• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Hoysala Movie: ಖಳನಾಯಕನ ಸಖತ್ ಇಂಟ್ರಡಕ್ಷನ್‌ ಫೈಟ್; ಹೊಯ್ಸಳ ಚಿತ್ರದ ವಿಲನ್ ಬಾಲಿ ನ್ಯೂಸ್‌-18 ಡಿಜಿಟಲ್‌ಗೆ ಹೇಳಿದ್ದೇನು?

Hoysala Movie: ಖಳನಾಯಕನ ಸಖತ್ ಇಂಟ್ರಡಕ್ಷನ್‌ ಫೈಟ್; ಹೊಯ್ಸಳ ಚಿತ್ರದ ವಿಲನ್ ಬಾಲಿ ನ್ಯೂಸ್‌-18 ಡಿಜಿಟಲ್‌ಗೆ ಹೇಳಿದ್ದೇನು?

ಮೊದಲ ಬಾರಿಗೆ ವಿಲನ್ ಪಾತ್ರ ಮಾಡಿರೋ ನವೀನ್ ಶಂಕರ್

ಮೊದಲ ಬಾರಿಗೆ ವಿಲನ್ ಪಾತ್ರ ಮಾಡಿರೋ ನವೀನ್ ಶಂಕರ್

ಗುಳ್ಟು ಚಿತ್ರ ಖ್ಯಾತಿಯ ನಟ ನವೀನ್ ಶಂಕರ್ ವಿಶೇಷವಾಗಿಯೇ ತಮ್ಮ ಈ ಚಿತ್ರದ ಪಾತ್ರ ಸೇರಿದಂತೆ ಇತರ ವಿಚಾರಗಳನ್ನ ನ್ಯೂಸ್‌-18 ಕನ್ನಡ ಡಿಜಿಟಲ್‌ ಜೊತೆಗೆ ಹಂಚಿಕೊಂಡಿದ್ದಾರೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಕನ್ನಡದ ಯವ ನಟ ನವೀನ್ ಶಂಕರ್ ಒಳ್ಳೆ (Naveen Shankar Interview) ಚಿತ್ರಗಳನ್ನೆ ಮಾಡಿದ್ದಾರೆ. ಆರಂಭದ ದಿನಗಳಲ್ಲಿ ಸಿನಿಮಾ ವರದಿಗಾರಿಕೆ ಮಾಡಿದ ಅನುಭವ ಕೂಡ ಇದೆ. ಆದರೆ, ಉತ್ತರ ಕರ್ನಾಟಕದ ಈ ಪ್ರತಿಭೆಯ (Baali Character Naveen Shankar) ಚಿತ್ರ ಜೀವನ ಶೃತಿ ಹಿಡಿದಿದ್ದು ಮಾತ್ರ ಗುಳ್ಟು ಅನ್ನೋ ಚಿತ್ರದ ಮೂಲಕವೇ ಅನ್ನೋದು ಎಲ್ಲರಿಗು ಗೊತ್ತಿದೆ. ನವೀನ್ ಶಂಕರ್ ಒಪ್ಪಿಕೊಂಡ ಚಿತ್ರಗಳು ಕಂಟೆಂಟ್ ಬೇಸ್ ಸಿನಿಮಾಗಳೇ ಆಗಿವೆ. ಮೊನ್ನೆ ಮೊನ್ನೆ ಬಂದ ಧರಣಿ ಮಂಡಲ ಮಧ್ಯೆದೊಳಗೆ ಸಿನಿಮಾ ತುಂಬಾ (Baali Naveen Latest Talk) ಚೆನ್ನಾಗಿತ್ತು. ಒಳ್ಳೆ ವಿಷಯವನ್ನೆ ಈ ಚಿತ್ರ ಹೊಂದಿತ್ತು. ಇಲ್ಲಿ ನವೀನ್ ಶಂಕರ್ ತುಂಬಾ ಚೆನ್ನಾಗಿ ಅಭಿನಯಸಿದ್ದರು. ಮಲ್ಟಿಸಾರರ್ ಸಿನಿಮಾ ಹೊಂದಿಸಿ ಬರೆಯಿರಿ ಕೂಡ ಅತ್ಯುತ್ತಮ ಚಿತ್ರವೇ ಆಗಿತ್ತು.


ಒಳ್ಳೆ ಪ್ರಚಾರದೊಂದಿಗೆ ಚಿತ್ರ ಜನರನ್ನ ರೀಚ್ ಆಗೋವಲ್ಲಿ ಸಕ್ಸಸ್ ಆಗಿದೆ. ಇದೇ ಚಿತ್ರದ ನಾಯಕರಲ್ಲಿ (Naveen Shankar Movie Updates) ಒಬ್ಬರಾದ ನವೀನ್ ಶಂಕರ್ ಮೊಟ್ಟ ಮೊದಲ ಬಾರಿಗೆ ನೆಗೆಟೀವ್ ರೋಲ್ ಮಾಡಿದ್ದಾರೆ. ಆ ಚಿತ್ರದ ಹೆಸರು ಗುರುದೇವ್ ಹೊಯ್ಸಳ ಅನ್ನೋದೇ ವಿಶೇಷ.


Daali Dhanajay Acted Hoysala Movie Villain Naveen Shankar Special Interview
ಬಾಲಿ ಪಾತ್ರಕ್ಕಾಗಿ 40 ದಿನದಲ್ಲಿ 14 ಕೆಜಿ ತೂಕ ಹೆಚ್ಚಿಸಿದ ನವೀನ್


ನ್ಯೂಸ್‌18 ಕನ್ನಡ ಡಿಜಿಟಲ್‌ ಜತೆ ಬಾಲಿ ಪಾತ್ರದ ಸುತ್ತ ನವೀನ್ ಮಾತು


ಗುಳ್ಟು ಚಿತ್ರ ಖ್ಯಾತಿಯ ನಟ ನವೀನ್ ಶಂಕರ್ ವಿಶೇಷವಾಗಿಯೇ ತಮ್ಮ ಈ ಚಿತ್ರದ ಪಾತ್ರ ಸೇರಿದಂತೆ ಇತರ ವಿಚಾರಗಳನ್ನ ನ್ಯೂಸ್‌-18 ಕನ್ನಡ ಡಿಜಿಟಲ್‌ ಜೊತೆಗೆ ಹಂಚಿಕೊಂಡಿದ್ದಾರೆ.
ತಮ್ಮನ್ನ ಹುಡುಕಿಕೊಂಡು ಬಂದ ಪಾತ್ರವನ್ನ ನವೀನ್ ಶಂಕರ್ ಒಲ್ಲೆ ಅಂತ ಹೇಳಲಿಲ್ಲ. ಡಾಲಿ ಧನಂಜಯ್ ಸಲಹೆಯಂತೆ ಈ ಒಂದು ಪಾತ್ರವನ್ನ ನವೀನ್ ಶಂಕರ್ ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ಒಳ್ಳೆ ಸ್ಕೋಪ್ ಇರೋ ಪಾತ್ರ ಇದಾಗಿದೆ. ಅದೆಷ್ಟು ಸ್ಕೋಪ್ ಇದೆ ಅಂದ್ರೆ ಈ ಒಂದು ಪಾತ್ರಕ್ಕಾಗಿಯೇ ಇಂಟ್ರಡಕ್ಷನ್ ಆ್ಯಕ್ಷನ್ ಸೀನ್ ಕೂಡ ಇದೆ ನೋಡಿ.


ಮೊಟ್ಟ ಮೊದಲ ಬಾರಿಗೆ ವಿಲನ್ ಪಾತ್ರ ಮಾಡಿರೋ ನವೀನ್ ಶಂಕರ್


ನವೀನ್ ಶಂಕರ್ ಅವರಿಗೆ ವಿಲನ್ ಪಾತ್ರ ಮೊದಲು ಅನ್ನೋದು ಅಷ್ಟೇ ಸತ್ಯ. ಈ ಹಿಂದೆ ನವೀನ್ ಒಳ್ಳೆ ಪಾತ್ರಗಳನ್ನೆ ಮಾಡಿದ್ದಾರೆ. ಸೈಲೆಂಟ್ ಸೆಟಲ್ ಪಾತ್ರಗಳಿಗೆ ನವೀನ್ ಶಂಕರ್ ತುಂಬಾ ಸೂಕ್ತ ಅನಿಸೋ ಹಾಗೇನೆ ಇದ್ದಾರೆ. ಇವರ ಪಾತ್ರಗಳ ಪರಿಚಯಕ್ಕೆ ಧರಣಿ ಮಂಡಲ ಮಧ್ಯೆದೊಳಗೆ ಚಿತ್ರವೇ ಸಾಕ್ಷಿ ಆಗಿದೆ.


ಗುರುದೇವ್ ಹೊಯ್ಸಳ ಚಿತ್ರದಲ್ಲಿ ನಟ ನವೀನ್ ಶಂಕರ್, ಬಾಲಿ ಹೆಸರಿನ ಪಾತ್ರವನ್ನ ನಿರ್ವಹಿಸಿದ್ದಾರೆ. ಈ ಪಾತ್ರಕ್ಕಾಗಿ ನವೀನ್ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ. ಆದರೆ ಈ ಒಂದು ತಯಾರಿ ಮಾತ್ರ ಅಷ್ಟು ಸಲಭವೂ ಆಗಿರಲಿಲ್ಲ ಬಿಡಿ.


ಬಾಲಿ ಪಾತ್ರಕ್ಕಾಗಿ 40 ದಿನದಲ್ಲಿ 14 ಕೆಜಿ ತೂಕ ಹೆಚ್ಚಿಸಿದ ನವೀನ್


ಬಾಲಿ ಪಾತ್ರಕ್ಕೆ ನವೀನ್ ಶಂಕರ್ ದೇಹದ ತೂಕವನ್ನ ಹೆಚ್ಚಿಸಿಕೊಳ್ಳಲೇಬೇಕಿತ್ತು. ಈ ಒಂದು ಗುರಿಯನ್ನ ತಲುಪಲು ಕೇವಲ 40 ದಿನಗಳು ಮಾತ್ರ ಇದ್ದವು. ಅದಕ್ಕೇನೆ ನವೀನ್ ಶಂಕರ್ ಪ್ರತಿ ದಿನ ಚೆನ್ನಾಗಿ ತಿನ್ನೋ ಕೆಲಸ ಮಾಡಿದ್ದಾರೆ. ಬಿಟ್ಟು ಬಿಡದೇನೆ ಒಳ್ಳೆ ವರ್ಕೌಟ್ ಕೂಡ ಮಾಡಿದ್ದಾರೆ.


ಹೀಗೆ ಪ್ರತಿ ದಿನದಂತೆ 40 ದಿನ ನವೀನ್ ಶಂಕರ್ ತಿನ್ನೋದು ವರ್ಕೌಟ್ ಮಾಡೋದನ್ನ ಮಾತ್ರ ಮಾಡಿದ್ದಾರೆ. ಅದರ ಫಲ ಅತಿ ಕಡಿಮೆ ಸಮಯದಲ್ಲಿ ನವೀನ್ ಶಂಕರ್ 14 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಹಾಗೆ ದೇಹದ ತೂಕ ಹೆಚ್ಚಿಸಿಕೊಂಡು ದೇಹವನ್ನ ಗಟ್ಟಿಮುಟ್ಟು ಮಾಡಿಕೊಂಡೇ ಗುರುದೇವ್ ಹೊಯ್ಸಳನ ಮುಂದೆ ಅಬ್ಬರಿಸಲು ಸಜ್ಜಾಗಿದ್ದಾರೆ.


ಹೊಯ್ಸಳ ಚಿತ್ರದಲ್ಲಿ ಬಾಲಿ ಪಾತ್ರದ ಭರ್ಜರಿ ಇಂಟ್ರಡಕ್ಷನ್ ಫೈಟ್


ಬೆಳಗಾವಿ ಜಿಲ್ಲೆಯ ಸುತ್ತ-ಮುತ್ತಲ ಪ್ರದೇಶದಲ್ಲಿ ನವೀನ್ ಶಂಕರ್ ಪಾತ್ರದ ಚಿತ್ರೀಕರಣ ಆಗಿದೆ. ತಮ್ಮ ಈ ಒಂದು ಪಾತ್ರದ ಪರಿಚಯಕ್ಕೆ ಒಂದು ಭರ್ಜರಿ ಇಂಟ್ರಡಕ್ಷನ್ ಫೈಟ್ ಸೀನ್‌ನ್ನ ಇಡಲಾಗಿದೆ. ಬಾಲಿ ಅನ್ನುವ ತಮ್ಮ ಪಾತ್ರದ ಪರಿಚಯಕ್ಕೆ ಈ ಒಂದು ಸಾಹಸ ದೃಶ್ಯವನ್ನ ಇಡಲಾಗಿದೆ ಅಂತ ನವೀನ್ ಶಂಕರ್ ಖುಷಿ ಪಡ್ತಾರೆ.


ಬಾಲಿ ಅನ್ನುವ ವಿಲನ್ ಪಾತ್ರದ ಮೂಲಕವೇ ನವೀನ್ ಶಂಕರ್ ಜನರನ್ನ ರಂಜಿಸಲು ಬರ್ತಿದ್ದಾರೆ. ನವೀನ್ ಶಂಕರ್ ಪಾತ್ರದ ಭರ್ಜರಿ ಪೋಸ್ಟರ್ ಕೂಡ ಈಗ ರಿಲೀಸ್ ಆಗಿದೆ. ಬೇರ್ ಬಾಡಿ ಲುಕ್ ಅಲ್ಲಿಯೇ ನವೀನ್ ಶಂಕರ್ ಈ ಒಂದು ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.


Daali Dhanajay Acted Hoysala Movie Villain Naveen Shankar Special Interview
ಹೊಯ್ಸಳ ಚಿತ್ರದಲ್ಲಿ ಬಾಲಿ ಪಾತ್ರದ ಅಬ್ಬರ ಬಲು ಜೋರು


ಹೊಯ್ಸಳ ಚಿತ್ರದಲ್ಲಿ ಬಾಲಿ ಪಾತ್ರದ ಅಬ್ಬರ ಬಲು ಜೋರು


ಅಂದ್ಹಾಗೆ ನವೀನ್ ಶಂಕರ್ ಈ ಒಂದು ಪಾತ್ರದ ಬಗ್ಗೆ ಒಂದು ಹೊಸ ಭರವಸೆ ಇಟ್ಟುಕೊಂಡಿದ್ದಾರೆ. ತುಂಬಾ ಚೆನ್ನಾಗಿಯೇ ಸ್ಕೋಪ್ ಇರೋ ಈ ಪಾತ್ರದ ಬಳಿಕ ಒಳ್ಳೆ ಹೈಪ್ ಸಿಗೋ ಸಾಧ್ಯತೆ ಇದು ಅನ್ನೋ ನಂಬಿಕೆ ಈಗಲೇ ಮೂಡಿದೆ.


ನವೀನ್ ಶಂಕರ್ ಮುಂಚೆ ಡಾಲಿ ಧನಂಜಯ್ ಸಹ ಅದ್ಭುತ ಪಾತ್ರಗಳನ್ನ ಮಾಡಿದ್ದಾರೆ. ಆದರೆ ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ಧನು ಒಂದು ಪಾತ್ರ ಮಾಡಿದರು. ಆ ಪಾತ್ರದ ಹೆಸರು ಡಾಲಿ, ಅದು ಸಾಕಷ್ಟು ಜನರನ್ನ ಸೆಳೆದು ಬಿಡ್ತು. ತುಂಬಾ ಪಾಪ್ಯೂಲರ್ ಕೂಡ ಆಯಿತು. ಹಾಗಾಗಿಯೇ ಧನಂಜಯ್ ಅವರನ್ನ ಡಾಲಿ ಧನಂಜಯ್ ಅಂತಲೇ ಜನ ಈಗಲೂ ಗುರುತಿಸುತ್ತಾರೆ.


ಗುಳ್ಟು ನವೀನ್ ಶಂಕರ್ ಈಗ ಬಾಲಿ ಎಂಬ ವಿಲನ್


ಗುರುದೇವ್ ಹೊಯ್ಸಳ ಚಿತ್ರ ಬಂದ್ಮೇಲೆ ಗುಳ್ಟು ನವೀನ್ ಶಂಕರ್ ಅವರನ್ನ ಬಾಲಿ ನವೀನ್ ಶಂಕರ್ ಅಂತ ಗುರುತಿಸೋ ಸಾಧ್ಯತೆ ಜಾಸ್ತಿ ಇದೆ. ಹೊಯ್ಸಳ ಚಿತ್ರದ ನಿರ್ದೇಶಕ ವಿಜಯ್. ಎನ್ ಈ ಮೂಲಕ ಒಂದ್ ಒಳ್ಳೆ ಕಥೆಯ ಚಿತ್ರವನ್ನ ಮಾಡಿದ್ದಾರೆ.


ಇದನ್ನೂ ಓದಿ: Ramcharan Teja: ರಾಕಿಂಗ್ ಸ್ಟಾರ್​ನ್ನು ಬಾಯ್ತುಂಬ ಹೊಗಳಿದ್ರು ಟಾಲಿವುಡ್ ನಟ! ಯಶ್ ಬಗ್ಗೆ ರಾಮ್ ಚರಣ್ ಏನಂದ್ರು?


ಮಾರ್ಚ್‌-30 ರಂದು ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಅಜನೀಶ್ ಲೋಕನಾಥ್ ಸಂಗೀತದ ಹಾಡುಗಳೂ ಈಗಾಗಲೇ ಮೋಡಿ ಮಾಡುತ್ತಿವೆ. ಇನ್ನುಳಿದಂತೆ ಬಾಲಿ ಪಾತ್ರಧಾರಿ ನವೀನ್ ಶಂಕರ್ ತಮ್ಮ ಪಾತ್ರದ ವಿಶೇಷತೆಗಳನ್ನ ಈಗ ಹಂಚಿಕೊಂಡಿದ್ದು, ತಮ್ಮ ಪಾತ್ರದ ಕುರಿತು ಕುತೂಹಲವನ್ನ ಕೂಡ ಮಾಡಿಸಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು