• Home
  • »
  • News
  • »
  • entertainment
  • »
  • Dadasaheb Phalke Award: ಕನ್ನಡದ ಕಲಾವಿದರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಗದ ಅಸಲಿ ಸತ್ಯವಿದು!

Dadasaheb Phalke Award: ಕನ್ನಡದ ಕಲಾವಿದರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಗದ ಅಸಲಿ ಸತ್ಯವಿದು!

ದಾದಾಸಾಹೇಬ್ ಫಾಲ್ಕೆ ಕನ್ನಡಿಗರಿಗೆ ಯಾಕೆ ಬರಲಿಲ್ಲ?

ದಾದಾಸಾಹೇಬ್ ಫಾಲ್ಕೆ ಕನ್ನಡಿಗರಿಗೆ ಯಾಕೆ ಬರಲಿಲ್ಲ?

ಕನ್ನಡದಲ್ಲೂ ಅದ್ಭುತ ನಟರಿದ್ದಾರೆ. ಅನಂತ್​ ನಾಗ್, ಶ್ರೀನಾಥ್ ಹೀಗೆ ಹಲವರಿದ್ದಾರೆ. ಆದರೆ ಇವರ ಹೆಸರುಗಳನ್ನೂ ಯಾರೂ ಹೇಳಲೇ ಇಲ್ವೇ? ಸಮಿತಿಯಲ್ಲಿದ್ದು ಇವರ ಹೆಸರನ್ನ ನಾನು ತೆಗೆದುಕೊಳ್ಳೋಕೆ ಹೇಗೆ ಸಾಧ್ಯ? ತಮ್ಮ ನಾಯಕನ ಬಗ್ಗೆ ಅಭಿಮಾನಿ ಸಂಘಗಳು ಹೇಳಬೇಕು. ಅದು ನಿರಂತರವಾಗಿಯೇ ಆಗಬೇಕು.

ಮುಂದೆ ಓದಿ ...
  • Share this:

ಕನ್ನಡದಲ್ಲಿ ಅತ್ಯದ್ಭುತ (Kannada Actors) ಕಲಾವಿದರಿದ್ದಾರೆ. ಅನಂತ್ ನಾಗ್, ಶ್ರೀನಾಥ್, ದ್ವಾರಕೀಶ್, ಬಿ.ಸರೋಜಾ ದೇವಿ ಅವರಂತಹ ನಟರು ಕನ್ನಡಿಗರ ಹೃದಯದಲ್ಲಿ ಈಗಲೂ ಇದ್ದಾರೆ. ಇವರು ನಟಿಸೋ ಚಿತ್ರಗಳು ಪುಟ್ಟ ಪರದೆ ಮೇಲೆ ಬಂದ್ರೂ ಸರಿ, ಅವುಗಳನ್ನ ನೋಡಿ ಖುಷಿ ಪಡೋ ಅನೇಕ ಸಿನಿ ಆರಾಧಕರು ಇದ್ದಾರೆ. ಆದರೆ ಏನೂ ಪ್ರಯೋಜನ, ದಾದಾಸಾಹೇಬ್ (Dadasaheb Phalke Award) ಫಾಲ್ಕೆ ಪ್ರಶಸ್ತಿಯಂತಹ ಗೌರವ ಇವರಿಗೆ ಸಿಗೋದೇ ಇಲ್ವೇ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮೊದಲು ಬಂದಿರೋದು ಡಾಕ್ಟರ್ ರಾಜ್​ ಕುಮಾರ್​ ಅವರಿಗೆ, ಇವರಾದ್ಮೇಲೆ ಹಿರಿಯ ಕ್ಯಾಮೆರಾಮನ್ ವಿ.ಕೆ.ಮೂರ್ತಿಗಳಿಗೆ ಬಂದಿತ್ತು. ಇದು ಆದ್ಮೇಲೆ ಕನ್ನಡದ ಯಾವ ಕಲಾವಿದರಿಗೂ ಈ ಪ್ರಶಸ್ತಿ ಬರಲೇ ಇಲ್ಲ. ಇದರ ಹಿಂದಿನ ನಿಜವಾದ ಸಮಸ್ಯೆ ಏನೂ? ಅಸಲಿಗೆ ಕನ್ನಡದ ಕಲಾವಿದರಿಗೆ ಏಕೆ ಫಾಲ್ಕೆ ಪ್ರಶಸ್ತಿ ಬರಲಿಲ್ಲ. ಈ ಎಲ್ಲ ವಿಚಾರವಾಗಿಯೇ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರಾದ (TS Nagabharana) ಟಿ.ಎಸ್.ನಾಗಾಭರಣ ನಮ್ಮೊಟ್ಟಿಗೆ ವಿಶೇಷವಾಗಿಯೇ ಮಾತನಾಡಿದ್ದಾರೆ.


ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕನ್ನಡಿಗರಿಗೆ ಯಾಕೆ ಬರಲಿಲ್ಲ?
ಟಿ.ಎಸ್.ನಾಗಾಭರಣ ಅಂದಾಕ್ಷಣ ಒಂದು ವಿಶೇಷ ಗೌರವ ಬರುತ್ತದೆ. ಅವರ ಸಿನಿಮಾ ಪ್ರೀತಿ, ಸಿನಿಮಾಗೆ ಅವರು ಮಾಡೋ ಸಂಶೋಧನೆ, ಅವರ ಚಿತ್ರಗಳ ನಿರ್ಮಿಸೋ ರೀತಿ ಎಲ್ಲವೂ ವಿಶೇಷವಾಗಿಯೇ ಇರುತ್ತವೆ.
ಸಿನಿಮಾಗವನ್ನ ಆಳವಾಗಿಯೇ ಅಧ್ಯಯನ ಮಾಡೋ ಟಿ.ಎಸ್.ನಾಗಾಭರಣರು ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರೂ ಆಗಿದ್ದಾರೆ. ಈ ಸಲದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಆಯ್ಕೆ ಸಮಿತಿಯ ಐವರಲ್ಲಿ ಕನ್ನಡದ ಟಿ.ಎಸ್.ನಾಗಾಭರಣ ಅವರೂ ಇದ್ದರು.


ಇದನ್ನೂ ಓದಿ: Meghana Raj: ಮತ್ತೆ ಬಣ್ಣ ಹಚ್ಚಿದ ಮೇಘನಾ ರಾಜ್; ಇದ್ರಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್!


ನಟಿ ಹೇಮಾ ಮಾಲಿನಿ, ಗಾಯಕ ಉದಿತ್ ನಾರಾಯಣ್, ಆಶಾ ಭೋಂಸ್ಲೆ, ನಟಿ ಪೂನಂ ದಿಲ್ಲೋನ್ ಕೂಡ ಈ ಸಮಿತಿಯ ಸದಸ್ಯರಾಗಿದ್ದರು. ಈ ಐವರು ಒಟ್ಟು ಅಭಿಪ್ರಾಯದಲ್ಲಿ ಈ ಸಲದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನ ಬಾಲಿವುಡ್ ನ ಹೆಸರಾಂತ ಹಿರಿಯ ನಾಯಕಿ ನಟಿ ಆಶಾ ಪಾರೇಖ್ ಅವರಿಗೆ ಕೊಟ್ಟು ಗೌರವಿಸಲಾಗುತ್ತಿದೆ.


ಕನ್ನಡದ ಕಲಾವಿದರಿಗೆ ಪ್ರಶಸ್ತಿ ಬರದೇ ಇರೋಕೆ ಏನ್ ಕಾರಣ ಗೊತ್ತೇ?
ಇದೇ ಸೆಪ್ಟೆಂಬರ್-30 ರಂದು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ನಟಿ ಆಶಾ ಪಾರೇಖ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಆದರೆ, ಕನ್ನಡದ ನಿರ್ದೇಶಕ ಟಿ.ಎಸ್.ನಾಗಾಭರಣ ಸಮಿತಿಯಲ್ಲಿದ್ದರೂ ಕನ್ನಡಿಗರಿಗೆ ಯಾಕೆ ಪ್ರಶಸ್ತಿ ಬರಲಿಲ್ಲ ಅನ್ನೋ ಪ್ರಶ್ನೆ ಕೂಡ ಈಗ ಇದೆ. ಈ ಹಿನ್ನೆಲೆಯಲ್ಲಿಯೇ ನಿರ್ದೇಶಕ ಟಿ.ಎಸ್.ನಾಗಾಭರಣ ನಮ್ಮೊಟ್ಟಿಗೆ ಮಾತನಾಡಿದ್ದಾರೆ.


ಕನ್ನಡ ಕಲಾವಿದರಿಗೆ ಯಾಕೆ ಪ್ರಶಸ್ತಿ ಬರಲಿಲ್ಲ ಗೊತ್ತೇ-ನಾಗಾಭರಣ
ಹೌದು, ಈ ಸಲದ ದಾದಾ ಸಾಹೇಬ್ ಪಾಲ್ಕೆಯ ಪ್ರಶಸ್ತಿ ಆಶಾ ಪಾರೇಖ್ ಅವರಿಗೆ ಬಂದಿದೆ. ಆಯ್ಕೆ ಸಮಿತಿಯ ಒಮ್ಮತದ ಮೇಲೆನೆ ಈ ಒಂದು ಪ್ರಶಸ್ತಿ ನೀಡಲಾಗಿದೆ.


ಆಶಾ ಪಾರೇಖ್ ಅಲ್ಲದೇ 8 ರಿಂದ 9 ಜನರ ಹೆಸರು ಕೂಡ ಪ್ರಶಸ್ತಿ ಆಯ್ಕೆ ಸಮಿತಿ ಮುಂದೆ ಇದ್ದವು. ಆದರೆ, ಆಶಾ ಪಾರೇಖ್ ದಿ ಬೆಸ್ಟ್ ಅಂತ ಒಮ್ಮತ ಅಭಿಪ್ರಾಯ ಅಲ್ಲಿ ಬಂತು. ಅದಕ್ಕೇನೆ ಈ ಸಲದ ದಾದಾಸಾಹೇಬ್ ಪ್ರಶಸ್ತಿ ಕೊಡಲಾಗುತ್ತಿದೆ ಅಂತಲೇ ಟಿ.ಎಸ್.ನಾಗಾಭರಣ ಹೇಳಿದರು.


ಅನಂತ್ ನಾಗ್, ಶ್ರೀನಾಥ್ ಅವ್ರೇ ಪ್ರಶಸ್ತಿ ಕೊಡಿ ಅಂತ ಕೇಳಬೇಕೆ?
ಕನ್ನಡದಲ್ಲೂ ಅದ್ಭುತ ನಟರಿದ್ದಾರೆ. ಅನಂತ್​ ನಾಗ್, ಶ್ರೀನಾಥ್ ಹೀಗೆ ಹಲವರಿದ್ದಾರೆ. ಆದರೆ ಇವರ ಹೆಸರುಗಳನ್ನೂ ಯಾರೂ ಹೇಳಲೇ ಇಲ್ವೇ?


ಸಮಿತಿಯಲ್ಲಿದ್ದು ಇವರ ಹೆಸರನ್ನ ನಾನು ತೆಗೆದುಕೊಳ್ಳೋಕೆ ಹೇಗೆ ಸಾಧ್ಯ? ತಮ್ಮ ನಾಯಕನ ಬಗ್ಗೆ ಅಭಿಮಾನಿ ಸಂಘಗಳು ಹೇಳಬೇಕು. ಅದು ನಿರಂತರವಾಗಿಯೇ ಆಗಬೇಕು.


ನಾಮಿನೇಷನ್ ಮಾಡಬೇಕು?
ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಫಿಲ್ಮ್ ಚೇಂಬರ್, ಹೀಗೆ ಇವರು ನಮ್ಮ ಈ ಹಿರಿಯ ನಾಯಕರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬರಬೇಕು ಅಂತ ನಾಮಿನೇಷನ್ ಕೂಡ ಮಾಡಬೇಕು.


ಆಗಲೇ ಸಮಿತಿ ಮುಂದೆ ಆಯಾ ಹೆಸರುಗಳು ಬರೋಕೆ ಸಾಧ್ಯ. ಇಲ್ಲವಾದ್ರೆ, ಆಯ್ಕೆ ಸಮಿತಿಯಲ್ಲಿ ಇದೇ ರೀತಿನೇ ಹೆಸರುಗಳು ಬಂದಿರುತ್ತವೆ ಅಂತಲೇ ನಾಗಾಭರಣ ಹೇಳಿದರು.


Dadasaheb Phalke Award Jury Member Director T.S.Nagabhara Reveal Some Interesting Fact About this Award
ಬಾ.ಮಾ.ಹರೀಶ್-ಫಿಲ್ಮಂ ಚೇಂಬರ್ ಅಧ್ಯಕ್ಷರು


ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಏನಂತಾರೆ?
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕನ್ನಡಿಗರಿಗೆ ಸಿಕ್ಕಿದ್ದರೆ ಖುಷಿ ಆಗುತ್ತಿತ್ತು. ಅವರಲ್ಲಿ ವಿಶೇಷವಾಗಿ ಅನಂತ್ ನಾಗ್, ದ್ವಾರಕೀಶ್, ದೊಡ್ಡರಂಗೇ ಗೌಡರು ಇವರೆಲ್ಲ ಇದ್ದರು. ಇವರಲ್ಲಿ ಯಾರಿಗಾದರೂ ಸಿಕ್ಕಿದ್ದರೂ ಖುಷಿ ಇತ್ತು ಅಂತಲೇ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ.ಮಾ.ಹರೀಶ್ ಹೇಳಿದರು.


ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಏನಂತಾರೆ?
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಈ ಸಲ ನಟಿ ಆಶಾ ಪಾರೇಖ್ ಅವರಿಗೆ ಬಂದಿದೆ. ಈ ಬಗ್ಗೆ ಏನ್ ಹೇಳಲಿಕ್ಕೆ ಇಷ್ಟಪಡ್ತೀರಾ? ಅಂತ ಕೇಳೋ ಪ್ರಶ್ನೆಗೆ ಅವರ ಉತ್ತರ ಸಿಂಪಲ್ ಆಗಿಯೇ ಇತ್ತು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕನ್ನಡಿಗರಿಗೆ ಬಂದಿದ್ದರೆ ಚೆನ್ನಾಗಿತ್ತು ಅಂತಲೇ ಅಭಿಪ್ರಾಯ ಪಟ್ಟಿದ್ದಾರೆ.


Dadasaheb Phalke Award Jury Member Director T.S.Nagabhara Reveal Some Interesting Fact About this Award
ರಾಜೇಂದ್ರ ಸಿಂಗ್ ಬಾಬು-ಕನ್ನಡದ ಹಿರಿಯ ನಿರ್ದೇಶಕರು


ಕನ್ನಡದ ಕಲಾವಿದರು ತಾವಾಗಿಯೇ ಹೋಗಿ ನನಗೆ ದಾದಾ ಸಾಹೇಬ್ ಪ್ರಶಸ್ತಿ ಕೊಡಿ ಅಂತ ಹೇಗೆ ಕೇಳೋಕೆ ಸಾಧ್ಯ? ಕನ್ನಡ ಹೋರಾಟಗಾರರು, ಕನ್ನಡ ಸಿನಿಮಾ ಅಭಿಮಾನಿಗಳು ಅನಂತ್ ನಾಗ್, ಶ್ರೀನಾಥ್, ದ್ವಾರಕೀಶ್, ಬಿ.ಸರೋಜಾ ದೇವಿ ಅವರಂತಹ ಮಹಾನ್ ಕಲಾವಿದರ ಹೆಸರನ್ನ ತೆಗೆದುಕೊಳ್ಳುತ್ತಲೇ ಇರಬೇಕು.


ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಪುಷ್ಪ 2 ಚಿತ್ರದ ಫಸ್ಟ್ ಲುಕ್ ಶೀಘ್ರದಲ್ಲೇ ರಿಲೀಸ್


ಪ್ರಶಸ್ತಿಯನ್ನ ಕೊಡುವಂತೆ ಒತ್ತಾಯಿಸುತ್ತಲೇ ಇರಬೇಕು. ಆಗಲೇ ಏನಾದರೂ ಸಾಧ್ಯ ಅನ್ನೋ ಅಭಿಪ್ರಾಯ ಕೂಡ ಟಿ.ಎಸ್.ನಾಗಾಭರಣರಿಂದ ಬಂದಿದೆ. ಇಷ್ಟೆಲ್ಲ ಆದ್ಮೇಲೆ ಮುಂದಿನ ಸಲವಾದರೂ ಈ ಪ್ರಯತ್ನಗಳು ಆದ್ರೆ ಚೆಂದ ಅಲ್ವೇ?

First published: