DBoss: ದರ್ಶನ್​ಗೆ ಚಾಲೆಂಜಿಂಗ್​​ ಸ್ಟಾರ್ ಪಟ್ಟ ಸಿಕ್ಕಿ​ ಇಂದಿಗೆ 17 ವರ್ಷ; ಡಿ ಬಾಸ್ ಅಭಿಮಾನಿಗಳಿಂದ ಸಂಭ್ರಮಾಚರಣೆ

Challenging star Darshan: 2001ರಲ್ಲಿ ಮೆಜೆಸ್ಟಿಕ್​ ಸಿನಿಮಾ ಮೂಲಕ ದರ್ಶನ್​​ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದರು. ಆನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಅಭಿಮಾನಿಗಳ ದಾಸನಾದರು. 2003ರಲ್ಲಿ ದರ್ಶನ್​ ಅವರಿಗೆ ಚಾಲೆಂಜಿಂಗ್​ ಸ್ಟಾರ್​ ಎಂಬ ಬಿರುದು ನೀಡಲಾಯಿತು.

news18-kannada
Updated:May 23, 2020, 4:25 PM IST
DBoss: ದರ್ಶನ್​ಗೆ ಚಾಲೆಂಜಿಂಗ್​​ ಸ್ಟಾರ್ ಪಟ್ಟ ಸಿಕ್ಕಿ​ ಇಂದಿಗೆ 17 ವರ್ಷ; ಡಿ ಬಾಸ್ ಅಭಿಮಾನಿಗಳಿಂದ ಸಂಭ್ರಮಾಚರಣೆ
ದರ್ಶನ್​​
  • Share this:
ಸ್ಯಾಂಡಲ್​ವುಡ್​ ನಟ ದರ್ಶನ್​ ಅವರಿಗೆ 'ಚಾಲೆಂಜಿಂಗ್​ ಸ್ಟಾರ್'​ ಎಂಬ ಬಿರುದು ಸಿಕ್ಕಿ ಇಂದಿಗೆ 17 ವರ್ಷಗಳು ಸಂದಿವೆ. ಕೊರೋನಾ ಲಾಕ್​ಡೌನ್​ ಸಮಯದಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಭ್ರಮವನ್ನು ಹಂಚಿಕೊಳ್ಳುವ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ.

2001ರಲ್ಲಿ 'ಮೆಜೆಸ್ಟಿಕ್'​ ಸಿನಿಮಾ ಮೂಲಕ ದರ್ಶನ್​​ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದರು. ಆನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಅಭಿಮಾನಿಗಳ ದಾಸನಾದರು. 2003ರಲ್ಲಿ ದರ್ಶನ್​ ಅವರಿಗೆ 'ಚಾಲೆಂಜಿಂಗ್​ ಸ್ಟಾರ್'​ ಎಂಬ ಬಿರುದು ನೀಡಲಾಯಿತು.

ದರ್ಶನ್​ ನಟಿಸಿದ ಸಾಕಷ್ಟು ಸಿನಿಮಾಗಳು ಬಾಕ್ಸ್​ ಆಫೀಸ್ ಕೊಳ್ಳೆ ಹೊಡೆದಿವೆ. ಮೊದಲ ಬಾರಿ ಅಭಿನಯಿಸಿದ ‘ಮೆಜೆಸ್ಟಿಕ್‘​ ಸಿನಿಮಾ ಅಂದಿಗೆ ದೊಡ್ಡ ಹಿಟ್​ ಕಂಡು ದರ್ಶನ್​ ಅವರಿಗಿ ಹೊಸ ಜೀವನ ರೂಪಿಸಿತ್ತು. ಆದಾದ ನಂತರ ಕರಿಯ, ನನ್ನ ಪ್ರೀತಿಯ ರಾಮು, ದಾಸ, ಕಲಾಸಿ ಪಾಳ್ಯ, ಸಾರಥಿ, ಸಂಗೊಳ್ಳಿ ರಾಯಣ್ಣ ಹೀಗೆ ಸೂಪರ್​ ಹಿಟ್​ ಸಿನಿಮಾಗಳನ್ನು ಕೊಟ್ಟಿದ್ದಾರೆ.

 ಇಷ್ಟು ಮಾತ್ರವಲ್ಲ ಅಭಿಮಾನಿಗಳ ಕಷ್ಟಕ್ಕೂ ಡಿ ಬಾಸ್ ಸ್ಪಂದಿಸುತ್ತಾ ಬಂದಿದ್ದಾರೆ. ಹಾಗಾಗಿ ದರ್ಶನ್​ ಅವರನ್ನು ಚಾಲೆಂಜಿಂಗ್​ ಸ್ಟಾರ್​, ಡಿ ಬಾಸ್​, ಬಾಕ್ಸ್​​ ಆಫೀಸು ಸುಲ್ತಾನ, ಅಭಿಮಾನಿಗಳ ಆರಾಧ್ಯ ದೈವ ಎಂದು ನಾನಾ ಹೆಸರಿನಿಂದ ಅಭಿಮಾನಿಗಳು ಕರಿಯುತ್ತಿದ್ದಾರೆ, ಪೂಜಿಸುತ್ತಿದ್ದಾರೆ. ವಿಶೇಷವೆಂದರೆ ಸ್ಯಾಂಡಲ್​ವುಡ್​ನಲ್ಲಿ ಅತಿ ಅಭಿಮಾನಿಗಳು ಹೊಂದಿರುವ ನಟನೆಂದರೆ ಅದು ದರ್ಶನ್​!.

ಸದ್ಯ ದರ್ಶನ್​ ನಟನೆಯ ‘ರಾಬರ್ಟ್​‘ ಸಿನಿಮಾ ಬಿಡುಗಡೆಯಾಗ ಸಿದ್ಧವಾಗಿದೆ. ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಈ ಸಿನಿಮಾದ ಬಗ್ಗೆ ದೊಡ್ಡ ಹೈಪ್​ ಕ್ರಿಯೇಟ್​ ಆಗಿದೆ. ಅಭಿಮಾನಿಗಳು  ಕೂಡ ಸಿನಿಮಾ ಬಿಡುಗಡೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ತರುಣ್​ ಸುಧೀರ್​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಬರ್ಟ್​ ಸಿನಿಮಾ ಲಾಕ್​ಡೌನ್​ ಸಡಿಲಗೊಂಡ ನಂತರ ಥಿಯೇಟರ್​ನಲ್ಲಿ ರಾರಾಜಿಸಲಿದೆ.

TikTok: ಟಿಕ್​ಟಾಕ್​​ ಬ್ಯಾನ್​ ಮಾಡುವುದು ಬೇಡವೆಂದ ಸ್ಯಾಂಡಲ್​ವುಡ್​ ನಟಿ!

First published: May 23, 2020, 4:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading