Hoysala Film Review: ಹೊಯ್ಸಳ ಎಲ್ಲಾ ಪೊಲೀಸ್ ಸಿನಿಮಾ ಥರ ಅಲ್ಲ, ಮ್ಯಾಟರ್ ಬೇರೇನೇ ಇದೆ!

ಹೊಯ್ಸಳ ಎಲ್ಲ ಪೊಲೀಸ್ ಸಿನಿಮಾ ಥರ ಅಲ್ಲ!

ಹೊಯ್ಸಳ ಎಲ್ಲ ಪೊಲೀಸ್ ಸಿನಿಮಾ ಥರ ಅಲ್ಲ!

ಡಾಲಿ ಧನಂಜಯ್ ಅಭಿನಯದ ಗುರುದೇವ್ ಹೊಯ್ಸಳ ಸಿನಿಮಾ ಹೇಗಿದೆ? ಜನ ಈ ಚಿತ್ರವನ್ನ ಯಾಕೆ ನೋಡಬೇಕು? ಇದರಲ್ಲಿ ಏನು ವಿಶೇಷವಾಗಿದೆ? ಬೆಳಗಾವಿ ಗಡಿ ಹೋರಾಟದ ಕಥೆಯಂತೆ ಹೌದಾ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದ ಈ ವಿಶ್ಲೇಷನೆ ಓದಿ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:
  • published by :

ಗುರುದೇವ್ ಹೊಯ್ಸಳ ಸಿನಿಮಾ ಎಲ್ಲ ಪೊಲೀಸ್ (Hoysala Movie Updates) ಸಿನಿಮಾ ರೀತಿ ಇಲ್ಲ. ಇದು ಬೇರೆ ರೀತಿನೇ ಇದೆ. ಇಲ್ಲೂ ಎಲ್ಲೂ ಪೊಲೀಸರನ್ನ ಹೊಗಳುವ ಡೈಲಾಗಳೂ ಇಲ್ಲ. ಇದ್ರೂ ಅದು ಅವಶ್ಯಕವಾಗಿಯೇ ಇವೆ. ಎಲ್ಲೂ ಹೆಚ್ಚುಗಾರಿಕೆ ಅನಿಸೋದಿಲ್ಲ. ಪೊಲೀಸರ ಸ್ಥಿತಿಗತಿ ಹೇಳುವುದರ ಜೊತೆಗೆ ಅಸಲಿ (Hoysala Film Review) ಮ್ಯಾಟರ್ ಕೂಡ ಇಲ್ಲಿದೆ. ನೈಜ ಘಟನೆಗಳನ್ನ ಆಧರಿಸಿಯೇ ಚಿತ್ರದ ಕಥೆ ರೆಡಿ ಆಗಿದೆ. ಹಾಗಂತ ಇದು ಕಲಾತ್ಮಕ ಚಿತ್ರ ಅಲ್ವೇ ಅಲ್ಲ ಅಂತ ಈಗಾಗಲೇ ಟ್ರೈಲರ್‌ಗಳೂ ಹೇಳಿವೆ. ಬೆಳಗಾವಿಯಲ್ಲಿ (Kannada Movie Review) ಇಡೀ ಚಿತ್ರ ಚಿತ್ರೀಕರಣ ಆಗಿರೋದ್ರಿಂದ ಇದನ್ನ ಗಡಿನಾಡ ಹೋರಾಟದ ಸಿನಿಮಾ ಅಂದ್ರೆ ತಪ್ಪಾಗುತ್ತದೆ. ಇಲ್ಲಿರೋದು ಬೇರೆ. (Sandalwood Hoysala Movie) ಅದರ ಸುತ್ತ ವಿಶ್ಲೇಷಣೆ ಇಲ್ಲಿದೆ ಓದಿ.


ಗುರುದೇವ್ ಹೊಯ್ಸಳನಿಗೆ ಭಯದ ಪರಿಚಯವೇ ಇಲ್ಲ ನೋಡಿ


ಗುರುದೇವ್ ಹೊಯ್ಸಳ ಒಬ್ಬ ಆಫೀಸರ್. ಈ ಆಫೀಸರ್‌ಗೆ ಭಯ ಅನ್ನೋದು ಗೊತ್ತಿಲ್ಲ. ನೋ ಫೀಯರ್ ಒನ್ಲಿ ಫಯರ್ ಅಂತೀವಲ್ಲ, ಆ ರೀತಿಯ ಕ್ಯಾರೆಕ್ಟರ್‌ನ ಡೇರ್ ಡೆವಿಲ್ ಪೊಲೀಸ್ ಆಫೀಸರ್ ಗುರುದೇವ್ ಹೊಯ್ಸಳ ಅನ್ನೋದು ಮೊದಲ ದೃಶ್ಯದಲ್ಲಿಯೇ ಗೊತ್ತಾಗಿ ಬಿಡುತ್ತದೆ.


Daali Dhananajaya Acted Hoysala Movie Review Story
ಗುರುದೇವ್ ಹೊಯ್ಸಳ ಚಿತ್ರದ ವಿಲನ್ ಟೆರಿಫಿಕ್


ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕನ ಅಬ್ಬರದ ಇಂಟ್ರಡಕ್ಷನ್ ಸೀನ್ ಇರುತ್ತದೆ. ಇಲ್ಲಿ ಅಂತಹ ಸೀನ್‌ಗಳೇನೂ ಇಲ್ಲ. ಕರ್ತವ್ಯ ನಿರತ ಪೊಲೀಸ್ ಆಫೀಸರ್ ಇಲ್ಲಿ ಕುದುರೆ ಏರಿ ಗಲಾಟೆ ಆಗೋ ಜಾಗಕ್ಕೆ ಬಂದು ಅದನ್ನ ತಹಬದಿಗೆ ತರುತ್ತಾರೆ. ಅಷ್ಟೇ ಇದುವೇ ನಾಯಕನ ಪರಿಚಯದ ಕಥೆ.
ಹೊಯ್ಸಳ ಚಿತ್ರದಲ್ಲಿ ಕಥೆ ಇದೆ-ಪೊಲೀಸರ ಕಷ್ಟ-ನಷ್ಟಗಳೂ ಇವೆ!


ನಾಯಕಿಯ ವಿಚಾರದಲ್ಲೂ ಅಷ್ಟೇನೆ. ಬೇರೆ ಎಕ್ಸ್ಟ್ರಾ ಕಲರ್ ಏನೂ ಇಲ್ಲ. ಆದರೆ ಕಥೆಯಲ್ಲಿ ನೈಜತೆಯ ಗಟ್ಟಿತನ ಇದೆ. ನಾಯಕನ ಮಾತಿನಲ್ಲಿ ಗತ್ತಿದೆ. ಆ್ಯಕ್ಷನ್ ಇದೆ. ರಿಯಾಕ್ಷನ್ ಕೊಟ್ಟವರಿಗೂ ಸರಿಯಾಗೆ ಏಟು ಕೊಡುವ ಥ್ರಿಲ್ಲಿಂಗ್ ಫೈಟ್ಸ್ ಕೂಡ ಇಲ್ಲಿವೆ.


ಆ್ಯಕ್ಷನ್ ಇಷ್ಟಪಡೋರಿಗೆ ಗುರುದೇವ್ ಹೊಯ್ಸಳ ಸಂತೃಪ್ತಗೊಳಿಸುತ್ತಾರೆ. ಸಂಗೀತ ಪ್ರಿಯರಿಗೆ ಅಜನೀಶ್ ಲೋಕನಾಥ್ ಸಂಗೀತ ಎಲ್ಲಿ ಬೇಕೋ ಅಲ್ಲಿ ಅವಶ್ಯಕವಾಗಿಯೇ ಇದೆ. ಇದರ ಹೊರತಾಗಿ ಖಡಕ್ ಡೈಲಾಗ್ ಇಷ್ಟಪಡೋರಿಗೆ ಇಲ್ಲಿ ಮಾಸ್ತಿ ಅತಿ ಹೆಚ್ಚು ಮೆಚ್ಚುಗೆ ಪಡೆಯುತ್ತಾರೆ. ಫಾರ್ ಎಕ್ಸಾಂಪಲ್ ಇಲ್ಲಿವೆ ಓದಿ.


ಜಾತಿ ಜಾತಿ ಅಂತೀ ಅಲ್ಲ. ತಗೋ ಈಗ ನಿನ್ನ ಮಗನ ಸಾವಿಗೆ ಇಲ್ಲಿ ಯಾರೂ ಜಾತಿ ಸರ್ಟಿಪಿಕೆಟ್ ಕೊಡೋದಿಲ್ಲ. ಡೆತ್ ಸರ್ಟಿಪಿಕೆಟ್ ಕೊಡ್ತಾರೆ.


ನಾನು ಪೊಲೀಸ್ ಆಫೀಸರ್. ಆದರೆ ನನ್ನೊಳಗ ಒಬ್ಬ ವಿಲನ್ ಅದಾನ, ನೋಡ್ತಿಯನ.


ಡೈಲಾಗ್ ರೈಟರ್ ಮಾಸ್ತಿ ಮಾತು ಅದ್ಭುತ ಎಷ್ಟು ಬೇಕೋ ಅಷ್ಟು ಸೀಮಿತ


ಹೀಗೆ ಡೈಲಾಗ್ ರೈಟರ್ ಮಾಸ್ತಿ ಇಲ್ಲಿ ಸ್ಕೋರ್ ಮಾಡಿದ್ದಾರೆ. ಅವುಗಳನ್ನ ಹೇಳಿರೋ ಡಾಲಿ ಧನಂಜಯ್ ಆಗಿರಬಹುದು. ನಟ ನವೀನ್ ಶಂಕರ್ ಇರಬಹುದು. ಎಲ್ಲರೂ ಗಮನ ಸೆಳೆಯುತ್ತಾರೆ.


ಹೊಯ್ಸಳ ಸಿನಿಮಾ ಎಲ್ಲ ವಿಷಯದ ಒಂದು ಅದ್ಭುತ ಸಿನಿಮಾ ಅಂತಲೇ ಹೇಳಬಹುದು. ಜಾತಿ ಜಾತಿ ಅನ್ನೋ ಮಂದಿಗೆ ಏಟು ಕೊಟ್ಟ ರೀತಿನೇ ಇಲ್ಲಿ ಒಂದು ಕಥೆ ಇದೆ. ಮರಳು ಮಾಫಿಯಾ ಕುರಿತು ಇಲ್ಲೂ ಬೆಳಕು ಚೆಲ್ಲುವ ಕೆಲಸ ಆಗಿದೆ.


ಗುರುದೇವ್ ಹೊಯ್ಸಳ ಖಡಕ್ ಪೊಲೀಸ್ ಆಫೀಸರ್


ಒಬ್ಬ ಪೊಲೀಸ್ ಆಫೀಸರ್ ಒಳ್ಳೆಯವನಾಗಿದ್ದರೇ ಹೇಗಿರ್ತಾನೆ ಅನ್ನೋದಕ್ಕೆ ಡಾಲಿ ಧನಂಜಯ್ ಪಾತ್ರ ಸೂಕ್ತವಾಗಿಯೇ ಇದೆ. ಅತ್ಯಂತ ಕೆಟ್ಟ ಮತ್ತು ಭ್ರಷ್ಟ ಪೊಲೀಸ್ ಕೂಡ ಇರ್ತಾರೆ ಅನ್ನೋದಕ್ಕೆ ಅಚ್ಯುತ್ ಕುಮಾರ್ ಪಾತ್ರ ಇಲ್ಲಿ ಕನ್ನಡಿಯಂತೆ ಕಾಣಿಸುತ್ತದೆ.


ಎಲ್ಲರ ವಿಷಯವನ್ನ ಒಂದೇ ಚಿತ್ರದಲ್ಲಿ ಬೆಳಗಾವಿಯ ಜಿಲ್ಲೆಯಲ್ಲಿ ನಿಂತು ಹೇಳಿದಂತೆ ಇದೆ. ಇದರಲ್ಲಿ ಬರೋ ಪಾತ್ರಗಳಲ್ಲಿ ನವೀನ್ ಶಂಕರ್ ಪಾತ್ರ ಅದ್ಭುತವಗಿಯೇ ಇದೆ. ಪಾತ್ರಕ್ಕೆ ನೆಗೆಟೀವ್ ಶೇಡ್ ಇದ್ದರೂ, ಒಬ್ಬ ಕಲಾವಿದನಾಗಿ ನವೀನ್ ಶಂಕರ್ ಸ್ಕೋರ್ ಮಾಡಿದ್ದಾರೆ.


Daali Dhananajaya Acted Hoysala Movie Review Story
ಗುರುದೇವ್ ಹೊಯ್ಸಳನಿಗೆ ಭಯದ ಪರಿಚಯವೇ ಇಲ್ಲ ನೋಡಿ


ಗುರುದೇವ್ ಹೊಯ್ಸಳ ಚಿತ್ರದ ವಿಲನ್ ಟೆರಿಫಿಕ್


ಕೆಜಿಎಫ್ ಚಿತ್ರದ ಖ್ಯಾತಿಯ ಅವಿನಾಶ್ ಇಡೀ ಚಿತ್ರದಲ್ಲಿ ಟೆರಿಫಿಕ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಪ್ರತಾಪ್ ನಾರಾಯಣ್ ಇಲ್ಲಿ ವಿಲನ್ ಪಾತ್ರದ ಮೂಲಕ ಸೆಟಲ್‌ ಆಗಿಯೇ ಅಬ್ಬರಿಸಿದ್ದಾರೆ. ಗುರುದೇವ್ ಹೊಯ್ಸಳನ ಪತ್ನಿಯಾಗಿ ಅಮೃತಾ ಅಯ್ಯಾಂಗಾರ್ ಕಂಗೊಳಿಸಿದ್ದಾರೆ.


ಇದನ್ನೂ ಓದಿ: Gurudev Hoysala Review: ಡಾಲಿ ನಟರಾಕ್ಷಸನಾದ್ರೆ, ನವೀನ್ ಶಂಕರ್ 'ಬಲಿ' ರಾಕ್ಷಸ! ಹೊಯ್ಸಳದಲ್ಲಿ ಅಬ್ಬರಿಸಿದ ಗುಳ್ಟು ಹೀರೋ!


ಇನ್ನುಳಿದಂತೆ ಗುರುದೇವ್ ಹೊಯ್ಸಳ ಸಿನಿಮಾದಲ್ಲಿ ಸಾಕಷ್ಟು ವಿಷಯಗಳಿವೆ. ಅವುಗಳನ್ನ ತೆರೆ ಮೇಲೆ ನೋಡಿದಾಗಲೇ ಸಿಗೋ ಮಜಾನೇ ಬೇರೆ ಇದೆ. ಅದನ್ನ ಎಂಜಾಯ್ ಮಾಡಬಯಿಸೋರು ತೆರೆ ಮೇಲೆ ಸಿನಿಮಾ ನೋಡಬಹುದು.

top videos
    First published: