HOME » NEWS » Entertainment » DADS HANDS AND LEGS WERE TIED TO BED SAMBHAVNA SETH SENDS LEGAL NOTICE TO DELHI HOSPITAL WHERE HER FATHER DIED LG

Bigg Boss: ಆಸ್ಪತ್ರೆಯಲ್ಲಿ ನನ್ನ ತಂದೆಯ ಕೈಕಾಲು ಕಟ್ಟಿ ಹಾಕಿ ಕೊಂದರು: ಬಿಗ್ ಬಾಸ್ ಮಾಜಿ ಸ್ಪರ್ಧಿ ಆರೋಪ

ವೈದ್ಯಕೀಯ ಸೇವೆಯ ಕೊರತೆ, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ, ಸರಿಯಾದ ಆರೈಕೆ ಮತ್ತು ಗಮನದ ಕೊರತೆ ಹಾಗೂ ಸ್ಪಂದಿಸದ ಆಸ್ಪತ್ರೆಯ ಸಿಬ್ಬಂದಿಯ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿರುವ ಸಂಭಾವನಾ ಸೇಠ್​ ಜೈಪುರ್​​ ಗೋಲ್ಡನ್​ ಆಸ್ಪತ್ರೆಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

news18-kannada
Updated:May 31, 2021, 3:02 PM IST
Bigg Boss: ಆಸ್ಪತ್ರೆಯಲ್ಲಿ ನನ್ನ ತಂದೆಯ ಕೈಕಾಲು ಕಟ್ಟಿ ಹಾಕಿ ಕೊಂದರು: ಬಿಗ್ ಬಾಸ್ ಮಾಜಿ ಸ್ಪರ್ಧಿ ಆರೋಪ
ವೈದ್ಯಕೀಯ ಸೇವೆಯ ಕೊರತೆ, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ, ಸರಿಯಾದ ಆರೈಕೆ ಮತ್ತು ಗಮನದ ಕೊರತೆ ಹಾಗೂ ಸ್ಪಂದಿಸದ ಆಸ್ಪತ್ರೆಯ ಸಿಬ್ಬಂದಿಯ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿರುವ ಸಂಭಾವನಾ ಸೇಠ್​ ಜೈಪುರ್​​ ಗೋಲ್ಡನ್​ ಆಸ್ಪತ್ರೆಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
  • Share this:
ತನ್ನ ತಂದೆಯನ್ನು ಕಳೆದುಕೊಂಡ ನಟಿ ಹಾಗೂ ಮಾಜಿ ಬಿಗ್​ಬಾಸ್​ ಸ್ಪರ್ಧಿ ಸಂಭಾವನ ಸೇಠ್​ ದೆಹಲಿಯ ಜೈಪುರ್ ಗೋಲ್ಡನ್​ ಆಸ್ಪತ್ರೆಗೆ ಲೀಗಲ್​ ನೋಟಿಸ್ ಕಳುಹಿಸಿದ್ದಾರೆ. ಕೊರೋನಾ ಪಾಸಿಟಿವ್​ ಬಂದ ಬಳಿಕ ಸಂಭಾವನ ತನ್ನ ತಂದೆಯನ್ನು ಜೈಪುರ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ಆಸ್ಪತ್ರೆ ಸಿಬ್ಬಂದಿಯೇ ತನ್ನ ತಂದೆಯನ್ನು ಸಾಯಿಸಿದ್ದಾರೆ ಎಂದು ಆಸ್ಪತ್ರೆ ಆಡಳಿತಾಧಿಕಾರಿಗಳ ವಿರುದ್ಧ ಸಂಭಾವನ ಆರೋಪ ಮಾಡಿದ್ದಾರೆ.

ವೈದ್ಯಕೀಯ ಸೇವೆಯ ಕೊರತೆ, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ, ಸರಿಯಾದ ಆರೈಕೆ ಮತ್ತು ಗಮನದ ಕೊರತೆ ಹಾಗೂ ಸ್ಪಂದಿಸದ ಆಸ್ಪತ್ರೆಯ ಸಿಬ್ಬಂದಿಯ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿರುವ ಸಂಭಾವನಾ ಸೇಠ್​ ಜೈಪುರ್​​ ಗೋಲ್ಡನ್​ ಆಸ್ಪತ್ರೆಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಏಪ್ರಿಲ್​ 30ರಂದು ಸಂಭಾವನಾ ತನ್ನ ತಂದೆಯನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಸಿಬ್ಬಂದಿ ಅವರ ಆರೈಕೆ ಮಾಡುವುದಾಗಿ ಭರವಸೆ ನೀಡಿದ್ದರು. ಹೀಗಿರುವಾಗ ಒಂದು ದಿನ ನನ್ನ ಸಹೋದರ ತಂದೆಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ. ಆಗ ಅವನಿಗೆ ಶಾಕ್ ಕಾದಿತ್ತು. ಆಸ್ಪತ್ರೆ ಸಿಬ್ಬಂದಿ ನನ್ನ ತಂದೆಯ ಕೈ-ಕಾಲುಗಳನ್ನು ಬೆಡ್​ಗೆ ಕಟ್ಟಿ ಹಾಕಿದ್ದರು. ಇದನ್ನು ಕಂಡು ಆತ ಗಾಬರಿಗೊಂಡಿದ್ದ ಎಂದು ಸಂಭಾವನಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮುಹೂರ್ತದ ಹೊತ್ತಿಗೆ ಶವವಾದ ವಧು; ಮಂಟಪದಲ್ಲೇ ಮತ್ತೊಂದು ಹುಡುಗಿ ರೆಡಿ !

ಮೇ 7ರಂದು ಸಂಭಾವನಾ ಸಹೋದರ ಆಕೆಗೆ ಕರೆ ಮಾಡಿ, ಅಪ್ಪನನ್ನು ಆಕ್ಸಿಜನ್​ ಸಪೋರ್ಟ್​​ನಲ್ಲಿ ಇಟ್ಟಿದ್ದಾರೆ. ನನಗೇನೋ ಅನುಮಾನವಿದೆ ಎಂದು ಹೇಳಿದ್ದ. ಕೂಡಲೇ ಸಂಭಾವನಾ ದೆಹಲಿಗೆ ತೆರಳಿದ್ದರು.

ಆಸ್ಪತ್ರೆಯಲ್ಲಿ ಆಕೆಯ ತಂದೆಯ ಕೈ-ಕಾಲುಗಳನ್ನು ಬೆಡ್​ಗೆ ಕಟ್ಟಿದ್ದನ್ನು ನೋಡಿ ಸಂಭಾವನಾ ನಿಜಕ್ಕೂ ಶಾಕ್​ ಆಗಿದ್ದರು. ಈ ಬಗ್ಗೆ ಸಂಭಾವನಾ ವಿಡಿಯೋ ಕೂಡ ರೆಕಾರ್ಡ್​​ ಮಾಡಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಒತ್ತಾಯವಾಗಿ ಅದನ್ನು ಡಿಲೀಟ್ ಮಾಡಿಸಿದರು ಎಂದು ತಿಳಿದು ಬಂದಿದೆ.

ದೆಹಲಿಯ ಈ ಆಸ್ಪತ್ರೆಯಲ್ಲಿ ನನಗೆ ವಿಚಿತ್ರ ಅನುಭವ ಆಗಿದೆ ಎಂದು ಸಂಭಾವನಾ ಹೇಳಿಕೊಂಡಿದ್ದಾರೆ. ಕೊರೋನಾ ಕಾಲದಲ್ಲಿ ಹಗಲಿರುಳೆನ್ನದೇ ಕೋವಿಡ್ ರೋಗಿಗಳ ಆರೈಕೆ ಮಾಡುತತಿರುವ ವೈದ್ಯರ ಬಗ್ಗೆ ನನಗೆ ಗೌರವವಿದೆ. ಆದರೆ ಈ ಆಸ್ಪತ್ರೆ ಸಿಬ್ಬಂದಿ ನಡೆದುಕೊಂಡ ರೀತಿ ಬಹಳ ವಿಚಿತ್ರವಾಗಿದೆ ಎಂದು ಹೇಳಿದ್ದಾರೆ.
Youtube Video

ಭಾರತದಲ್ಲಿ ಕೋವಿಡ್​-19 ಕೇಸ್​ಗಳು ಹೆಚ್ಚಾಗುತ್ತಿದ್ದಾಗ ಬೆಡ್​ಗಳ ಕೊರತೆ, ಆಕ್ಸಿಜನ್​ ಸಿಲಿಂಡರ್ ಕೊರತೆ ಹೆಚ್ಚಾಗಿತ್ತು. ಈ ಕಠಿಣ ಸಮಯದಲ್ಲಿ ಸಂಭಾವನಾ ತನ್ನ ತಂದೆಗೆ ಬೆಡ್​ ಕೊಡಿಸಲು ಪರದಾಡಿದ್ದರು. ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳ ಸಹಾಯದಿಂದ ತನ್ನ ತಂದೆಗೆ ಬೆಡ್​ ವ್ಯವಸ್ಥೆ ಮಾಡಿದ್ದರು.
Published by: Latha CG
First published: May 31, 2021, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories