Kichcha Sudeep: ವೈರಲ್​ ಆಗುತ್ತಿದೆ ದಬಾಂಗ್​ 3 ಮೇಕಿಂಗ್ ವಿಡಿಯೋ: ದಬಾಂಗ್ 3 ಬಗ್ಗೆ ಕಿಚ್ಚ ಸುದೀಪ್​ ಹೇಳಿದ್ದೇನು..?

Dabangg 3 making video: ಪ್ರಭುದೇವಾ ನಿರ್ದೇಶಿಸುತ್ತಿರುವುದರಿಂದ ದಬಾಂಗ್ ಸರಣಿಯ ಈ ಮೂರನೇ ಸಿನಿಮಾ ಬಗ್ಗೆ ಕುತೂಹಲವೂ ಹೆಚ್ಚಿದೆ. ಇತ್ತೀಚೆಗಷ್ಟೇ ಚಿತ್ರತಂಡ ಸಲ್ಮಾನ್ ಖಾನ್​ ಅವರ ಚುಲ್​ಬುಲ್​ ಪಾಂಡೆ ಪಾತ್ರದ ಮೇಕಿಂಗ್ ರಿಲೀಸ್ ಮಾಡಿದೆ.

Anitha E | news18-kannada
Updated:November 9, 2019, 7:53 AM IST
Kichcha Sudeep: ವೈರಲ್​ ಆಗುತ್ತಿದೆ ದಬಾಂಗ್​ 3 ಮೇಕಿಂಗ್ ವಿಡಿಯೋ: ದಬಾಂಗ್ 3 ಬಗ್ಗೆ ಕಿಚ್ಚ ಸುದೀಪ್​ ಹೇಳಿದ್ದೇನು..?
ಕಿಚ್ಚ ಸುದೀಪ್​ ಹಾಗೂ ಸಲ್ಮಾನ್​ ಖಾನ್​
  • Share this:
ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ದಬಾಂಗ್ 3'. ಕನ್ನಡದವರಿಗೆ ಈ ಸಿನಿಮಾ ಬಗ್ಗೆ ಕೊಂಚ ಹೆಚ್ಚೇ ನಿರೀಕ್ಷೆಯಿದೆ. ಕಿಚ್ಚ ಸುದೀಪ್ ನಟಿಸುತ್ತಿರುವುದು ಒಂದು ಕಾರಣವಾದರೆ,  ಇದೇ ಮೊದಲ ಬಾರಿಗೆ ಹಿಂದಿ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗ್ತಿರೋದು ಮತ್ತೊಂದು ಕಾರಣ.

ಪ್ರಭುದೇವಾ ನಿರ್ದೇಶಿಸುತ್ತಿರುವುದರಿಂದ 'ದಬಾಂಗ್' ಸರಣಿಯ ಈ ಮೂರನೇ ಸಿನಿಮಾ ಬಗ್ಗೆ ಕುತೂಹಲವೂ ಹೆಚ್ಚಿದೆ. ಇತ್ತೀಚೆಗಷ್ಟೇ ಚಿತ್ರತಂಡ ಸಲ್ಮಾನ್ ಖಾನ್​ ಅವರ ಚುಲ್​ಬುಲ್​ ಪಾಂಡೆ ಪಾತ್ರದ ಮೇಕಿಂಗ್ ರಿಲೀಸ್ ಮಾಡಿದೆ.ಇಲ್ಲಿ ಕಿಚ್ಚ ಸೇರಿದಂತೆ ಚಿತ್ರತಂಡದವರು ಸಲ್ಮಾನ್ ಮತ್ತವರ ಪಾತ್ರದ ಬಗ್ಗೆ ಮಾತನಾಡಿದ್ದು, ಕೆಲ ಮೇಕಿಂಗ್ ಝಲ ಕ್ಅನ್ನೂ ತೋರಿಸಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ಅಂದಹಾಗೆ 'ದಬಾಂಗ್ 3' ಇದೇ ಡಿಸೆಂಬರ್ 20ರ ಈದ್​ರಂದು ರಿಲೀಸ್ ಆಗಲಿದೆ.ಈ ಸಿನಿಮಾದಲ್ಲಿ ಬಲ್ಲಿಪಾತ್ರದಲ್ಲಿ ಸುದೀಪ್​ ಅಭಿನಯಿಸಿದ್ದು, ಸಲ್ಲು ಮುಂದೆ ಸಲ್ಮಾನ್​ ಖಳನಾಗಿ ತೊಡೆ ತಟ್ಟಲಿದ್ದಾರೆ. ಅದರಲ್ಲೂ ಸುದೀಪ್​ ತಮ್ಮ ಪಾತ್ರಕ್ಕೆ ತಾವೇ ಡಬ್​ ಮಾಡಿರುವುದು ಮತ್ತೊಂದು ವಿಶೇಷ.

ಹುಟ್ಟುಹಬ್ಬದ ಆಚರಣೆಗೆಂದು ವಿದೇಶಕ್ಕೆ ಹೋಗಿ ಬೆತ್ತಲಾದ ಹೆಬ್ಬುಲಿ​ ನಟಿ..!


 

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading