ಸಿನಿಮಾರಂಗದಲ್ಲಿ ನಟ-ನಟಿಯರು ಪ್ರೀತಿಸಿ ಮದುವೆಯಾಗುವುದು ಕಾಮನ್. ಅದರಲ್ಲೂ ಬಾಲಿವುಡ್(Bollywood)ನಲ್ಲಿ ಇದು ಹೆಚ್ಚಿರುತ್ತೆ. ಸ್ಯಾಂಡಲ್ವುಡ್ನಲ್ಲೂ ಪ್ರೀತಿಸಿ ಮದುವೆಯಾದ ತಾರಾ ಜೋಡಿಗಳು ಇದ್ದಾರೆ. ವಿಷಯ ಏನಪ್ಪಾ ಅಂದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟನೊಬ್ಬ ನಟಿಗೆ ಪ್ರಪೋಸ್(Propose) ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅದು ಬೇರೆ ಯಾರು ಡಾಲಿ ಧನಂಜಯ್(Daali Dhananjay) ಅವರ ವಿಡಿಯೋ ವೈರಲ್ ಆಗುತ್ತಿದೆ. ಹೌದು, ಧನಂಜಯ್ ಅವರು ನಟಿ ಅಮೃತಾ ಅಯ್ಯಂಗಾರ್(Amrutha Iyengar) ಅವರಿಗೆ ಪ್ರಪೋಸ್ ಮಾಡಿದ್ದರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇಬ್ಬರದ್ದೂ ಒಳ್ಳೆ ಜೋಡಿ ಅಂತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಮೊದಲಿನಿಂದಲೂ ನಾವು ಅಂದುಕೊಂಡ ಹಾಗೇ ಆಯ್ತು ನಟನ ಕಾಲೆಳೆಯುತ್ತಿದ್ದಾರೆ. ನಿಜಕ್ಕೂ ಧನಂಜಯ್ ಅವರು ಮಂಡಿಯೂರಿ ಅಮೃತಾ ಅಯ್ಯಂಗಾರ್ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇಲ್ಲಿ ಒಂದು ಟ್ವಿಸ್ಟ್ ಇದೆ. ಇದರ ಸೂತ್ರಧಾರಿ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh). ಹೌದು, ಇವರಿಬ್ಬರ ಮಧ್ಯೆ ಗಣೇಶ್ ಯಾಕೆ ಬಂದ್ರೂ ಅಂತ ಕನ್ಫೂಸ್ ಆಗುತ್ತಿದೆಯಾ? ಹಾಗಿದ್ದರೆ ಈ ಸ್ಟೋರಿಯನ್ನು ಸಂಪೂರ್ಣ ಓದಿ ಎಲ್ಲವೂ ತಿಳಿಯುತ್ತೆ.
ಅಮೃತಾಗೆ ರೋಸ್ ಕೊಟ್ಟು ಪ್ರಪೋಸ್ ಮಾಡಿದ ಡಾಲಿ!
ಸ್ಯಾಂಡಲ್ವುಡ್ನಲ್ಲಿ ಬಡವ ರಾಸ್ಕಲ್ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ. ಡಾಲಿಗೆ ಈ ಸಿನಿಮಾ ಒಳ್ಳೆಯ ಯಶಸ್ಸನ್ನು ತಂದುಕೊಟ್ಟಿದೆ. ಒಟಿಟಿಯಲ್ಲೂ ಜನ ಮುಗಿಬಿದ್ದು ಈ ಸಿನಿಮಾವನ್ನು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್ ಜೊತೆಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಅಮೃತಾ ಈ ಹಿಂದೆ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲೂ ಡಾಲಿ ಜೊತೆಯಾಗಿ ನಟಿಸಿದ್ದರು. ಇವರಿಬ್ಬರದು ಹಿಟ್ ಪೇರ್ ಅಂತಾ ಫ್ಯಾನ್ಸ್ ಹೇಳುತ್ತಿದ್ದಾರೆ. ಈ ಮಧ್ಯೆ ಡಾಲಿ, ಅಮೃತಾ ಪ್ರಪೋಸ್ ಮಾಡಿದ ಮೇಲೆ ಇಬ್ಬರ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ.
ಇದನ್ನು ಓದಿ: ಎಣ್ಣೆ ಏಟಲ್ಲಿ ಕಿರಿಕ್ ಮಾಡಿದ್ರಾ ನಟ ರಕ್ಷಿತ್? ಖಾಕಿಗೂ ಆವಾಜ್ ಹಾಕಿದ್ರಂತೆ ಗಟ್ಟಿಮೇಳ ಸೀರಿಯಲ್ ಟೀಂ!
ರೊಮ್ಯಾನ್ಸ್ ಸೀನ್ನಲ್ಲಿ ನಟಿಸೋದು ಕಷ್ಟ ಎಂದ ಡಾಲಿ
ಡಾಲಿ, ಗಂಭೀರ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ನಟರಾಕ್ಷಸ ಗುಲಾಬಿ ಹೂವು ಹಿಡಿದು ಮಾರುದ್ದ ಡೈಲಾಗ್ ಬಿಟ್ಟು ಅಮೃತಾ ಅಯ್ಯಂಗಾರ್ ಪ್ರಪೋಸ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜೀ ಕನ್ನಡದ ಹೊಸ ಶೋ 'ಗೋಲ್ಡನ್ ಗ್ಯಾಂಗ್' ವೇದಿಕೆ ಮೇಲೆ ಧನಂಜಯ್ ನಟಿ ಅಮೃತಾ ಅಯ್ಯಂಗಾರ್ಗೆ ಗುಲಾಬಿ ಕೊಟ್ಟು ಪ್ರಪೋಸ್ ಮಾಡಿದ್ದಾರೆ. ಆದರೆ ರಿಯಲ್ ಲೈಫ್ನಲ್ಲಿ ಡಾಲಿ ಅಮೃತಾ ಅವರಿಗೆ ಪ್ರಪೋಸ್ ಮಾಡಿಲ್ಲ.ಆದರೆ, ಅವರ ಅಭಿಮಾನಿಗಳು ಇದು ನಿಜವಾದರೆ ನಮಗೆ ತುಂಬಾ ಖುಷಿಯಾಗುತ್ತೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಅಮ್ಮನ ನೆನಪಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ ಜೋಗಿ ಪ್ರೇಮ್, ಇದಕ್ಕಿಂತ ಒಳ್ಳೆ ಕೆಲ್ಸ ಬೇರೊಂದಿಲ್ಲ!
ಮಿಸ್ ಮಾಡದೇ ಡಾಲಿ ಎಪಿಸೋಡ್ ನೋಡಿ!
'ಗೋಲ್ಡನ್ ಗ್ಯಾಂಗ್' ವೇದಿಕೆಯಲ್ಲಿ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಇವರೊಂದಿಗೆ ನಟ ವಸಿಷ್ಠ ಸಿಂಹ ಸೇರಿದಂತೆ ಧನಂಜಯ್ ಗೆಳೆಯರ ಗ್ಯಾಂಗ್ ಬಂದಿದೆ. ಈ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಈ ವಾರಾಂತ್ಯದಲ್ಲಿ ಪ್ರಸಾರ ಆಗಲಿದೆ. ಇದೇ ಕಾರ್ಯಕ್ರಮದಲ್ಲೇ ಡಾಲಿ ಅವರ ಇಂಟ್ರೆಸ್ಟಿಂಗ್ ವಿಚಾರಗಳನ್ನು ತೆರೆದಿಡಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಇನ್ನೂ ವೋಟ್ನಲ್ಲಿ ಬಡವ ರಾಸ್ಕಲ್ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಮಧ್ಯಮವರ್ಗದ ಕುಟುಂಬದ ಕಥೆಯಾಗಿರುವುದರಿಂದ ಬಡವ ರಾಸ್ಕಲ್ ಸಿನಿಮಾ ಜನರ ಮನ ಗೆದ್ದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ