• Home
  • »
  • News
  • »
  • entertainment
  • »
  • Head Bush Film: ಬೆಳ್ಳಿಪರದೆ ಮೇಲೆ ಭೂಗತ ಲೋಕ! ರಿಯಲ್ ಡಾನ್ ಕಥೆಗೆ ದುಡ್ಡು ಹಾಕಿದ ಧನಂಜಯ್

Head Bush Film: ಬೆಳ್ಳಿಪರದೆ ಮೇಲೆ ಭೂಗತ ಲೋಕ! ರಿಯಲ್ ಡಾನ್ ಕಥೆಗೆ ದುಡ್ಡು ಹಾಕಿದ ಧನಂಜಯ್

ಬೆಳ್ಳಿ ಪರದೆ ಮೇಲೆ ಭೂಗತ ಲೋಕದ ಕತೆ

ಬೆಳ್ಳಿ ಪರದೆ ಮೇಲೆ ಭೂಗತ ಲೋಕದ ಕತೆ

ಡಾನ್ ಜಯರಾಜ್ ಕೋಪ ಜಾಸ್ತಿ ಇತ್ತು. ಅದನ್ನ ಇಲ್ಲಿ ಬರುವ ಗಂಗಾ ಪಾತ್ರ ಹೇಳುತ್ತದೆ. "ಜಯರಾಜ್ ಒಳ್ಳೆಯವನೇ. ಆದರೆ ಕೋಪ ಜಾಸ್ತಿ" ಅಂತಲೇ ಹೇಳುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಅನೇಕ ಭೂಗತ ಲೋಕದ (Underworld Cinema) ಸಿನಿಮಾ ಬಂದಿವೆ. ಕೋತ್ವಾಲ್, ಜಯರಾಜ್ ಬಿಂಬಿಸೋ ಪಾತ್ರಗಳೂ ಬಂದಿವೆ. ಆದರೆ ಅಸಲಿ ಕಥೆ ಏನೂ ಅನ್ನೋದನ್ನ ಅಗ್ನಿ ಶ್ರೀಧರ್ ಬಾಯಲ್ಲಿಯೇ ಕೇಳಬೇಕು. ಅವರ ಬಯೋಗ್ರಾಫಿ ಓದಿದಾಗಲೇ ತಿಳಿಯುತ್ತದೆ. ಆ ಅಸಲಿ (Jayaraj Real Story) ಕಥೇನೆ ಈಗ ಬೆಳ್ಳಿ ಪರದೆ ಮೇಲೆ ಹೆಡ್ ಬುಷ್ (Head Bush) ನಾಯಕ-ನಿರ್ಮಾಪಕ ಡಾಲಿ ಧನಂಜಯ್ ಈ ಸಿನಿಮಾವನ್ನ ಅಷ್ಟೇ ಅಚ್ಚುಕಟ್ಟಾಗಿಯೇ ಪ್ರಮೋಟ್ ಕೂಡ ಮಾಡಿದ್ದಾರೆ. ಸಿನಿಮಾದ ಟೀಸರ್, ಫೋಸ್ಟರ್ ಎಲ್ಲವೂ ಒಂದು ಹಂತಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ಆದರೆ ಇಡೀ ಟ್ರೈಲರ್​ನಲ್ಲಿ (Trailer)  ಏನಿದೆ ಅನ್ನೋ ವಿಷಯ ತಿಳಿದಿರಲಿಲ್ಲ. ಅದು ಈಗ ರಿವೀಲ್ ಆಗಿದೆ. ಅದರ ರಿವ್ಯೂ ಸ್ಟೋರಿ ಇಲ್ಲಿದೆ ಓದಿ.


ಹೆಡ್ ಬುಷ್ ಟ್ರೈಲರ್​ನಲ್ಲಿ ಡಾನ್ ಜಯರಾಜ್ ಪಾತ್ರದ ಚಿತ್ರಣ
ಕನ್ನಡದ ಹೆಡ್ ಬುಷ್ ಸಿನಿಮಾ ನಿರೀಕ್ಷೆ ಹೆಚ್ಚಿದೆ. ಡಾನ್ ಜಯರಾಜ್ ರಿಯಲ್ ಕಥೆ ಇದಾಗಿದೆ. ಅಗ್ನಿಶ್ರೀಧರ್ ಬಯೋಗ್ರಾಫಿಯಿಂದಲೇ ಭಾಗವೇ ಇದಾಗಿದೆ. ಬೆಂಗಳೂರು ಭೂಗತ ಜಗತ್ತಿನ ಡಾನ್​ ಜಯಾರ್​ನನ್ನ ಹತ್ತಿರದಿಂದ ನೋಡಿದ ಅಗ್ನಿಶ್ರೀಧರ್ ಅಸಲಿ ಕಥೆಯನ್ನೇ ಇಲ್ಲಿ ಹೇಳಿದ್ದಾರೆ.


ಡಾನ್ ಜಯರಾಜ್ ಪಾತ್ರವನ್ನ ಈ ಹಿಂದೆ ಅನೇಕರು ಕೇಳಿದ್ದಾರೆ. ಸಿನಿಮಾ ಮಾಡುವ ಪ್ರಯತ್ನಗಳು ಆಗಿವೆ. ಆದರೆ ಧನಂಜಯ್ ಮಾತ್ರ ಈ ಪಾತ್ರಕ್ಕೆ ಸೂಟೇಬಲ್ ಅನ್ನೋದು ಈಗ ಅರ್ಥ ಆಗಿದೆ. ಚಿತ್ರದ ಟ್ರೈಲರ್ ನಲ್ಲಿ ಅದು ಸ್ಪಷ್ಟವಾಗಿಯೇ ಗೊತ್ತಾಗುತ್ತದೆ.


Kannada Film Head bush film trailer review story
ಡಾನ್ ಜಯರಾಜ್ ಕೋಪ-ತಾಪ ವಿಪರೀತ


ಜಯರಾಜ್ ರಿಯಲ್ ಕಥೆ ಇಲ್ಲಿ ಸಿನಿಮಾ ರೂಪ ಪಡೆದಿದೆ. ಡೈರೆಕ್ಟರ್ ಶೂನ್ಯ ಅದನ್ನ ತೆರೆ ಮೇಲೆ ತಂದಿದ್ದಾರೆ. ಡಾನ್ ಜಯರಾಜ್ ಮ್ಯಾನರಿಸಂ ಅನ್ನ ಧನಂಜಯ್ ಪಕ್ಕಾ ಅಳವಡಿಸಿಕೊಂಡಿದ್ದಾರೆ. ಸಿನಿಮ್ಯಾಟಿಕ್ ಟಚ್​​ನೊಂದಿಗೆ ಜಯರಾಜ್ ಆಗಿಯೇ ಹೊಳಿತಿದ್ದಾರೆ.


ನಾಯಕ ನಟ ಧನಂಜಯ್ ಈ ಚಿತ್ರದ ಪ್ರೋಡ್ಯೂಸರ್
ಧನಂಜಯ್ ತಮ್ಮ ಶ್ರಮದ ಅಷ್ಟೂ ದುಡ್ಡನ್ನ ಈ ಚಿತ್ರಕ್ಕೆ ಹಾಕಿದಂತಿದೆ. ಚಿತ್ರದ ಕ್ವಾಲಿಟಿ ನೋಡಿದ್ರೇನೆ ನಿಮ್ಗೆ ಅದು ಅರ್ಥ ಆಗುತ್ತದೆ. ಆ ದಿನಗಳ ಕಥೆಯನ್ನ ಈಗ ಹೇಳೋದು ಅಷ್ಟು ಸುಲಭವಲ್ಲ ಬಿಡಿ. ಅದನ್ನ ಮತ್ತೆ ಕ್ರಿಯೇಟ್ ಮಾಡೋದು ಅಷ್ಟು ಸರಳವೂ ಅಲ್ಲ.


ಇದನ್ನೂ ಓದಿ: Kantara Art By Vilas Nayak: ಕಲಾವಿದನ ಕಲೆಯಲ್ಲಿ ಕಾಂತಾರ! ವಿಲಾಸ್ ನಾಯಕ್ ಕುಂಚದಲ್ಲಿ ರಿಷಬ್ ಶೆಟ್ಟಿ ದೈವ ರೂಪ!


ಆದರೆ ಹೆಡ್ ಬುಷ್ ಸಿನಿಮಾದಲ್ಲಿ ಅದು ಆಗಿದೆ. ಅಂದಿನ ಕ್ಲಬ್, ಅಂದಿನ ಕಾರ್, ಅಂದಿನ ಕಾಸ್ಟೂಮ್ ಎಲ್ಲವೂ ಯಥಾವತ್ತು ಹೆಡ್ ಬುಷ್ ಸಿನಿಮಾದಲ್ಲಿ ಬಂದಿದೆ. 70-80 ರ ದಶಕದ ಅಸಲಿ ಕಥೆಯನ್ನ ಸಿನಿಮಾ ಚೌಕಟ್ಟಿನಲ್ಲಿಯೇ ಹೇಳ್ತಿವೆ.


ಡಾನ್ ಜಯರಾಜ್ ಸಿಗರೇಟ್ ಸೇದೊ ಸ್ಟೈಲ್ ವೈರಲ್
ಜಯರಾಜ್ ಸಿಗರೇಟ್ ಸೇದೋ ಶೈಲಿ ವಿಭಿನ್ನವಾಗಿಯೇ ಇತ್ತು. ಆ ಮ್ಯಾನರಿಸಂ ಅನ್ನ ಧನಂಜಯ್ ಸಖತ್ ಆಗಿಯೇ ನಿಭಾಯಿಸಿದ್ದಾರೆ. ಕೋಪ-ತಾಪಗಳೊಂದಿಗೆ ಸಿಗರೇಟಿನ ಬೂದಿ ಬೀಳಿಸೋ ಶೈಲಿ ಇಂಟ್ರಸ್ಟಿಂಗ್ ಆಗಿಯೇ ಇದೆ. ಅದನ್ನ ಇಡೀ ಟ್ರೈಲರ್ ನಲ್ಲಿ ನೀವು ನೋಡಬಹುದು.


ಡಾನ್ ಜಯರಾಜ್ ಕೋಪ-ತಾಪ ವಿಪರೀತ
ಡಾನ್ ಜಯರಾಜ್ ಕೋಪ ಜಾಸ್ತಿ ಇತ್ತು. ಅದನ್ನ ಇಲ್ಲಿ ಬರುವ ಗಂಗಾ ಪಾತ್ರ ಹೇಳುತ್ತದೆ. "ಜಯರಾಜ್ ಒಳ್ಳೆಯವನೇ. ಆದರೆ ಕೋಪ ಜಾಸ್ತಿ" ಅಂತಲೇ ಹೇಳುತ್ತದೆ. ಈ ಒಂದು ಗಂಗಾ ಪಾತ್ರವನ್ನ ಲೂಸ್ ಮಾದ ಯೋಗಿ ಇಲ್ಲಿ ನಿಭಾಯಿಸಿದ್ದಾರೆ.




ಡಾನ್ ಜಯರಾಜ್ ಪಾತ್ರಧಾರಿ ಧನಂಜಯ್, ಗಂಗಾ ಪಾತ್ರದಲ್ಲಿ ಲೂಸ್ ಮಾದ ಯೋಗಿ ಹೀಗೆ ರಿಯಲ್ ದೋಸ್ತಿಗಳೇ ಇಲ್ಲಿ ಜೊತೆಗಾರರಾಗಿ ಅಭಿನಯಿಸಿದ್ದಾರೆ. ಇವರ ಗ್ಯಾಂಗ್ ನಲ್ಲಿ ಇನ್ನೂ ಒಂದಷ್ಟು ಪ್ರಮುಖ ಪಾತ್ರಗಳೂ ಇವೆ.


ಹೆಡ್ ಬುಷ್ ಚಿತ್ರದಲ್ಲಿ ಇನ್ನೂ ಒಂದಷ್ಟು ಪ್ರಮುಖ ಪಾತ್ರಗಳು
ಹೆಡ್ ಬುಷ್ ಸಿನಿಮಾದಲ್ಲಿ ಇನ್ನು ಹಲವು ಪಾತ್ರಗಳಿವೆ. ಶೃತಿ ಹರಿಹರನ್, ರಘು ಮುಖರ್ಜಿ, ದೇವರಾಜ್ ರೋಲ್ ಇಲ್ಲಿ ಪ್ರಮುಖವಾಗಿಯೇ ಇವೆ. ಇವುಗಳ ಹೊರತಾಗಿ ಇಂದಿರಾ ಗಾಂಧಿ ಪಾತ್ರದ ಝಲಕ್ ಕೂಡ ಟ್ರೈಲರ್​ನಲ್ಲಿ ಬಂದು ಹೋಗುತ್ತದೆ.


ಅಕ್ಟೋಬರ್-21 ರಂದು ಹೆಡ್ ಬುಷ್ ಸಿನಿಮಾ
ಚರಣ್ ರಾಜ್ ಸಂಗೀತದ ಹೆಡ್ ಬುಷ್ ಹಾಡುಗಳು ಗಮನ ಸೆಳೆದಿವೆ. ನಾವು ರೌಡಿಗಳು ಹಾಡು ಹೆಚ್ಚು ಜನರನ್ನ ಸೆಳೆದಿದೆ. ಕ್ಲಬ್ ಡ್ಯಾನ್ಸ್ ಹಬೀಬಿ ಕೂಡ ಸೂಪರ್ ಆಗಿಯೇ ಬಂದಿದೆ. ಜನರಿಗೂ ಇಷ್ಟ ಆಗುತ್ತಿದೆ.


ಇದನ್ನೂ ಓದಿ: Kantara Hindi Collection: ಬಾಲಿವುಡ್​ನಲ್ಲಿ ಕಾಂತಾರ ಹವಾ! ದಿನವೂ ಕೋಟಿ ಕೋಟಿ ಕಲೆಕ್ಷನ್


ಹಾಡು-ಟ್ರೈಲರು-ಟೀಸರ್ ನಿಂದ ಜನರಲ್ಲಿ ಒಂದು ಕುತೂಹಲ ಮೂಡಿಸಿರೋ ಹೆಡ್ ಬುಷ್ ಸಿನಿಮಾ, ಇದೇ ತಿಂಗಳು 21 ರಂದು ರಿಲೀಸ್ ಆಗುತ್ತಿದೆ.

First published: