Zaira Wasim: ಇಮಾನ್ಗೆ ಅಡ್ಡಿ, ಬಾಲಿವುಡ್​ಗೆ ಗುಡ್​ಬೈ ಹೇಳಿದ ದಂಗಲ್ ಬೆಡಗಿ​

Zaira Wasim: ಇಂದಿಗೆ ನಾನು ಸಿನಿರಂಗಕ್ಕೆ ಪದಾರ್ಪಣೆ ಮಾಡಿ ಐದು ವರ್ಷಗಳಾಗುತ್ತಿವೆ. ಆದರೆ ಇಂದಿನ ಗುರುತಿಸುವಿಕೆಯಿಂದ ನಾನು ಸಂತೋಷವಾಗಿ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ನಾನು ಬೇರೇನೊ ಆಗಲು ಹೆಣಗಾಡುತ್ತಿದ್ದೇನೆ ಎಂದು ತುಂಬಾ ಅನ್ನಿಸುತ್ತಿತ್ತು .

zahir | news18
Updated:June 30, 2019, 4:26 PM IST
Zaira Wasim: ಇಮಾನ್ಗೆ ಅಡ್ಡಿ, ಬಾಲಿವುಡ್​ಗೆ ಗುಡ್​ಬೈ ಹೇಳಿದ ದಂಗಲ್ ಬೆಡಗಿ​
@BH
  • News18
  • Last Updated: June 30, 2019, 4:26 PM IST
  • Share this:
ಬಾಲಿವುಡ್​ನಲ್ಲಿ ಹೊಸ ಭರವಸೆ ಮೂಡಿಸಿದ್ದ ನಟಿ ಝೈರಾ ವಾಸಿಂ ಚಿತ್ರರಂಗವನ್ನು ತೊರೆಯುವುದಾಗಿ ತಿಳಿಸಿದ್ದಾರೆ. ಅಮೀರ್ ಖಾನ್ ಅಭಿನಯದ 'ದಂಗಲ್'​ ಚಿತ್ರದ ಮೂಲಕ ಬಿಟೌನ್​ಗೆ ಎಂಟ್ರಿ ಕೊಟ್ಟಿದ್ದ ಯುವ ನಟಿ ಚೊಚ್ಚಲ ಚಿತ್ರಕ್ಕೆ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಅಷ್ಟೇ ಅಲ್ಲದೆ 'ಸೀಕ್ರೆಟ್ ಸೂಪರ್​ ಸ್ಟಾರ್' ಎಂಬ ಚಿತ್ರದ ಮೂಲಕ ಬಣ್ಣದ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದರು.

ಇದೀಗ ಸಕ್ಸಸ್​ನ ಉತ್ತುಂಗದಲ್ಲಿರುವಾಗಲೇ ಬಾಲಿವುಡ್​ನಿಂದ ದೂರವಾಗುವುದಾಗಿ ತಿಳಿಸಿ ಕಾಶ್ಮೀರ ಮೂಲದ ನಟಿ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಪೋಸ್ಟ್ ಮಾಡಿರುವ ಝೈರಾ, '5 ವರ್ಷಗಳ ಹಿಂದೆ ತೆಗೆದುಕೊಂಡ ಒಂದು ನಿರ್ಧಾರವು ನನ್ನ ಬದುಕನ್ನು ಶಾಶ್ವತವಾಗಿ ಬದಲಿಸಿತು. ಬಾಲಿವುಡ್‌ಗೆ ಎಂಟ್ರಿ ಕೊಡುತ್ತಲೇ, ನನಗೆ ಜನಪ್ರಿಯತೆ ಕೂಡ ಲಭಿಸಿತು. ಸಾರ್ವಜನಿಕವಾಗಿ ನಾನು ಗುರುತಿಸಿಕೊಳ್ಳಲಾರಂಭಿಸಿದೆ. ಇದುವೇ ನನ್ನನ್ನು ಯುವ ಜನರ ರೋಲ್ ಮಾಡೆಲ್​ನ್ನಾಗಿಸಿತು. ಆದರೆ ಹಾಗೆ ಆಗಬೇಕೆಂದು ನಾನು ಬಯಸಿರಲಿಲ್ಲ. ಇಲ್ಲಿ ನಾನು ಸೋಲು ಮತ್ತು ಗೆಲುವನ್ನು ಅರ್ಥ ಅನ್ವೇಷಿಸಿದೆ. ಅದು ಈಗ ನನಗೂ ಅರ್ಥವಾಗುತ್ತಿದೆ'.

ಇಂದಿಗೆ ನಾನು ಸಿನಿರಂಗಕ್ಕೆ ಪದಾರ್ಪಣೆ ಮಾಡಿ ಐದು ವರ್ಷಗಳಾಗುತ್ತಿವೆ. ಆದರೆ ಇಂದಿನ ಗುರುತಿಸುವಿಕೆಯಿಂದ ನಾನು ಸಂತೋಷವಾಗಿ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ನಾನು ಬೇರೇನೊ ಆಗಲು ಹೆಣಗಾಡುತ್ತಿದ್ದೇನೆ ಎಂದು ತುಂಬಾ ಅನ್ನಿಸುತ್ತಿತ್ತು . ನನ್ನೊಳಗಿನ ಭಾವನೆ ಮತ್ತು ತಳಮಳ ಹಾಗೂ ಇಲ್ಲಿನ ಜೀವನಶೈಲಿ ನಾನು ಬಾಲಿವುಡ್​ಗೆ ಸೂಕ್ತವಲ್ಲ ಎಂಬುದನ್ನು ತಿಳಿಸಿದೆ. ಚಿತ್ರರಂಗ ಪ್ರೀತಿ, ಬೆಂಬಲ ಮತ್ತು ಫೇಮ್ ಎಲ್ಲವನ್ನೂ ತಂದುಕೊಟ್ಟಿದೆ. ಆದರೆ ಇದರಿಂದ ನಾನು ನಂಬಿರುವ ಧರ್ಮದ ಜೊತೆಗಿನ ಸಂಬಂಧಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ನಿಧಾನವಾಗಿ ನಾನು 'ಇಮಾನ್'​ (ದೇವರ ಹಾದಿ)ನಿಂದ ದೂರವಾಗುತ್ತಿದ್ದೇನೆ ಎಂದೆನಿಸಿದೆ. ನನ್ನ ವೃತ್ತಿಯು ನನ್ನ ನಂಬಿಕೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಸಿನಿಮಾ ರಂಗದಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ಯುವ ನಟಿ ಝೈರಾ ವಾಸಿಂ ತಿಳಿಸಿದ್ದಾರೆ.



'ದಂಗಲ್' ಚಿತ್ರ ಬಿಡುಗಡೆ ಬೆನ್ನಲ್ಲೇ ಝೈರಾ ವಾಸಿಂ ವಿರುದ್ಧ ಮೂಲಭೂತವಾದಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಮೆಹಬೂಬ ಮುಫ್ತಿ ಸೇರಿದಂತೆ ಅನೇಕ ಬಾಲಿವುಡ್ ಸ್ಟಾರ್​ಗಳು ಯುವ ನಟಿಯ ಬೆಂಬಲಕ್ಕೆ ನಿಂತಿದ್ದರು. ಅಷ್ಟೇ ಅಲ್ಲದೆ ವಿಮಾನದಲ್ಲಿ ನಡೆದ ಲೈಂಗಿಕ ಕಿರುಕುಳ ನೋವನ್ನು ಝೈರಾ ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.

ಸದ್ಯ ಬಾಲಿವುಡ್​ಗೆ ಗುಡ್​ ಬೈ ಹೇಳಿರುವ ಝೈರಾ ವಾಸಿಂ ಅಭಿನಯದ 'ದಿ ಸ್ಕೈ ಇಸ್ ಪಿಂಕ್' ಚಿತ್ರವು ಚಿತ್ರೀಕರಣವನ್ನು ಪೂರೈಸಿದೆ. ಪ್ರಿಯಾಂಕಾ ಚೋಪ್ರಾ-ಫರ್ಹಾನ್ ಅಖ್ತರ್ ಜೊತೆ ಕಾಣಿಸಿಕೊಂಡಿರುವ ಈ ಚಿತ್ರವು ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. ಈ ಚಿತ್ರವು 'ಸಿಕ್ರೇಟ್ ಸೂಪರ್ ಸ್ಟಾರ್' ಗರ್ಲ್​ ಅಭಿನಯದ ಕೊನೆಯ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ.
First published:June 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading