Hoysala Song: ಸಳ ಸಳ ಹೊಯ್ಸಳ ಪಿಸ್ತೂಲೇ ಇವನ ದೋಸ್ತಿ! ಪೊಗರು ಒನ್ ಟನ್ ಜಾಸ್ತಿ

ಹೊಯ್ಸಳನಾಗಿ ಬದಲಾದ ಡಾಲಿ ಧನಂಜಯ್

ಹೊಯ್ಸಳನಾಗಿ ಬದಲಾದ ಡಾಲಿ ಧನಂಜಯ್

ಡಾಲಿ ಧನಂಜಯ್ ಸಿನಿ ಲೈಫ್​​ನ ಇಲ್ಲಿವರೆಗಿನ ಸಿನಿಮಾಗಳಲ್ಲಿ ಹೊಯ್ಸಳ ಚಿತ್ರ ವಿಶೇಷವಾಗಿಯೇ ನಿಲ್ಲುವ ಭರವಸೆ ಮೂಡಿಸುತ್ತಿದೆ. ಹೊಯ್ಸಳನಾಗಿ ಧನಂಜಯ್ ತಮ್ಮ ಅಭಿಮಾನಿಗಳಿಗೆ ವಿಭಿನ್ನ ಕಥೆಯೊಂದನ್ನ ಹೇಳೋಕೆ ಬರ್ತಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಡಾಲಿ ಧನಂಜಯ್ ಅಭಿನಯದ (Hoysala Movie) ಸಿನಿಮಾಗಳಲ್ಲಿ ಹೊಯ್ಸಳ ಬಹು ನಿರೀಕ್ಷೆಯನ್ನ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ರಿಯಲ್ ಪೊಲೀಸ್ ಆಫೀಸರ್ (Hoysala Movie Songs) ಕಥೆಯನ್ನ ತೋರಿಸ್ತಿದ್ದಾರಾ ಅನ್ನುವ ಕುತೂಹಲ ಕೂಡ ಮೂಡಿದೆ. ಗುರುದೇವ ಹೊಯ್ಸಳ ಹೆಸರಿನ ಪೊಲೀಸ್ (Daali Dhananjaya Movie) ಆಫೀಸರ್ ಪಾತ್ರದಲ್ಲಿ ಧನಂಜಯ್ ಕಾಣಿಸುತ್ತಿದ್ದಾರೆ. ಈ ಪಾತ್ರದ ಖದರ್ ಬಿಂಬಿಸೋ ಒಂದು ಹಾಡನ್ನ (Hoysala Movie Songs) ರಾಜಕುಮಾರ ಚಿತ್ರದ ಡೈರೆಕ್ಟರ್ ಸಂತೋಷ್ ಆನಂದರಾಮ್ ಬರೆದಿದ್ದಾರೆ. ಗುರುದೇವ ಹೊಯ್ಸಳ ಪಾತ್ರವನ್ನ ಪರಿಚಯಿಸೋ ಈ ಗೀತೆ ಕೆಸಿಸಿ ಪಂದ್ಯದ ಸಮಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಿಲೀಸ್ ಆಗಿದೆ.  ಸೋಷಿಯಲ್ ಮೀಡಿಯಾದಲ್ಲೂ ಈ ಹಾಡಿನ ಲಿಂಕ್ ಶೇರ್ ಆಗಿದೆ. ಇದರ ಒಟ್ಟು ಚಿತ್ರಣದ ಸ್ಟೋರಿ ಇಲ್ಲಿದೆ ಓದಿ.


ಹೊಯ್ಸಳ ಚಿತ್ರದ ಸಳ ಸಳ ಹಾಡು ರಿಲೀಸ್


ಹೊಯ್ಸಳ ಚಿತ್ರದ ನಾಯಕ ನಟ ಗುರುದೇವ ಹೊಯ್ಸಳ ಪ್ರಾಮಾಣಿಕ ಅಧಿಕಾರಿನಾ? ನಟರಾಕ್ಷಸನ ರೀತಿ ಭಯಂಕರ ಖಡಕ್ ಅಧಿಕಾರಿನಾ? ಇಲ್ಲಾ ಎನ್​ಕೌಂಟರ್ ಸ್ಪೆಷಲಿಸ್ಟಾ? ಈ ಎಲ್ಲ ಪ್ರಶ್ನೆಗಳು ಈಗ ಚಿತ್ರದ ಸಳ ಸಳ ಹಾಡನ್ನ ನೋಡಿದಾಕ್ಷಣ ಅನಿಸುತ್ತಿದೆ.


Daali Dhananjaya Acted Hoysala Movie Title Song Released
ಹೊಯ್ಸಳ ಚಿತ್ರದ ಮೂಲಕ ಬರ್ತಿದ್ದಾರೆ ಡಾಲಿ ಧನಂಜಯ್


ಡೈರೆಕ್ಟರ್ ಸಂತೋಷ್ ಆನಂದರಾಮ್ ಚಿತ್ರದ ಈ ಹೊಯ್ಸಳನನ್ನ ವಿಭಿನ್ನವಾಗಿಯೇ ಬಣ್ಣಿಸಿದ್ದಾರೆ. ಆ ಸಾಲುಗಳನ್ನ ಗಮನಿಸಿದ್ರೆ, ಹೊಯ್ಸಳ ಚಿತ್ರದ ಹಾಡಿನ ಸಣ್ಣ ಚಿತ್ರಣ ನಿಮಗೆ ಸಿಗುತ್ತದೆ. ಆ ಸಾಲುಗಳು ಇಲ್ಲಿವೆ ಓದಿ.


ಪಿಸ್ತೂಲೆ ದೋಸ್ತಿ
ಪೊಗರು ಒನ್ ಟನ್ ಜಾಸ್ತಿ
ಸಳ ಸಳ ನೀ ಹೊಯ್ಸಳ
ನೂರಾನೆಯ ಬಲ
ಸಿಂಗಲ್ ಪಡೆ ನೀನು


ಸಳ ಸಳ ಹೊಯ್ಸಳ ಅಂತಲೇ ಶುರು ಆಗೋ ಈ ಟೈಟಲ್ ಟ್ರ್ಯಾಕ್​ ಆರಂಭ ಆಗೋ ಮುನ್ನ, ರಾಜೇಶ್ ನಟರಂಗ ಒಂದಷ್ಟು ಸಾಲುಗಳನ್ನ ಹೇಳ್ತಾರೆ. ಪೊಲೀಸ್ ಡಿಪಾರ್ಟ್​ಮೆಂಟ್​​ನಲ್ಲಿ ಗುರುದೇವ ಹೊಯ್ಸಳನನ್ನ ಹೇಗೆ ಕರೆಯುತ್ತಾರೆ ಅನ್ನೋದನ್ನ ಇಲ್ಲಿ ನೋಡಬಹುದು. ಆ ಮಾತು ಇಲ್ಲಿವೆ ನೋಡಿ.




ಹೆಸರಿಗೆ ಗುರುದೇವ
ಗುರುಗೆ ಇರಬೇಕಾದ ಸಹನೆ ಇಲ್ಲ
ದೇವರಿಗೆ ಇರಬೇಕಾದ ದಯನೂ ಇಲ್ಲ
ಅದಕ್ಕೆ ಅವನನ್ನ ಹೊಯ್ಸಳ ಅಂತ ಕರೆಯುತ್ತದೆ.


ಹೀಗೆ ಹೊಯ್ಸಳ ಚಿತ್ರದ ಟೈಟಲ್ ಟ್ರ್ಯಾಕ್ ಶುರು ಆಗುತ್ತದೆ. ಇಡೀ ಹಾಡಿನಲ್ಲಿ ನಾಯಕ ನಟ ಹೊಯ್ಸಳನ ಅಬ್ಬರವೇ ಇದೆ. ಪಿಸ್ತೂಲ್ ಹಿಡಿದು ನೇರವಾಗಿ ಗುಂಡು ಹೊಡದೆ ಬಿಡೋ ಧೈರ್ಯದ ಚಿತ್ರಣ ಇಲ್ಲಿ ಕಂಡು ಬರುತ್ತದೆ.


ಹೊಯ್ಸಳನಾಗಿ ಬದಲಾದ ಡಾಲಿ ಧನಂಜಯ್
ಹೊಯ್ಸಳ ಚಿತ್ರದ ನಾಯಕ ಗುರುದೇವ ಹೊಯ್ಸಳ ಇಡೀ ಮನಸ್ಥಿತಿಯನ್ನ ಈ ಒಂದು ಹಾಡು ಕಟ್ಟಿಕೊಡುತ್ತದೆ. ಚಿತ್ರದಲ್ಲಿ ಗುರುದೇವ ಹೊಯ್ಸಳ ಪಾತ್ರ ಮಾಡಿರೋ ಡಾಲಿ ಧನಂಜಯ್ ಕಂಪ್ಲೀಟ್ ಪರಕಾಯ ಪ್ರವೇಶ ಮಾಡಿದಂತೆ ಇದೆ.


ಇಂತಹ ಖಡಕ್ ಆಫೀಸರ್ ಹೊಯ್ಸಳನ ಪರಿಚಯಿಸೋ ಈ ಗೀತೆಯನ್ನ ನಕ್ಷ್ ಅಜೀಜ್ ಹಾಡಿದ್ದಾರೆ. ಇದೇ ಹಾಡಲ್ಲಿ ಬರುವ Rap ಅನ್ನ ಯೋಗಿ ಬಿ.ರಾಜ್ ಬರೆದು ಹಾಡಿದ್ದಾರೆ. ಇದು ಕೂಡ ಅಲ್ಲಲ್ಲಿ ಬಂದು ಹೋಗುತ್ತದೆ.


ಹೊಯ್ಸಳ ಚಿತ್ರಕ್ಕೆ ಕಾಂತಾರ ಡೈರೆಕ್ಟರ್ ಸಂಗೀತ ನಿರ್ದೇಶನ
ಇಡೀ ಚಿತ್ರದಲ್ಲಿ ಹೊಯ್ಸಳನ ಅಬ್ಬರ ಹೇಗಿರುತ್ತದೆ, ಅನ್ನೋದನ್ನ ತೋರಿಸೋ ಈ ಗೀತೆಯಲ್ಲಿ ಸಮಾಜ ಮುಖಿ ಕೆಲಸದಲ್ಲೂ ಹೊಯ್ಸಳ ಭಾಗಿ ಆಗುತ್ತಾರೆ, ಅನ್ನೋ ಚಿತ್ರಣವೂ ಇದೇ ಹಾಡಲ್ಲಿ ದೊರೆಯುತ್ತದೆ ಅನ್ನೋದು ಕೂಡ ವಿಶೇಷವೇ ಆಗಿದೆ.


Daali Dhananjaya Acted Hoysala Movie Title Song Released
ಹೊಯ್ಸಳ ಚಿತ್ರದ ಸಳ ಸಳ ಹಾಡು ರಿಲೀಸ್


ಅಜನೀಶ್ ಲೋಕನಾಥ್ ಸಂಗೀತದ ಈ ಚಿತ್ರವನ್ನ ವಿಜಯ್ ಎನ್ ನಿರ್ದೇಶನ ಮಾಡಿದ್ದಾರೆ. ಮಾರ್ಚ್​ ತಿಂಗಳ 30 ರಂದು ಹೊಯ್ಸಳ ಚಿತ್ರವನ್ನ ಕರ್ನಾಟಕ ಸೇರಿದಂತೆ ಕೆನಡಾದಲ್ಲೂ ರಿಲೀಸ್ ಮಾಡಲಾಗುತ್ತಿದೆ.


ಹೊಯ್ಸಳ ಚಿತ್ರದ ಮೂಲಕ ಬರ್ತಿದ್ದಾರೆ ಡಾಲಿ ಧನಂಜಯ್
ಡಾಲಿ ಧನಂಜಯ್ ಸಿನಿ ಲೈಫ್​​ನ ಇಲ್ಲಿವರೆಗಿನ ಸಿನಿಮಾಗಳಲ್ಲಿ ಹೊಯ್ಸಳ ಚಿತ್ರ ವಿಶೇಷವಾಗಿಯೇ ನಿಲ್ಲುವ ಭರವಸೆ ಮೂಡಿಸುತ್ತಿದೆ. ಹೊಯ್ಸಳನಾಗಿ ಧನಂಜಯ್ ತಮ್ಮ ಅಭಿಮಾನಿಗಳಿಗೆ ವಿಭಿನ್ನ ಕಥೆಯೊಂದನ್ನ ಹೇಳೋಕೆ ಬರ್ತಿದ್ದಾರೆ.


ಇದನ್ನೂ ಓದಿ: Dhanush Birthday: ರಜನೀಕಾಂತ್ ಅಳಿಯನಿಗೆ ಕಾರ್ ಕ್ರೇಜ್! ಧನುಷ್ ಲಕ್ಷುರಿ ಕಾರುಗಳಿವು


ಇನ್ನುಳಿದಂತೆ ಚಿತ್ರದ ಪ್ರಚಾರ ಶುರು ಆಗಿದೆ. ಕೆಸಿಸಿ ಪಂದ್ಯದ ವೇಳೆ ಚಿತ್ರದ ಈ ಹಾಡನ್ನ ರಿಲೀಸ್ ಮಾಡೋ ಮೂಲಕ ಹೊಸ ಖದರ್ ಅನ್ನೂ ಇಲ್ಲಿ ತೋರಲಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು