ಸುಕುಮಾರ್ ಟಾಲಿವುಡ್ನ ಗ್ರೇಟ್ ಡೈರೆಕ್ಟರ್. ಅಲ್ಲು ಅರ್ಜುನ್ ಗಾಗಿ ಆರ್ಯ, ಆರ್ಯ-೨ ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದರೆ, ಮಹೇಶ್ ಬಾಬುಗೆ ನೆನೊಕ್ಕಡೈನ, ಜೂನಿಯರ್ ಎನ್ಟಿಆರ್ಗೆ ನಾನಕು ಪ್ರೇಮತೋ, ರಾಮ್ ಚರಣ್ಗೆ ರಂಗಸ್ಥಳಂ ನಂತಹ ಕ್ಲಾಸಿಕ್ ಚಿತ್ರಗಳನ್ನ ನೀಡಿದ ನಿರ್ದೇಶಕ. ಇಂತಹ ಸುಕುಮಾರ್ ಬರ್ತಡೇ ಸಂಭ್ರಮದಲ್ಲಿದ್ದಾರೆ. ಈ ಪ್ರತಿಭಾನ್ವಿತ, ಸೃಜನಾತ್ಮಕ ನಿರ್ದೇಶಕನಿಗೆ ಟಾಲಿವುಡ್ನ ನಿರ್ಮಾಪಕರು, ನಟರು, ನಟಿಯರು ವಿಶ್ ಮಾಡ್ತಿದ್ದಾರೆ. ಆದರೆ ಅಷ್ಟೆಲ್ಲದರ ನಡುವೆ ವಿಶೇಷ ಅನಿಸಿಕೊಂಡಿರೋದು ಕನ್ನಡದ ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ಡಿ-ಬಾಸ್ ದರ್ಶನ್ ಅವರ ಹಾರೈಕೆ.
ಹೌದು, ಟಾಲಿವುಡ್ ನಿರ್ದೇಶಕ ಸುಕುಮಾರ್ ಮನಸ್ಪೂರ್ತಿಯಾಗಿ ಶುಭ ಹಾರೈಸಿದ್ದಾರೆ ದರ್ಶನ್. ತಮ್ಮ ಫೇಸ್ಬುಕ್ ಹಾಗೂ ಟ್ವಿಟ್ಟರ್ ಅಕೌಂಟ್ನಲ್ಲಿ ಹ್ಯಾಪಿ ಬರ್ತಡೇ ಸುಕುಮಾರ್ ಗಾರು, ನಿಮಗೆ ಇನ್ನಷ್ಟು ಸಕ್ಸಸ್ ಮುಂದಿನ ದಿನಗಳಲ್ಲಿ ಸಿಗುವಂತಾಗಲಿ ಅಂತ ಮನತುಂಬಿ ಬರೆದುಕೊಂಡಿದ್ದಾರೆ.
Wishing you a very Happy Birthday Director @aryasukku Sukumar Garu 🎂🎂 Have a great success ahead....#HBDSukumar #HappyBirthdaySukumar #Sukumar pic.twitter.com/uOW0VdQyem
— Darshan Thoogudeepa (@dasadarshan) January 11, 2021
ಅಂದಹಾಗೆ ದರ್ಶನ್ಗಾಗಿ ಸುಕುಮಾರ್ ಸಿನಿಮಾ ಮಾಡ್ತಾರೆ, ಕಥೆಯನ್ನ ಸಹ ಹೇಳಿದ್ದಾರೆ ಎಂಬ ಮಾತುಗಳು ಎರಡು ವರುಷಗಳ ಹಿಂದೆನೆ ಹರಿದಾಡ್ತಿತ್ತು. ಆದ್ರೆ ಅದು ಇನ್ನೂ ಕೈಗೂಡಿಲ್ಲ. ಒಂದು ವೇಳೆ ಇವರಿಬ್ರು ಒಂದಾಗಿ ಸಿನಿಮಾ ಮಾಡಿದ್ದೇ ಆದ್ರೆ, ಅದು ಮತ್ತೊಂದು ಪ್ಯಾನ್ ಇಂಡಿಯಾ ಲೆವಲ್ ಸಿನಿಮಾ ಆಗೋದ್ರಲ್ಲಿ ಡೌಟೇ ಇಲ್ಲ. ಆ ದಿನ ಆದಷ್ಟು ಬೇಗ ಬರಲಿ ಅಂತ ಇಬ್ಬರ ಅಭಿಮಾನಿಗಳಂತೂ ಕಾಯ್ತಿದ್ದಾರೆ.
ಸದ್ಯ ಸುಕುಮಾರ್, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗಾಗಿ ಪುಷ್ಪ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಈಗಾಗಲೇ ಪೋಸ್ಟರ್ ಗಳಿಂದಲೇ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ. ಯಾವಾಗ ರಿಲೀಸ್ ಆಗುತ್ತಪ್ಪ ಅಂತ ಅಲ್ಲು ಅರ್ಜುನ್ ಅಭಿಮಾನಿಗಳು ಕಾತುರದಿಂದ ಕಾಯುವಂತೆ ಮಾಡಿದೆ.
Sitara Ghattamaneni: ಫೋಟೋಶೂಟ್ಗಳಲ್ಲಿ ಮಿಂಚುತ್ತಿರುವ ಮಹೇಶ್ ಬಾಬು ಮಗಳು ಸಿತಾರಾ..!
ಡಿ-ಬಾಸ್ ದರ್ಶನ್ ಕುರಿತು ಹೇಳೋದಾದ್ರೆ, ತರುಣ್ ಸುಧೀರ್ ನಿರ್ದೇಶನದ, ಉಮಾಪತಿ ನಿರ್ಮಾಣದ ಅದ್ಧೂರಿ ಸಿನಿಮಾ ರಾಬರ್ಟ್ ರಿಲೀಸ್ ಗೆ ಸಜ್ಜಾಗ್ತಿದೆ. ಮಾರ್ಚ್ ೧೧ ರಂದು ರಾಬರ್ಟ್ ಅಬ್ಬರಿಸಿ ಬೊಬ್ಬಿರಿಯಲಿದ್ದಾನೆ. ಇದಾದ ನಂತರ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ 'ರಾಜವೀರ ಗಂಡುಗಲಿ ಮದಕರಿ ನಾಯಕ' ಸಿನಿಮಾ ಶೂಟಿಂಗ್ ಶುರುವಾಗಲಿದೆ.
ಅದರ ಜೊತೆ ಮಿಲನ ಪ್ರಕಾಶ್ ನಿರ್ದೇಶನದಲ್ಲೊಂದು ಸಿನಿಮಾ ಮಾಡಬೇಕಿದೆ. ಅಷ್ಟರಲ್ಲಿ ಸುಕುಮಾರ್ ಪುಷ್ಪ ಸಿನಿಮಾ ರಿಲೀಸ್ ಆಗಿ, ದರ್ಶನ್ ಗೆ ಕಥೆ ಒಪ್ಪಿಸಿ, ಸಿನಿಮಾ ಕೈಗೆತ್ತಿಕೊಂಡರೂ ಆಶ್ಚರ್ಯ ಇಲ್ಲ. ಸಿನಿಮಾ ರಂಗದಲ್ಲಿ ಏನು ಬೇಕಾದರೂ ಆಗಬಹುದು ಅಲ್ವೇ.. ಒಂದು ವೇಳೆ ದರ್ಶನ್-ಸುಕುಮಾರ್ ಕಾಂಬೋ ಒಂದಾಗಿದ್ದೇ ಅದಲ್ಲಿ ಬಾಕ್ಸಾಫಿಸ್ ಕಥೆ ಏನಾಗಲಿದೆ ಅಂತ ಬಿಡಿಸಿ ಹೇಳಲೇಬೇಕಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ