Darshan: ಟ್ರ್ಯಾಕ್ಟರ್ ಆಯ್ತು, ಈಗ ಎತ್ತಿನ ಬಂಡಿ ಏರಿ ರಸ್ತೆಗಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್​

ವಿನಯ್ ಕುಲಕರ್ಣಿ ಹಾಗೂ ನಟ ದರ್ಶನ್​ ಅವರ ಗೆಳೆತನ ಇಂದು ನಿನ್ನೆಯದಲ್ಲ. ಹಲವು ವರ್ಷಗಳ ಸ್ನೇಹ. ಇದೇ ಕಾರಣದಿಂದ ದರ್ಶನ್ ಆಗಾಗ ಸ್ನೇಹಿತನ ಮನೆಗೆ ಭೇಟಿ ನೀಡುತ್ತಿರುತ್ತಾರೆ

news18-kannada
Updated:August 14, 2020, 7:59 PM IST
Darshan: ಟ್ರ್ಯಾಕ್ಟರ್ ಆಯ್ತು, ಈಗ ಎತ್ತಿನ ಬಂಡಿ ಏರಿ ರಸ್ತೆಗಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್​
ಚಾಲೆಂಜಿಂಗ್ ಸ್ಟಾರ್ ದರ್ಶನ್
  • Share this:
ಧಾರವಾಡ (ಆಗಸ್ಟ್​.14) : ಚಿತ್ರನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಜಿ‌ ಸಚಿವ ವಿನಯ್​ ಕುಲಕರ್ಣಿ ಅವರ ವಿನಯ್ ಡೈರಿಗೆ ಭೇಟಿ‌ ನೀಡಿದ್ದರು. ಈ ವೇಳೆ ಎತ್ತಿನ ಗಾಡಿ ಏರಿ ಸಖತ್ ಎಂಜಾಯ್ ಮಾಡಿದ್ದಾರೆ.

ವಿನಯ್ ಕುಲಕರ್ಣಿ ಹಾಗೂ ನಟ ದರ್ಶನ್​ ಅವರ ಗೆಳೆತನ ಇಂದು ನಿನ್ನೆಯದಲ್ಲ. ಹಲವು ವರ್ಷಗಳ ಸ್ನೇಹ. ಇದೇ ಕಾರಣದಿಂದ ದರ್ಶನ್ ಆಗಾಗ ಸ್ನೇಹಿತನ ಮನೆಗೆ ಭೇಟಿ ನೀಡುತ್ತಿರುತ್ತಾರೆ. ಈಗಲೂ ಸಹ ಧಾರವಾಡದ ಹೊರ ವಲಯದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿನಯ ಡೈರಿಗೆ ನಟ ದರ್ಶನ್ ಬಂದಿದ್ದಾರೆ.



ಈ ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಚುನಾವಣಾ ಪ್ರಚಾರದಲ್ಲೂ ಸಹ ನಟ ದರ್ಶನ್ ಭಾಗಿಯಾಗಿದ್ದರು. ದರ್ಶನ್ ಅವರೇ ವಿನಯ್ ಕುಲಕರ್ಣಿ ಅವರಿಗೆ ಈ ಹಿಂದೆ ಪುಟ್ಟ ಕುದುರೆ‌ಯನ್ನು ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ :  ಕನ್ನಡದ ಪ್ರೇಕ್ಷಕರನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಕೀರ್ತಿ ಸುರೇಶ್​ ಮೇಲೆ ಗರಂ ಆದ ನೆಟ್ಟಿಗರು..!

ಈ ಕುದುರೆ ಸಹ ವಿನಯ್ ಡೇರಿಯಲ್ಲಿದೆ. ಇಂತಹ ಸ್ನೇಹಿತನ ಮನೆಗೆ ಭೇಟಿ ನೀಡಿರುವ ದರ್ಶನ್​, ಅವರ ಡೈರಿಯಲ್ಲಿ ಓಡಾಡಿ ಒಂದು ಸುತ್ತು ಹಾಕಿ, ಅಲ್ಲಿನ ಹಳ್ಳಿಯ ರಸ್ತೆಯಲ್ಲಿ ಎತ್ತಿನ ಬಂಡಿ ಓಡಿಸಿದ್ದಾರೆ.

ವಿನಯ್ ಅವರ ಡೈರಿಯಲ್ಲಿ ನೂರಾರು ಹಸುಗಳು, ಎಮ್ಮೆಗಳು, ಎತ್ತುಗಳು ಹಾಗೂ ಕುದುರೆಗಳು ಇವೆ. ವಿನಯ್​ ಅವರ ಡೈರಿಯಲ್ಲಿ ಎತ್ತಿನ ಗಾಡಿ ಓಟಕ್ಕೆ ಬಳಸುವ ವಿವಿಧ ಜಾತಿಯ ಹೊರಿಗಳಿವೆ. ಬೆಳಿಗಿನ ಜಾವ ಇದೆ ಹೊರಿಗಳ ಚಕ್ಕಡಿ ಓಡಿಸಿ ಸಖತ್ ಎಂಜಾಯ್ ಮಾಡಿದ್ದಾರೆ.
Published by: G Hareeshkumar
First published: August 14, 2020, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading