Daali Dhananjay Joker: ‘ಜೋಕರ್’ ಪಾತ್ರದಲ್ಲಿ ಡಾಲಿ ಧನಂಜಯ್?; ವೈರಲ್ ಆಯ್ತು ಪೋಸ್ಟರ್​

ಧನಂಜಯ್​ ಕೈಯಲ್ಲಿ ಸದ್ಯ ಪಾಪ್​​ಕಾರ್ನ್​  ಮಂಕಿ ಟೈಗರ್​ ಸೇರಿ 7-8 ಸಿನಿಮಾಗಳಿವೆ. ದುನಿಯಾ ಸೂರಿ ನಿರ್ದೇಶನ ಮಾಡುತ್ತಿರುವ ಪಾಪ್​ಕಾರ್ನ್​ ಮಂಕಿ ಟೈಗರ್​ ಸಿನಿಮಾದಲ್ಲಿ ಡಾಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Rajesh Duggumane | news18-kannada
Updated:October 23, 2019, 10:17 AM IST
Daali Dhananjay Joker: ‘ಜೋಕರ್’ ಪಾತ್ರದಲ್ಲಿ ಡಾಲಿ ಧನಂಜಯ್?; ವೈರಲ್ ಆಯ್ತು ಪೋಸ್ಟರ್​
ಜೋಕರ್
Rajesh Duggumane | news18-kannada
Updated: October 23, 2019, 10:17 AM IST
ಡಾಲಿ ಧನಂಜಯ್​ ಸಿನಿಮಾದಿಂದ ಸಿನಿಮಾಗೆ ಬೇರೆ ಬೇರೆ ಅವತಾರ ತಾಳುತ್ತಿದ್ದಾರೆ. ಅವರು ನಿರ್ವಹಿಸುವ ಪ್ರತಿ ವಿಭಿನ್ನ ಪಾತ್ರವನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ, ಈಗ ಡಾಲಿ ಜೋಕರ್ ಆಗಿದ್ದಾರೆ! ಸಾಮಾಜಿಕ ಜಾಲತಾಣದಲ್ಲಿ ಸದ್ಯ ಹೀಗೊಂದು ಫೋಟೋ ವೈರಲ್​ ಆಗಿದೆ.

ವಿಶ್ವಾದ್ಯಂತ ತೆರೆಕಂಡ ಹಾಲಿವುಡ್​ನ ‘ಜೋಕರ್’ ಸಿನಿಮಾ ಎಲ್ಲಡೆ ಸದ್ದು ಮಾಡುತ್ತಿದೆ. ಈ ಚಿತ್ರದ ಪೋಸ್ಟರ್​ಗೆ ಡಾಲಿ ಧನಂಜಯ್​ ಮುಖವನ್ನು ಅಂಟಿಸಿದ್ದಾರೆ. ಎಡಿಟ್​ ಮಾಡಿದ ಈ ಫೋಟೋ ನೋಡಿದವರಿಗೆ ಹಾಲಿವುಡ್​ನ ಜೋಕರ್​ ಪೋಸ್ಟರ್​ಅನ್ನು ಮರೆಸುವಂತಿದೆ.

ಕೆಲವರು ಇದನ್ನು ಅಸಲಿ ಎಂದು ನಂಬಿದ್ದಾರೆ. ಹೀಗಾಗಿ, ಯಾವುದು ಈ ಸಿನಿಮಾ? ಯಾರು ಡೈರೆಕ್ಟರ್? ಎಂಬಿತ್ಯಾದಿ ಪ್ರಶ್ನೆಗಳ‌ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಡಾಲಿ ಮುಂದಿನ ಸಿನಿಮಾ ‘ಪಾಪ್​ಕಾರ್ನ್​ ಮಂಕಿ ಟೈಗರ್​’ ಫಸ್ಟ್​ ಲುಕ್​ ಬಳಕೆ ಮಾಡಿಕೊಂಡು ಜೋಕರ್​ ಪೋಸ್ಟರ್​ ಎಡಿಟ್​ ಮಾಡಲಾಗಿದೆಯಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಸಂತೋಷ ವ್ಯಕ್ಯಪಡಿಸಿದ್ದಾರೆ. “ಸಕತ್ತಾಗಿ ಎಡಿಟ್​ ಮಾಡುತ್ತೀರಿ. ನಿಮ್ಮ ಕಲ್ಪನೆಗೆ ನನ್ನ ಒಂದು ಸಲಾಮ್​,” ಎಂದಿದ್ದಾರೆ.

ಇದನ್ನೂ ಓದಿ: ಸುದೀಪ್​ ನಟನೆಯ ದಬಾಂಗ್ 3 ಸಿನಿಮಾದಲ್ಲಿ ನಿರ್ದೇಶಕ ಅನೂಪ್​ ಭಂಡಾರಿ, ಗುರುದತ್​ ಗಾಣಿಗ!

ಧನಂಜಯ್​ ಕೈಯಲ್ಲಿ ಸದ್ಯ 'ಪಾಪ್​​ಕಾರ್ನ್​  ಮಂಕಿ ಟೈಗರ್​' ಸೇರಿ 7-8 ಸಿನಿಮಾಗಳಿವೆ. ದುನಿಯಾ ಸೂರಿ ನಿರ್ದೇಶನ ಮಾಡುತ್ತಿರುವ 'ಪಾಪ್​ಕಾರ್ನ್​ ಮಂಕಿ ಟೈಗರ್​' ಸಿನಿಮಾದಲ್ಲಿ ಡಾಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್​ ಅಭಿನಯದ 'ಯುವರತ್ನ' ಸಿನಿಮಾದಲ್ಲೂ ಡಾಲಿ ಬಣ್ಣ ಹಚ್ಚುತ್ತಿದ್ದಾರೆ.

First published:October 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...