• Home
  • »
  • News
  • »
  • entertainment
  • »
  • Rishab Shetty: ರಿಷಬ್ ಶೆಟ್ಟಿಯ ಅಸಲಿ ಕತೆ ಬಿಚ್ಚಿಟ್ಟ ಸೈನೆಡ್ ಡೈರೆಕ್ಟರ್ AMR ರಮೇಶ್

Rishab Shetty: ರಿಷಬ್ ಶೆಟ್ಟಿಯ ಅಸಲಿ ಕತೆ ಬಿಚ್ಚಿಟ್ಟ ಸೈನೆಡ್ ಡೈರೆಕ್ಟರ್ AMR ರಮೇಶ್

ಸೈನೆಡ್ ಚಿತ್ರದಲ್ಲಿ ರಿಷಬ್ ಶೆಟ್ಟರೂ ಕೂಡ ಇದ್ರು ಗೊತ್ತೆ?

ಸೈನೆಡ್ ಚಿತ್ರದಲ್ಲಿ ರಿಷಬ್ ಶೆಟ್ಟರೂ ಕೂಡ ಇದ್ರು ಗೊತ್ತೆ?

ರಿಷಬ್ ಶೆಟ್ಟಿ ನಮ್ಮ ಎರಡು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಅಸಿಸ್ಟಂಟ್ ಡೈರೆಕ್ಟರ್ ಆಗಿಯೇ ಸೈನೈಡ್ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. 7 ರಿಂದ 8 ಜನ ಅಸಿಸ್ಟಂಟ್​​ಗಳಲ್ಲಿ ರಿಷಬ್ ಕೂಡ ಒಬ್ಬರು. ಆದರೆ ಇವರಿಗೆ ದುಡ್ಡು ಕೊಟ್ರೋ ಇಲ್ಲವೋ ನನಗೆ ಗೊತ್ತೇ ಇಲ್ಲ. ಅದು ನನ್ನ ಗಮನಕ್ಕೂ ಬಂದಿಲ್ಲ.

ಮುಂದೆ ಓದಿ ...
  • News18 Kannada
  • Last Updated :
  • Bangalore, India
  • Share this:

ಕನ್ನಡದಲ್ಲಿ ಎಲ್ಲಿ ನೋಡಿದ್ರು (Kantara) ಕಾಂತಾರ ಕ್ರೇಜ್ ಇದೆ. ಮತ್ತೆಲ್ಲಿ ವಿಚಾರಿಸಿದ್ರು ಅಷ್ಟೇ, ಕಾಂತಾರ ಅಂತಲೇ ಹೇಳ್ತಿದ್ದಾರೆ. ಸಿನಿ ಪ್ರೇಮಿಗಳ ಕ್ರೇಜ್ ಅನ್ನ ನೋಡ್ಬೇಕು ಅಂದ್ರೆ, ಯಾವುದೇ ಊರಿನ ಯಾವುದೇ (Theater) ಥಿಯೇಟರ್​ಗೆ ಹೋದ್ರು ಅಷ್ಟೆ, ಅಲ್ಲಿ ಕಾಂತಾರ ಸಿನಿ ಪ್ರೇಮಿಗಳು ನಿಮ್ಮನ್ನ ವೆಲ್​ ಕಮ್​ ಮಾಡುತ್ತಾರೆ. ಇಂತಹ ಚಿತ್ರ ಕೊಟ್ಟ ನಟ ನಿರ್ದೇಶಕ ರಿಷಬ್ ಶೆಟ್ಟಿ ಆರಂಭದ ದಿನಗಳು ಹೇಗಿದ್ದವು. ರಿಷಬ್ (Rishab Shetty) ಯಾರ ಜೊತೆಗೆಲ್ಲ ಕೆಲಸ ಮಾಡಿದ್ದಾರೆ. ಈ ಎಲ್ಲ ಪ್ರಶ್ನೆಗಳು ಈಗ ಕಾಂತಾರ ಚಿತ್ರದಷ್ಟೇ ಕುತೂಹಲ ಹುಟ್ಟಿಸಿವೆ. ಆ ಲೆಕ್ಕದಲ್ಲಿ ಸೈನೆಡ್ ಚಿತ್ರದ ನಿರ್ದೇಶಕ ಎ.ಎಂ.ಆರ್.ರಮೆಶ್ (Director AMR Ramesh) ಕೂಡ ಇದ್ದಾರೆ. ಇವರು ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಒಂದಷ್ಟು ಇಂಟ್ರಸ್ಟಿಂಗ್ ವಿಷಯಗಳನ್ನ ಶೇರ್ ಮಾಡಿಕೊಂಡಿದ್ದಾರೆ.


ಸೈನೆಡ್ ಚಿತ್ರ ಯಾರಿಗೊತ್ತಿಲ್ಲ ಹೇಳಿ. ಕನ್ನಡದಲ್ಲಿ ಬಂದಂತಹ ಅತ್ಯದ್ಭುತ ಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರವನ್ನು ತೆಗೆದುಕೊಳ್ಳಬಹುದು. ಅಷ್ಟು ಅದ್ಭುತವಾದ ಚಿತ್ರವನ್ನೆ ಡೈರೆಕ್ಟರ್ ಎ.ಎಂ.ಆರ್ ರಮೇಶ್ ಕನ್ನಡ ಸಿನಿ ಪ್ರೇಮಿಗಳಿಗೆ ಕೊಟ್ಟು ಸಕ್ಸಸ್ ಕೂಡ ಕಂಡರು.


Film Director AMR Ramesh talk About Rishab Shetty
ರಿಷಬ್ ಶೆಟ್ಟಿಯ ಆ ದಿನಗಳ ಅಸಲಿ ಕತೆ ಬಿಚ್ಚಿಟ್ಟ ಸೈನೈಡ್ ಡೈರೆಕ್ಟರ್ AMR ರಮೇಶ್


ಅಟ್ಟಹಾಸ ಸಿನಿಮಾನೂ ಅಷ್ಟೇ ಅಲ್ಲವೇ. ವೀರಪ್ಪನ್ ಕಥೆಯನ್ನೆ ಇಲ್ಲಿ ತೆಗೆದುಕೊಂಡು ಬಂದಿದ್ದರು. ಈ ಚಿತ್ರವೂ ಅಷ್ಟೇ ವಿಶೇಷವಾಗಿಯೇ ಇತ್ತು. ಅರ್ಜುನ್ ಸರ್ಜಾ, ಕಿಶೋರ್ ರಂತಹ ಮಹಾನ್ ನಟರು ಇಲ್ಲಿದ್ದರು. ಇವರ ಈ ಸಿನಿಮಾ ಕೂಡ ಸೂಪರ್ ಆಗಿಯೇ ಜನರ ಗಮನ ಸೆಳೆಯಿತು.


ಹೌದು, ಈ ಚಿತ್ರದ ಬಗ್ಗೆ ಇಲ್ಲಿ ಹೇಳೋಕೆ ಕಾರಣವೂ ಇದೆ. ಆ ಕಾರಣ, ನೇರವಾಗಿಯೆ ಕಾಂತಾರ ಚಿತ್ರದ ನಾಯಕ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಕನೆಕ್ಟ್ ಆಗುತ್ತಿದೆ. ಇದು ಸುಳ್ಳು ಅಲ್ಲವೇ ಅಲ್ಲ. ಸೈನೆಡ್ ರಮೇಶ್ ಅಂತಲೇ ಕರೆಸಿಕೊಳ್ಳುವ ಎ.ಎಂ.ಆರ್. ರಮೇಶ್ ಅವರೇ ನಮ್ಮ ಜೊತೆಗೆ ಇದನ್ನ ಹಂಚಿಕೊಂಡಿದ್ದಾರೆ


ಸೈನೈಡ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಅಸಿಸ್ಟಂಟ್ ಡೈರೆಕ್ಟರ್
ಹೌದು, ರಿಷಬ್ ಶೆಟ್ಟಿ ಸಹಾಯಕ ನಿರ್ದೇಶಕಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ನಟನಾ ಆಸಕ್ತಿಯೊಂದಿಗೇನೆ ರಿಷಬ್ ಈ ಸೈನೆಡ್ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. 7 ರಿಂದ 8 ಜನ ಅಸಿಸ್ಟಂಟ್ ನಿರ್ದೇಶಕರಲ್ಲಿ ರಿಷಬ್ ಶೆಟ್ಟಿ ಕೂಡ ಒಬ್ಬರಾಗಿದ್ದರು.


ಇದನ್ನೂ ಓದಿ: Kantara Movie-Dhanush: ಕಾಂತಾರ ಸಿನಿಮಾ ನೋಡಿ ಪ್ರತಿಕ್ರಿಯಿಸಿದ ನಟ ಧನುಷ್! ರಿಷಬ್ ಬಗ್ಗೆ ಏನಂದ್ರು?


ಸೈನೆಡ್ ಚಿತ್ರದ ಡೈರೆಕ್ಷನ್ ವಿಭಾಗದಲ್ಲಿ ರಿಷಬ್ ಶೆಟ್ಟಿ ಇಡೀ ಸಿನಿಮಾ ಕೆಲಸ ಮಾಡಿದ್ದಾರೆ.ಎ.ಎಂ.ಆರ್ ರಮೇಶ್ ಅವರ ಸಿನಿಮಾ ನಿರ್ದೇಶನವನ್ನ ಸೂಕ್ಷ್ಮವಾಗಿಯೇ ಗಮನಿಸಿದಂತೇನೂ ಇವೆ. ಅಲ್ಲಿಂದ ರಿಷಬ್ ಶೆಟ್ಟಿ ಏನ್ ಮಾಡಿದರು ಗೊತ್ತೇ?


ಅಟ್ಟಹಾಸದಲ್ಲಿ ರಿಷಬ್ ಅಂಡರ್​​ಕವರ್ ಕಾಪ್
ರಿಷಬ್ ಶೆಟ್ಟಿ ಮೊದಲು ಸೈನೆಡ್ ಚಿತ್ರಕ್ಕೆ ಅಸಿಸ್ಟಂಟ್​ ಡೈರೆಕ್ಟರ್ ಆಗಿ ಕೆಲಸ ಮಾಡಿದರು. ಅದಾದ ಮೇಲೆ ಅಟ್ಟಹಾಸ ಸಿನಿಮಾ ಬರೋ ಹೊತ್ತಿಗೆ ರಿಷಬ್ ಶೆಟ್ಟಿ ನಟನೆಯ ಆಸಕ್ತಿನೂ ಹೆಚ್ಚಾಗಿತ್ತು. ಅಸ್ಟಿಸ್ಟಂಟ್ ನಿರ್ದೇಶನದ ಜೊತೆಗೆ ಇದೇ ಅಟ್ಟಹಾಸ ಚಿತ್ರದಲ್ಲಿ ಒಂದು ಪಾತ್ರವನ್ನೂ ಮಾಡಿದರು.


ನಿಜ, ಅಟ್ಟಹಾಸ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅಂಡರ್​​ಕವರ್ ಕಾಪ್ ಆಗಿಯೇ ಅಭಿನಯಿಸಿದ್ದರು. ಅರ್ಜುನ್ ಸರ್ಜಾ, ಕಿಶೋರ್​ರಂತಹ ನಟರ ಈ ಚಿತ್ರದಲ್ಲಿ ಅಸಿಸ್ಟಂಟ್ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿಯೇ ಬಿಟ್ಟರು.


ಅಟ್ಟಹಾಸದಂತೆ ಸಿನಿಮಾದಲ್ಲೂ ಎರಡೆರಡು ಕೆಲಸ ಮಾಡಿದ್ದ ರಿಷಬ್ ಶೆಟ್ಟಿ, ನಿರ್ದೇಶನ ಮತ್ತು ನಟನೆ ಹೀಗೆ ಎರಡನ್ನೂ ಆಗಲೇ ಬ್ಯಾಲೆನ್ಸ್ ಮಾಡಿದ್ದರು. ಇನ್ನು ಈಗ ಹೇಳಬೇಕೇ? ಕಾಂತಾರ ಸಿನಿಮಾದಲ್ಲಿ ಕಥೆಯನ್ನೂ ಬರೆದಿದ್ದಾರೆ. ನಿರ್ದೇಶನವನ್ನೂ ಮಾಡಿದ್ದಾರೆ.


ಅಷ್ಟೇ ಯಾಕೆ? ಚಿತ್ರದ ನಾಯಕ ಕೂಡ ಇವರೇ ಅಲ್ಲವೇ ?
ಸೈನೆಡ್ ರಮೇಶ್ ಅವರ ಚಿತ್ರಕ್ಕೆ ರಿಷಬ್ ಫ್ರೀ ಆಗಿಯೇ ಕೆಲಸ ಮಾಡಿದ್ರೇ?
ಕಾಂತಾರ ಹಿಟ್ ಆದ್ಮೇಲೆ ಡೈರೆಕ್ಟರ್ ರಿಷಬ್ ಶೆಟ್ಟಿ ಅವರ ಹಳೆ ದಿನಗಳ ಕಥೆಗಳೆಲ್ಲ ಈಗ ಸುದ್ದಿ ಆಗುತ್ತಿವೆ. ಎ.ಎಂ.ಆರ್. ರಮೇಶ್ ಅವರ ಚಿತ್ರದಲ್ಲಿ ಕೆಲಸ ಮಾಡಿದ್ದರೂ ರಮೇಶ್ ಅವರು ರಿಷಬ್​ ಗೆ ದುಡ್ಡೇ ಕೊಟ್ಟಿಲ್ಲ ಅನ್ನೋ ಮಾತು ಕೂಡ ಇದೆ.


ಎ.ಎಂ.ಆರ್ ರಮೇಶ್ ಈಗ ಇದಕ್ಕೆ ಏನಂತಾರೆ?
ರಿಷಬ್ ಶೆಟ್ಟಿ ನಮ್ಮ ಎರಡು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಡೈರೆಕ್ಷನ್ ವಿಭಾಗದಲ್ಲಿಯೆ ಇದ್ದರು. ಅಸಿಸ್ಟಂಟ್ ಡೈರೆಕ್ಟರ್ ಆಗಿಯೇ ಸೈನೆಡ್ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. 7 ರಿಂದ 8 ಜನ ಅಸಿಸ್ಟಂಟ್​​ಗಳಲ್ಲಿ ರಿಷಬ್ ಕೂಡ ಒಬ್ಬರು. ಆದರೆ ಇವರಿಗೆ ದುಡ್ಡು ಕೊಟ್ರೋ ಇಲ್ಲವೋ ನನಗೆ ಗೊತ್ತೇ ಇಲ್ಲ. ಅದು ನನ್ನ ಗಮನಕ್ಕೂ ಬಂದಿಲ್ಲ.


ಇದನ್ನೂ ಓದಿ: Vikrant Rona Movie: ಟಿವಿಯಲ್ಲಿ ಬರ್ತಿದೆ ವಿಕ್ರಾಂತ್ ರೋಣ, ಇಲ್ಲಿದೆ ಫುಲ್ ಡೀಟೆಲ್ಸ್


ಆದರೆ, ರಿಷಬ್ ಶೆಟ್ಟಿ ನಮ್ಮ ಅಟ್ಟಹಾಸ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಅಂಡರ್​ಕವರ್ ಕಾಪ್ ಪಾತ್ರವನ್ನೂ ಮಾಡಿದ್ದರು. ಆಗಲೇ ರಿಷಬ್​ಗೆ ನಟನೆ ಬಗ್ಗೆ ಆಸಕ್ತಿ ಇತ್ತು ಅಂತಲೇ ಎ.ಎಂ.ಆರ್.ರಮೇಶ್ ಹೇಳಿದರು.


ಕಾಂತಾರ ಸಿನಿಮಾ ನೋಡಿದ್ರಾ ಎ.ಎಂ.ಆರ್ ರಮೇಶ್ ?
ಕಾಂತಾರ ಸಿನಿಮಾದ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದೆ. ಬಾಲಿವುಡ್​ ಗೂ ಕಾಂತಾರ ಈಗ ಕಾಲಿಟ್ಟಿದೆ. ಇಷ್ಟು ಕ್ರೇಜ್ ಹುಟ್ಟುಹಾಕಿರೋ ಕಾಂತಾರ ಸಿನಿಮಾವನ್ನ ಎಲ್ಲರೂ ನೋಡ್ತಾಯಿದ್ದಾರೆ. ಎ.ಎ.ಆರ್.ರಮೇಶ್ ಅವರು ಇನ್ನೇನೂ ಇದೇ ಸೋಮುವಾರ ಕಾಂತಾರ ಸಿನಿಮಾ ನೋಡೊ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ.


ಶ್ರಮಪಟ್ಟು ಕೆಲಸ ಮಾಡಿರೋ ರಿಷಬ್ ಶೆಟ್ಟಿಗೆ ಒಳ್ಳೆಯದಾಗಲಿ, ಶ್ರಮಪಡೋ ಎಲ್ಲರಿಗೂ ಒಳ್ಳೆಯದಾಗಲಿ ಅಂತಲೇ ಸೈನೆಡ್ ಸಿನಿಮಾ ಡೈರೆಕ್ಟರ್ ಎ.ಎಂ.ಆರ್​.ರಮೇಶ್ ಹೇಳಿದ್ದಾರೆ.

First published: