ಕೆಂಪೇಗೌಡ ಜಯಂತಿ ಕುರಿತಾದ ಟ್ವೀಟ್​ನಲ್ಲಿ ದರ್ಶನ್​ ಎಡವಟ್ಟು; ಡಿ ಬಾಸ್​ ವಿರುದ್ಧ ಆಕ್ರೋಶ

ದರ್ಶನ್​ ಟ್ವೀಟ್​ನಲ್ಲಿ ಹಾರ್ದಿಕ ಎಂದು ಬರೆಯುವ ಬದಲು ಹಾರ್ಧಿಕ ಎಂದು ಬರೆದಿದ್ದಾರೆ. ಈ ಬಗ್ಗೆಯೂ ಅನೇಕರು ಅಪಸ್ವರ ಎತ್ತಿದ್ದಾರೆ.

news18-kannada
Updated:June 28, 2020, 2:57 PM IST
ಕೆಂಪೇಗೌಡ ಜಯಂತಿ ಕುರಿತಾದ ಟ್ವೀಟ್​ನಲ್ಲಿ ದರ್ಶನ್​ ಎಡವಟ್ಟು; ಡಿ ಬಾಸ್​ ವಿರುದ್ಧ ಆಕ್ರೋಶ
ದರ್ಶನ್​
  • Share this:
ಬೆಂಗಳೂರಿನ ಉಗಮಕ್ಕೆ ಕಾರಣರಾದವರು ಕೆಂಪೇಗೌಡರು. ಅವರು ಕಟ್ಟಿದ ಈ ನಗರ ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ನಿನ್ನೆ ಕೆಂಪೇಗೌಡರ ಜಯಂತಿ. ಈ ವೇಳೆ ಅನೇಕರು ಶುಭಾಶಯ ತಿಳಿಸಿದ್ದರು. ನಟ ದರ್ಶನ್​ ಕೂಡ ಟ್ವೀಟ್​ ಮೂಲಕ ಶುಭಾಶಯ ಕೋರಿದ್ದರು. ಆದರೆ, ಈ ವೇಳೆ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಅದೇನು ಎಂಬುದಕ್ಕೆ ಇಲ್ಲಿದೆ ಉತ್ತರ.

ದರ್ಶನ್​ ನಿನ್ನೆ ಕೆಂಪೇಗೌಡರ ಫೋಟೋ ಹಾಕಿ ಶುಭಾಶಯ ಕೋರಿದ್ದರು. “ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು. ಆದಷ್ಟು ಬೇಗ ನಮ್ಮ ಬೆಂಗಳೂರು ಸಹಜ ಸ್ಥಿತಿಗೆ ಮರಳಲಿ,” ಎಂದಿದ್ದರು. ಆದರೆ, ಫೋಟೋ ಹಾಕುವಾಗ ದರ್ಶನ್​ ತಪ್ಪು ಮಾಡಿದ್ದಾರೆ. ದರ್ಶನ್​​, ಕೆಂಪೇಗೌಡರ ಫೋಟೋ ಬದಲು ಮದಕರಿ ನಾಯಕನ ಫೋಟೋ ಹಾಕಿದ್ದಾರೆ.



ಟ್ವೀಟ್​ ಮಾಡಿದ ಕೆಲವೇ ಹೊತ್ತಿನಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ಆರಂಭಗೊಂಡಿವೆ. ಕೆಲವರು ‘ರಾಜ ಮದಕರಿ ನಾಯಕರ ಪ್ರತಿಮೆಗೆ ಕೆಂಪೇಗೌಡರ ಪ್ರತಿಮೆ ಅಂದರೆ ಹೆಂಗೆ?’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನು, ದರ್ಶನ್​ ಟ್ವೀಟ್​ನಲ್ಲಿ ಹಾರ್ದಿಕ ಎಂದು ಬರೆಯುವ ಬದಲು ಹಾರ್ಧಿಕ ಎಂದು ಬರೆದಿದ್ದಾರೆ. ಈ ಬಗ್ಗೆಯೂ ಅನೇಕರು ಅಪಸ್ವರ ಎತ್ತಿದ್ದಾರೆ.

ಕೆಲವರು ದರ್ಶನ್​ ಪರ ಬ್ಯಾಟ್​ ಬೀಸಿದ್ದಾರೆ. ದರ್ಶನ್​ ಮಾಡಿರೋದು ತಪ್ಪಿರಬಹುದು. ಅದು ಅವರ ಕಣ್ತಿಪ್ಪಿನಿಂದ ಆಗಿದ್ದೇ ಹೊರತೂ ಉದ್ದೇಶ ಪೂರ್ವಕವಲ್ಲ. ಅದಕ್ಕೆ ಈ ರೀತಿ ಟ್ರೋಲ್​ ಮಾಡುವುದು ಸರಿಯಲ್ಲ ಎಂದು ಬರೆದುಕೊಂಡಿದ್ದಾರೆ.
First published:June 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading