Pushpa: `ಪುಷ್ಪ’ ಮುಡಿಗೆ ಫಾಲ್ಕೆ ಗೌರವ, ರಣವೀರ್ ಸಿಂಗ್​ಗೂ ಪ್ರಶಸ್ತಿ! ಲಿಸ್ಟ್ ಇಲ್ಲಿದೆ..

ಬಾಕ್ಸಾಫೀಸ್​​(Boxoffice)ನಲ್ಲಿ 350 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಗಳಿಸಿತ್ತು. ಬಾಲಿವುಡ್​​ ಸಿನಿಮಾಗಳಿಗೂ ಭರ್ಜರಿ ಪೈಪೋಟಿ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಈ ಚಿತ್ರ ಗಮನ ಸೆಳೆದಿತ್ತು. ಇದೆಲ್ಲ ಹಣದ ವಿಚಾರವಾದರೆ, ಇನ್ನೂ ಪ್ರಶಸ್ತಿ ಪಡೆಯುವಲ್ಲಿಯೂ ‘ಪುಷ್ಪ’ ಸಿನಿಮಾ ಸಾಧನೆ ಮಾಡಿದೆ

ಅಲ್ಲು ಅರ್ಜುನ್​, ರಣವೀರ್​ ಸಿಂಗ್​

ಅಲ್ಲು ಅರ್ಜುನ್​, ರಣವೀರ್​ ಸಿಂಗ್​

  • Share this:
ಕಳೆದ ವರ್ಷ ಡಿ.17ರಂದು ತೆರೆಕಂಡ ‘ಪುಷ್ಪ’ ಸಿನಿಮಾ (Pushpa Movie) ದಾಖಲೆಗಳ ಮೇಳೆ ದಾಖಲೆ ಮಾಡುತ್ತಾ ಇನ್ನೂ ಮುನ್ನುಗುತ್ತಿದೆ. ರಿಲೀಸ್(Release) ಆದ ದಿನದಿಂದಲೂ ಅಮೇಜಾನ್​ ಪ್ರೈಮ್​(Amazon Prime)ನಲ್ಲಿ ಪ್ರೀಮಿಯರ್​ ಆಗುವವರೆಗೂ ‘ಪುಷ್ಪ’ ಸಿನಿಮಾ ಸಖತ್​ ಸೌಂಡ್(Sound)​ ಮಾಡಿಕೊಂಡೇ ಬಂದಿತ್ತು. ಈಗಲೂ ಈ ಸಿನಿಮಾದ ಶ್ರೀವಲ್ಲಿ ಹಾಡು ತುಂಬಾನೆ ಫೇಮಸ್(Famous)​. ಯಾರನ್ನೇ ನೋಡಿದರೂ ಶ್ರೀವಲ್ಲಿ ಹಾಡನ್ನು ಹೇಳುತ್ತಾರೆ. ಇನ್​ಸ್ಟಾಗ್ರಾಂ(Instagram)ನಲ್ಲಿ ರೀಲ್ಸ್​ ಮಾಡಿ ಸ್ಟೇಟಸ್​ ಹಾಕಿಕೊಳ್ಳುತ್ತಾರೆ. ಅದರಲ್ಲೂ ಬಾಕ್ಸಾಫೀಸ್​​(Boxoffice)ನಲ್ಲಿ 350 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಗಳಿಸಿತ್ತು. ಬಾಲಿವುಡ್​​ ಸಿನಿಮಾಗಳಿಗೂ ಭರ್ಜರಿ ಪೈಪೋಟಿ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಈ ಚಿತ್ರ ಗಮನ ಸೆಳೆದಿತ್ತು. ಇದೆಲ್ಲ ಹಣದ ವಿಚಾರವಾದರೆ, ಇನ್ನೂ ಪ್ರಶಸ್ತಿ ಪಡೆಯುವಲ್ಲಿಯೂ ‘ಪುಷ್ಪ’ ಸಿನಿಮಾ ಸಾಧನೆ ಮಾಡಿದೆ.ಈಗ ಪ್ರತಿಷ್ಠಿತ ‘ದಾದಾಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ’ (Dadasaheb Phalke International Film Festival Awards) ಪಡೆದಿದೆ.

‘ಪುಷ್ಪ’ ಜೊತೆ ‘83’ಗೂ ಮತ್ತೊಂದು ಗರಿ!

ಇನ್ನೂ ‘ಪುಷ್ಪ’ ಸಿನಿಮಾ ಜೊತೆಗೆ ಬಾಲಿವುಡ್​ನ ಖ್ಯಾತ ನಟ ರಣಬೀರ್​ ಸಿಂಗ್​ (Ranveer Singh) ಕೂಡ ಪ್ರಶಸ್ತಿ ಪಡೆದು ಸಂಭ್ರಮಿಸಿದ್ದಾರೆ. ಸಿದ್ದಾರ್ಥ್​ ಮಲ್ಹೋತ್ರ ನಟನೆಯ ‘ಶೇರ್​ಷಾ’, ವಿಕ್ಕಿ ಕೌಶಲ್​ ಅಭಿನಯದ ‘ಸರ್ದಾರ್​ ಉದ್ಧಮ್​’ ಸೇರಿದಂತೆ ಹಲವು ಸಿನಿಮಾಗಳು ಅವಾರ್ಡ್​ ಪಡೆದಿವೆ. ಜೊತೆಗೆ ವೆಬ್​ ಸಿರೀಸ್​ ಮತ್ತು ಧಾರಾವಾಹಿಗಳಿಗೂ ಮನ್ನಣೆ ಸಿಕ್ಕಿದೆ. 2022ರ ‘ದಾದಾಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ’ ಪಡೆದ ಎಲ್ಲರಿಗೂ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

ಇದನ್ನೂ ಓದಿ: ನಟಿಗೆ ಡಬಲ್​ ಮೀನಿಂಗ್​ ಪ್ರಶ್ನೆ ಕೇಳಿದ ಯುವಕ.. ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಸಮಂತಾ!

ರಣವೀರ್ ಸಿಂಗ್​ ಅಭಿನಯಕ್ಕೆ ಸಿಕ್ತು ದಾದಾ ಸಾಹೇಬ್​ ಪಾಲ್ಕೆ ಪ್ರಶಸ್ತಿ!

ರಣವೀರ್​ ಸಿಂಗ್​ ನಟಿಸಿದ್ದ ‘83’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಅಂದುಕೊಂಡ ಮಟ್ಟಕ್ಕೆ ಈ ಚಿತ್ರ ಗಳಿಕೆ ಮಾಡಲಿಲ್ಲ. ರೀತಿ ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ಅವರು ಫುಲ್​ ಮಾರ್ಕ್ಸ್​ ಪಡೆದುಕೊಂಡಿದ್ದರು.. ಈಗ ಅವರಿಗೆ ‘ದಾದಾಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ’ ಕೂಡ ಸಿಕ್ಕಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಇದನ್ನೂ ಓದಿ: ರಶ್ಮಿಕಾ ಜೊತೆ ಮದುವೆ, ಕೊನೆಗೂ ಮೌನ ಮುರಿದ ದೇವರಕೊಂಡ

ಮತ್ಯಾವ ಸಿನಿಮಾಗಳಿಗೆ ಸಿಕ್ಕಿದೆ  ಪ್ರಶಸ್ತಿ?
ಕ್ಯಾಟಗರಿಹೆಸರು
ವರ್ಷದ ಸಿನಿಮಾಪುಷ್ಪ
ಅತ್ಯುತ್ತಮ ಸಿನಿವರ್ಷದ ಸಿನಿಮಾಶೇರ್​ಷಾ
ಅತ್ಯುತ್ತಮ ನಟಿಕೃತಿ ಸನೋನ್​
ಅತ್ಯುತ್ತಮ ನಟರಣವೀರ್​ ಸಿಂಗ್
ಅತ್ಯುತ್ತಮ ನಿರ್ದೇಶಕಕೆನ್​ ಘೋಷ್
ಚಿತ್ರರಂಗಕ್ಕೆ ಅಪಾರ ಕೊಡುಗೆಆಶಾ ಪರೇಖ್
ಅತ್ಯುತ್ತಮ ಪೋಷಕ ನಟಸತೀಶ್​ ಕೌಶಿಕ್
ಅತ್ಯುತ್ತಮ ಫೋಷಕ ನಟಿಲಾರಾ ದತ್ತಾ
ಅತ್ಯುತ್ತಮ ಖಳ ನಟಆಯುಷ್​ ಶರ್ಮಾ
ವಿಮರ್ಶಕರ ಆಯ್ಕೆಯ ಅತ್ಯುತ್ತಮ ಚಿತ್ರಸರ್ದಾರ್​ ಉದ್ಧಮ್
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಸಿದ್ದಾರ್ಥ್​ ಮಲ್ಹೋತ್ರ
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿಕಿಯಾರಾ ಅಡ್ವಾಣಿ
ಜನರ ಆಯ್ಕೆಯ ಅತ್ಯುತ್ತಮ ನಟಅಭಿಮನ್ಯು ದಾಸಾನಿ
ಜನರ ಆಯ್ಕೆಯ ಅತ್ಯುತ್ತಮ ನಟಿರಾಧಿಕಾ ಮದನ್​
ಕಿರುತೆರೆಯ ಅತ್ಯುತ್ತಮ ನಟಶಾಹೀರ್​ ಶೇಖ್​
ಕಿರುತೆರೆಯ ಅತ್ಯುತ್ತಮ ನಟಿ ಶ್ರದ್ಧಾ ಆರ್ಯ
ಕಿರುತೆರೆಯ ಭರವಸೆಯ ನಟಧೀರಜ್​ ಧೂಪರ್​
ಕಿರುತೆರೆಯ ಭರವಸೆಯ ನಟಿರೂಪಾಲಿ ಗಂಗೂಲಿ
ಅತ್ಯುತ್ತಮ ಕಿರುಚಿತ್ರಪೌಲಿ
ಅತ್ಯುತ್ತಮ ಹಿನ್ನೆಲೆ ಗಾಯಕವಿಶಾಲ್​ ಮಿಶ್ರಾ
ಅತ್ಯುತ್ತಮ ಹಿನ್ನೆಲೆ ಗಾಯಕಿಕನಿಕಾ ಕಪೂರ್​

Published by:Vasudeva M
First published: