Reality Show: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಸೆಂಚುರಿ ಸ್ಟಾರ್ ಶಿವಣ್ಣನ ಹುಟ್ಟುಹಬ್ಬ ಆಚರಣೆ

ಶಿವರಾಜ್​ ಕುಮಾರ್​ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ತಮ್ಮ 60 ನೇ ವಯಸ್ಸಿನಲ್ಲಿ ಕೂಡ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಿ ಅಭಿಮಾನಿಗಳ ಬಳಗವನ್ನು ಪಡೆದುಕೊಂಡಿದ್ದಾರೆ.

ಶಿವರಾಜ್​ಕುಮಾರ್​​

ಶಿವರಾಜ್​ಕುಮಾರ್​​

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance) ವೇದಿಕೆಗೆ ಈ ಬಾರಿ ವಿಶೇಷ ಅತಿಥಿಯ ಆಗಮನವಾಗಿದೆ. ಹೌದು ಎಂಗ್ ಅಂಡ್ ಎನರ್ಜಿಟಿಕ್ ಹೀರೋ ಶಿವಣ್ಣ (Shivanna) ಅವರ 60ನೇ ವರ್ಷದ ಹುಟ್ಟು ಹಬ್ಬದ ವಿಶೇಷ ಎಪಿಸೋಡ್ ನಲ್ಲಿ ರಾಘವೇಂದ್ರ ರಾಜಕುಮಾರ್ (Raghavendra Rajkumar) ಅವರು ಆಗಮಿಸಲಿದ್ದಾರೆ. ಇದೇ ಬರುವ ಜುಲೈ 12ರಂದು ಶಿವಣ್ಣ ತಮ್ಮ 60 ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳಲಿದ್ದಾರೆ. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ತಮ್ಮ 60 ನೇ ವಯಸ್ಸಿನಲ್ಲಿ ಕೂಡ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಿ ಅಭಿಮಾನಿಗಳ ಬಳಗವನ್ನು ಪಡೆದುಕೊಂಡಿದ್ದಾರೆ ಅಷ್ಟೇ ಅಲ್ಲದೆ ಅದೆಷ್ಟೋ ಯುವಮನಸ್ಸುಗಳ ಸಾಧನೆಗೆ ಇವರು ಸ್ಫೂರ್ತಿಯಾಗಿದ್ದಾರೆ.

    ಶಿವರಾಜ್ಯೋತ್ಸವ ಸ್ಪೆಷಲ್ ಎಪಿಸೋಡ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಸಾಕ್ಷಿ

    ಈ ಬಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯು ಶಿವಣ್ಣ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಿದೆ. ಹೌದು ಶಿವರಾಜ್ಯೋತ್ಸವ ಎಂಬ ಸ್ಪೆಷಲ್ ಎಪಿಸೋಡ್ ಮೂಲಕ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಹುಟ್ಟುಹಬ್ಬವನ್ನು ಡಿಕೆಡಿಯಲ್ಲಿ ಆಚರಿಸಲಿದ್ದಾರೆ. ಈ ವಾರ ಡಿಕೆಡಿಯ ಸಂಪೂರ್ಣ ಪರ್ಫಾರ್ಮೆನ್ಸ್ ಗಳು ಶಿವಣ್ಣನಿಗೆ ಎಂದೆ ಮೀಸಲಿಡಲಾಗಿದೆ. ಎಲ್ಲಾ ಸ್ಪರ್ಧಿಗಳು ಶಿವಣ್ಣನ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿರುವುದು ವೇದಿಕೆಗೆ ಇನ್ನಷ್ಟು ಮೆರುಗು ತಂದುಕೊಟ್ಟಿದೆ ಎಂದರೆ ಸುಳ್ಳಾಗದು.

    ಇದನ್ನೂ ಓದಿ: Nannarasi Radhe Serial: ಅಶ್ವಿನಿಯ ನಿಜರೂಪ ಬಯಲು ಮಾಡಿಬಿಟ್ಲಾ ಲಾವಣ್ಯ? ಮುಂದಿದೆ ಬಿಗ್ ಟ್ವಿಸ್ಟ್

    ಹಳೇ ನೆನಪಿಗೆ ಜಾರಿದ ಹ್ಯಾಟ್ರಿಕ್ ಹೀರೋ ಶಿವಣ್ಣ

    ಹ್ಯಾಟ್ರಿಕ್ ಹೀರೋ ಶಿವಣ್ಣ ಎಂದರೆ ತಕ್ಷಣ ನೆನಪಾಗುವುದು ಅವರ ಹಳೆಯ ಚಿತ್ರಗಳಲ್ಲಿ ಇದ್ದಂತಹ ಲಾಂಗು ಮತ್ತೆ ಮಚ್ಚು. ಅದೇ ರೀತಿ ಈ ಬಾರಿ ಡಿಕೆಡಿ ವೇದಿಕೆಯಲ್ಲಿ ಶಿವಣ್ಣನ ಒರಿಜಿನಲ್ ಸ್ಟೈಲ್ನಲ್ಲಿ ಸ್ಪರ್ಧಿಗಳು ಎಂಟ್ರಿಕೊಟ್ಟರು. 209 ಡ್ಯಾನ್ಸರ್ ಗಳ ಜೊತೆಗೆ ಶಿವಣ್ಣ ಕುಣಿಯುವ ಆ ಅದ್ಭುತ ದೃಶ್ಯಕ್ಕೆ ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸಾಕ್ಷಿಯಾಗಲಿದೆ. ಇದರ ಸಣ್ಣ ಝಲಕ್ ಒಂದನ್ನು ಬಿಟ್ಟು ಒಂದಷ್ಟು ಕ್ಯೂರಿಯಾಸಿಟಿ ಹುಟ್ಟು ಹಾಕಿದೆ.

    ಶಿವಣ್ಣ ತಮ್ಮ ಅದ್ಭುತ ಡ್ಯಾನ್ಸ್ ನಿಂದ ಈಗಲೂ ಗುರುತಿಸಿಕೊಳ್ಳುವವರು. ಅದೇ ರೀತಿ ತಾವು ನಟಿಸಿದ ಎಲ್ಲಾ ಸಿನಿಮಾಗಳಲ್ಲೂ ಟಪ್ಪಾಂಗುಚ್ಚಿ ಡುಯೆಟ್ ರೋಮ್ಯಾಂಟಿಕ್ ಹೀಗೆ ಎಲ್ಲಾ ಶೈಲಿಯ ಡ್ಯಾನ್ಸ್ ಗಳನ್ನು ಶಿವಣ್ಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯು ರಾಜ್ಯೋತ್ಸವಕ್ಕಾಗಿ ಶಿವಣ್ಣನ ಹಾಡುಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಹಳೆಯ ಸಿನಿಮಾಗಳ ಬಗ್ಗೆ ನೆನಪಿಸಿಕೊಂಡು ಹಳೇ ನೆನಪಿಗೆ ಜಾರಿದ್ದಾರೆ.

    ಕನ್ನಡ ಚಿತ್ರರಂಗಕ್ಕೆ  ಡಾ. ರಾಜಕುಮಾರ್ ಕೊಡುಗೆ ಅಪಾರ

    ಚಂದನವನಕ್ಕೆ ಡಾ. ರಾಜಕುಮಾರ್ ಹಾಗೂ ಅವರ ಮಕ್ಕಳ ಕೊಡುಗೆ ಅಪಾರ. ಪೌರಾಣಿಕ ಸಾಮಾಜಿಕ ಹಾರರ್ ಥ್ರಿಲ್ಲರ್ ಹೀಗೆ‌ ಎಲ್ಲಾ ರೀತಿಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಇವರು ಕೊಡುಗೆಯಾಗಿ ನೀಡಿದ್ದಾರೆ. ಅದೇ ರೀತಿ ಈ ಬಾರಿ ಶಿವಣ್ಣ ಅವರ 60ನೇ ಹುಟ್ಟುಹಬ್ಬದ ವಿಶೇಷ ಎಪಿಸೋಡ್ ಗೆ ರಾಘವೇಂದ್ರ ರಾಜ್ ಕುಮಾರ್ ಅವರು ಆಗಮಿಸಿದ್ದಾರೆ ಮತ್ತು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿದ್ದಾರೆ.

    ಇದನ್ನೂ ಓದಿ: Gattimela Serial: ಅಪಾಯದಲ್ಲಿದ್ದ ಅದಿತಿಯನ್ನು ಪಾರು ಮಾಡಿದ ಆದ್ಯ? ಮುಂದಿದೆ ಬಿಗ್ ಟ್ವಿಸ್ಟ್

    ಜೊತೆಗಿರದ ಜೀವ ಎಂದೂ ಜೀವಂತ ಎನ್ನುವುದಕ್ಕೆ ಸಾಕ್ಷಿ ಡಿಕೆಡಿ ವೇದಿಕೆ

    ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಕರುನಾಡ ರತ್ನ ಪುನೀತ್ ರಾಜಕುಮಾರ್ ಅವರನ್ನು ವೇದಿಕೆಯು ಸ್ಮರಿಸಿಕೊಂಡಿದೆ. ಅದೇ ರೀತಿ ಈ ಸಂದರ್ಭದಲ್ಲಿ ವಿಶೇಷವಾಗಿ ಜೊತೆಗಿರದ ಜೀವ ಎಂದೂ ಜೀವಂತ ಎನ್ನುವುದಕ್ಕೆ ಸಾಕ್ಷಿಯಾಗಿ ಅಪ್ಪು ಅವರ ಫೋಟೋವನ್ನು ವೇದಿಕೆಯ ಮೇಲೆ ಇಳಿಸಿದ್ದಾರೆ.
    Published by:Swathi Nayak
    First published: