ಟ್ರೆಂಡಿಂಗ್​ನಲ್ಲಿದೆ 'ಸರ್ಕಾರಿ ಹಿರಿಯ ಪ್ರಾ.ಪಾಠ ಶಾಲೆ'ಯ ದಡ್ಡ ಹಾಡು

news18
Updated:June 23, 2018, 1:17 PM IST
 ಟ್ರೆಂಡಿಂಗ್​ನಲ್ಲಿದೆ 'ಸರ್ಕಾರಿ ಹಿರಿಯ ಪ್ರಾ.ಪಾಠ ಶಾಲೆ'ಯ ದಡ್ಡ ಹಾಡು
news18
Updated: June 23, 2018, 1:17 PM IST
ನಳಿನಾಕ್ಷಿಕಾರಳ್ಳಿ, ನ್ಯೂಸ್1 8 ಕನ್ನಡ

'ಕಿರಿಕ್ ಪಾರ್ಟಿ' ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ರಿಷಬ್​ ಶೆಟ್ಟಿ ಆರ್ಟ್ ಸಿನಿಮಾಗೆ ಕೈ ಹಾಕಿರೋ ವಿಷಯ ನಿಮಗೆಲ್ಲ ಗೊತ್ತೇ ಇದೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಈ ಚಿತ್ರದ ಟೈಟಲ್ಲಾಗಿದ್ದು, ಈ ಶೀರ್ಷಿಕೆಯನ್ನು ಹೇಳೋಕೆ  ಕೊಂಚ ಕಷ್ಟವಾಗಬಹುದು.

ಈಗಾಗಲೇ ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರೋ ಈ ಚಿತ್ರದ ವಿಶೇಷ ಅಂದರೆ, ಈ ಸಿನಿಮಾದ ಟೈಟಲ್ಲಿಂದ ಹಿಡಿದೂ ತಾರಾಗಣದವರೆಗೂ ಎಲ್ಲವೂ ದೊಡ್ಡ ಮಟ್ಟದ್ದೇ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರದಲ್ಲಿ ದೊಡ್ಡ ತಾರಾಗಣವಿರುವುದರಿಂದ ಡಬ್ಬಿಂಗ್ ಕೆಲಸದಲ್ಲೂ ತುಂಬಾ ಟೈಂ ತೆಗೆದುಕೊಳ್ಳುತ್ತಿದೆಯಂತೆ.

ವಿಶ್ವ ಸಂಗಿತ ದಿನದಂದು (ಜೂ.21) ಈ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದು, ದಡ್ಡ ಎಂಬ ಹಾಡನ್ನು ರಿಷಬ್ ಗೆಳೆಯ ರಕ್ಷಿತ್ ಶೆಟ್ಟಿ ಹಾಗೂ ಚಿತ್ರತಂಡ ಬಿಡುಗಡೆ ಮಾಡಿದ್ದರು.  ಈ ಹಾಡು ಈಗ ಟ್ರೆಂಡಿಂಗ್​ನಲ್ಲಿದೆ. ರಾಮ ರಾಮಾ ರೇ ಫೇಮ್ ವಾಸುಕಿ ವೈಭವ್ ಈ ಚಿತ್ರಕ್ಕೆ ಅದ್ಭುತ ಸಂಗೀತ ಕೊಟ್ಟಿದ್ದು, ಈ ದಡ್ಡ ಸಾಂಗಿಗೂ ಧನಿಗೂಡಿಸಿರೋದು ಇವರೇ ಅನ್ನೋದು ಮತ್ತೊಂದು ವಿಶೇಷ. ರಂಜನ್ ಈ ದಡ್ಡ ಸಾಂಗಲ್ಲಿ ಪ್ರವೀಣನ ಪಾತ್ರ ಮಾಡಿದ್ದು, ಸದ್ಯ ಎಲ್ಲ ಶಾಲಾ ಹುಡುಗರ ಫೇವರೀಟ್​ ಐಕಾನ್ ಆಗುತ್ತಿದ್ದಾರೆ.ಇದು ಕಾಸರಗೋಡಿನಲ್ಲಿ ನಡೆಯೋ ಮಕ್ಕಳ ಚಿತ್ರವಾಗಿದ್ದು, ಮಕ್ಕಳ ಜೊತೆ ತಲೆಹರಟೆ ಮಾಡ್ಕೊಂಡು ಹಿರಿಯ ನಟ ಅನಂತ್‍ನಾಗ್ ಇಲ್ಲಿ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಿಷಬ್​ ಪತ್ನಿ ಪ್ರಗತಿ ಶೆಟ್ಟಿ ಸಹ ಈ ಚಿತ್ರದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.

ನಿಮಗೆಲ್ಲ ಗೊತ್ತಿರೋ ಹಾಗೇ 'ಸಿಂಹದ ಮರಿ ಸೈನ್ಯ' ಒಂದ್ ಸಮಯದಲ್ಲಿ ಮಕ್ಕಳ ಇಷ್ಟದ ಸಿನಿಮಾವಾಗಿತ್ತು. ಇದೀಗ ಅದೇ ಸಿನಿಮಾ ಸಾಲಿಗೆ ಈ ಸಿನಿಮಾ ಸಹ ಸೇರುತ್ತೆ ಅನ್ನೊ ಮಾತು ಕೇಳಿ ಬರುತ್ತಿದೆ. ಆಗಸ್ಟ್ 16ಕ್ಕೆ ಬಿಡುಗಡೆಯಾಗಲಿರೋ ಈ ಸಿನಿಮಾವನ್ನ ಜಯಣ್ಣ ವಿತರಣಾ ಹಕ್ಕು ಪಡೆದುಕೊಂಡಿದ್ದಾರೆ. ಸದ್ಯ ಒಂದೇ ಒಂದು ಹಾಡಿನ ಮೂಲಕವೇ ಕುತೂಹಲ ಹುಟ್ಟಿಸಿರೋ ಹುಟ್ಸಿರೊ ಈ ಚಿತ್ರ ಎಷ್ಟರಮಟ್ಟಿಗೆ ಪ್ರೇಕ್ಷಕರ ಮನಸ್ಸನ್ನ ಗೆಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...