Video Viral: ಟಿಕ್​ಟಾಕ್​​ಗೆ ಗುಡ್ ಬೈ ಎಂದ ಡಿಬಾಸ್ ಅಭಿಮಾನಿಗಳು!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳು ಕೂಡ ಟಿಕ್​ಟಾಕ್​  ಖಾತೆ ಮತ್ತು ಆ್ಯಪ್​​ ಅನ್ನು ತಮ್ಮ ಸ್ಮಾರ್ಟ್​ಫೋನಿನಿಂದ ಡಿಲೀಟ್​ ಮಾಡಿದ್ದಾರೆ. ನಾವು ಯಾರಿಗೂ ಒತ್ತಾಯ ಮಾಡೋದಿಲ್ಲ. ಆದರೆ ನೀವೆ ಅರ್ಥ ಮಾಡಿಕೊಂಡು ಡಿಲೀಟ್​ ಮಾಡಿ ಎಂದು ಹೇಳಿದ್ದಾರೆ.

news18-kannada
Updated:June 19, 2020, 5:50 PM IST
Video Viral: ಟಿಕ್​ಟಾಕ್​​ಗೆ ಗುಡ್ ಬೈ ಎಂದ ಡಿಬಾಸ್ ಅಭಿಮಾನಿಗಳು!
ದರ್ಶನ್​
  • Share this:
ಜೂನ್​ 15ರಂದು ಚೀನಾ ಸೈನಿಕರು ದಾಳಿ ಮಾಡಿ 20 ಭಾರತೀಯ ಸೈನಿಕರನ್ನು ಕೊಂದಿದ್ದಾರೆ. ಕಲ್ಲು, ಮುಳ್ಳುತಂತಿ ಬಳಸಿಕೊಂಡು ಚಿತ್ರಹಿಂಸೆಯ ಮೂಲಕ ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದಂತೆ ರಾಷ್ಟ್ರದಾದ್ಯಂತ ಭಾರತೀಯರ ಆಕ್ರೋಶ ಮುಗಿಲು ಮುಟ್ಟಿದೆ. ಅನೇಕರು ಚೀನಿ ವಸ್ತುಗಳನ್ನು ಬಹಿಷ್ಕಾರ ಮಾಡಬೇಕೆಂದು ಅಭಿಯಾನ ಮಾಡುತ್ತಿದ್ದರೆ. ಅದರ ಜೊತೆಗೆ ಚೀನಾ ಆ್ಯಪ್​ಗಳನ್ನು ಬ್ಯಾನ್​ ಮಾಡಬೇಕೆಂದು ಹೇಳುತ್ತಿದ್ದಾರೆ.

ಭಾರತೀಯರು ಚೀನಾದ ಅನೇಕ ಆ್ಯಪ್​​​​ಗಳನ್ನು ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ಟಿಕ್​ಟಾಕ್​ ಆ್ಯಪ್​ ಕೂಡ ಚೀನಾ ಮೂಲದ್ದಾಗಿದೆ. ಅನೇಕ ಭಾರತೀಯರು ಈ ಆ್ಯಪ್​ ಅನ್ನು ಬಳಸುತ್ತಿದ್ದಾರೆ. ಆದರೆ ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ಆರಂಭವಾದಲ್ಲಿಂದ ಟಿಕ್​ಟಾಕ್​ ಆ್ಯಪ್​ ಅನ್ನು ಡಿಲೀಟ್​ ಮಾಡುತ್ತಿದ್ದಾರೆ.

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳು ಕೂಡ ಟಿಕ್​ಟಾಕ್​  ಖಾತೆ ಮತ್ತು ಆ್ಯಪ್​​ ಅನ್ನು ತಮ್ಮ ಸ್ಮಾರ್ಟ್​ಫೋನಿನಿಂದ ಡಿಲೀಟ್​ ಮಾಡಿದ್ದಾರೆ. ನಾವು ಯಾರಿಗೂ ಒತ್ತಾಯ ಮಾಡೋದಿಲ್ಲ. ಆದರೆ ನೀವೆ ಅರ್ಥ ಮಾಡಿಕೊಂಡು ಡಿಲೀಟ್​ ಮಾಡಿ ಎಂದು ಹೇಳಿದ್ದಾರೆ.ಟಿಕ್​ಟಾಕ್​ನಲ್ಲಿ ದರ್ಶನ್​ ಅಭಿಮಾನಿಗಳು 'Thoogudeepa D Team​ R'​ ಹೆಸರಿನ ​ಖಾತೆಯನ್ನು ಡಿಲೀಟ್​ ಮಾಡುವ ಮೂಲಕ ಚೀನಾ ಆ್ಯಪ್​ಗಳ ನಿಷೇಧಕ್ಕೆ ಧ್ವನಿ ನೀಡಿದೆ. ಈ ಬಗ್ಗೆ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿರುವ ದರ್ಶನ್​​ ಫ್ಯಾನ್ಸ್​ ಟಿಕ್​​ಟಾಕ್​ ಅಪ್ಲಿಕೇಶನ್​ನಲ್ಲಿದ್ದ ತೂಗುದೀಪ ಡಿ ಟೀಮ್​ ಖಾತೆಯನ್ನು ಡಿಲೀಟ್​ ಮಾಡಲಾಗಿದೆ. ಚೀನಾದ ಅಪ್ಲಿಕೇಶನ್​​​​ ಅನ್ನು ಮೊಬೈಲ್​​ನಿಂದ ಕಿತ್ತೆಸೆಯೋಣ ಎಂದು ಬರೆದುಕೊಂಡಿದ್ದಾರೆ.
First published: June 19, 2020, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading