Actor Dhananjay: ಜಮಾಲಿಗುಡ್ಡದಲ್ಲಿ ಬಾರ್ ಸಪ್ಲೈಯರ್ ಆದ್ರು ಡಾಲಿ, ಸೆ 9ಕ್ಕೆ ಅದಿತಿ ಜೊತೆ ಬರ್ತಾರೆ ಧನಂಜಯ್

New Film Update: ಕೊರೊನಾ ನಂತರ ಸ್ವಲ್ಪ ಚಿತ್ರಮಂದಿರದ ಕಡೆ ಜನ ಬರುವುದು ಕಡಿಮೆಯಾಗಿತ್ತು, ಆದರೆ ಈಗ ಎಲ್ಲವೂ ಚೇತರಿಸಿಕೊಳ್ಳುತ್ತಿದೆ. ಒಳ್ಳೆಯ ಕತೆ ಇರುವುದರಿಂದ ಜನರಿಗೆ ಇಷ್ಟವಾಗುತ್ತದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಜಮಾಲಿಗುಡ್ಡ ಚಿತ್ರದ ಪೋಸ್ಟರ್

ಜಮಾಲಿಗುಡ್ಡ ಚಿತ್ರದ ಪೋಸ್ಟರ್

  • Share this:
ಡಾಲಿ ಧನಂಜಯ (Dali Dhananjay) ಫುಲ್ ಬ್ಯುಸಿ ಇದ್ದಾರೆ. ಅವರ ಕೈನಲ್ಲಿ ಹಲವಾರು ಚಿತ್ರಗಳಿದೆ. ಈಗಾಗಲೇ ಅವರ ಚಿತ್ರಗಳು (Film) ಬಿಡುಗಡೆಯಾಗಿದ್ದು, ಇನ್ನೂ ಕೆಲವು ಬಿಡುಗಡೆಗೆ ಕಾದು ಕುಳಿತಿವೆ. ಒಂದು ರೀತಿಯಲ್ಲಿ ಸೂಪರ್ ಬ್ಯುಸಿ ಇರುವ ನಟ (Actor) ಎನ್ನಬಹುದು. ಇದೀಗ ಅವರ ಮತ್ತೊಂದು ಚಿತ್ರದ ಬಗ್ಗೆ ಸುದ್ದಿ ಬಂದಿತ್ತು, ಅಭಿಮಾನಿಗಳಿಗೆ ಖುಷಿಯಾಗಿದೆ. ಹೌದು, ಅವರ ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ (Once Upon a Time in Jammigudda) ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರತಂಡ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ.

ಹೌದು, ಡಾಲಿ ಧನಂಜಯ್​ ಅವರಿಗೆ ಈ ಚಿತ್ರದ ಕಥೆ ಬಹಳ ಇಷ್ಟವಂತೆ. ಈ ಚಿತ್ರವನ್ನು ಅವರು ಬಹಳ ಖುಷಿಯಿಂದ ಒಪ್ಪಿಕೊಂಡಿದ್ದಾರಂತೆ. ಅಲ್ಲದೇ ಯಾವುದೇ ಸುದ್ದಿ ಹೇಳದೇ, ಸದ್ದು ಮಾಡದೇ ಚಿತ್ರದ ಶೂಟಿಂಗ್ ಸಹ ಮುಗಿಸಿದ್ದು, ಈ ವರ್ಷ ತೆರೆ ಮೇರೆ ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ ಮೋಡಿ ಮಾಡಲಿದೆ.  ಡಾಲಿ ಧನಂಜಯ್ ಅವರ ಪ್ರಕಾರ ಇದೊಂದು ವಿಭಿನ್ನ ಕತೆಯ ಸಿನಿಮಾವಾಗಿದ್ದು, ಅವರ ವೃತ್ತಿ ಬದುಕಿನಲ್ಲಿಯೇ ಈ ರೀತಿಯ ಕತೆ ಕೇಳಿಲ್ಲವಂತೆ. ಇದು ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುತ್ತಾರೆ ಡಾಲಿ.

ಟೈಟಲ್​ ಮೂಲಕವೇ ಸುದ್ದಿ ಮಾಡಿದೆ ಚಿತ್ರ

ಅಲ್ಲದೇ ಈ ಚಿತ್ರ ಈಗಾಗಲೇ ತನ್ನ ಟೈಟಲ್​ ಮೂಲಕವೇ ಬಹಳ ಸುದ್ದಿ ಮಾಡಿದೆ. Once Upon A Time in ಜಮಾಲಿಗುಡ್ಡ ಟೈಟಲ್​ನಲ್ಲಿಯೇ ಕತೆಯನ್ನು ಹುದುಗಿಸಿರುವ ಚಿತ್ರತಂಡ, ಏನೋ ಹೇಳಲು ಹೊರಟಿದೆ ಎಂಬುದು ತಿಳಿಯುತ್ತದೆ. ಇನ್ನು ಇದು ಸಾಮಾನ್ಯ ಚಿತ್ರವಲ್ಲ ಅನ್ನುವುದು ಡಾಲಿ ಅವರ ಲುಕ್​ ನಿಂದ ಸಹ ತಿಳಿಯು್ತ್ತದೆ. ಯಾವಾಗಲು ರಗಡ್​ ಪಾತ್ರಕ್ಕೆ ಸೂಟ್​ ಆಗುವ ಡಾಲಿ, ಈ ಬಾರಿ ಕೂಡ ಮಾಸ್​ ಲುಕ್​ನಲ್ಲಿ ಮಿಂಚುತ್ತಿದ್ದು, ಅವರನ್ನು ನೋಡಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಡಾಲಿ ಧನಂಜಯ ಇತ್ತೀಚಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡುತ್ತಾ ಬಂದಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಸಹ ಅವರು ಮಿಂಚುತ್ತಿದ್ದಾರೆ. ಯಾವುದೇ ಪಾತ್ರವಾದರೂ ಸರಿ ಅದಕ್ಕೆ ಜೀವ ತುಂಬಿ, ನ್ಯಾಯ ಒದಗಿಸುತ್ತಾರೆ. ರಾಟೆಯಲ್ಲಿ ಪ್ರೇಮಿಯಾಗಿ, ಟಗರು ಚಿತ್ರದಲ್ಲಿ ವಿಲನ್ ಡಾಲಿಯಾಗಿ, ಹೀಗೆ ಎಲ್ಲದಕ್ಕೂ ಸೂಕ್ತವಾಗುವ ಪರಿಪೂರ್ಣ ನಟ ಎನ್ನಬಹುದು. ಇನ್ನು ಇತ್ತೀಚಿನ ದಿನಗಳಲ್ಲಿ ಬಹಳ ವಿಭಿನ್ನ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದು, ಅಭಿಮಾನಿಗಳು ಅವರ ನಟನೆಯನ್ನು ನೋಡಿ ನಟ ರಾಕ್ಷಸ ಎಂದು ಕರೆಯುವುದರಲ್ಲಿ ಯಾವುದೇ ಸುಳ್ಳಿಲ್ಲ ಎನ್ನಬಹುದು.

ಇದನ್ನೂ ಓದಿ: ಇಂದು ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ಜನ್ಮದಿನ - 'ಬೋಪಣ್ಣ'ಗೆ ಭರ್ಜರಿ ಬರ್ತ್ ಡೇ ಗಿಫ್ಟ್

ಸೆಪ್ಟೆಂಬರ್ 9ಕ್ಕೆ ಚಿತ್ರ ಬಿಡುಗಡೆ 

ಸದ್ಯ ಅವರ Once Upon A Time in ಜಮಾಲಿಗುಡ್ಡ ಚಿತ್ರದ ಮೇಲೆ ಡಾಲಿ ಅಭಿಮಾನಿಗಳ ನಿರೀಕ್ಷೆ ಜಾಸ್ತಿಯೇ ಇದೆ ಎನ್ನಬಹುದು. ಈಗಾಗಲೇ ಅವರ ಲುಕ್ ಸಹ ಬಹಳ ಸದ್ದು ಮಾಡುತ್ತಿದೆ.   Once Upon A Time in ಜಮಾಲಿಗುಡ್ಡ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದೆ ಎಂದು ಚಿತ್ರತಂಡ ಮಾಹಿತಿ ನೀಡಿದ್ದು,  ಬೆಂಗಳೂರು, ಚಿಕ್ಕಮಗಳೂರು, ಕುದುರೆಮುಖ, ಶಿವಮೊಗ್ಗ ಸೇರಿದಂತೆ ಹಲವೆಡೆ ಕೇವಲ ಎಂಭತ್ತು ದಿನಗಳ ಕಾಲ ಶೂಟಿಂಟ್​ ಮಾಡಿ ಮುಗಿಸಲಾಗಿದೆಯಂತೆ. ಡಬ್ಬಿಂಗ್ ಕೂಡ ಅಂತಿಮ ಹಂತದಲ್ಲಿದ್ದು, ಸೆಪ್ಟೆಂಬರ್ 9 ಕ್ಕೆ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಕೊರೊನಾ ನಂತರ ಸ್ವಲ್ಪ ಚಿತ್ರಮಂದಿರದ ಕಡೆ ಜನ ಬರುವುದು ಕಡಿಮೆಯಾಗಿತ್ತು, ಆದರೆ ಈಗ ಎಲ್ಲವೂ ಚೇತರಿಸಿಕೊಳ್ಳುತ್ತಿದೆ. ಒಳ್ಳೆಯ ಕತೆ ಇರುವುದರಿಂದ ಜನರಿಗೆ ಇಷ್ಟವಾಗುತ್ತದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕೆಜಿಎಫ್ ತಾತನಿಗೆ ಒಲಿದ ಅದೃಷ್ಟ, ಮುದುಕನ ಲವ್ ಸ್ಟೋರಿ ಚಿತ್ರಕ್ಕೆ ಅವರೇ ಹೀರೋ!

ಬಾರ್​ ಸಪ್ಲೈಯರ್ ಪಾತ್ರದಲ್ಲಿ ಡಾಲಿ ಧನಂಜಯ್ ಅಭಿನಯಿಸುತ್ತಿದ್ದು, ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಕುಶಾಲ್ ಗೌಡ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಹರಿ ಎನ್ನುವವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇನ್ನು ಪ್ರಕಾಶ್​ ಬೆಳವಾಡಿ, ಭಾವನ ರಾಮಣ್ಣ, ಸಂತು, ತ್ರಿವೇಣಿ ಸೇರಿದಂತೆ ಅದ್ಭುತ ಕಲಾವಿದರ ದಂಡೇ ಇದೆ.
Published by:Sandhya M
First published: