Daali Dhananjay Head Bush: ಡಾಲಿ ಧನಂಜಯ ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗುತ್ತಾ ಇಲ್ವಾ?

ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು. ಪೊಲೀಸ್ ವ್ಯವಸ್ಥೆಯಲ್ಲಿನ ಅಕ್ರಮವನ್ನು ವಿರೋಧಿಸಿದವರು. ಹೆಡ್ ಬುಷ್ ಸಿನಿಮಾದ ಟ್ರೇಲರ್​ನಲ್ಲಿ ಎಂ.ಪಿ.ಜಯರಾಜ್ ಅವರನ್ನು ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ ಎಂದು ಅಜಿತ್ ಜಯರಾಜ್ ಆರೋಪಿಸಿದ್ದಾರೆ.

ಹೆಡ್ ಬುಷ್ ಪೋಸ್ಟರ್

ಹೆಡ್ ಬುಷ್ ಪೋಸ್ಟರ್

  • Share this:
ಹೆಡ್ ಬುಷ್! ಇದೇನು ಹೆಸರೇ ಒಂಥರಾ ವಿಚಿತ್ರವಾಗಿದೆಯಲ್ಲ ಅಂದುಕೊಂಡಿರಾ? ಹೆಡ್ ಬುಷ್ ಡಾಲಿ ಧನಂಜಯ (Dhananjay) ಅಭಿನಯದ ಹೊಸ ಚಿತ್ರ. ಈಗಾಗಲೇ ಟ್ರೇಲರ್ (Head Bush Film Trailer) ಬಿಡುಗಡೆಗೊಂಡು ಡಾಲಿ ಧನಂಜಯ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ ಹೆಡ್ ಬುಷ್ ಸಿನಿಮಾ ಟ್ರೇಲರ್. ಸದ್ಯ ಈ ಚಿತ್ರಕ್ಕೆ ಸಮಸ್ಯೆಯೊಂದು ಆರಂಭವಾಗಿದೆ. ಹೆಡ್ ಬುಷ್ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಚಲನಚಿತ್ರ ವಾಣಿಜ್ಯಮಂಡಳಿ ಅಜಿತ್ ಜಯರಾಜ್ ಎಂಬುವವರು ಪತ್ರ ಬರೆದಿದ್ದಾರೆ. ಅರೇ! ಇವರೇಕೆ ಹೆಡ್ ಬುಷ್ ಸಿನಿಮಾ ಬಿಡುಗಡೆಗೆ ತಡೆ ಕೋರಿ ಪತ್ರ ಬರೆದಿದ್ದಾರೆ? ಅಜಿತ್ ಜಯರಾಜ್​ (Ajith Jayraj) ಅವರಿಗೂ ಹೆಡ್ ಬುಷ್ ಸಿನಿಮಾಗೂ ಏನು ಸಂಬಂಧ? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸದ್ಯ ಹೆಡ್ ಬುಷ್ ಟ್ರೇಲರ್ ಬಿಡುಗಡೆಯಾದ ನಂತರ ಚಂದನವನದಲ್ಲಿ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ ಎಂ.ಪಿ‌.ಜಯರಾಜ್ ಜೀವನಾಧಾರಿತ ಚಿತ್ರ ಹೆಡ್ ಬುಷ್. ಸದ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿರುವ ಅಜಿತ್ ಜಯರಾಜ್ ಅವರ ತಂದೆಯೇ ಎಂ. ಪಿ. ಜಯರಾಜ್.

ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು!
ಹೆಡ್ ಬುಷ್ ಸಿನಿಮಾದ ಟ್ರೇಲರ್​ನಲ್ಲಿ ಎಂ.ಪಿ.ಜಯರಾಜ್ ಅವರನ್ನು ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ. ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು. ಪೊಲೀಸ್ ವ್ಯವಸ್ಥೆಯಲ್ಲಿನ ಅಕ್ರಮವನ್ನು ವಿರೋಧಿಸಿದವರು. ಕುಟುಂಬಸ್ಥರ ಅನುಮತಿ ಪಡೆಯದೇ ತಂದೆಯವರ ಜೀವನಾಧಾರಿತ ಕಥೆಯನ್ನ ಚಿತ್ರ ಮಾಡಲು ಹೊರಟ್ಟಿದ್ದಾರೆ ಎಂದು ಅಜಿತ್ ಜಯರಾಜ್ ಆರೋಪಿಸಿದ್ದಾರೆ.ಇದನ್ನೂ ಓದಿ: Yash Joining Politics: ಗೋವಾ ಸಿಎಂ ಜೊತೆ ರಾಕಿ ಭಾಯ್, ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಯಶ್?

ಇದರಿಂದ ನಮ್ಮ ಕುಟುಂಬದವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಹೆಡ್ ಬುಷ್ ಚಿತ್ರದ ಬಿಡುಗಡೆಗೆ ಅವಕಾಶ ನೀಡದಂತೆ ಚಲನಚಿತ್ರ ವಾಣಿಜ್ಯಮಂಡಳಿಗೆ ಅಜಿತ್ ಜಯರಾಜ್ ಅವರು ದೂರು ಸಲ್ಲಿಸಿದ್ದಾರೆ.

ಹೆಡ್ ಬುಷ್ ತಾರಾಗಣ ಹೇಗಿದೆ?
ಹೆಡ್ ಬುಷ್ ಚಿತ್ರಕ್ಕೆ ಅಗ್ನಿಶ್ರೀಧರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಡಾಲಿಪಿಕ್ಚರ್ಸ್ ಅಡಿಯಲ್ಲಿ ಹೆಡ್ ಬುಷ್ ಚಿತ್ರ ನಿರ್ಮಾಣವಾಗುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ಪಾಯಲ್ ರಜಪೂತ್, ಲೂಸ್ ಮಾದ ಯೋಗಿ, ದೇವರಾಜ್, ವಸಿಷ್ಠ ಸಿಂಹ, ಶೃತಿ ಹರಿಹರನ್, ರಘು ಮುಖರ್ಜಿ ಸೇರಿ ಹಲವು ಸ್ಟಾರ್ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Avatara Purusha: ಅವತಾರ ಪುರುಷ ಚಿತ್ರದ ಟ್ರೇಲರ್ ರಿಲೀಸ್, ಬಾಹುಬಲಿಗೆ ಕಟ್ಟಪ್ಪ, ಕೆಜಿಎಫ್​ಗೆ ಅಯ್ಯಪ್ಪ ಎಂದ ಸಾಯಿಕುಮಾರ್

ಬಾದಲ್ ನಂಜುಂಡಸ್ವಾಮಿ ಕಲಾ ನಿರ್ದೇಶನ ಮಾಡಿದ್ದು ಶೂನ್ಯ ಹೆಡ್ ಬುಷ್ ಚಲನಚಿತ್ರದ ನಿರ್ದೇಶಕರು. ಕನ್ನಡ ಒಂದೇ ಅಲ್ಲದೇ ಹಲವು ಭಾಷೆಗಳಲ್ಲಿ ಹೆಡ್ ಬುಷ್ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ.

ಯಾರು ಈ ಎಂ.ಪಿ.ಜಯರಾಜ್?
ಎಂ.ಪಿ.ಜಯರಾಜ್ ಬೆಂಗಳೂರು ಭೂಗತ ಜಗತ್ತಿನ ಮೊದಲ ಡಾನ್. 1970 ಮತ್ತು 1980 ರ ದಶಕದಲ್ಲಿ ಎ. ಪಿ.ಜಯರಾಜ್ ಹೆಸರು ಬೆಂಗಳೂರಿನಲ್ಲಿ ಅತ್ಯಂತ ಮುನ್ನೆಲೆಯಲ್ಲಿ ಕೇಳಿಬರುತ್ತಿತ್ತು. ಬಾಲ್ಯದಿಂದಲೂ ಹವ್ಯಾಸಿ ಕುಸ್ತಿಪಟುವಾಗಿದ್ದ ಇವರು ತಿಗಳರಪೇಟೆಯ ಅಣ್ಣಯ್ಯಪ್ಪ ಗರಡಿಯಲ್ಲಿ ಗಂಭೀರವಾಗಿ ಅಭ್ಯಾಸ ನಡೆಸುತ್ತಿದ್ದರು. ಸದ್ಯ ಅಗ್ನಿಶ್ರೀಧರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿ ಡಾಲಿ ಧನಂಜಯ ಅಭಿನಯದ ಹೆಡ್ ಬುಷ್ ಚಿತ್ರ ಎಂ.ಪಿ.ಜಯರಾಜ್ ಅವರ ಜೀವನದ ಕಥೆಯನ್ನು ಒಳಗೊಂಡಿದೆ ಎಂದು ಹೇಳಲಾಗಿದ್ದು. ಎಂ.ಪಿ.ಜಯರಾಜ್ ಕುಟುಂಬದಿಂದ ವಿರೋಧ ವ್ಯಕ್ತವಾಗಿದೆ. 
Published by:guruganesh bhat
First published: