• Home
  • »
  • News
  • »
  • entertainment
  • »
  • Daali Dhananjaya: ಮತ್ತೆ ಒಂದಾದ ರತ್ನನ್ ಪ್ರಪಂಚದ ಜೋಡಿ! ಡಾಲಿ ಧನಂಜಯ್​ಗೆ ರೋಹಿತ್ ಪದಕಿ ಮತ್ತೊಂದು ಸಿನಿಮಾ

Daali Dhananjaya: ಮತ್ತೆ ಒಂದಾದ ರತ್ನನ್ ಪ್ರಪಂಚದ ಜೋಡಿ! ಡಾಲಿ ಧನಂಜಯ್​ಗೆ ರೋಹಿತ್ ಪದಕಿ ಮತ್ತೊಂದು ಸಿನಿಮಾ

ನವೆಂಬರ್-06 ರಂದು ಉತ್ತರಕಾಂಡ ಚಿತ್ರಕ್ಕೆ ಮುಹೂರ್ತ

ನವೆಂಬರ್-06 ರಂದು ಉತ್ತರಕಾಂಡ ಚಿತ್ರಕ್ಕೆ ಮುಹೂರ್ತ

ರತ್ನನ್ ಪ್ರಪಂಚ ಆದ್ಮೇಲೆ ರೋಹಿತ್ ಪದಕಿ ಮತ್ತು ಡಾಲಿ ಧನಂಜಯ್ ಒಟ್ಟಿಗೆ ಯಾವಾಗ ಸಿನಿಮಾ ಮಾಡ್ತಾರೆ ಅನ್ನೋ ಪ್ರಶ್ನೆ ಕೂಡ ಇತ್ತು. ಈಗ ಅದಕ್ಕೆ ಉತ್ತರಕಾಂಡ ಚಿತ್ರದ ಮೂಲಕವೇ ಉತ್ತರ ಸಿಕ್ಕಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಹೆಡ್​ ಬುಷ್ ಸಿನಿಮಾ ಬಳಿಕ ಡಾಲಿ (Daali Dhananjaya) ಧನಂಜಯ್ ಏನ್ ಮಾಡ್ತಿದ್ದಾರೆ. ಮುಂದಿನ (New Film) ಸಿನಿಮಾ ಯಾವುದು? ಈ ಒಂದು ಪ್ರಶ್ನೆಗೆ ಉತ್ತರ (Simple Answer) ಸಿಂಪಲ್ ಇದೆ. ಧನಂಜಯ್ ಜೋಳಿಗೆಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅವುಗಳ ಮಧ್ಯೆ ಧನಂಜಯ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ವಿಶೇಷವಾಗಿ ಈ ಚಿತ್ರದ ಡೈರೆಕ್ಟರ್ ಬೇರೆ ಯಾರೋ ಅಲ್ಲ. ರತ್ನನ್ ಪ್ರಪಂಚದ ಅದೇ ರೋಹಿತ್ ಪದಕಿನೇ ಆಗಿದ್ದಾರೆ. ರತ್ನನ್ (Rathnan Prapancha) ಪ್ರಪಂಚ ಸಿನಿಮಾ ಡಾಲಿ ಧನಂಜಯ್ ನಿರ್ಮಾಣದ ಸಿನಿಮಾನೇ ಆಗಿತ್ತು. ಹಾಗಂತ ಹೆಡ್​ ಬುಷ್ ಬಳಿಕ ಧನಂಜಯ್ ಮತ್ತೊಂದು ಸಿನಿಮಾ ನಿರ್ಮಿಸುತ್ತಿದ್ದಾರಾ ಅಂತ ಕೇಳೋಕೆ ಹೋಗ್ಬೇಡಿ. ಇದರ ನಿರ್ಮಾಪಕರು ಬೇರೆ ಇದ್ದಾರೆ. ಆದರೆ ಈ ಮೂಲಕ ಡಾಲಿ ಧನಂಜಯ್ ಮತ್ತು ಡೈರೆಕ್ಟರ್ ರೋಹಿತ್ ಪದಕಿ ಮತ್ತೊಮ್ಮೆ ಜೋಡಿಯಾಗಿದ್ದಾರೆ.


ಡಾಲಿ ಧನಂಜಯ್ ಜತೆ ಡೈರೆಕ್ಟರ್ ರೋಹಿತ್ ಪದಕಿ ಹೊಸ ಜರ್ನಿ


ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾದಲ್ಲಿ ಒಂದು ಜರ್ನಿ ಇತ್ತು. ದೂರ ಕಾಶ್ಮಿರ​ದಿಂದ ಹಿಡಿದು, ಉತ್ತರ ಕರ್ನಾಟಕದ ವರೆಗೂ ಈ ಜರ್ನಿ ಇತ್ತು. ಈ ಮೂಲಕ ಧನಂಜಯ್ ಪ್ರೇಕ್ಷಕರಿಗೆ ತಮ್ಮ ಕಥೆಯನ್ನ ಹೇಳ್ತಾನೆ ಬೇರೆ ಬೇರೆ ಫೀಲ್ ಅನ್ನೂ ಕೊಟ್ಟಿದ್ದರು.


ಡೈರೆಕ್ಟರ್ ರೋಹಿತ್ ಪದಕಿ ಸಿನಿಮಾದಲ್ಲಿ ಸಹಜವಾಗಿಯೇ ಜರ್ನಿ ಇರುತ್ತವೆ. ಈ ಹಿಂದಿನ ದಯವಿಟ್ಟು ಗಮನಸಿ ಚಿತ್ರವನ್ನೆ ತೆಗೆದುಕೊಂಡ್ರೂ ಅಷ್ಟೇ. ಅಲ್ಲಿ ಹೊಸ ರೀತಿಯ ಭಾವನೆಗಳ ಜೊತೆಗೆ ಒಂದು ಜರ್ನಿ ಇದ್ದೇ ಇರುತ್ತದೆ.


Daali Dhananjaya Next Project with Director Rohith Padaki
ಉತ್ತರಕಾಂಡ ಚಿತ್ರಕ್ಕೆ ಕಾಂತಾರ ನಿರ್ಮಾಪಕರ ಸಪೋರ್ಟ್


ಭಾವನೆಗಳನ್ನ ಚೆಂದಗೆ ಕಟ್ಟಿಕೊಡುವ ಡೈರೆಕ್ಟರ್ ರೋಹಿತ್ ಪದಕಿ


ರತ್ನನ್ ಪ್ರಪಂಚದಲ್ಲೂ ರೋಹಿತ್ ಪದಕಿ ಜರ್ನಿ ಇಟ್ಟಿದ್ದರು. ಮಾನವ ಸಹಜ ಫೀಲಿಂಗ್ ಅನ್ನ ಅಷ್ಟೇ ಅದ್ಭುತವಾಗಿಯೇ ಕಟ್ಟಿಕೊಟ್ಟಿದ್ದರು. ಆದ್ದರಿಂದಲೋ ಏನೋ, ರತ್ನನ್ ಪ್ರಪಂಚ ಹಿಟ್ ಆಯಿತು. ಜನ ಈ ಚಿತ್ರವನ್ನ ಒಪ್ಪಿಕೊಂಡರು.


ರತ್ನನ್ ಪ್ರಪಂಚ ಆದ್ಮೇಲೆ ರೋಹಿತ್ ಪದಕಿ ಮತ್ತು ಡಾಲಿ ಧನಂಜಯ್ ಒಟ್ಟಿಗೆ ಯಾವಾಗ ಸಿನಿಮಾ ಮಾಡ್ತಾರೆ ಅನ್ನೋ ಪ್ರಶ್ನೆ ಕೂಡ ಇತ್ತು. ಈಗ ಅದಕ್ಕೆ ಉತ್ತರಕಾಂಡ ಚಿತ್ರದ ಮೂಲಕವೇ ಉತ್ತರ ಸಿಕ್ಕಿದೆ.


ಉತ್ತರಕಾಂಡ ಎಂಬ ಉತ್ತರ ಕರ್ನಾಟಕದ ಕಥೆ?


ಡೈರೆಕ್ಟರ್ ರೋಹಿತ್ ಪದಕಿ ಈ ಬಾರಿ ಸಂಪೂರ್ಣವಾಗಿಯೇ ಉತ್ತರ ಕರ್ನಾಟಕದ ಕಡೆಗೆ ಬಂದಂತಿದೆ. ಉತ್ತರಕಾಂಡ ಹೆಸರಿನಲ್ಲಿಯೇ ಸಿನಿಮಾ ಮಾಡ್ತಿದ್ದಾರೆ. ಈ ಮೂಲಕ ರೋಹಿತ್ ಪದಕಿ ಡಾಲಿ ಧನಂಜಯ್ ಕರೆದುಕೊಂಡು ಹೊಸ ಜರ್ನಿ ಆರಂಭಿಸಿದ್ದಾರೆ.


ಇದನ್ನೂ ಓದಿ: Kantara Movie: ಆಶ್ರಮದಲ್ಲಿ ಕಾಂತಾರ ಸಿನಿಮಾ ಪ್ರದರ್ಶನ, ರವಿ ಶಂಕರ್ ಗುರೂಜಿ ಏನಂದ್ರು?


ಉತ್ತರಕಾಂಡ ಚಿತ್ರಕ್ಕೆ ಕಾಂತಾರ ನಿರ್ಮಾಪಕರ ಸಪೋರ್ಟ್


ಉತ್ತರಕಾಂಡ ಸಿನಿಮಾದ ಹಿಂದೆ ದೊಡ್ಡ ಶಕ್ತಿನೇ ಇದೆ. ರಾಜಕುಮಾರ್, ಕೆಜಿಎಫ್, ಕಾಂತಾರದಂತಹ ಚಿತ್ರ ನಿರ್ಮಿಸಿದ್ದ ಕೆಆರ್​ಜಿ ಸಂಸ್ಥೆಯ ವಿಜಯ್ ಕಿರಗಂದೂರು ಈ ಚಿತ್ರವನ್ನ ಪ್ರಸ್ತುತ ಪಡಿಸುತ್ತಿದ್ದಾರೆ.


ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಹಾಗೂ ಯೋಗಿ ಜಿ.ರಾಜ್ ಈ ಸಿನಿಮಾವನ್ನ ನಿರ್ಮಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಬಗ್ಗೆ ಅಧಿಕೃತ ಮಾಹಿತಿಯನ್ನೂ ಕೊಟ್ಟಿದ್ದಾರೆ.


ನವೆಂಬರ್-06 ರಂದು ಉತ್ತರಕಾಂಡ ಚಿತ್ರಕ್ಕೆ ಮುಹೂರ್ತ


ನವೆಂಬರ್ 1 ರಂದು ಸಿನಿಮಾ ಟೀಮ್ ತಮ್ಮ ಈ ಚಿತ್ರದ ಬಗ್ಗೆ ಹೇಳಿಕೊಂಡಿದೆ. ಈಗ ಇದೇ ಸಿನಿಮಾ ತಂಡ ತಮ್ಮ ಚಿತ್ರಕ್ಕೆ ಮುಹೂರ್ತವನ್ನ ಇದೇ ತಿಂಗಳ 6 ರಂದು ಮಾಡಲು ಪಕ್ಕಾ ಪ್ಲಾನ್ ಮಾಡಿದೆ.


Daali Dhananjaya Next Project with Director Rohith Padaki
ಉತ್ತರಕಾಂಡ ಎಂಬ ಉತ್ತರ ಕರ್ನಾಟಕದ ಕಥೆ ?


ನವೆಂಬರ್-06 ರಂದು ಮಧ್ಯಾಹ್ನ 3.22ಕ್ಕೆ ಉತ್ತರಕಾಂಡ ಚಿತ್ರದ ಮುಹೂರ್ತ ನೆರವೇರಲಿದೆ. ಅದ್ದೂರಿಯಾಗಿಯೆ ಸಿನಿಮಾ ಟೀಮ್ ಚಿತ್ರಕ್ಕೆ ಮುಹೂರ್ತ ನೆರವೇರಿಸಲಿದೆ. ಇದಾದ್ಮೇಲೆ ಚಿತ್ರದ ಇತರ ವಿಷಯಗಳನ್ನೂ ಸಿನಿಮಾ ತಂಡ ರಿವೀಲ್ ಮಾಡಲಿದೆ.


ಉತ್ತರಕಾಂಡ ಯಾವ ರೀತಿಯ ಸಿನಿಮಾ?


ಡೈರೆಕ್ಟರ್ ರೋಹಿತ್ ಪದಕಿ ಮಾನವ ಸಂಬಂಧಗಳ ಬಗ್ಗೆ ಚೆನ್ನಾಗಿಯೇ ಕಥೆ ಮಾಡುತ್ತಾರೆ. ಮನುಷ್ಯನ ಮನಸಿನ ತಳಮಳಗನ್ನ ಅಷ್ಟೇ ಅದ್ಭುತವಾಗಿಯೇ ಕ್ಯಾರೆಕ್ಟರ್ ರೂಪದಲ್ಲಿ ಬರೆಯುತ್ತಾರೆ. ಉತ್ತರಕಾಂಡದಲ್ಲೂ ಅಂತಹ ತಳಮಳಗಳನ್ನೆ ಕಟ್ಟಿಕೊಡುತ್ತಿದ್ದಾರೆ.


ಇದನ್ನೂ ಓದಿ: Rajinikanth: ಪುನೀತ್ ನಿಧನರಾದಾಗ ರಜನಿಕಾಂತ್ ಯಾಕೆ ಬಂದಿರಲಿಲ್ಲ? ವೇದಿಕೆ ಮೇಲೆ ರಿವೀಲ್ ಆಯ್ತು ಕಾರಣ!


ಉತ್ತರಕಾಂಡ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ


ಚರಣ್ ರಾಜ್ ಸದ್ಯದ ಬೇಡಿಕೆಯ ಸಂಗೀತ ನಿರ್ದೇಶಕರು. ಇವರ ಸಂಗೀತದಲ್ಲಿ ಹೊಸತನದ ಹೊಳಪು ಸದಾ ಇರುತ್ತದೆ. ಉತ್ತರಕಾಂಡ ಸಿನಿಮಾದಲ್ಲೂ ಅಂತಹ ಹೊಸತನ್ನ ಕಾಣಬಹುದು. ಇನ್ನು ಈ ಚಿತ್ರಕ್ಕೆ ಸ್ವಾಮಿ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಉಳಿದಂತೆ ಬಾಕಿ ಮಾಹಿತಿ ಕೊಡ್ತಾಯಿರ್ತಿವಿ.

First published: