ಸ್ಯಾಂಡಲ್ವುಡ್ (Sandalwood) ನಟಿ ಡೈಸಿ ಬೋಪಣ್ಣ (Daisy Bopanna) ಅವರು ಸುಂದರವಾದ ವಿಡಿಯೋ (Video) ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿಗೆ (Actress) ಅವರ ಪತಿ ಸೀರೆ (Saree) ಉಡಿಸುವುದನ್ನು ಕಾಣಬಹುದು. ಡೈಸಿ ಬೋಪಣ್ಣ ಶೇರ್ ಮಾಡಿರುವ ವಿಡಿಯೋದಲ್ಲಿ ಅವರ ಪತಿ ಆಸಕ್ತಿಯಿಂದ ಹೆಂಡತಿಗೆ (Wife) ಸೀರೆ ಉಡಿಸಿ ಮೇಕಪ್ (Makeup) ಮಾಡಿ ಆಭರಣಗಳನ್ನು (Jewellery) ತೊಡಿಸಿ ಹೇರ್ಸ್ಟೈಲ್ (Hairstyle) ಮಾಡುವುದನ್ನು ಕಾಣಬಹುದು. ಪತಿ ಸೀರೆ ಉಡಿಸುವಾಗ ಸುಮ್ಮನಿದ್ದ ನಟಿ ರೆಡಿಯಾದ ಮೇಲೆ ಜೋರಾಗಿ ನಗುತ್ತಾರೆ. ಇದೆಲ್ಲವನ್ನೂ ರೆಕಾರ್ಡ್ (Record) ಮಾಡಿಕೊಂಡು ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಸೀರೆ ಉಡಿಸಿದ ಪತಿ
ಸ್ಯಾಂಡಲ್ವುಡ್ ನಟಿಗೆ ಅವರ ಪತಿ ಚಂದಕ್ಕೆ ಸೀರೆ ಉಡಿಸಿದ್ದಾರೆ. ಡೈಸಿ ಬೋಪಣ್ಣ ಅವರ ಪತಿ ಆಸಕ್ತಿಯಿಂದ ಹೆಂಡತಿಗೆ ಸೀರೆ ಉಡಿಸಿದ್ದಾರೆ. ತಮಗೆ ತಿಳಿದಂತೆ ಮೇಕಪ್ ಮಾಡಿದ್ದಾರೆ.
ಮೊದಲಿಗೆ ಫುಲ್ ಸ್ಲೀವ್ಸ್ ಬ್ಲೌಸ್ ತೊಡಿಸಿ ನಂತರ ಕೆಂಪು ಬಣ್ಣದ ಸೀರೆಯನ್ನು ಉಡಿಸಿದ್ದಾರೆ. ಗ್ರ್ಯಾಂಡ್ ಆಗಿರುವ ಫ್ಯಾನ್ಸಿ ಸೀರೆ ಉಡಿಸಿದ್ದಾರೆ. ಗ್ರ್ಯಾಂಡ್ ಆಗಿರುವ ಸೀರೆಯನ್ನು ಉಡಿಸಿ ಡೈಸಿ ಅವರ ಪತಿ ಸೆರಗು ಸರಿಯಾಗಿ ಪಿನ್ ಮಾಡಲು ಸ್ಪಲ್ಪ ಪರದಾಡಿದ್ದಾರೆ. ಆದರೂ ಪಿನ್ ಮಾಡಿದ್ದಾರೆ.
View this post on Instagram
ವೈರಲ್ ಆಯ್ತು ವಿಡಿಯೋ
ವಿಡಿಯೋಗೆ 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನಟಿಯ ಅಭಿಮಾನಿಗಳು ಈ ವಿಡಿಯೋವನ್ನು ನೋಡಿ ಕಮೆಂಟ್ ಮಾಡಿದ್ದಾರೆ. ಕ್ಯೂಟ್ ಆಗಿದೆ. ಆದರೆ ಇದನ್ನು ಪ್ರೈವೆಟ್ ಆಗಿಡಿ. ಅದನ್ನು ಪಬ್ಲಿಕ್ ಆಗಿ ಪೋಸ್ಟ್ ಮಾಡೋದ್ಯಾಕೆ ಎಂದು ಕೇಳಿದ್ದಾರೆ ಕೆಲವರು. ಇನ್ನು ಕೆಲವರು ಕನ್ನಡ ಸಿನಿಮಾಗಳಲ್ಲಿ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ನೆಟ್ಟಿಗರು ನಟಿಯ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಪ್ರೇಮಿಗಳ ದಿನದ ನಿಮ್ಮ ವಿಡಿಯೋ ಸುಂದರವಾಗಿದೆ. ಪ್ರೇಮಿಗಳ ದಿನದ ಶುಭಾಶಯಗಳು ಎಂದು ಶುಭ ಹಾರೈಸಿದ್ದಾರೆ.
View this post on Instagram
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ ನಟಿ
ನಟಿಗೆ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ಗಳಿದ್ದಾರೆ. ನಟಿ ಬಹಳಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಫ್ಯಾನ್ಸ್ ಜೊತೆಗೆ ಶೇರ್ ಮಾಡುತ್ತಲೇ ಇರುತ್ತಾರೆ. ನಟಿ ಇದುವರೆಗೂ 213 ಪೋಸ್ಟ್ಗಳನ್ನು ಅಪ್ಲೋಡ್ ಮಾಡಿದ್ದಾರೆ.
ನಟಿಗೆ 40 ವರ್ಷಗಳಾದರೂ ಈಗಲೂ ಸಖತ್ ಕ್ಯೂಟ್ ಆಗಿದ್ದಾರೆ. ಅವರು ಬಹಳಷ್ಟು ಪ್ರಾಡಕ್ಟ್, ಕೆಲವೊಂದು ಬ್ರ್ಯಾಂಡ್ಗಳ ಪ್ರಮೋಷನ್ ಪೋಸ್ಟ್ಗಳನ್ನು ಹಾಕುತ್ತಿರುತ್ತಾರೆ. ನಟಿ ಇನ್ಸ್ಟಾಗ್ರಾಮ್ನಲ್ಲಿ 141 ಜನರನ್ನು ಫಾಲೋ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ