ಸ್ಯಾಂಡಲ್ ವುಡ್ (Sandalwood) ಸಿನಿ ಪ್ರೇಮಿಗಳಿಗೆ ನಟ ಧನಂಜಯ್ (Dhananjay) ಎಂದರೆ ಅಷ್ಟು ಬೇಗ ತಿಳಿಯದೇ ಇರಬಹುದು. ಆದರೆ ಡಾಲಿ (Dali) ಧನಂಜಯ್ ಎಂದರೆ ಪ್ರತಿಯೊಬ್ಬರಿಗೂ ಯಾರೆಂದು ನೆನಪಾಗುತ್ತದೆ. ಸದ್ಯ ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಕನ್ನಡದಲ್ಲಿ (Kannada) ಧನಂಜಯ್ ಅವರನ್ನು ಹೇಗೆ ಡಾಲಿ ಎಂದು ಜನ ಕರೆದರೆ ತೆಲುಗಿನಲ್ಲಿ ಅವರನ್ನು ಜಾಲಿ ಅಂತಲೇ ಪ್ರಸಿದ್ಧರಾಗಿದ್ದಾರೆ. ಹೌದು, ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದಲ್ಲಿ ಅಭಿನಯಿಸುವ ಮೂಲಕ ಧನಂಜಯ್ ಅವರು ತೆಲುಗಿನಲ್ಲಿ ಜಾಲಿ ರೆಡ್ಡಿ ಎಂದೇ ಕರೆಯುತ್ತಾರೆ. ಆದರೆ ಇದೀಗ ಸಖತ್ ಬ್ಯೂಸಿಯಾಗಿರುವ ಧನಂಜಯ್ ಅವರು 'ಟ್ವೆಂಟಿ ಒನ್ ಅವರ್ಸ್' (21 Hours) ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಜೈಶಂಕರ್ ಪಂಡಿತ್ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರವು ಮೇ 21ರಂದು ತೆರೆಕಾಣಲಿದೆ. ಇನ್ನು, ಚಿತ್ರದ ಪ್ರೇಸ್ಮೀಟ್ ನಲ್ಲಿ ಮಾತನಾಡುತ್ತಾ ಡಾಲಿ ಕೆಜಿಎಫ್ 2 ಕುರಿತು ಮಾತನಾಡಿದ್ದಾರೆ.
ಕೆಜಿಎಫ್ ಕನ್ನಡದ ಹೆಮ್ಮೆ:
ಇನ್ನು, ಟ್ವೆಂಟಿ ಒನ್ ಅವರ್ಸ್ ಎಂಬ ಚಿತ್ರದ ಕಾರ್ಯಕ್ರಮದ ಕುರಿತು ಮಾತನಾಡುವಾಗ, ಕನ್ನಡದ ಕೆಜಿಎಫ್ 2 ಮತ್ತು ತೆಲುಗಿನ ಪುಷ್ಪ ಚಿತ್ರದ ಕುರಿತು ಮಾತನಾಡಿದ್ದಾರೆ. ಕನ್ನಡದ ಹೆಮ್ಮೆ ಕೆಜಿಎಫ್ 2 ಸಿನಿವಾದರೆ, ತೆಲುಗಿಗೆ ಪುಷ್ಪ ಚಿತ್ರ ಹೆಮ್ಮೆ ಎಂದು ಡಾಲಿ ಹೇಳಿದ್ದು, ಕೆಜಿಎಫ್ 2 ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದಲ್ಲದೇ ನಮ್ಮಲ್ಲಿ ಇದೀಗ ಬಾಲಿವುಡ್ ಗೆ ಸರಿಸಮನಾಗಿ ನಿಂತು ಸಿನಿಮಾಗಳನ್ನು ಮಾಡಲಾಗುತ್ತಿದೆ. ಈ ಮೂಲಕ ಸೌತ್ ಇಂಡಸ್ಟ್ರಿಯ ತಾಕತ್ತನ್ನು ನಾವು ತೋರಿಸುತ್ತಿದ್ದೇವೆ. ಇದರಿಂದಾಗಿ ಯಾವ ಚಿತ್ರೋದ್ಯಮವೂ ಇಲ್ಲಿ ಮೇಲಲ್ಲ. ಬದಲಿಗೆ ನಾವು ಸೌತ್ ಇಂಡಸ್ಟ್ರಿಯವರು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: KGF 2 ಚಿತ್ರದ ಯಶಸ್ಸಿನ ಹಿಂದಿನ ಕಾಣದ ಕೈಗಳ ಕಥೆ ಹೇಳ್ತಿದೆ Route To EL Dorado
ಒಳ್ಳೆಯ ಸಿನಿಮಾಗಳಲ್ಲಿ ನಟಿಸಲು ಇಷ್ಟ:
ಇನ್ನು, ತನಗೆ ಒಳ್ಳೆಯ ಸಿನಿಮಾಗಳಲ್ಲಿ ನಟಿಸಲು ತುಂಬಾ ಇಷ್ಟ. ಹೀಗಾಗಿ ಜೈ ಶಂಕರ್ ಅವರು ಕಥೆ ಹೇಳಿದ ತಕ್ಷಣ ಇದೊಂದು ಉತ್ತಮ ಚಿತ್ರವೆಂದು ಅನಿಸಿತು. ಇದರಿಂದಾಗಿ ಟ್ವೆಂಟಿ ಒನ್ ಅವರ್ಸ್ ಚಿತ್ರವನ್ನು ನಾನು ಒಪ್ಪಿಕೊಂಡೆ. ಇದಲ್ಲದೇ ಈ ಚಿತ್ರವು ಒಂದು ಸಸ್ಪೆನ್ಸ್-ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಇದರಲ್ಲಿ ನನ್ನ ಪಾತ್ರ ಸಖತ್ ರಗಡ್ ಆಗಿದೆ. ಹೀಗಾಗಿ ಸಿನಿಮಾವು ಪಕ್ಕಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಡಾಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕಿಚ್ಚ:
ಇನ್ನು, ಡಾಲಿ ಧನಂಜಯ್ ಅಭಿನಯದ ಟ್ವೆಂಟಿ ಒನ್ ಅವರ್ಸ್ ಚಿತ್ರವನ್ನು ನಟ ಕಿಚ್ಚ ಸುದೀಪ್ ವೀಕ್ಷಿಸಿದ್ದು, ಚಿತ್ರವನ್ನು ಮೆಚ್ಚಿಕೊಂಡು ಶುಭ ಹಾರೈಸಿದ್ದಾರೆ. ಇದಲ್ಲದೇ ಚಿತ್ರವನ್ನು ವೀಕ್ಷಿಸಿದ ನಂತರ ಕಿಚ್ಚ ಸ್ವತಃ ತಮ್ಮ ಕೈಯಾರೆ ಅಡುಗೆಯನ್ನು ಮಾಡಿ ಚಿತ್ರತಂಡಕ್ಕೆ ಉಣಬಡಿಸಿದ್ದಾರೆ. ಧನಂಜಯ್ ಅವರ ತಂಡಕ್ಕೆ ಸುದೀಪ್ ದೋಸೆಯನ್ನು ಮಾಡಿಕೊಟ್ಟಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: KGF 2 ಚಿತ್ರದ ತೂಫಾನ್ ವಿಡಿಯೋ ಸಾಂಗ್ ರಿಲೀಸ್, ಮತ್ತೆ ರಾಕಿ ಭಾಯ್ ಅಬ್ಬರ ಶುರು
ಕಿಚ್ಚನ ಆತಿಥ್ಯಕ್ಕೆ ಮನಸೋತ ಡಾಲಿ:
21 ಅವರ್ಸ್ ಚಿತ್ರವನ್ನು ವೀಕ್ಷಿಸಿದ ನಂತರ ಸುದೀಪ್ ಚಿತ್ರತಂಡಕ್ಕೆ ಕೈಯಾರೆ ದೋಸೆ ಮಾಡಿ ವಿಶೇಷವಾಗಿ ಆತಿಥ್ಯ ನೀಡಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿದ ಡಾಲಿ ಧನಂಜಯ್ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಾಲಿ, ‘ತಬ್ಬಿ ಬರಮಾಡಿಕೊಂಡು, ತುಂಬು ಪ್ರೀತಿಯಿಂದ ಇಡಿ ತಂಡಕ್ಕೆ ಕೈಯಾರೆ ದೋಸೆ ಮಾಡಿಕೊಟ್ಟು, #21hours ಸಿನಿಮಾ ನೋಡಿ, ಪ್ರಾಮಾಣಿಕವಾಗಿ ಅನಿಸಿದ್ದೆಲ್ಲವನ್ನು ಹೇಳಿ, ಒಳ್ಳೆಯದನ್ನೆ ಹಾರೈಸಿ ಬೀಳ್ಕೊಟ್ಟ ನಿಮ್ಮ ಆತಿಥ್ಯಕ್ಕೆ ಇಡಿ ತಂಡ ಆಭಾರಿ‘ ಎಂದು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ