• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Daali Dhananjaya: ಒಳ್ಳೆಯವ್ನ ಕೆಟ್ಟವ್ನ ಗೊತ್ತಿಲ್ರೀ ಆದ್ರ ನಮ್ ಮಂದಿಗೆ ಬಹಳ ಫೇವರಿಟ್ ಇದನಾ; ಹೊಯ್ಸಳ ಟೀಸರ್ ಔಟ್!

Daali Dhananjaya: ಒಳ್ಳೆಯವ್ನ ಕೆಟ್ಟವ್ನ ಗೊತ್ತಿಲ್ರೀ ಆದ್ರ ನಮ್ ಮಂದಿಗೆ ಬಹಳ ಫೇವರಿಟ್ ಇದನಾ; ಹೊಯ್ಸಳ ಟೀಸರ್ ಔಟ್!

ಡಾಲಿ ಧನಂಜಯ್​

ಡಾಲಿ ಧನಂಜಯ್​

ಹೊಯ್ಸಳ ಸಿನಿಮಾ ಟೀಸರ್​ನಲ್ಲಿ ಡಾಲಿ ಧನಂಜಯ್​ ಖಡಕ್​ ಆಗಿ ಕಾಣಿಸಿಕೊಂಡಿದ್ದಾರೆ. ಫೈಟಿಂಗ್​ ಸೀನ್​ಗಳಲ್ಲಿ ಡಾಲಿ ಧನಂಜಯ್​ ಮಿಂಚುತ್ತಿದ್ದಾರೆ. ಟೀಸರ್​ಗೆ ನಟ ಅಚ್ಯುತ್ ಕುಮಾರ್ ಹಿನ್ನೆಲೆ ಧ್ವನಿ ಕೂಡ ಇದೆ.

  • Share this:

ಡಾಲಿ ಧನಂಜಯ್ (Daali Dhananjaya) ಅಭಿನಯದ ಹೊಯ್ಸಳ ಚಿತ್ರದ  (Hoysala Movie) ಟೀಸರ್​ ರಿಲೀಸ್​ ಆಗಿದೆ. ಹೊಯ್ಸಳ ಸಿನಿಮಾಗಾಗಿ ಡಾಲಿ ಅಭಿಮಾನಿಗಳು ಕಾಯ್ತಿದ್ದಾರೆ. ಇದೀಗ ಹೊಯ್ಸಳ ಚಿತ್ರದ ಟೀಸರ್ ಹೊರಬಂದಿದ್ದು, ಧನಂಜಯ್ ಮುಖಕ್ಕೆ ಮಾಸ್ಕ್​ ಧರಿಸಿ ಖಡಕ್​ ಪೊಲೀಸ್​ ಆಫೀಸರ್​ ಆಗಿ ಟೀಸರ್ ನಲ್ಲಿ ಮಿಂಚಿದ್ದಾರೆ.  ಈ ಸಿನಿಮಾವನ್ನು ಕಾರ್ತಿಕ್ ಗೌಡ ನಿರ್ಮಿಸಿದ್ದು, ನಿರ್ದೇಶಕ ವಿಜಯ್, ಡಾಲಿಗೆ ಆ್ಯಕ್ಷನ್ ಕಟ್​ ಹೇಳಿದ್ದಾರೆ.


ಡಾಲಿ ಧನಂಜಯ್​ ಸಿನಿಮಾ ಟೀಸರ್​ ಔಟ್​


50 ಸೆಕೆಂಡ್​ ಇರುವ ಹೊಯ್ಸಳ ಸಿನಿಮಾ ಟೀಸರ್​ನಲ್ಲಿ ಡಾಲಿ ಧನಂಜಯ್​ ಖಡಕ್​ ಆಗಿ ಕಾಣಿಸಿಕೊಂಡಿದ್ದಾರೆ. ಫೈಟಿಂಗ್​ ಸೀನ್​ಗಳಲ್ಲಿ ಡಾಲಿ ಧನಂಜಯ್​ ಮಿಂಚುತ್ತಿದ್ದಾರೆ. ಟೀಸರ್​ ಗೆ ನಟ ಅಚ್ಯುತ್ ಕುಮಾರ್ ಹಿನ್ನೆಲೆ ಧ್ವನಿ ಇದೆ. ​ ಒಳ್ಳೆಯವ್ನ ಕೆಟ್ಟವ್ನ ಗೊತ್ತಿಲ್ರೀ ಆದ್ರ ನಮ್ ಮಂದಿಗೆ ಬಾಳ್​ ಫೇವರಿಟ್​ ಇದನಾ ಎಂಬ ಆಡಿಯೋ ನೋಡಿದ್ರೆ ಡಾಲಿ ಧನಂಜಯ್​ ಪಕ್ಕಾ 2 ಸೇಡ್​ಗಳಲ್ಲಿ ಕಾಣಿಸಿಕೊಳ್ತಾರೆ ಎನ್ನಲಾಗ್ತಿದೆ.
ಹೊಯ್ಸಳಾ ಟೀಸರ್ ನೋಡಿದ ಪ್ರೇಕ್ಷಕರು ಡಾಲಿಯ ಸಖತ್ ಮಾಸ್ ಹಾಗೂ ಸ್ಟೈಲೀಶ್​​  ಲುಕ್​ಗೆ ಬೋಲ್ಡ್​ ಆಗಿದ್ದಾರೆ. ತೆರೆ ಮೇಲೆ ಕಂಪ್ಲೀಟ್​ ಸಿನಿಮಾ ನೋಡಲು ಕಾಯ್ತಿದ್ದಾರೆ. ​
ಹೊಯ್ಸಳ ಚಿತ್ರದ ಸ್ಪೆಷಲ್ ಮ್ಯಾಟರ್ ಏನು ಗೊತ್ತೇ?


ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಚಿತ್ರ ಭರವಸೆಯ ಸಿನಿಮಾ ಆಗಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡು ವಿಶೇಷವಾಗಿಯೇ ಗಮನ ಸೆಳೆದಿದ್ದಾರೆ. 


ಡಾಲಿ ಧನಂಜಯ್ ಇಲ್ಲಿವರೆಗೂ ಎಲ್ಲ ರೀತಿ ಪಾತ್ರ ಮಾಡಿದ್ದರು. ಪೊಲೀಸ್ ಪಾತ್ರ ಒಂದು ಈಗ ಹೆಚ್ಚು ವಿಶೇಷವಾಗಿಯೇ ಕಾಣಿಸುತ್ತಿದೆ. ಚಿತ್ರದ ಕಥೆ ಕೂಡ ಸ್ಪೆಷಲ್ ಆಗಿದೆ. ಚಿತ್ರದ ನಿರ್ದೇಶಕ ವಿಜಯ್. ಎನ್ ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರನ್ನ ವಿಭಿನ್ನವಾಗಿಯೇ ತೋರಿಸಿದ್ದಾರೆ.


ಪೊಲೀಸ್ ಆಫೀಸರ್ ಸುತ್ತ ಹೊಯ್ಸಳ ಚಿತ್ರದ ಕಥೆ!


ಹೊಯ್ಸಳ ಚಿತ್ರದಲ್ಲಿ ಡಾಲಿ ಧನಂಜಯ್ ಒಬ್ಬ ಖಡಕ್ ಪೊಲೀಸ್ ಆಫೀಸರ್ ಪಾತ್ರವನ್ನ ನಿರ್ವಹಿಸಿದ್ದಾರೆ. ಗುರುದೇವ ಹೆಸರಿನ ಪೊಲೀಸ್ ಆಫೀಸರ್ ಆಗಿ ಡಾಲಿ ಧನಂಜಯ್ ಇಲ್ಲಿ ಅಬ್ಬರಿಸಿದ್ದಾರೆ.


ಹೊಯ್ಸಳ ಸಿನಿಮಾ ಪೊಲೀಸ್ ಆಫೀಸರ್ ಒಬ್ಬರ ಲೈಫ್​​ಲ್ಲಿ ನಡೆದ ರಿಯಲ್ ಘಟನೆಯನ್ನೆ ಆಧರಿಸಿದೆ. ಹಾಗೇನೆ ಇಡೀ ಸಿನಿಮಾದ ಕಥೆ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿಯೇ ಚಿತ್ರೀಕರಿಸಲಾಗಿದೆ.


ಬೆಳಗಾವಿಯಲ್ಲಿ ಹೊಯ್ಸಳ ಚಿತ್ರವನ್ನ ಚಿತ್ರೀಕರಿಸಿದ್ದೇಕೆ?


ಹೊಯ್ಸಳ ಕಥೆ ಬೆಳಗಾವಿಯಲ್ಲಿಯೇ ಯಾಕೆ ಶೂಟ್ ಆಗಿದೆ? ಈ ಒಂದು ಪ್ರಶ್ನೆ ಸಹಜವೇ ಬಿಡಿ, ಯಾಕೆಂದ್ರೆ ಚಿತ್ರದ ಬಹುತೇಕ ಕಥೆ ಬೆಳಗಾವಿ ಬ್ಯಾಗ್ರೌಂಡ್​ ಅಲ್ಲಿ ಇದೆ. ಬೆಳಗಾವಿಯ ಸುತ್ತ-ಮುತ್ತಲ ಪ್ರದೇಶದಲ್ಲಿ ಹೊಯ್ಸಳ ಚಿತ್ರವನ್ನ ತೆಗೆಯಲಾಗಿದೆ.

ಹೊಯ್ಸಳ ಚಿತ್ರದಲ್ಲಿ ಗಡಿ ವಿಷಯ ಇದೆಯೇ ಅನ್ನೋ ಪ್ರಶ್ನೆ ಕೂಡ ಇದೆ. ಆದರೆ ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲೂ ಮಾಹಿತಿ ಇಲ್ಲವೇ ಇಲ್ಲ. ಸಿನಿಮಾ ತಂಡವೂ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಈಗ ಸಿನಿಮಾ ರಿಲೀಸ್ ದಿನಗಳು ಸನಿಹಕ್ಕೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ವಿಷಯ ರಿವೀಲ್ ಆದ್ರು ಆಗಬಹುದೇನೋ?


ಮಾರ್ಚ್-30ಕ್ಕೆ ಹೊಯ್ಸಳ ಚಿತ್ರ ಎಲ್ಲೆಡೆ ರಿಲೀಸ್


ಹೊಯ್ಸಳ ಇದೇ ಮಾರ್ಚ್-30 ಕ್ಕೆ ರಿಲೀಸ್ ಆಗುತ್ತಿದೆ. ಈ ವಿಷಯವನ್ನ ಚಿತ್ರ ತಂಡ ಈಗಾಗಲೇ ಅಧಿಕೃತವಾಗಿಯೇ ಹೇಳಿಕೊಂಡಿದೆ. ಮಾರ್ಚ್​-30 ರಂದು ನಮ್ಮ ಚಿತ್ರ ರಿಲೀಸ್ ಅಂತಲೇ ಪೋಸ್ಟರ್ ಮೂಲಕವೇ ತಿಳಿಸಿದೆ.

Published by:ಪಾವನ ಎಚ್ ಎಸ್
First published: