D Boss Darshan: ದರ್ಶನ್​ ಮೇಕಪ್​ ಮ್ಯಾನ್​ ಸಾವು; ಟ್ವೀಟ್​ ಮೂಲಕ ಸ್ಮರಿಸಿಕೊಂಡ ಡಿ ಬಾಸ್​

ನಟ ದರ್ಶನ್​

ನಟ ದರ್ಶನ್​

Challenging Star Darshan: ಮೇಕಪ್​ ಮ್ಯಾನ್​ ಶ್ರೀನಿವಾಸ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ 2 ದಶಕಗಳಿಂದ ದರ್ಶನ್​ ಅವರ ಬಳಿ ಮೇಕಪ್​ ಮ್ಯಾನ್​ ಆಗಿ ಶ್ರೀನಿವಾಸ್​ ಕೆಲಸ ಮಾಡುತ್ತಾ ಬಂದಿದ್ದಾರೆ. ಇದೀಗ ಅವರು ಸಾವನ್ನಪ್ಪಿದ್ದಾರೆ ಎಂಬ ವಿಚಾರ ಕೇಳಿ ದರ್ಶನ್​ ಟ್ವೀಟ್​ ಮಾಡುವ ಮೂಲಕ ನೆನಪಿಸಿಕೊಂಡಿದ್ದಾರೆ.

ಮುಂದೆ ಓದಿ ...
 • Share this:

  ಸ್ಯಾಂಡಲ್​ವುಡ್​ ನಟ ದರ್ಶನ್​ ಅವರನ್ನು ಅನೇಕರು ದಾನ ಶೂರ ಕರ್ಣ ಎಂದು ಕರೆಯುತ್ತಾರೆ. ಏಕೆಂದರೆ ಸಂಕಷ್ಟದಲ್ಲಿರುವ ಅನೇಕರಿಗೆ ದರ್ಶನ್​ ನೆರವಾಗುತ್ತಾ, ಸಹಾಯ ಮಾಡುತ್ತಾ ಬಂದಿದ್ದಾರೆ. ತಮ್ಮ ಬಳಿ ಸಹಾಯ ಕೇಳಿಕೊಂಡ ಬಂದ ಯಾರೇ ಆಗಲಿ ಅವರನ್ನು ಬರಿ ಕೈಯಲ್ಲಿ ಕಳುಹಿಸಿದ ಉದಾಹರಣೆಯೇ ಇಲ್ಲ. ಅಷ್ಟು ಮಾತ್ರವಲ್ಲ, ದರ್ಶನ್​​ ತಮಗೆ ಯಾರೆಲ್ಲಾ ಸಹಾಯ ಮಾಡಿದ್ದಾರೋ ಅವರನ್ನು ಕೂಡ ಸಾಯುವ ತನಕ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅದರಂತೆ ಇದೀಗ ದರ್ಶನ್​ ತಮ್ಮ ಬಳಿ ಮೇಕಪ್​ ಮ್ಯಾನ್​​ ಆಗಿ ಕೆಲಸ ನಿರ್ವಹಿಸಿದ ಶ್ರೀನಿವಾಸ್​ ಸಾವನ್ನಪ್ಪಿದ್ದಾರೆ. ಅವರ ಕೆಲಸವನ್ನು ನೆನಪಿಸಿಕೊಳ್ಳುವ ಮೂಲಕ ದರ್ಶನ್​ ಮೇಕಪ್ ​ಮ್ಯಾನ್​ ಶ್ರೀನಿವಾಸ್​ ಅವರ ಸಾವಿಗೆ ಶಾಂತಿ ಸಿಗಲಿ ಎಂದು ಟ್ವೀಟ್​ ಮಾಡಿದ್ದಾರೆ.


  ಮೇಕಪ್​ ಮ್ಯಾನ್​ ಶ್ರೀನಿವಾಸ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ 2 ದಶಕಗಳಿಂದ ದರ್ಶನ್​ ಅವರ ಬಳಿ ಮೇಕಪ್​ ಮ್ಯಾನ್​ ಆಗಿ ಶ್ರೀನಿವಾಸ್​ ಕೆಲಸ ಮಾಡುತ್ತಾ ಬಂದಿದ್ದಾರೆ. ಇದೀಗ ಅವರು ಸಾವನ್ನಪ್ಪಿದ್ದಾರೆ ಎಂಬ ವಿಚಾರ ಕೇಳಿ ದರ್ಶನ್​ ಟ್ವೀಟ್​ ಮಾಡುವ ಮೂಲಕ ನೆನಪಿಸಿಕೊಂಡಿದ್ದಾರೆ.


  ಈ ಬಗ್ಗೆ ಟ್ವೀಟ್​ ಮಾಡಿರುವ ನಟ ದರ್ಶನ್,​ ‘ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.  ಡಿಬಾಸ್​ ದರ್ಶನ್​​ ‘ರಾಬರ್ಟ್’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತರುಣ್​ ಸುಧೀರ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ಸ್ಯಾಂಡಲ್​​ವುಡ್​ನಲ್ಲಿ ಈ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಹೈಪ್​ ಕ್ರಿಯೆಟ್​ ಆಗಿದೆ. ಕೊರೋನಾ ಮುಗಿದು ಎಲ್ಲವೂ ಸಹಜ ಸ್ಥಿತಿಗೆ ಬಂದಂತೆ ‘ರಾಬರ್ಟ್’​ ಸಿನಿಮಾ ತೆರೆಗೆ ಅಪ್ಪಳಿಸಲಿದೆ.


  Bhajarangi 2 Teaser: ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ ಭಜರಂಗಿ-2 ಟೀಸರ್​; ಎಷ್ಟು ವೀಕ್ಷಣೆ ಕಂಡಿದೆ?


  ಸ್ಯಾಂಡಲ್​ವುಡ್​ ಖ್ಯಾತ ನಟನ ತಾಯಿಗೆ ಕೊರೋನಾ ಪಾಸಿಟಿವ್​!

  Published by:Harshith AS
  First published: