Dabangg 3 Motion Poster: ಸಲ್ಮಾನ್ ಖಾನ್ ಕನ್ನಡ ಅಭಿಮಾನಕ್ಕೆ ಮನಸೋತ ಕರುನಾಡ ಮಂದಿ; ಸುದೀಪ್ ಸಹವಾಸದಿಂದ ಬದಲಾದ್ರಾ ಸಲ್ಲು?

ಕನ್ನಡದ ಕೆಲ ಸಿನಿಮಾಗಳ ಟೈಟಲ್​ನಲ್ಲಿ ಅರ್ಧ ಇಂಗ್ಲಿಷ್​ ಅರ್ಧ ಕನ್ನಡ ತುಂಬಿರುತ್ತದೆ. ಪೋಸ್ಟರ್​ನಲ್ಲಿ ಸಿನಿಮಾದ ಶೀರ್ಷಿಕೆ ಕನ್ನಡದಲ್ಲಿದ್ದರೆ, ನಿರ್ಮಾಪಕರು, ನಿರ್ದೇಶಕರ ಹೆಸರನ್ನು ಆಂಗ್ಲಭಾಷೆಯಲ್ಲಿ ಬರೆದಿರುತ್ತಾರೆ. ಆದರೆ, ದಬಾಂಗ್​ 3 ಪೋಸ್ಟರ್​ ಭಿನ್ನವಾಗಿದೆ.

Rajesh Duggumane | news18-kannada
Updated:September 11, 2019, 3:32 PM IST
Dabangg 3 Motion Poster: ಸಲ್ಮಾನ್ ಖಾನ್ ಕನ್ನಡ ಅಭಿಮಾನಕ್ಕೆ ಮನಸೋತ ಕರುನಾಡ ಮಂದಿ; ಸುದೀಪ್ ಸಹವಾಸದಿಂದ ಬದಲಾದ್ರಾ ಸಲ್ಲು?
ಸುದೀಪ್​-ಸಲ್ಮಾನ್​
  • Share this:
ನಟ ಸಲ್ಮಾನ್​ ಖಾನ್​ ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ನಟಿಸಿದ್ದು ಬಾಲಿವುಡ್​ನಲ್ಲಿ ಮಾತ್ರ. ಅವರು ಬೇರೆ ಭಾಷೆಯ ಚಿತ್ರರಂಗಕ್ಕೆ ಕಾಲಿಡುವ ಪ್ರಯತ್ನವನ್ನೇ ಮಾಡಿಲ್ಲ. ‘ದಬಾಂಗ್​ 3’ ಮೂಲಕ ಇದೇ ಮೊದಲ ಬಾರಿಗೆ ಸಲ್ಲು ಏಕಕಾಲಕ್ಕೆ ಸ್ಯಾಂಡಲ್​ವುಡ್​, ಟಾಲಿವುಡ್​ ಹಾಗೂ ಕಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಈ ಮಧ್ಯೆ ಅವರ ಕನ್ನಡ ಪ್ರೀತಿಗೆ ಕರುನಾಡ ಮಂದಿ ಮನಸೋತಿದ್ದಾರೆ.

ಕನ್ನಡದಲ್ಲಿ ವರ್ಷಕ್ಕೆ ನೂರಾರು ಸಿನಿಮಾಗಳು ತೆರೆಗೆ ಬರುತ್ತವೆ. ಇವುಗಳಲ್ಲಿ ಅನೇಕ ಸಿನಿಮಾಗಳ ಟೈಟಲ್​ ಕನ್ನಡದಲ್ಲೇ ಇರುವುದಿಲ್ಲ! ಇನ್ನೂ ಕೆಲ ಸಿನಿಮಾಗಳ ಟೈಟಲ್​ನಲ್ಲಿ ಅರ್ಧ ಇಂಗ್ಲಿಷ್​ ಅರ್ಧ ಕನ್ನಡ ತುಂಬಿರುತ್ತದೆ. ಪೋಸ್ಟರ್​ನಲ್ಲಿ ಸಿನಿಮಾದ ಶೀರ್ಷಿಕೆ ಕನ್ನಡದಲ್ಲಿದ್ದರೆ, ನಿರ್ಮಾಪಕರು, ನಿರ್ದೇಶಕರ ಹೆಸರನ್ನು ಆಂಗ್ಲಭಾಷೆಯಲ್ಲಿ ಬರೆದಿರುತ್ತಾರೆ.

ಆದರೆ, ಇಂದು ರಿಲೀಸ್​ ಆಗಿರುವ ‘ದಬಾಂಗ್​ 3’ ಮೋಷನ್​ ಪೋಸ್ಟರ್​ನಲ್ಲಿ ಎಲ್ಲವೂ ಕನ್ನಡಮಯ! ಖುದ್ದು ಸಲ್ಮಾನ್​ ಖಾನ್​ ಕನ್ನಡದಲ್ಲಿ ಡೈಲಾಗ್​ ಹೇಳಿದ್ದು ಮೋಷನ್​ ಪೋಸ್ಟರ್​ನ ಹೈಲೈಟ್​. ಕೊನೆಯಲ್ಲಿ ತೋರಿಸುವ ಚಿತ್ರದ ಶೀರ್ಷಿಕೆ, ಸಿನಿಮಾ ರಿಲೀಸ್​ ಡೇಟ್​, ನಿರ್ಮಾಪಕರು, ನಿರ್ದೇಶಕರ ಹೆಸರು ಹೀಗೆ ಪ್ರತಿಯೊಂದು ವಿಚಾರವನ್ನು ಕನ್ನಡದಲ್ಲೇ ಬರೆಯಲಾಗಿದೆ. ಇದು ಕನ್ನಡ ಸಿನಿಪ್ರಿಯರ ಖುಷಿ ಹೆಚ್ಚಿಸಿದೆ. ಸಲ್ಲು ಕನ್ನಡ ಅಭಿಮಾನ ಕಂಡು ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ.

dabangg 3
ದಬಾಂಗ್​ ಪೋಸ್ಟರ್​


ಸಲ್ಮಾನ್​ ಖಾನ್​ಗೆ ಕನ್ನಡದ ಮೇಲೆ ಇಷ್ಟೊಂದು ಪ್ರೀತಿ ಹುಟ್ಟಲು ಕಿಚ್ಚ ಸುದೀಪ್​ ಕಾರಣ ಎನ್ನಲಾಗುತ್ತಿದೆ. ‘ದಬಾಂಗ್​ 3’ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಸೆಟ್​ ಸೇರಿದ ಮೇಲೆ ಸಲ್ಲುಗೆ ಸುದೀಪ್​ ತುಂಬಾನೇ ಆಪ್ತರಾಗಿದ್ದಾರೆ. ಅಷ್ಟೇ ಅಲ್ಲ ಚಿತ್ರದ ನಿರ್ದೇಶಕ ಪ್ರಭುದೇವಗೂ ಕನ್ನಡ ಬರುತ್ತದೆ. ಈ ಎಲ್ಲ ಕಾರಣಕ್ಕೆ ಸಲ್ಮಾನ್​ಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಮೂಡಿದೆಯಂತೆ. ಹಾಗಾಗಿ ದಕ್ಷಿಣ ಭಾರತದ ಭಾಷೆಗಳಲ್ಲಿ ಸಿನಿಮಾ ರಿಲೀಸ್​ ಮಾಡಲು ಸಲ್ಲು ಮುಂದಾಗಿದ್ದಾರೆ ಎಂಬುದು ಮೂಲಗಳ ಮಾಹಿತಿ.ಇದನ್ನೂ ಓದಿ: Dabangg 3: ಕಿಚ್ಚ ಸುದೀಪ್​ಗೆ ಸ್ವಾಗತ ಕೋರಲು ಸಲ್ಮಾನ್​ ಖಾನ್​ ರೆಡಿಉತ್ತರ ಭಾರತದಲ್ಲಿ ಲ್ಯಾಂಡ್​ ಮಾಫಿಯಾಗಳು ಭೂ ಕಬಳಿಕೆ ಮಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಇದನ್ನು ನಿಯಂತ್ರಣ ಮಾಡಲು ಪೊಲೀಸರಿಂದಲೂ ಸಾಧ್ಯವಾಗಿರಲಿಲ್ಲ. ಈ ವೇಳೆ ನಡೆದ ಘಟನೆ ಇಟ್ಟುಕೊಂಡು ‘ದಬಾಂಗ್​ 3’ ಚಿತ್ರ ಸಿದ್ಧಗೊಂಡಿದೆ. ಅಚ್ಚರಿಯ ವಿಚಾರ ಏನೆಂದರೆ, ಸುದೀಪ್​ ಲ್ಯಾಂಡ್​ ಮಾಫಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತೆಲುಗಿನ ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರದಲ್ಲಿ ಸುದೀಪ್​ ನೆಗೆಟಿವ್​ ಶೇಡ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ಜನರು ತುಂಬಾನೇ ಮೆಚ್ಚಿಕೊಂಡಿದ್ದರು. ಈಗ ಅವರು ಮತ್ತೊಮ್ಮೆ ಇಂಥದ್ದೇ ಪಾತ್ರ ನಿರ್ವಹಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಸಲ್ಮಾನ್​ ಖಾನ್​ ಹಾಗೂ ಸುದೀಪ್​ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆಯಂತೆ.

ಇದನ್ನೂ ಓದಿ:  ಪೈಲ್ವಾನ್ ಜರ್ನಿಯ ಕತೆ ಹೇಳಿದ ಕಿಚ್ಚ

‘ದಬಾಂಗ್​ 3’ ಸಿನಿಮಾವನ್ನು ಪ್ರಭುದೇವ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್​ ಖಾನ್​ ನಾಯಕ. ಅರ್ಬಾಜ್​ ಖಾನ್​ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸೋನಾಕ್ಷಿ ಸಿನ್ಹಾ ನಾಯಕಿ. ಚುಲ್ಬುಲ್​ ಪಾಂಡೆ ಆಗಿ ಸಲ್ಲು ಕಾಣಿಸಿಕೊಳ್ಳುತ್ತಿದ್ದಾರೆ.  ಸುದೀಪ್​ ಈ ಮೊದಲು ಹಿಂದಿಯಲ್ಲಿ ‘ಫೂಂಕ್​’, ‘ಫೂಂಕ್​ 2’, ‘ರಣ್​’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು.

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ