ದರ್ಶನ್ ಸ್ಯಾಂಡಲ್‍ವುಡ್‍ನ ಬಾಕ್ಸ್ಆಫೀಸ್ ಸುಲ್ತಾನ. ಕ್ರೇಜ್ ಕಾ ಬಾಪ್.. ಅಭಿಮಾನಿಗಳ ಪ್ರೀತಿಯ ಡಿಬಾಸ್ ಸಿನಿಮಾ ಬರುತ್ತೆ ಅಂದರೆ ಬಾಕ್ಸ್ಆಫೀಸ್ನಲ್ಲಿ ಯಾವ ರೀತಿ ಅಬ್ಬರ, ಆರ್ಭಟ ಇರುತ್ತೆ ಅಂತ ಹೇಳಲೇಬೇಕಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಕ್ರೇಜ್, ಮೇನಿಯಾ ಅನ್ನೋ ಪದಗಳಿಗೆ ಅರ್ಥ ತಿಳಿಸೋಕೆ ಥಿಯೇಟರ್ಗೆ ಎಂಟ್ರಿಕೊಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್.
ಹೌದು, ವಿಶಿಷ್ಟ, ವಿಭಿನ್ನ ಲುಕ್ ಗೆಟಪ್‍ನಲ್ಲಿ, ಟೆರರ್ ಅವತಾರದಲ್ಲಿ, ರಾಬರ್ಟ್ ಆಗಿ ಸಿಲ್ವರ್ ಸ್ಕ್ರೀನ್‍ಮೇಲೆ ವಿಜೃಂಭಿಸೋಕೆ ಸಮಯ ನಿಗದಿಯಾಗಿದೆ. ಮಾರ್ಚ್ 11 ರಂದು ಶಿವರಾತ್ರಿ ಹಬ್ಬದಂದು ರಾಬರ್ಟ್ ಕರ್ನಾಟಕ, ತೆಲಂಗಾಣ, ಆಂಧ್ರದ ರಾಜ್ಯಗಳಲ್ಲಿ ಧೂಳ್ ಧಮಾಕ ಎಬ್ಬಿಸಲಿದ್ದಾರೆ. ಹೀಗಿರುವಾಗಲೇ ಚಕ್ರವರ್ತಿಯ ನೆಕ್ಸ್ಟ್ ಸಿನಿಮಾ ಯಾವುದು? ಐರಾವತನ ಮುಂದಿನ ನಡೆ ಹೇಗಿರಲಿದೆ? ಎಂಬ ಕುತೂಹಲ ಸ್ಯಾಂಡಲ್‍ವುಡ್‍ನಲ್ಲಿ ಹುಟ್ಕೊಂಡಿದೆ.
ಅದಕ್ಕೆ ಉತ್ತರ ಎಂಬಂತೆ ರಾಬರ್ಟ್ ರಿಲೀಸ್ ಆದ ಕೆಲವೇ ವಾರಗಳಲ್ಲಿ ಡಿಬಾಸ್ ನಟನೆಯ ಮತ್ತೊಂದು ಸಿನಿಮಾ ಸ್ಟಾರ್ಟ್ ಆಗಲಿದೆ.
ದರ್ಶನ್ ಮುಂದಿನ ಸಿನಿಮಾ ಯಾವುದು ಗೊತ್ತಾ?
ಒಂದು ಸಿನಿಮಾ ರಿಲೀಸ್ ಆಗೋವರೆಗೂ ಮತ್ತೊಂದು ಸಿನಿಮಾ ಬಗ್ಗೆ ಮಾತನಾಡೋದು ಬೇಡ ಅಂತ ಗೌಪ್ಯತೆ ಕಾಪಾಡಿಕೊಂಡಿರೋ ದರ್ಶನ್ ಮತ್ತು ಟೀಮ್. ತೆರೆಮರೆಯಲ್ಲೇ ಹೊಸ ಸಿನಿಮಾದ ಸಿದ್ಧತೆ ನಡೆಸಿದೆ.
ಅಂದಹಾಗೆಯೇ ಎಲ್ಲರಿಗೂ ಗೊತ್ತಿರುವ ಹಾಗೆ ರಾಬರ್ಟ್ ನಂತರ ದರ್ಶನ್ ಮತ್ತೊಮ್ಮೆ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಬೇಕಿತ್ತು. ಚಿತ್ರದುರ್ಗವನ್ನಾಳಿದ ಧೀರ ವೀರ ಶೂರ ರಾಜವೀರ ಮದಕರಿಯ ಅವತಾರ ತಾಳಬೇಕಿತ್ತು. ಕೋಟೆ ನಾಡಲ್ಲಿ ನಿಂತು ಮೀಸೆ ತಿರುವ ಬೇಕಿತ್ತು. ಅದರಂತೆ ರಾಜವೀರ ಮದಕರಿ ಸಿನಿಮಾದ ಮುಹೂರ್ತ ಕಳೆದ ವರ್ಷ ಜನವರಿ ಹಾಗೂ 2019ರ ಡಿಸೆಂಬರ್ನಲ್ಲಿಯೇ ನಡೆದಿತ್ತು.
ಆದರೀಗ ರಾಜವೀರ ಮದಕರಿಗೂ ಮುನ್ನ ದರ್ಶನ್ ಬೇರೊಂದು ಸಿನಿಮಾ ಮಾಡಲಿದ್ದಾರೆ. ಅದಕ್ಕೆ ಕಾರಣವೇ ಮದಕರಿಯ ಬಜೆಟ್. ಹೌಸ್ ಈ ಐತಿಹಾಸಿಕ ಸಿನಿಮಾವನ್ನ ತೆರೆಮೇಲೆ ತೋರಿಸೋಕೆ ಸಾಕಷ್ಟು ಬಜೆಟ್ ಬೇಕಾಗಲಿದೆ. ಮೂಲಗಳ ಪ್ರಕಾರ 100 ಕೋಟಿ ಬಜೆಟ್‍ನಲ್ಲಿ ಮದಿಕರಿ ದೃಶ್ಯರೂಪ ಪಡೆದುಕೊಳ್ಳಲಿದೆ. ಆದರೆ ಸದ್ಯ ಕೊರೋನಾ ಹೊಡೆತಕ್ಕೆ ಸಿಕ್ಕಿ ಚಿತ್ರರಂಗ ನಲುಗಿ ಹೋಗಿದೆ. ಇಂತಹ ಸಮಯದಲ್ಲಿ ಅಷ್ಟೊಂದು ಬಜೆಟ್‍ನ ಸಿನಿಮಾ ಮಾಡಿ ರಿಸ್ಕ್ ಬೇಡ ಅಂತ ಒಂಚೂರು ಸಮಯ ಮದಕರಿ ಪ್ರಾಜೆಕ್ಟ್ ಕಾದಿರಸಲಾಗಿದೆ.
ಹೀಗಾಗಿ ಮದಕರಿಗೂ ಮುನ್ನ ಬೇರೊಂದು ಸಿನಿಮಾ ಟೇಕಾಪ್ ಆಗಲಿದೆ. ಅದುವೇ ಮಿಲನ ಪ್ರಕಾಶ್ ನಿರ್ದೇಶನದ ಸಿನಿಮಾ.
ಏಪ್ರಿಲ್ ಮೊದಲ ವಾರ ಈ ಮೆಗಾ ಪ್ರಾಜೆಕ್ಟ್ ಶೂಟಿಂಗ್ ಆರಂಭಿಸೋ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಅದಕ್ಕೆ ಬೇಕಾಗಿರೋ ಎಲ್ಲಾ ಪ್ಲ್ಯಾನ್‍ಗಳು ಈಗಾಗಲೇ ನಡೆಯುತ್ತಿವೆ. ಇನ್ನು ಈ ಮುನ್ನ ಮಿಲನ ಪ್ರಕಾಶ್ ಹಾಗೂ ದರ್ಶನ್ ತಾರಕ್ ಮೂಲಕ ಒಂದಾಗಿದ್ರು. ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಮೂಲಕ ರಂಜಿಸಿದ್ರು.
ಈಗ ಚಾಲೆಂಜಿಂಗ್ ಸ್ಟಾರ್ಗಾಗಿ ಬೇರೆಯದೇ ಆದ ರೀತಿಯ ಸಬ್ಜೆಕ್ಟ್ ಮಾಡಿಕೊಂಡಿದ್ದಾರಂತೆ ತಾತ.
ಪ್ರಕಾಶ್‍ರನ್ನ ತಾತ ಅಂತ್ಲೇ ಕರೆಯೋ ದಾಸ. ನನಗಾಗಿ ಒಂದು ಅದ್ಭುತ ಕಥೆ ಮಾಡಿಕೊಂಡಿದ್ದಾರೆ. ಪಾತ್ರ ಪೋಷಣೆಯೂ ಸಮ್‍ಥಿಂಗ್ ಸ್ಪೆಷಲ್ ಆಗಿರಲಿದೆ ಅಂತಾರೆ. ಹಾಗಂತ ಕಮರ್ಷಿಯಲ್ ಫಾಮ್ರ್ಯಾಟ್‍ನಿಂದ ಆಚೆಯೇನೂ ಇರೋದಿಲ್ಲ. ಎಂದಿನಂತೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಬೇಕಾದ ಎಲ್ಲಾ ಅಂಶಗಳು ಈ ಸಿನಿಮಾದಲ್ಲೂ ಇರಲಿವೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ