ಕನ್ನಡದ ನಾಯಕ ನಟ ಡಾಲಿ ಧನಂಜಯ್ (Daali Dhanjaya Updates) ಇಂಡಸ್ಟ್ರಿಗೆ ಕಾಲಿಟ್ಟು ಈಗ ಹತ್ತು ವರ್ಷಗಳು ಕಳೆದಿವೆ. ಸಾಫ್ಟ್‌ವೇರ್ ಲೋಕದಲ್ಲಿದ್ದ ಧನಂಜಯ್ ಅವರನ್ನ ಸ್ಪೆಷಲ್ ಡೈರೆಕ್ಟರ್ ಗುರು ಪ್ರಸಾದ್ ಕನ್ನಡ ಇಂಡಸ್ಟ್ರಿಗೆ (Daali Film New Updates) ಕರೆತಂದಿದ್ದರು. ಮೊದಲ ಸಿನಿಮಾದಲ್ಲಿ ಲಾಂಗ್ ಹೇರ್ ಲಾಂಗ್ ಬಿಯರ್ಡ್ ಮೂಲಕ ಎಂಟ್ರಿ ಕೊಟ್ಟ ಧನಂಜಯ್ 25 ಸಿನಿಮಾ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಈ ಹತ್ತು (Dhanu 10 Year Story) ವರ್ಷದಲ್ಲಿ ಕೇವಲ ಒಬ್ಬ ನಾಯಕನಾಗಿಯೇ ಉಳಿದ ನಟ ಧನಂಜಯ್, ಚಿತ್ರವನ್ನ ನಿರ್ಮಿಸೋ ಮೂಲಕ ನಿರ್ಮಾಪಕರೂ ಆಗಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟಿಹಾಕಿ ಹೊಸಬರಿಗೆ (Dhanu Complets 10 Year) ಅವಕಾಶ ಕೂಡ ಕೊಟ್ಟಿದ್ದಾರೆ.
ಇದರ ಮಧ್ಯೆ ತಮ್ಮ ಚಿತ್ರ ಸೇರಿದಂತೆ ಇತರರ ಚಿತ್ರಗಳಿಗೂ ಹಾಡುಗಳನ್ನ ಬರೆದುಕೊಟ್ಟಿದ್ದಾರೆ. ಬಹು ಪ್ರತಿಭೆಯ ಧನಂಜಯ್ ಸಿನಿಮಾಗಳ ಜರ್ನಿ ಸ್ಟೋರಿ ಇಲ್ಲಿದೆ ಓದಿ.
ಡಾಲಿ ಧನಂಜಯ್ ಚಿತ್ರ ಜೀವನದ ಆ ಹತ್ತು ವರ್ಷಗಳು!
ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ ಅಂತ ಜೀವನದ ಖಾರವಾದ ಸತ್ಯ ಹೇಳಿದ್ದ ಡಾಲಿ ಧನಂಜಯ್, ಕಡಿಮೆ ಅವಧಿಯಲ್ಲಿ ಬೆಳೆದು ನಿಂತರು. ಕೇವಲ ಹತ್ತು ವರ್ಷದಲ್ಲಿ 25 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರ ನಿರ್ಮಿಸೋ ಮೂಲಕ ನಿರ್ಮಾಪಕರಾದರು. ಸ್ವತಃ ನಿರ್ಮಾಣ ಸಂಸ್ಥೆ ಹುಟ್ಟುಹಾಕೋ ಮೂಲಕ ಹೊಸಬರಿಗೂ ಚಾನ್ಸ್ ಕೊಟ್ಟರು. ತಮ್ಮ ಅಭಿನಯದ ಚಿತ್ರಗಳಿಗೆ ಲಿರಿಕ್ಸ್ ಬರೆದು ಭೇಷ್ ಎನಿಸಿಕೊಂಡರು.
ಡಾಲಿ ಧನಂಜಯ್ ಸಾಫ್ಟ್‌ವೇರ್ ಲೋಕದಲ್ಲಿ ಇದ್ದವರು. ಅಲ್ಲಿರೋವಾಗ್ಲೇ ಅಭಿನಯದ ಗೀಳು ಹಚ್ಚಿಕೊಂಡಿದ್ದರು. ಹಾಗಿದ್ದಾಗಲೇ, ಡೈರೆಕ್ಟರ್ ಗುರು ಪ್ರಸಾದ್ ಕಣ್ಣಿಗೂ ಬಿದ್ದರು. ಆಗಲೇ ಡೈರೆಕ್ಟರ್ ಗುರು ಪ್ರಸಾದ್, ಧನಂಜಯ್ ಹಾಕಿಕೊಂಡು ಒಂದು ಸಿನಿಮಾ ಮಾಡಿದ್ದರು.
ಸ್ಪೆಷಲ್ ಹೀರೋ ಸ್ಪೆಷಲ್ ಡೈರೆಕ್ಟರ್ ಸೂಪರ್ ಸಿನಿಮಾ
ಆ ಸಿನಿಮಾನೇ ಡೈರೆಕ್ಟರ್ ಸ್ಪೆಷಲ್ ಆಗಿತ್ತು. 31 May 2013 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಹೆಚ್ಚು ಗಮನ ಸೆಳೆಯಿತು. ಧನಂಜಯ್ ಕಂಡ ಪ್ರೇಕ್ಷಕರು ಇಷ್ಟಪಟ್ಟರು. ಇದಾದ್ಮೇಲೆ ಧನಂಜಯ್ ಸಾಕಷ್ಟು ಸಿನಿಮಾಗಳನ್ನ ಮಾಡಿದ್ದರು.
ಡೈರೆಕ್ಟರ್ ಸ್ಪೆಷಲ್ ಸಿನಿಮಾ ಆದ್ಮೇಲೆ ಧನು ಅಭಿನಯಿಸಿದ್ದ ಚಿತ್ರಗಳ ಪಟ್ಟಿ ದೊಡ್ಡದಿದೆ. ರಾಟೆ, ಜಸ್ಸಿ, ಬಾಕ್ಸರ್, ಬದ್ಮಾಷ್ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ ಈ ಚಿತ್ರಗಳು ಚೆನ್ನಾಗಿದ್ದರೂ ಜನರನ್ನ ರೀಚ್ ಆಗೋವಲ್ಲಿ ಅದ್ಯಾಕೋ ಯಡವಿದವು.
ಅಲ್ಲಮನಾಗಿ ನಾಗಾಭರಣರ ಚಿತ್ರದಲ್ಲಿ ಹೊಳೆದಿದ್ದ ಡಾಲಿ!
ಧನಂಜಯ್ ಚಿತ್ರ ಜೀವನ ಹೀಗೆ ಸಾಗೋ ವೇಳೆಯಲ್ಲಿ, ಡೈರೆಕ್ಟರ್ ಟಿ. ಎಸ್. ನಾಗಾಭರಣ ನಿರ್ದೇಶನದಲ್ಲಿ ಅಲ್ಲಮ ಅನ್ನೋ ಚಿತ್ರ ಮಾಡಿದ್ದರು. ಈ ಚಿತ್ರದಲ್ಲಿ ಧನಂಜಯ್ ಅದ್ಭುತವಾಗಿಯೇ ಅಭಿನಿಯಿಸಿದ್ದರು. ಆದರೆ ಈ ಚಿತ್ರ ಕಲಾತ್ಮಕ ಚಿತ್ರದ ಚೌಕಟ್ಟಿನಲ್ಲಿಯೇ ಇತ್ತು ಅನ್ನೋ ಕಾರಣಕ್ಕೋ ಏನೋ, ಇದು ಒಳ್ಳೆ ಸಿನಿಮಾ ಆಗಿ ಮಾತ್ರ ಉಳಿದು ಬಿಡ್ತು.
ಎರಡನೇ ಸಲ ಮತ್ತು ಹ್ಯಾಪಿ ನ್ಯೂ ಇಯರ್ ಚಿತ್ರಗಳನ್ನೂ ಮಾಡಿದರು. ಆದರೆ ಧನಂಜಯ್ ಸಿನಿ ಜರ್ನಿಯನ್ನ ಚೇಂಜ್ ಮಾಡಿದ್ದು ಬೇರೆ ಯಾರೋ ಅಲ್ಲ. ಡೈರೆಕ್ಟರ್ ದುನಿಯಾ ಸೂರಿನೇ ಈ ಒಂದು ಕೆಲಸ ಮಾಡಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದಲ್ಲಿ ಧನು ಒಂದು ಅದ್ಭುತ ಪಾತ್ರ ಮಾಡಿದ್ದರು.
ಧನಂಜಯ್ ಡಾಲಿ ಆಗಿ ಮಿಂಚಿದ್ದ ಚಿತ್ರ ಯಾವುದು?
ಹೌದು, ಟಗರು ಚಿತ್ರದ ಡಾಲಿ ಪಾತ್ರದ ಮೂಲಕವೇ ಧನಂಜಯ್ ಎಲ್ಲರ ಹೃದಯ ಗೆದ್ದು ಬಿಟ್ಟರು. ಇಡೀ ಕರ್ನಾಟಕದ ಜನಕ್ಕೆ ಧನು, ಡಾಲಿ ಆಗಿಯೇ ಪರಿಚಯ ಆದ್ರು. ಒಳ್ಳೆ ಹೈಪ್ ಪಡೆದು, ದೊಡ್ಡಮಟ್ಟದಲ್ಲಿಯೇ ಬೆಳೆದು ನಿಂತರು ನೋಡಿ.
ಭೈರವ ಗೀತಾ ಚಿತ್ರದ ಮೂಲಕ ಟಾಲಿವುಡ್‌ನಲ್ಲೂ ಡಾಲಿ ಧನಂಜಯ್ ಮಿಂಚಿದರು. ಅಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿರೋ ಡಾಲಿ ಧನಂಜಯ್, ಪಾಪ್ ಕಾರ್ನ್ ಮಂಕಿ ಚಿತ್ರದಲ್ಲೂ ಭಯಾನಕ ರೋಲ್ ಮಾಡಿದ್ದರು. ಈ ಪಾತ್ರವೂ ಹೆಚ್ಚು ಗಮನ ಸೆಳೆಯಿತು.
ಡಾಲಿ ಧನಂಜಯ್ ಪೊಲೀಸ್ ಆಗಿ ಮಿಂಚಿದ ಚಿತ್ರ ಯಾವುದು?
ಇದಾದ್ಮೇಲೆ ದೊಡ್ಡ ದೊಡ್ಡ ಚಿತ್ರಗಳಲ್ಲಿ ವಿಲನ್ ಪಾತ್ರಗಳ ಮೂಲಕವೇ ಮುನ್ನುಗುತ್ತಿರೋ ಡಾಲಿ ಧನಂಜಯ್, ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಮಿಂಚಿದರು. ಪೊಗರು ಚಿತ್ರದಲ್ಲೂ ಧನು ಗಮನಾರ್ಹ ಪಾತ್ರವನ್ನೆ ನಿರ್ವಹಿಸಿದ್ದರು.
ಡಾಲಿ ಧನಂಜಯ್, ಪವರ್ ಸ್ಟಾರ್ ಪುನೀತ್ ಅಭಿನಯದ ಯುವರತ್ನ ಚಿತ್ರದಲ್ಲೂ ಅಭಿನಯಿಸಿದ್ದರು. ಹೀಗೆ ಮುಂದೆ ಸಾಗುತ್ತಲೇ ಬಂದ ಧನಂಜಯ್, ರತ್ನನ್ ಪ್ರಪಂಚ ಚಿತ್ರದ ಮೂಲಕ ಮತ್ತೆ ಗಮನ ಸೆಳೆದರು. ಬಡವ ರಾಸ್ಕಲ್ ಚಿತ್ರದ ಮೂಲಕ ಧನು, ನಿರ್ಮಾಪಕರೂ ಆದರು ಗೆದ್ದು ಬೀಗಿದರು.
ಡಾಲಿ ಧನಂಜಯ್ 25 ನೇ ಸಿನಿಮಾ ಯಾವುದು?
ಜೆಸ್ಸಿ, ಭೈರಾಗಿ, ಮಾನ್ಸೂನ್ ರಾಗ, ತೋತಾಪುರಿ, ಹೆಡ್ ಬುಷ್ ಚಿತ್ರದಲ್ಲಿ ಅಭಿನಯಿಸಿದ ಧನಂಜಯ್ ಜನರನ್ನ ವಿಭಿನ್ನವಾಗಿಯೇ ಸೆಳೆದರು. ಗುರುದೇವ್ ಹೊಯ್ಸಳ ಚಿತ್ರದ ಮೂಲಕ ಮತ್ತೊಮ್ಮೆ ಡಾಲಿ ಧನಂಜಯ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ.
ಡಾಲಿ ಧನಂಜಯ್ ಚಿತ್ರ ಜೀವನದಲ್ಲಿ ಹೊಯ್ಸಳ ಚಿತ್ರ 25 ನೇ ಚಿತ್ರ ಆಗಿದೆ. ಇದರ ಪ್ರಚಾರ ಕೂಡ ಬಲು ಜೋರಾಗಿಯೇ ಇದೆ. ಇದೇ ತಿಂಗಳ 30 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿರೋ ಹೊಯ್ಸಳ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ವಿಶೇಷವಾಗಿ ಧನು ಇಂಡಸ್ಟ್ರಿಗೆ ಬಂದು ಹತ್ತು ವರ್ಷ ಆಗಿರೋ ಈ ಸಮಯದಲ್ಲಿಯೇ ಹೊಯ್ಸಳ ಬರ್ತಾಯಿದ್ದು ಅತಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ