Hoysala Movie: ಗುರುದೇವ್ ಹೊಯ್ಸಳ ಚಿತ್ರದ ಕ್ರೇಜ್ ಹೇಗಿದೆ? ಹೊಸ ಅಪ್ಡೇಟ್​ ಏನು?

ಗುರುದೇವ್ ಹೊಯ್ಸಳ ಅಬ್ಬರ ಈಗ ಬಲು ಜೋರು

ಗುರುದೇವ್ ಹೊಯ್ಸಳ ಅಬ್ಬರ ಈಗ ಬಲು ಜೋರು

ಅಮೆರಿಕಾದ ಆ್ಯಕ್ಷನ್ ಥ್ರಿಲ್ಲರ್ ಸರಣಿ John Wick ರೀತಿನೇ ಈಗ ಧನಂಜಯ್ ಪೋಸ್ಟರ್‌ಗಳು ರಿಲೀಸ್ ಆಗಿವೆ. ಕರ್ನಾಟಕದ John Wick ಅಂತಲೇ ಧನಂಜಯ್ ಅವರನ್ನ ಕರೆಯಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಈ ಪೋಸ್ಟರ್‌ಗಳು ಅಬ್ಬರ ಮಾಡುತ್ತಿದ್ದು ಅತಿ ಹೆಚ್ಚು ಗಮನ ಸೆಳೆಯುತ್ತಿವೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:
  • published by :

ಡಾಲಿ ಧನಂಜಯ್ ಅಭಿನಯದ ಹೊಯ್ಸಳ (Daali New Movie Updates) ಸಿನಿಮಾ ಕ್ರೇಜ್ ಜೋರಾಗಿದೆ. ಪ್ಯಾನ್ ಇಂಡಿಯಾ ಕಬ್ಜ ಚಿತ್ರದ ಅಬ್ಬರದ ಮಧ್ಯೆ ಈ ಹೊಯ್ಸಳನ ಅಬ್ಬರ ಕೇಳಲಿಲ್ಲ ಅನಿಸುತ್ತದೆ. ಆದರೂ (Dhanajaya Hoysala Movie) ಗುರು ದೇವ್ ಹೊಯ್ಸಳ ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನವಾಗಿಯೇ ಕ್ರೇಜ್ ಹುಟ್ಟಿಸುತ್ತಲೇ ಇದ್ದಾರೆ. ಹಾಡುಗಳ ಮೂಲಕವೂ ಚಿತ್ರ ಗಮನ ಸೆಳೆದಾಗಿದೆ. ಅಜನೀಶ್ ಲೋಕನಾಥ್ ಸಂಗೀತದ (Hoysala Movie Latest Updates)ಹಾಡು ಕೂಡ ಸ್ಪೆಷಲ್ ಆಗಿಯೇ ಇದೆ. ಅಮೃತ ಅಯ್ಯರ್ ಮತ್ತು ಡಾಲಿ ಧನಂಜಯ್ ಜೋಡಿ ಕೂಡ ಇಲ್ಲಿ ಮೋಡಿ ಮಾಡುವಂತೆ (Kannada Movie Updates) ಕಾಣುತ್ತಿದೆ. ಚಿತ್ರ ಇದೇ ತಿಂಗಳು 30 ರಂದು ರಿಲೀಸ್ ಆಗ್ತಾಯಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.


ಗುರುದೇವ್ ಹೊಯ್ಸಳ ಅಬ್ಬರ ಈಗ ಬಲು ಜೋರು


ಗುರುದೇವ್ ಹೊಯ್ಸಳನ ಅಬ್ಬರ ಜೋರಾಗಿಯೇ ಇದೆ. ಕಬ್ಜ ಚಿತ್ರದ ಪ್ರಚಾರದ ಅಬ್ಬರದ ನಡುವೆ ಹೊಯ್ಸಳ ಪ್ರಚಾರ ಹೆಚ್ಚು ಕೇಳಿಸಲೇ ಇಲ್ಲ ಅನಿಸುತ್ತದೆ. ಆದರೆ ಸಿನಿಮಾ ತಂಡ ಎಲ್ಲೂ ಆ ಒಂದು ಚಾನ್ಸ್ ಮಿಸ್ ಮಾಡಿಕೊಳ್ಳಲೇ ಇಲ್ಲ. ಸೋಷಿಯಲ್ ಮೀಡಿಯಾಲ್ಲಿ ಬಲು ಜೋರಾಗಿಯೆ ಪ್ರಚಾರ ನಡೀತಾನೇ ಇದೆ. ಕಬ್ಜ ಚಿತ್ರ ರಿಲೀಸ್ ಆಗಿದ್ದೇ ತಡ, ಹೊಯ್ಸಳ ಚಿತ್ರದ ಪ್ರಚಾರ ಈಗ ಎಲ್ಲರಿಗೂ ಕಾಣಿಸುತ್ತಿದೆ ಅನಿಸುತ್ತದೆ.


Daali Dhananjaya Acted Hoysala Movie Latest Updates
ಡಾಲಿ ಧನಂಜಯ್ ಟ್ವಿಟರ್ ಅಕೌಂಟ್ ನೇಮ್ ಬದಲಾಗಿದ್ದೇಕೆ?


ಅಮೆರಿಕಾದ ಆ್ಯಕ್ಷನ್ ಥ್ರಿಲ್ಲರ್ ಸರಣಿ John Wick ರೀತಿನೇ ಈಗ ಧನಂಜಯ್ ಪೋಸ್ಟರ್‌ಗಳು ರಿಲೀಸ್ ಆಗಿವೆ. ಕರ್ನಾಟಕದ John Wick ಅಂತಲೇ ಧನಂಜಯ್ ಅವರನ್ನ ಕರೆಯಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಈ ಪೋಸ್ಟರ್‌ಗಳು ಅಬ್ಬರ ಮಾಡುತ್ತಿದ್ದು ಅತಿ ಹೆಚ್ಚು ಗಮನ ಸೆಳೆಯುತ್ತಿವೆ.




ನಂಜನಗೂಡಿನಲ್ಲಿ ಹೊಯ್ಸಳ ಚಿತ್ರದ ಪ್ರಚಾರ ಶುರು


ಹೊಯ್ಸಳ ಸಿನಿಮಾದಲ್ಲಿ ಪ್ರಚಾರ ನಂಜನಗೂಡಿನಲ್ಲಿಯೇ ಆರಂಭವಾಗಿತ್ತು. ನಟ ಧನಂಜಯ್ ಕೂಡ ಪೂಜೆ ಮಾಡೋ ಮೂಲಕವೇ ಸಿನಿಮಾದ ಪ್ರಚಾರವನ್ನ ಅಂದು ಶುರು ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೂ ವಿಶೇಷವಾಗಿಯೇ ಹೊಯ್ಸಳ ಸಿನಿಮಾದ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.


ಗುರುದೇವ್ ಹೊಯ್ಸಳ ಚಿತ್ರದ ಕ್ರೇಜ್ ಜೋರಾಗಿಯೇ ಇದೆ. ಇದರ ಮಧ್ಯೆ ಚಿತ್ರದ ಅಜನೀಶ್ ಲೋಕನಾಥ್ ಸಂಗೀತದ ಒಂದು ಹಾಡು ಜನರಿಗೆ ತುಂಬಾನೇ ಇಷ್ಟ ಆಗಿದೆ. ಅರೆ ಇದು ಎಂತಹ ಭಾವನೆ ಅಂತಲೇ ಸಾಗೋ ಈ ಗೀತೆ ಎಲ್ಲರ ಫೇವರಿಟ್ ಹಾಡು ಕೂಡ ಆಗಿದೆ.


ಡಾಲಿ ಧನಂಜಯ್ ಟ್ವಿಟರ್ ಅಕೌಂಟ್ ನೇಮ್ ಬದಲಾಗಿದ್ದೇಕೆ?


ಇದರ ಮಧ್ಯೆ ಚಿತ್ರದ ನಾಯಕ ನಟ ಡಾಲಿ ಧನಂಜಯ್ ತಮ್ಮ ಟ್ವಿಟರ್ ಅಕೌಂಟ್ ಹೆಸರು ಚೇಂಜ್ ಮಾಡಿದರು. ಗುರುದೇವ್ ಹೊಯ್ಸಳ ಅಂತಲೇ ಅದಕ್ಕೆ ಇಟ್ಟರು. ಇದರ ನಡುವೆ ಚಿತ್ರಕ್ಕೆ ಹೊಯ್ಸಳ ಬದಲು ಗುರುದೇವ್ ಹೊಯ್ಸಳ ಅಂತಲೂ ಟೈಟಲ್ ಚೇಂಜ ಮಾಡಿದರು.


ಹೊಯ್ಸಳ ಸಿನಿಮಾದ ಕಥೆ ಕರ್ನಾಟಕದ ಎಲ್ಲ ಜನರಿಗೆ ಕನೆಕ್ಟ್ ಆಗುತ್ತದೆ. ಆದರೆ ಚಿತ್ರದ ಇಡೀ ಕಥೆಯನ್ನಬೆಳಗಾವಿ ಜಿಲ್ಲೆಯ ಸುತ್ತ-ಮುತ್ತಲು ಚಿತ್ರೀಕರಿಸಲಾಗಿದೆ. ಇಲ್ಲಿ ನಡೆದ ಒಂದು ಘಟನೆಯನ್ನ ಇಟ್ಟುಕೊಂಡೇ ಸಿನಿಮಾ ಮಾಡಿದ್ದಾರೆ ಅನ್ನುವ ಸುದ್ದಿನೂ ಇದೆ.


ಗುರುದೇವ್ ಹೊಯ್ಸಳನ ಖದರ್ ಟೈಟಲ್ ಟ್ರ್ಯಾಕ್‌ ಅಲ್ಲಿ ರಿವೀಲ್


ಆದರೆ ಹೊಯ್ಸಳ ಚಿತ್ರದ ಹಲವು ಘಟನೆಗಳನ್ನ ಆಧರಿಸಿರೋ ಒಂದು ಕಥೆ ಅನ್ನೋದೇ ಬಲ್ಲ ಮೂಲಗಳ ಮಾಹಿತಿ ಆಗಿದೆ. ಇದರ ಹೊರತಾಗಿ ಚಿತ್ರದ ಟೈಟಲ್ ಟ್ರ್ಯಾಕ್ ಈಗಾಗಲೇ ನಾಯಕ ನಟ ಗುರುದೇವ್ ಹೊಯ್ಸಳನ ಖದರ್ ತೋರಿ ಆಗಿದೆ.


Daali Dhananjaya Acted Hoysala Movie Latest Updates
ಗುರುದೇವ್ ಹೊಯ್ಸಳನ ಖದರ್ ಟೈಟಲ್ ಟ್ರ್ಯಾಕ್‌ ಅಲ್ಲಿ ರಿವೀಲ್


ಇದೇ 20 ರಂದು ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಇಡೀ ಚಿತ್ರದ ಒಟ್ಟು ಚಿತ್ರಣ ಈ ಒಂದು ಟ್ರೈಲರ್‌ನಲ್ಲಿ ಸಿಗುತ್ತದೆ ಅನ್ನುವ ಅಂದಾಜು ಕೂಡ ಇದೆ. ಚಿತ್ರದ ನಿರ್ದೇಶಕ ವಿಜಯ್‌. ಎನ್ ಈ ಮೂಲಕ ಪೊಲೀಸ್ ಆಫೀಸರ್ ಕಥೆಯನ್ನ ಕಟ್ಟಿಕೊಡ್ತಿದ್ದಾರೆ.


ಮಾರ್ಚ್‌-30 ರಂದು ಗುರುದೇವ್ ಹೊಯ್ಸಳ ರಿಲೀಸ್


ಗುರುದೇವ್ ಹೊಯ್ಸಳ ಚಿತ್ರ ಇದೇ ತಿಂಗಳ 30 ರಂದು ರಿಲೀಸ್ ಆಗುತ್ತಿದೆ. ರಾಜ್ಯಾದ್ಯಂತ ಗುರುದೇವ್ ಹೊಯ್ಸಳನ ಕ್ರೇಜ್ ಜೋರಾಗಿದೆ. ಎಲ್ಲೆಡೆ ಚಿತ್ರ ಪ್ರಚಾರ ಕೂಡ ಜೋರಾಗಿಯೇ ನಡೆಯುತ್ತಿದೆ. ಸಿನಿಮಾ ಬಗ್ಗೆ ಒಂದು ನಿರೀಕ್ಷೆ ಇದೆ.


ಹೊಯ್ಸಳ ಚಿತ್ರದಲ್ಲಿ ಬೆಳಗಾವಿಯ ಗಡಿ ಪ್ರದೇಶದ ಕಥೆ ಇದೇಯೇ ಅನ್ನುವ ಅನುಮಾನವೂ ಇದೆ. ಅದರ ಬಗ್ಗೆ ಸಿನಿಮಾ ತಂಡ ಇನ್ನೂ ಎಲ್ಲೂ ಏನೂ ಹೇಳಿಕೊಂಡಿಲ್ಲ.

ಇದನ್ನೂ ಓದಿ: Kabzaa Box Office Collection: ಕಬ್ಜ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು? ಅಧಿಕೃತ ಮಾಹಿತಿ ಕೊಟ್ರು ಆರ್‌. ಚಂದ್ರು


ಆದರೆ ಸೋಮವಾರ ಇದೇ 20 ರಂದು ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗುತ್ತಿದ್ದು ಈ ದಿನವೇ ಇನ್ನಷ್ಟು ಮಾಹಿತಿ ಹೊರ ಬೀಳೋ ಸಾಧ್ಯತೆ ಕೂಡ ಇವೆ. ಯಾವುದಕ್ಕೂ ವೇಟ್ ಮಾಡಿ ಚಿತ್ರದ ಅಪ್‌ಡೇಟ್ಸ್ ಕೊಡ್ತಾನೇ ಇರುತ್ತೇವೆ.

First published: