Head Bush: ‘ಹೆಡ್​ ಬುಷ್‘ ಚಿತ್ರದ ರಿಲೀಸ್ ಡೇಟ್​ ಅನೌನ್ಸ್, ಡಾನ್ ಜಯರಾಜ್ ಆಗಿ ಅಬ್ಬರಿಸಲಿದ್ದಾರೆ ಡಾಲಿ

ಡಾಲಿ ಧನಂಜಯ (Dhananjay) ಅಭಿನಯದ ಬಹುನಿರೀಕ್ಷಿತ ‘ಹೆಡ್​ ಬುಷ್‘ (Head Bush) ಚಿತ್ರದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೊಷಿಸಿದೆ.

ಹೆಡ್​ ಬುಷ್

ಹೆಡ್​ ಬುಷ್

  • Share this:
ಸ್ಯಾಂಡಲ್​ ವುಡ್​ನಲ್ಲಿ ಡಾಲಿ ಎಂದೇ ಕರೆಯಲ್ಪಡುವ ಡಾಲಿ ಧನಂಜಯ (Dhananjay) ಅಭಿನಯದ ಬಹುನಿರೀಕ್ಷಿತ ‘ಹೆಡ್​ ಬುಷ್‘ (Head Bush) ಚಿತ್ರದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೊಷಿಸಿದೆ. ಈ ಕುರಿತು ಧನಂಜಯ್ ಟ್ವಿಟರ್​ ನಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇದೇ ಅಕ್ಟೋಬರ್ 21ರಂದು (October 21 )ಚಿತ್ರವು ಬಿಡುಗಡೆಯಾಗಲಿದೆ. ಭೂಗತ ಲೋಕದದಲ್ಲಿ ಮೆರೆದಿದ್ದ ಡಾನ್ ಜಯರಾಜ್ (Don Jayraj) ಪಾತ್ರದಲ್ಲಿ ಡಾಲಿ (Dali) ಅಬ್ಬರಿಸಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡೆಕ್ಷನ್ ಕೆಲಸದಲ್ಲಿ ಬ್ಯೂಸಿಯಾಗಿದೆ.

ಹೆಡ್​ ಬುಷ್ ರಿಲೀಸ್ ಡೇಟ್ ಅನೌನ್ಸ್:

ಇನ್ನು, ಹೆಡ್​ ಬುಷ್ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೊಷಿಸಿದೆ. ಈ ಕುರಿತು ಟ್ವೀಟರ್​ ನಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಧನಂಜಯ್ ಕರ್ನಾಟಕದ ಮೊದಲ ಡಾನ್ ಬರುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಚಿತ್ರವು ಇದೇ ವರ್ಷ ಅಕ್ಟೋಬರ್ 21ರಂದು ಬಿಡುಗಡೆಯಾಗಲಿದೆ. 1970ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಈ ಚಿತ್ರದಲ್ಲಿ ಪರಿಚಯಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಶೂನ್ಯ ಅವರು ಈ ಮೊದಲೆ ತಿಳಿಸಿದ್ದರು. ಅಲ್ಲದೇ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದ ಜಯರಾಜ್ ಮಗ:

ಹೆಡ್ ಬುಷ್ ಸಿನಿಮಾದ ಟ್ರೇಲರ್​ನಲ್ಲಿ ಎಂ.ಪಿ.ಜಯರಾಜ್ ಅವರನ್ನು ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ. ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು. ಪೊಲೀಸ್ ವ್ಯವಸ್ಥೆಯಲ್ಲಿನ ಅಕ್ರಮವನ್ನು ವಿರೋಧಿಸಿದವರು. ಕುಟುಂಬಸ್ಥರ ಅನುಮತಿ ಪಡೆಯದೇ ತಂದೆಯವರ ಜೀವನಾಧಾರಿತ ಕಥೆಯನ್ನ ಚಿತ್ರ ಮಾಡಲು ಹೊರಟ್ಟಿದ್ದಾರೆ ಎಂದು ಅಜಿತ್ ಜಯರಾಜ್ ಆರೋಪಿಸಿದ್ದರು. ಅಲ್ಲದೇ ಇದರಿಂದ ನಮ್ಮ ಕುಟುಂಬದವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಹೆಡ್ ಬುಷ್ ಚಿತ್ರದ ಬಿಡುಗಡೆಗೆ ಅವಕಾಶ ನೀಡದಂತೆ ಚಲನಚಿತ್ರ ವಾಣಿಜ್ಯಮಂಡಳಿಗೆ ಅಜಿತ್ ಜಯರಾಜ್ ಅವರು ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: Pranitha Subhash: ಗುಡ್​ನ್ಯೂಸ್​, ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಣಿತಾ ಸುಭಾಷ್

ಹೆಡ್ ಬುಷ್ ತಾರಾಗಣ ಹೇಗಿದೆ?:

ಹೆಡ್ ಬುಷ್ ಚಿತ್ರಕ್ಕೆ ಅಗ್ನಿಶ್ರೀಧರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಡಾಲಿಪಿಕ್ಚರ್ಸ್ ಅಡಿಯಲ್ಲಿ ಹೆಡ್ ಬುಷ್ ಚಿತ್ರ ನಿರ್ಮಾಣವಾಗುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ಪಾಯಲ್ ರಜಪೂತ್, ಲೂಸ್ ಮಾದ ಯೋಗಿ, ದೇವರಾಜ್, ವಸಿಷ್ಠ ಸಿಂಹ, ಶೃತಿ ಹರಿಹರನ್, ರಘು ಮುಖರ್ಜಿ ಸೇರಿ ಹಲವು ಸ್ಟಾರ್ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಬಾದಲ್ ನಂಜುಂಡಸ್ವಾಮಿ ಕಲಾ ನಿರ್ದೇಶನ ಮಾಡಿದ್ದು ಶೂನ್ಯ ಹೆಡ್ ಬುಷ್ ಚಲನಚಿತ್ರದ ನಿರ್ದೇಶಕರು. ಕನ್ನಡ ಒಂದೇ ಅಲ್ಲದೇ ಹಲವು ಭಾಷೆಗಳಲ್ಲಿ ಹೆಡ್ ಬುಷ್ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Nayanthara: ನಯನತಾರಾಗೆ ಮೇಡಂ ಎಂದ ಪತಿ, ಭಾವನಾತ್ಮಕ ಪೋಸ್ಟ್ ಮಾಡಿದ ವಿಘ್ನೇಶ್ ಶಿವನ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಡಾಲಿ:

ಇನ್ನು, ಡಾಲಿ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಅವರು, ಡಾಲಿ, ತೋತಾಪುರಿ, ಮಾನ್ಸೂನ್ ರಾಗ, ಬೈರಾಗಿ, ಪುಷ್ಪ 2 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಧನಂಜಯ್ ಬ್ಯೂಸಿಯಾಗಿದ್ದು, ಅವರ ಅಭಿಮಾನಿಗಳಿಗೆ ಸಾಲು ಸಾಲು ಸಿನಿಮಾಗಳನ್ನು ಸವಿಯುವ ಅವಕಾಶ ದೊರತಂತಾಗಿದೆ.
Published by:shrikrishna bhat
First published: