Anitha EAnitha E
|
news18-kannada Updated:December 20, 2019, 12:50 PM IST
ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಸಿನಿಮಾ 'ದಬಾಂಗ್ 3' ಇಂದು ವಿಶ್ವದಾದ್ಯಂತ ತೆರೆ ಕಂಡಿದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲೂ ಸಲ್ಲು ಅಭಿನಯದ ಚಿತ್ರ ತೆರೆ ಕಂಡಿದೆ.
ಪ್ರಭುದೇವ ನಿರ್ದೇಶನದ ಹಾಗೂ ಸುದೀಪ್ ಖಳನಾಯಕನಾಗಿ ಅಭಿನಯಿಸಿರುವ ಈ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಚಿತ್ರ ನೋಡಿದ ಸಲ್ಲು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಕುರಿತಾಗಿ ಬರೆಯಲಾರಂಭಿಸಿದ್ದಾರೆ.
#Dabangg3 is out an out mass entertainer. @BeingSalmanKhan
ಬಿ-ಟೌನ್ನ ಮನಿ ಮಷಿನ್ ಸಲ್ಮಾನ್ ಅಭಿನಯದ ಈ ಚಿತ್ರ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಭಿಮಾನಿಗಳ ವಿಮರ್ಶೆ ಹಾಗೂ ಪೋಸ್ಟ್ ನೋಡುತ್ತಿದ್ದರೆ ಸಲ್ಮಾನ್ ವರ್ಷಾಂತ್ಯಕ್ಕೆ ರಸದೌತಣ ನೀಡಿದ್ದಾರೆ ಎಂದೆನಿಸುತ್ತಿದೆ.
ಆದರೆ ಮತ್ತೊಂದು ಕಡೆ ಸಲ್ಮಾನ್ ಅಭಿಮಾನಿಗಳು ಹೊರತು ಪಡಿಸಿದರೆ, ಸಾಮಾನ್ಯ ಸಿನಿ ಪ್ರೇಕ್ಷಕನಿಗೆ ಈ ಸಿನಿಮಾ ಅಷ್ಟು ಕಿಕ್ ಕೊಡುತ್ತಿಲ್ಲ. ಅಲ್ಲದೆ ಸಿನಿಮಾ ಬಗ್ಗೆ ಪ್ರೇಕ್ಷಕ ಬೇಸರ ವ್ಯಕ್ತಪಡಿಸುತ್ತಿದ್ದಾನೆ.
ಸಲ್ಮಾನ್ ಅವರ ಈ ಸಿನಿಮಾದಲ್ಲಿ ಯಾವುದೇ ಹೊಸತನವಿಲ್ಲ. ಕಿರಿಕಿರಿ ಉಂಟುಮಾಡುವ ಡೈಲಾಗ್ಸ್, ಬಾಲಿಶವಾಗಿ ಕಾಣಿಸುವ ಆ್ಯಕ್ಷನ್, ಸುಲಭವಾಗಿ ಊಹಿಸಬಲ್ಲ ಕ್ಲೈಮ್ಯಾಕ್ಸ್.... ಇದು ಕೇವಲ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮಾಡಿರುವ ಸಿನಿಮಾ ಎಂದು ಬೇಸರದಿಂದ ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
ಸೂಪರ್ ಫ್ಲಾಪ್ ಮ್ಯೂಸಿಕ್, ಮುಖ ಪರಿಚಯವಿಲ್ಲದ ನಾಯಕಿಯರು, ಅದೇ ಹಳೇ ಕತೆ, 54 ವರ್ಷದ ಸಲ್ಮಾನ್ ಅವರ ಆಯ್ಕೆ ಓಲ್ಡ್ ಫ್ಯಾಷನ್ ಎಂದು ಅವರು ಅರಿತುಕೊಳ್ಳಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ.
ಸಾಮಾನ್ಯ ಪ್ರೇಕ್ಷಕರ ಅಭಿಪ್ರಾಯ ಹೀಗಿದ್ದರೆ, ಸಿನಿ ವ್ಯವಹಾರಗಳ ವಿಶ್ಲೇಷಕ ತರನ್ ಆದರ್ಶ್ ಅವರು ಈ ಸಿನಿಮಾಗೆ 3.5 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ.
ಸಿನಿಮಾ ನೋಡುವಂತೆ ಸಲ್ಮಾನ್ ಖಾನ್ ಟ್ವಿಟರ್ನಲ್ಲಿ ಪದೇ ಪದೇ ಟ್ವೀಟ್ ಮಾಡುತ್ತಿದ್ದಾರೆ. ಇನ್ನು ಏನು ಮಾಡುತ್ತಿದ್ದೀರಿ, ಹೋಗಿ ಸಿನಿಮಾ ನೋಡಿ ಎಂದು ಸಲ್ಲು ಒಂದು ಗಂಟೆ ಹಿಂದೆಯಷ್ಟೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಸುದೀಪ್ ಈ ಸಿನಿಮಾದಲ್ಲಿ ಬಲ್ಲಿ ಸಿಂಗ್ ಎಂಬ ಪಾತ್ರದ್ಲಿ ಖಳನಾಗಿ ಅಭಿನಯಿಸಿದ್ದಾರೆ. ಸಖತ್ ಸ್ಟೈಲಿಶ್ ವಿಲನ್ ಆಗಿ ಸಲ್ಲು ಮುಂದೆ ತೊಡೆ ತಟ್ಟಿರುವ ಸುದೀಪ್ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಲ್ಲು ಹಾಗೂ ಸುದೀಪ್ ಜತೆ ಸೋನಾಕ್ಷಿ, ಅರ್ಬಾಜ್ ಖಾನ್ ಹಾಗೂ ಇತರರ ತಾರಾಗಣ ಈ ಚಿತ್ರದಲ್ಲಿದೆ.
Bold Photos: ಮತ್ತಷ್ಟು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡ ಅಮೀರ್ ಖಾನ್ ಮಗಳು ಇರಾ ಖಾನ್..!
Published by:
Anitha E
First published:
December 20, 2019, 12:50 PM IST