ನಮ್ಮ ದೇಶದ ಉತ್ಪನ್ನಗಳಿಗೆ ಆದ್ಯತೆ ನೀಡೋಣ; ಪತಿ ದರ್ಶನ್ ಹಾದಿಯಲ್ಲಿ ವಿಜಯಲಕ್ಷ್ಮೀ

Vijayalakshmi: ಕೋವಿಡ್​-19ನಿಂದಾಗಿ ಸಣ್ಣ ವ್ಯಾಪಾರಿಗಳು ಬಹಳ ಕಷ್ಟಪಡುತ್ತಿದ್ದಾರೆ. ಒಂದು ಕೆಟ್ಟ ತಿಂಗಳು ಅವರ ಬ್ಯುಸಿನೆಸ್​ ಹಾಳು ಮಾಡುತ್ತಿದೆ. ಲಾಕ್​ಡೌನ್​ ಮುಗಿದ ನಂತರ ಹೊರಗೆ ಹೋಗಿ ತಿನ್ನಿ. ಸ್ಥಳೀಯ ವ್ಯಾಪಾರಿಗಳಿಂದ ತರಕಾರಿ ಖರೀದಿಸಿ. ದರ್ಶಿನಿಯಲ್ಲಿ ಕಾಫಿ ಕುಡಿಯಿರಿ‘ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

ದರ್ಶನ್​, ವಿಜಯಲಕ್ಷ್ಮೀ

ದರ್ಶನ್​, ವಿಜಯಲಕ್ಷ್ಮೀ

 • Share this:


  ಇತ್ತೀಚೆಗೆ ವಿದೇಶಿ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಸ್ಯಾಂಡಲ್​ವುಡ್​ನಟ ರಿಯಲ್​ ಸ್ಟಾರ್​ ಉಪೇಂದ್ರ ಅವರು ಸ್ವದೇಶಿ ವಸ್ತುಗಳನ್ನು ಖರೀದಿಸಿ ಅದರ ಬಳಕೆಯತ್ತ ಗಮನಹರಿಸಿ ಎಂದಿದ್ದರು. ಇದೀಗ ನಟ ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮೀ ಕೂಡ ಈ ವಿಚಾರದಂತೆ ಸಣ್ಣ ವ್ಯಾಪಾರಿಗಳ ಪರ ನಿಂತಿದ್ದಾರೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್​ವೊಂದನ್ನು ಹಾಕಿಕೊಂಡಿರುವ ವಿಜಯಲಕ್ಷ್ಮೀ ‘ಕೋವಿಡ್​-19ನಿಂದಾಗಿ ಸಣ್ಣ ವ್ಯಾಪಾರಿಗಳು ಬಹಳ ಕಷ್ಟಪಡುತ್ತಿದ್ದಾರೆ. ಒಂದು ಕೆಟ್ಟ ತಿಂಗಳು ಅವರ ಬ್ಯುಸಿನೆಸ್​ ಹಾಳು ಮಾಡುತ್ತಿದೆ. ಲಾಕ್​ಡೌನ್​ ಮುಗಿದ ನಂತರ ಹೊರಗೆ ಹೋಗಿ ತಿನ್ನಿ. ಸ್ಥಳೀಯ ವ್ಯಾಪಾರಿಗಳಿಂದ ತರಕಾರಿ ಖರೀದಿಸಿ. ದರ್ಶಿನಿಯಲ್ಲಿ ಕಾಫಿ ಕುಡಿಯಿರಿ‘ ಎಂದು ಹೇಳಿದ್ದಾರೆ.

     ‘ಅಮೆಜಾನ್​​​, ಪಿಜ್ಜಾ, ಎಂಸಿಡೊನಾಲ್ಡ್​​, ಕೆಎಫ್​ಸಿಗಳು ಬದುಕಬಲ್ಲವು. ಹಾಗಾಗಿ ಸಣ್ಣ ವ್ಯಾಪಾರಸ್ಥರಿಂದ ವಸ್ತುಗಳನ್ನು ಖರೀದಿಸಿ ಅವರಿಗೆ ನೆರವಾಗೋಣ‘ ಎಂದಿದ್ದಾರೆ.

  ಇನ್ನು ವಿಜಯಲಕ್ಷ್ಮೀ ಅವರ ಟ್ವೀಟ್​ ನೋಡಿ ಸಾಕಷ್ಟು ಜನರು ಮೆಚ್ಚುಗೆಯ ಕಾಮೆಂಟ್​​ ಬರೆದಿದ್ದಾರೆ. ಇನ್ನು ಕೆಲವರು ಪೋಸ್ಟ್​ ಶೇರ್​ ಮಾಡಿದ್ದಾರೆ. ದರ್ಶನ್​ ಅಭಿಮಾನಿಗಳು ವಿಜಯಲಕ್ಷ್ಮೀ ಅವರ ಪೋಸ್ಟ್​ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


  First published: