ಮೋಡಿ ಮಾಡಿದ ದಮಯಂತಿ ಟ್ರೈಲರ್; ರಾಧಿಕಾ ಕುಮಾರಸ್ವಾಮಿಗೆ ಸೀನಿಯರ್ ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್!

Darshan Released Damayanthi Movie Trailer: ದಮಯಂತಿ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಮಾಡರ್ನ್ ಮತ್ತು ಮಹಾರಾಣಿಯಾಗಿ ಐತಿಹಾಸಿಕ ಪಾತ್ರದಲ್ಲಿ 2 ಶೇಡ್​ನಲ್ಲಿ ರಾಧಿಕಾ ಕುಮಾರಸ್ವಾಮಿ ಗಮನ ಸೆಳೆದಿದ್ದಾರೆ. ನಟ ಚಾಲೆಂಜಿಂಗ್ ದರ್ಶನ್ ದಮಯಂತಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

Sushma Chakre | news18-kannada
Updated:November 13, 2019, 3:59 PM IST
ಮೋಡಿ ಮಾಡಿದ ದಮಯಂತಿ ಟ್ರೈಲರ್; ರಾಧಿಕಾ ಕುಮಾರಸ್ವಾಮಿಗೆ ಸೀನಿಯರ್ ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್!
ರಾಧಿಕಾ ಕುಮಾರಸ್ವಾಮಿ- ದರ್ಶನ್
  • Share this:
ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಸಿನಿಮಾ ಟೀಸರ್ ಮತ್ತು ಪೋಸ್ಟರ್​ ಮೂಲಕವೇ ಭಾರೀ ಕುತೂಹಲ ಮೂಡಿಸಿತ್ತು. ಈ ಸಸ್ಪೆನ್ಸ್-ಹಾರರ್ ಸಿನಿಮಾದ 5 ಭಾಷೆಗಳ ಟ್ರೈಲರ್ ನಿನ್ನೆ ಸಂಜೆ ಬಿಡುಗಡೆಯಾಗಿದೆ. ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಸಿನಿಮಾ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿರುವುದು ವಿಶೇಷ.  ಈ ಮೂಲಕ ಹೊಸ ಇನ್ನಿಂಗ್ಸ್​ ಆರಂಭಿಸಿರುವ ರಾಧಿಕಾಗೆ ನಟ ದರ್ಶನ್ ಸಾಥ್ ನೀಡಿದ್ದಾರೆ.

5 ವರ್ಷಗಳ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. 'ದಮಯಂತಿ', 'ಭೈರಾದೇವಿ', 'ಕಾಂಟ್ರಾಕ್ಟ್'​ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಧಿಕಾ ಅವರ 'ದಮಯಂತಿ' ಸಿನಿಮಾ ಈ ತಿಂಗಳ ಅಂತ್ಯದಲ್ಲಿ ತೆರೆ ಕಾಣಲಿದೆ.

Damayanthi Movie: ರಾಧಿಕಾ ಕುಮಾರಸ್ವಾಮಿ ಬೆಂಬಲಕ್ಕೆ ನಿಂತ ಮಲೆಯಾಳಂ ನಟ ಮೋಹನ್​ಲಾಲ್!

ನವರಸನ್ ಕತೆ ಬರೆದು, ನಿರ್ದೇಶಿಸಿರುವ 'ದಮಯಂತಿ' ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತೆರೆಕಾಣಲಿದೆ. ತೆಲುಗಿನ 'ಭಾಗಮತಿ', 'ಅರುಂಧತಿ' ಸಿನಿಮಾ ರೀತಿಯಲ್ಲೇ ಸಾಕಷ್ಟು ಅದ್ದೂರಿಯಾಗಿ ಈ ಸಿನಿಮಾ ನಿರ್ಮಿಸಲಾಗಿದ್ದು, ರಾಧಿಕಾ ಕುಮಾರಸ್ವಾಮಿ ಅವರ ಸ್ಟಿಲ್​ಗಳು ಅನುಷ್ಕಾ ಶೆಟ್ಟಿ ಪಾತ್ರವನ್ನು ನೆನಪಿಸುವಂತಿದೆ. ಈಗಾಗಲೇ ಬೆಂಗಳೂರು, ಮೈಸೂರು, ಹೈದರಾಬಾದ್​ನಲ್ಲಿ 'ದಮಯಂತಿ' ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯ ತಯಾರಿಯಲ್ಲಿದೆ.


ದರ್ಶನ್ ಹೇಳಿದ್ದೇನು?:
ದಮಯಂತಿ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಾಧಿಕಾ ನನಗಿಂತ ಒಂದು ಸಿನಿಮಾ ಸೀನಿಯರ್. ನೀಲ ಮೇಘ ಶ್ಯಾಮ ಸಿನಿಮಾದಲ್ಲಿ ಅವರೇ ಮೊದಲು ನಟಿಸಿದ್ದರು. ಕೆಲಸದ ಬದ್ಧತೆ ಇದ್ದರೆ ಮಾತ್ರ ಗೆಲುವು ಸಾಧ್ಯ. ರಾಧಿಕಾ ಕಾಲದಲ್ಲಿದ್ದ ಯಾವ ನಟಿಯರೂ ಈಗ ಸಿನಿಮಾ ಕ್ಷೇತ್ರದಲ್ಲಿಲ್ಲ. ಅವರು ಇಂದೂ ಕೈ ತುಂಬ ಸಿನಿಮಾಗಳನ್ನು ಹೊಂದಿದ್ದಾರೆ ಎಂದರೆ ಅದಕ್ಕೆ ಅವರ ಬದ್ಧತೆ ಕಾರಣ ಎಂದು ಹೇಳಿದ್ದಾರೆ.ಮಂಡ್ಯ, ಅನಾಥರು ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸಿದ್ದೆ. ಆದರೆ, ಹೀಗೆ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ನನ್ನ ಹುಟ್ಟುಹಬ್ಬದ ದಿನವೇ ಅವರು ನಮ್ಮ ದಮಯಂತಿ ಸಿನಿಮಾ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಮಾಡಿದ್ದು ಖುಷಿ ತಂದಿದೆ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.ಟ್ರೈಲರ್​ನಲ್ಲಿ ಏನಿದೆ?:

ದಮಯಂತಿ ಸಿನಿಮಾದ ಟ್ರೈಲರ್​ ನಲ್ಲಿ ರಾಧಿಕಾ ಗ್ಲಾಮರಸ್​ ಲುಕ್​ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಶತಮಾನದ ಹಿಂದಿನ ಮಹಾರಾಣಿಯಾಗಿ ಅಬ್ಬರಿಸಿದ್ದಾರೆ. ರಾಜನ ಮಗಳಾದ ರಾಧಿಕಾ ಆತನ ನಿಧನದ ನಂತರ ಹೇಗೆ ರಾಜ್ಯಭಾರ ಮಾಡುತ್ತಾಳೆ ಎಂಬ ಕಥಾನಕವನ್ನು ದಮಯಂತಿ ಸಿನಿಮಾ ಹೊಂದಿದೆ. ಮಹಾರಾಣಿ ನಿಧನದ ನಂತರ ಆಕೆ ಆತ್ಮವಾಗುತ್ತಾಳೆ. ಆತ್ಮವಾಗಿ ರಾಧಿಕಾ ರಾಣಿಯ ಪೋಷಾಕಿನಲ್ಲಿ ಅಬ್ಬರಿಸುತ್ತಾರೆ. ಆಕೆಯನ್ನು ಬಂಧಿಸುವ ಪ್ರಯತ್ನಗಳನ್ನು ಮಾಡಲಾಗುತ್ತದೆ. ಟ್ರೈಲರ್​ ನಲ್ಲಿ ಆಧುನಿಕ ಯುವತಿ ಮತ್ತು ರಾಣಿಯಾಗಿ ರಾಧಿಕಾ ಕುಮಾರಸ್ವಾಮಿ ಗಮನ ಸೆಳೆದಿದ್ದಾರೆ. ಚಿತ್ರದ ಮೂಲಕ ರಾಧಿಕಾ ಮತ್ತೊಂದು ಇನ್ನಿಂಗ್ಸ್​ ಆರಂಭಿಸುವ ಲಕ್ಷಣಗಳು ಕಂಡುಬರುತ್ತಿವೆ.

First published: November 13, 2019, 1:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading