈಮ್​ ಟು ಡೈ' ಸಿನಿಮಾದಲ್ಲಿ ಡ್ಯಾನಿಯಲ್​ ಕ್ರೇಗ್​

  • Share this:
ಹಾಲಿವುಡ್​ನ ಖ್ಯಾತ ಸರಣಿ ಸಿನಿಮಾಗಳಲ್ಲಿ ಒಂದು ಈ ಬಾಂಡ್​ ಸರಣಿ. ಹೌದು, ಬಾಂಡ್​ ಸರಣಿಯ 25ನೇ ಸಿನಿಮಾವಾದ 'ನೋ ಟೈಮ್​ ಟು ಡೈ' ಚಿತ್ರ ಡೇನಿಯಲ್​ ಕ್ರೇಗ್​ ಅಭಿನಯದ ಕೊನೆಯ ಬಾಂಡ್​ ಸಿನಿಮಾ ಆಗಿದೆ.

ಕಾಸ್ಲಿ ಸೂಟು... ಬೂಟು... ದುಬಾರಿ ಹೈಫೈ ಗ್ಯಾಜೆಟ್​ಗಳಿರುವ ಈ ಬಾಂಡ್​ ಸರಣಿ ಸಿನಿಮಾಗಳಲ್ಲಿ ಸ್ಟಂಟ್​ಗಳಿಗೇನೂ ಕಡಿಮೆ ಇಲ್ಲ. ಡೇನಿಯಲ್​ ಕ್ರೇಗ್​ ಅಭಿನಯದ 'ನೋ ಟೈಮ್​ ಟು ಡೈ' ಚಿತ್ರದಲ್ಲೂ ಇಂತಹ ಮೈನವಿರೇಳಿಸುವ ಸ್ಟಂಟ್​ಗಳಿವೆ.ಈ ಸಿನಿಮಾದ ಟೀಸರ್​ ಅನ್ನು ನಟ ಡೇನಿಯಲ್​ ಕ್ರೇಗ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿರುವ ಸ್ಟಂಟ್​ ನೋಡಿದರೆ ಒಂದು ನಿಮಿಷ ಹೃದಯದ ಬಡಿತ ನಿಂತು ಹೋಗುತ್ತದೆ.

ಇದನ್ನೂ ಓದಿ: ನಟಿ ಕಂಗನಾ ಬಳಸುವ ಒಂದು ಹ್ಯಾಂಡ್​ ಬ್ಯಾಗ್​ ಬೆಲೆ ಸಾಮಾನ್ಯನ ವಾರ್ಷಿಕ ಆದಾಯಕ್ಕಿಂತ ಹೆಚ್ಚು..!

ಟೀಸರ್​ನಲ್ಲಿರುವ ಬೈಕ್​ ಹಾಗೂ ಕಾರಿನ ಸ್ಟಂಟ್​ ನೋಡುಗರನ್ನು ಚಿತ್ರಮಂದಿರದಲ್ಲಿ ಸೀಟಿನ ತುದಿಗೆ ತಂದು ಕೂರಿಸುತ್ತದೆ. 'ಬಾಂಡ್, ಜೇಮ್ಸ್ ಬಾಂಡ್...' ಎನ್ನುತ್ತಾ ಐದನೇ ಬಾರಿಗೆ ಏಜೆಂಟ್ 007ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ ನಟ ಡೇನಿಯಲ್ ಕ್ರೇಗ್.

Pranutan Bahl: ಸಿಕ್ಕಾಪಟ್ಟೆ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಕಾಜೋಲ್​ ಕುಟುಂಬದ ಉಯೋನ್ಮುಖ ನಟಿ..!


 
First published: