• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Hoysala New Song: ಸೌಂದರ್ಯ ಸಮರ ಬರೆದ ಭಟ್ಟರ ಹೃದಯದಿಂದ ಬಂತು ದಾಂಪತ್ಯ ಗೀತೆ ಹೊಯ್ಸಳ ಚಿತ್ರದ ಹಾಡು ಹೇಗಿದೆ?

Hoysala New Song: ಸೌಂದರ್ಯ ಸಮರ ಬರೆದ ಭಟ್ಟರ ಹೃದಯದಿಂದ ಬಂತು ದಾಂಪತ್ಯ ಗೀತೆ ಹೊಯ್ಸಳ ಚಿತ್ರದ ಹಾಡು ಹೇಗಿದೆ?

ದಾಂಪತ್ಯ ಜೀವನಕ್ಕೆ ಹೊಸ ರೀತಿಯ ಗೀತೆ ಬರೆದ ಭಟ್ರು!

ದಾಂಪತ್ಯ ಜೀವನಕ್ಕೆ ಹೊಸ ರೀತಿಯ ಗೀತೆ ಬರೆದ ಭಟ್ರು!

ಯೋಗರಾಜ್ ಭಟ್ರು ಹಾಡುಗಳನ್ನ ಯೋಚಿಸಿ ಬರೀತಾರೋ? ಅನುಭವವನ್ನೇ ಅಕ್ಷರ ರೂಪದಲ್ಲಿ ಬರೀತಾರೋ? ಹೇಳೋದು ಕಷ್ಟವೇ ಸರಿ. ಆದರೆ ಯೋಗರಾಜ್ ಭಟ್ರ ಮನದಲ್ಲಿರೋ ಆ ತುಂಟ ಒಮ್ಮೊಮ್ಮೆ ಅನುಭವಿ ಲವರ್ ಆಗಿಯೇ ಅಕ್ಷರ ರೂಪ ತಾಳಿರುತ್ತಾನೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಡಾಲಿ ಧನಂಜಯ್ ಅಭಿನಯದ (Sandalwood Hero) ಹೊಯ್ಸಳ ಚಿತ್ರದ ಒಂದು ವಿಶೇಷ ಹಾಡು ರಿಲೀಸ್ ಆಗಿದೆ. ಮೊನ್ನೆ ಸಿನಿಮಾ ತಂಡ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿತ್ತು. ಇದನ್ನ ಕೇಳಿದ್ರೆ, ಗುರುದೇವ್ ಹೊಯ್ಸಳನ ಗತ್ತು ಗೈರತ್ತು ತಿಳಿಯುತ್ತದೆ. ಆದರೆ ವಿಶೇಷವಾಗಿ ಮಹಿಳಾ ದಿನದಂದು ಮಾರ್ಚ್‌-8ಕ್ಕೆ ರಿಲೀಸ್ ಆದ (Sandalwood Expected Movie) ಹಾಡು ಸ್ಪೆಷಲ್ ಆಗಿದೆ. ಯೋಗರಾಜ್ ಭಟ್ ಅವರ ಸಾಹಿತ್ಯದಲ್ಲಿ ಒಳ್ಳೆ ಸಾಲುಗಳೇ ಮೂಡಿ ಬಂದಿವೆ. ಗಾಯಕ ಹರಿಚರಣ್ ಇದನ್ನ ಅಷ್ಟೇ ಸ್ಪಷ್ಟವಾಗಿ ಅರ್ಥಪೂರ್ಣವಾಗಿಯೆ ಹಾಡಿದ್ದಾರೆ. ಸುಮ್ನೆ ಹಾಗೆ ಇದನ್ನ ಕೇಳ್ತಾ ಹೋದ್ರೆ, ದಾಂಪತ್ಯ ಗೀತೆ ರೀತಿ ಕೇಳಿಸುತ್ತದೆ. ಆದರೆ (Daali Dhananjaya Movie) ಇದರಲ್ಲಿ ಪತ್ನಿ ಮೇಲೆ ಪತಿಯ ಪ್ರೀತಿಯ ಅವಲಂಬನೆ ಎಷ್ಟಿದೆ ಅನ್ನೋದು ತಿಳಿಯುತ್ತದೆ.


ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿ ಬಂದ ಈ ಹಾಡಿನ (Hoysala Movie Song Released) ವಿಶ್ಲೇಷಣೆ ಇಲ್ಲಿದೆ ಒಮ್ಮೆ ಓದಿ.


Daali Dhananjaya Hoysala Movie another Song Released
ಭಟ್ಟರ ಹೃದಯದಿಂದ ಬಂತು ದಾಂಪತ್ಯ ಗೀತೆ


ಯೋಗರಾಜ್ ಭಟ್ರು ಪೋಲಿ ಹಾಡಿಗೆ ಫೇಮಸ್ಸು, ಸಾಹಿತ್ಯದ ತಲೆ ಮೇಲೆ ಹೊಡೆಯೋ ಹಾಡನ್ನ ಬರೆದು ಬಿಡಬಲ್ಲ ಸಾಹಿತ್ಯದ ಆಳವೂ ಇವರಲ್ಲಿದೆ. ಯೋಗರಾಜ್ ಭಟ್ರು ಸುಮ್ನೆ ಅಲ್ಲ ಬಿಡಿ, ಕಡ್ಡಿಪುಡಿ ಚಿತ್ರದ ಸೌಂದರ್ಯ ಸಮರ ಹಾಡನ್ನ ಕೇಳಿದ್ರೆ ನಿಮಗೆ ಅವರ ಕಾವ್ಯ ರಚನೆಯ ಪರಿ ತಿಳಿದು ಬಿಡುತ್ತದೆ.




ಹೊಯ್ಸಳ ಚಿತ್ರದಲ್ಲಿ ಹೊಸ ಭಾವ ಕಟ್ಟಿಕೊಟ್ಟ ಭಟ್ರು!


ಯೋಗರಾಜ್ ಭಟ್ರು ಹಾಡುಗಳನ್ನ ಯೋಚಿಸಿ ಬರೀತಾರೋ? ಅನುಭವವನ್ನೇ ಅಕ್ಷರ ರೂಪದಲ್ಲಿ ಬರೀತಾರೋ? ಹೇಳೋದು ಕಷ್ಟವೇ ಸರಿ. ಆದರೆ ಯೋಗರಾಜ್ ಭಟ್ರ ಮನದಲ್ಲಿರೋ ಆ ತುಂಟ ಒಮ್ಮೊಮ್ಮೆ ಅನುಭವಿ ಲವರ್ ಆಗಿಯೇ ಅಕ್ಷರ ರೂಪ ತಾಳಿರುತ್ತಾನೆ.


Daali Dhananjaya Hoysala Movie another Song Released
ನಿನ್ನ ಹೆರಳಿನ ನೆರಳು ತೊರೆದು ಎಲ್ಲಿ ಹೋಗಲಿ....


ಇನ್ನೂ ಒಮ್ಮೆ ಅಗಾಧ ಪ್ರೇಮಿಯಾಗಿ ಅಗಾಧ ಫಿಲಾಸಫರ್ ಆಗಿಯೂ ಕಂಡು ಬಿಡ್ತಾನೆ. ಆದರೆ ಹೊಯ್ಸಳ ಚಿತ್ರದಲ್ಲಿ ಯೋಗರಾಜ್ ಭಟ್ರ ಒಳಗಿನ ಆ ತುಂಟ ತುಂಬಾ ಸೀರಿಯಸ್ ಆಗಿದ್ದಾರೆ. ತನ್ನೊಳಗಿನ ಪತ್ನಿ ಮೇಲಿನ ಪ್ರೀತಿಯನ್ನ ಹೀಗೆ ವ್ಯಕ್ತಪಡಿಸ್ತಾನೆ.


ಅರೆ..ಇದು ಎಂತಹ ಭಾವನೆ
ಬರೀ..ಸುಡುವಂತ ಕಾಮನೆ..


ಹೌದು, ಭಟ್ರು ಹೊಯ್ಸಳ ಚಿತ್ರಕ್ಕೆ ಈ ಭಾವನೆಯ ಒಂದು ಅದ್ಭುತ ಗೀತೆ ಬರೆದುಕೊಟ್ಟಿದ್ದಾರೆ. ಈ ಸಾಲುಗಳನ್ನ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಧುರ ಸ್ಪರ್ಶ ಕೊಟ್ಟಿದ್ದಾರೆ. ಗಾಯಕ ಹರಿಚರಣ್ ಸ್ಪಷ್ಟ ಧ್ವನಿಯಲ್ಲಿ ಅದ್ಭುತ ಫೀಲ್ ಅಲ್ಲಿಯೇ ಹಾಡಿ ಜನರ ಹೃದಯಕ್ಕೆ ತಲುಪಿಸಿದ್ದಾರೆ. ಈ ಕೆಳಗಿನ ಸಾಲುಗಳನ್ನಂತೂ ತುಂಬಾ ಚೆನ್ನಾಗಿಯೇ ಹರಿಚರಣ್ ಹಾಡಿದ್ದಾರೆ.


ನೀ ನನ್ನ ಕೊನೆಯ ಆಸರೆ
ಸೆರಗಲಿ ಹಿಂಗೆ ಕರಗುವ ಆಸೆ
ಬಿಡಿಸ ಬೇಡ ತೋಳಿನ ಸೆರೆ


ಹೀಗೆ ಡಾಲಿ ಧನಂಜಯ್ ಮತ್ತು ಅಮೃತ ಅಯ್ಯರ್ ಜೋಡಿಯ ದಾಂಪತ್ಯ ಗೀತೆಯ ಅಸಲಿ ಆಸರೆಯನ್ನ ಭಟ್ರು ಇಲ್ಲಿ ಹೇಳಿದ್ದಾರೆ. ದಾಂಪತ್ಯ ಜೀವನದಲ್ಲಿ ಇಂತಹ ನಿರೀಕ್ಷೆ ಮತ್ತು ಅವಲಂಬನೆ ಇದ್ದೇ ಇರುತ್ತದೆ. ಖಡಕ್ ಪೊಲೀಸ್ ಆಫೀಸರ್ ಗುರುದೇವ್ ಹೊಯ್ಸಳ ಪರ್ಸನಲ್ ಲೈಫ್ ಅನ್ನ ಇಲ್ಲಿ ಸಾಲುಗಳನ್ನಾಗಿ ಕಟ್ಟಿಕೊಡುವ ಕೆಲಸವೂ ಆಗಿದೆ ಅನಿಸುತ್ತದೆ.




ದಾಂಪತ್ಯ ಜೀವನಕ್ಕೆ ಹೊಸ ರೀತಿಯ ಗೀತೆ ಬರೆದ ಭಟ್ರು!


ಪ್ರೀತಿ, ಪ್ರೇಮ, ಕಾಮನೆ ಹೀಗೆ ಎಲ್ಲವನ್ನೂ ಈ ಒಂದು ಮಧುರ ಗೀತೆಯಲ್ಲಿ ಕಾಣಬಹುದು. ವಿಶೇಷವಾಗಿ ಈ ಒಂದು ಹಾಡಿನಲ್ಲಿ ಇನ್ನೂ ಎರಡು ಸಾಲುಗಳು ಬರುತ್ತವೆ. ಇವುಗಳನ್ನ ಕೇಳಿದ್ರೆ ಪ್ರೀತಿಯ ಉತ್ತುಂಗದ ಪರಿ ಕೂಡ ಅರ್ಥ ಆಗುತ್ತದೆ.


ನಿನ್ನ ಹೆರಳಿನ ನೆರಳು
ತೊರೆದು ಎಲ್ಲಿ
ಹೋಗಲಿ....


ಭಟ್ರ ಈ ಸಾಲುಗಳು ಸಾಕಷ್ಟು ಅರ್ಥಗರ್ಭಿತವಾಗಿವೆ. ಇಡೀ ಹಾಡನ್ನ ಕೇಳ್ತಾ ಹೋದ್ರೆ, ಇಂತಹ ಭಾವನೆ ಹತ್ತು ಹಲವು ಇವೆ. ಇವುಗಳನ್ನ ಓದುವದಕ್ಕಿಂತಲೂ ಕೇಳ್ತಾ ಹೋದ್ರೆ, ಸಿಗೋ ಆ ಸುಃಖವೇ ಬೇರೆ ಇದೆ.

ಇದನ್ನೂ ಓದಿ: Women's day: ಬೆಳ್ಳಿ ತೆರೆಯ ಬಂಗಾರದಂತ ಹೀರೋಯಿನ್ಸ್! ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು


ಅದನ್ನ ತಿಳಿಯಲು ಹೊಯ್ಸಳ ಚಿತ್ರದ ಹಾಡನ್ನ ಕೇಳಿ ದಾಂಪತ್ಯ ಜೀವನದ ಹೊಸ ಭಾವವನ್ನ ಫೀಲ್ ಮಾಡಿಕೊಳ್ಳಿ..

First published: