ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ ಅಭಿನಯದ ಜಮಾಲಿಗುಡ್ಡ ಸಿನಿಮಾ ವಿಶೇಷವಾಗಿದೆ. ಸಿನಿಮಾದಲ್ಲಿ ಕಲಾತ್ಮಕ ಕಥೆಯ ಶಕ್ತಿ ಇದೆ. ಕಮರ್ಷಿಯಲ್ (Jamaligudda Film Review) ಸ್ಪರ್ಶವೂ ಇದೆ. ಎರಡೂ ಇರೋದ್ರಿಂದಲೇ ಇದನ್ನ ನಾವು ಬ್ರಿಡ್ಜ್ ಸಿನಿಮಾ ಅಂತಲೇ ಹೇಳಬಹುದು. ಅಂತಹ ಈ ಚಿತ್ರ ಎಲ್ಲರ ಹೃದಯ ತಟ್ಟುವ ಹಾಗೇನೆ ಇದೆ. ನಿರ್ದೇಶಕ (Jamaligudda Film Director Kushal Gowda) ಕುಶಾಲ್ ಗೌಡ ಈ ಚಿತ್ರವನ್ನ ತುಂಬಾ ನೀಟ್ ಆಗಿಯೇ ತೆಗೆದಿದ್ದಾರೆ. ಎಲ್ಲೂ ಈ ಚಿತ್ರದಲ್ಲಿ ಜರ್ಕ್ ಫೀಲ್ ಆಗೋದೇ ಇಲ್ಲ. ಅಷ್ಟು ವಿಶೇಷವಾಗಿಯೇ (Jamaligudda Daali Dhananjaya Acted Cinema) ಇಡೀ ಚಿತ್ರ ನಿಮ್ಮನ್ನ ಜಮಾಲಿಗುಡ್ಡಕ್ಕೆ ಕರೆದುಕೊಂಡು ಹೋಗುತ್ತದೆ.
ಚಿತ್ರದಲ್ಲಿ ಬರುವ ಪಾತ್ರ ಮತ್ತು ದೃಶ್ಯ ಎರಡಕ್ಕೂ ಇಲ್ಲಿ ಲಾಜಿಕ್ ಇದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತಕ್ಕೂ ವಿಶೇಷವಾದ ಸೆಳೆತವೂ ಇದೆ.
ಜಮಾಲಿಗುಡ್ಡ ನಿಮ್ಮ ಹೃದಯವನ್ನ ಕದಿಯೋದು ಗ್ಯಾರಂಟಿ
ಜಮಾಲಿಗುಡ್ಡ ಕನ್ನಡದ ಮತ್ತೊಂದು ನೀಟ್ ಸಿನಿಮಾ. ಈ ಸಿನಿಮಾದಲ್ಲಿ ಒಳ್ಳೆ ಕಥೆ ಇದೆ. ಅದನ್ನ ಹೇಳಿದ ರೀತಿ ಕೂಡ ಎಲ್ಲರಿಗೂ ಇಷ್ಟ ಆಗುತ್ತದೆ. ನಿರ್ದೇಶಕರು ತುಂಬಾ ಚೆನ್ನಾಗಿಯೇ ಚಿತ್ರವನ್ನ ತೆಗೆದಿದ್ದಾರೆ. ಎಲ್ಲೂ ಈ ಚಿತ್ರದಲ್ಲಿ ಅಬ್ಬರ ಇಲ್ಲ.
ಜಮಾಲಿಗುಡ್ಡ ಸಿನಿಮಾದಲ್ಲಿ ಇರೋ ಕಥೆ ಸ್ಪೆಷಲ್ ಆಗಿದೆ ಅಂತ ಹೇಳೋದು ಕಷ್ಟ. ಪೊಲೀಸ್ ಆಫೀಸರ್ ಹತ್ತಿರ ಕುಳಿತು ಯಾವುದಾದರೂ ಒಂದು ಕಥೆ ಕೇಳಿದ್ರೆ, ಏನ್ ಫೀಲ್ ಆಗುತ್ತದೆಯೋ ಅದೇ ಫೀಲ್ ಈ ಚಿತ್ರ ನೋಡಿದಾಗ ಆಗುತ್ತದೆ. ಆ ರೀತಿನೇ ಇದೊಂದು ಕೇಸ್ ಸ್ಟಡಿ ಇರೋ ಕಥೆ ಅಂತಲೇ ಹೇಳಬಹುದು.
ಜಮಾಲಿಗುಡ್ಡದಲ್ಲಿ ಕೃಷ್ಣ ಕಾಡ್ತಾರೆ ರುಕ್ಮಿಣಿ ಮನದಲ್ಲಿ ಉಳಿತಾರೆ
ಡಾಲಿ ಧನಂಜಯ್ ನಿಮಗೆ ಇಲ್ಲಿ ಬಹಳ ಇಷ್ಟ ಆಗುತ್ತಾರೆ. ಕೃಷ್ಣ ಅನ್ನೋ ಅಮಾಯಕ ಪ್ರೇಮಿಯಾಗಿ ನಿಮ್ಮನ್ನ ಕಾಡುತ್ತಲೇ ಹೋಗ್ತಾರೆ. ಕಡೆಯಲ್ಲಿ ಕೂಡ ಈ ಕೃಷ್ಣ ನಿಮ್ಮ ಎದೆಯಲ್ಲಿ ಸಣ್ಣದೊಂದು ಬೇಸರ ಮತ್ತು ನೋವು ಎರಡನ್ನೂ ಬಿಟ್ಟು ಹೋಗ್ತಾನೆ.
ಕೃಷ್ಣನ ಪ್ರೀತಿಸೋ ರುಕ್ಮಿಣಿ ಪ್ರೀತಿ ಅಮರ ಅನ್ನೋದನ್ನ ಸಾರಿ ಸಾರಿ ಹೇಳ್ತಾನೆ. ಜಮಾಲಿಗುಡ್ಡ ಚಿತ್ರದಲ್ಲಿ ಪ್ರೀತಿ-ಪ್ರೇಮದ ಜೊತೆಗೆ ಕಾಡುವ ಪಾತ್ರಗಳೂ ಒಂದಷ್ಟಿವೆ. ಅವುಗಳ ಬಗ್ಗೆ ಹೇಳ್ತಾ ಹೋದ್ರೆ, ಬದುಕಿದ ಅಸಲಿ ಪಾತ್ರಗಳೇ ಕಣ್ಮುಂದೆ ಬಂದಂತೆ ಕಾಣುತ್ತವೆ.
ಮಸಾಜ್ ಪಾರ್ಲರ್ ಪಾಯಲ್-ನಿಷ್ಠಾವಂತ ಪೊಲೀಸ್!
ಜಮಾಲಿಗುಡ್ಡ ಚಿತ್ರದಲ್ಲಿ ಪಾಯಲ್ ಪಾತ್ರದ ಮೂಲಕ ಭಾವನಾ ರಾಮಣ್ಣ ನಿಮ್ಮಲ್ಲಿ ಮಸಾಜ್ ಪಾರ್ಲರ್ ಓನರ್ ಆಗಿಯೇ ಕಣ್ಮುಂದೆ ಬರ್ತಾರೆ. ಪ್ರಾಮಾಣಿಕ ಪೊಲೀಸ್ ಆಫೀಸರ್ ಆಗಿ ಪ್ರಕಾಶ್ ಬೆಳವಾಡಿ ಕಾಣಿಸಿಕೊಳ್ಳುತ್ತಾರೆ.
ಇವರಲ್ಲದೆ ಬಾರ್ ನಲ್ಲಿ ಕೆಲಸ ಮಾಡೋ ಕಾಮಿಡಿ ಕಿಲಾಡಿ ಸಂತೋಷ್, ಸ್ಪಾದಲ್ಲಿ ಕೆಲಸ ಮಾಡುವ ನಾಯಕಿ ರುಕ್ಮಿಣಿ ಇವರೆಲ್ಲ ನೈಜ ಪಾತ್ರಗಳಿಗೆ ಜೀವ ತುಂಬಿದಂತೆ ಕಾಣಿಸಿ ಬಿಡ್ತಾರೆ.
ಚಿತ್ರದಲ್ಲಿ ಹೀರೋಸಿಮಾ ನಾಗಾಸಾಕಿ ಕಥೆ ಇಲ್ವೇ?
ಜಮಾಲಿಗುಡ್ಡ ಚಿತ್ರದಲ್ಲಿ ಹೀರೋಸಿಮಾ ಮತ್ತು ನಾಗಾಸಾಕಿ ಹೆಸರಿನ ಎರಡು ಪಾತ್ರಗಳು ಇವೆ. ಇವುಗಳಲ್ಲಿ ಹೀರೋಸಿಮಾ ಆಗಿ ಡಾಲಿ ಧನಂಜಯ್ ಮತ್ತು ನಾಗಾಸಾಕಿ ಆಗಿ ಯಶ್ ಶೆಟ್ಟಿ ಅಭಿನಯಿಸಿದ್ದಾರೆ. ಆದರೆ, ಇವು ಈ ಚಿತ್ರದಲ್ಲಿ ಇವರ ನಿಜವಾದ ಹೆಸರು ಅಲ್ವೇ ಅಲ್ಲ. ಇವರ ಸ್ನೇಹಕ್ಕೆ ಜೈಲರ್ ಇಡೋ ಹೆಸರುಗಳೇ ಆಗಿವೆ.
ಇದನ್ನೂ ಓದಿ: Olavina Nildana: ಸಿದ್ದು-ತಾರಿಣಿ ಸಮಸ್ಯೆ ಬಗೆಹರಿಯುತ್ತಾ, ಇಬ್ಬರು ಮತ್ತೆ ತಮ್ಮ ಪ್ರೀತಿ ಹೇಳಿಕೊಳ್ತಾರಾ?
ಚಿಕ್ಕಿ ಪಾತ್ರಧಾರಿ ಬಾಲ ನಟಿ ಪ್ರಾಣ್ಯ ರಾವ್, ಕೃಷ್ಣನ ಬಂಗಾರಿ ಆಗಿ ನಿಮ್ಮನೆ ಹುಡುಗಿ ರೀತಿನೇ ಕಾಣಿಸುತ್ತಾಳೆ. ಈ ಚಿತ್ರದಲ್ಲಿ ಹಾಡುಗಳು ತುಂಬಾ ಚೆನ್ನಾಗಿಯೇ ಇವೆ. ಅರ್ಜುನ್ ಜನ್ಯ ಹಾಡಿನಲ್ಲಿ ಸ್ಕೋರ್ ಮಾಡಿದ್ರೆ, ಅನೂಪ್ ಸಿಳೀನ್ ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಮ್ಯಾಜಿಕ್ ಮಾಡಿದ್ದಾರೆ.
ಒಟ್ಟಾರೆ, ಜಮಾಲಿಗುಡ್ಡ ಸಿನಿಮಾ ಕನ್ನಡದಲ್ಲಿ ಬಂದ ಇಲ್ಲಿವರೆಗಿನ ಸಿನಿಮಾದಲ್ಲಿ ವಿಶೇಷವಾಗಿಯೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ