HOME » NEWS » Entertainment » CULT KANNADA GANGSTER MOVIES YOU CAN STREAM RIGHT NOW HG

ಅಮೆಜಾನ್​ನಲ್ಲಿ ಧೂಳೆಬ್ಬಿಸುತ್ತಿದೆ ಕನ್ನಡದ ಗ್ಯಾಂಗ್​ಸ್ಟರ್ ಸಿನಿಮಾಗಳು; ಮಿಸ್ ಮಾಡದೆ ನೋಡಿ

ಲಾಕ್​ಡೌನ್​ ಅವಧಿಯಲ್ಲಿ ಗ್ಯಾಂಗ್​ಸ್ಟರ್​ ಸಿನಿಮಾಗಳು ಹೆಚ್ಚುಹೆಚ್ಚು ಮರು ವೀಕ್ಷಣೆ ಕಾಣುತ್ತಿದೆ. ಅವುಗಳ ಬಗ್ಗೆ ಕೊಂಚ ಮೆಲುಕು ಹಾಕೋಣ....

news18-kannada
Updated:May 6, 2020, 7:35 AM IST
ಅಮೆಜಾನ್​ನಲ್ಲಿ ಧೂಳೆಬ್ಬಿಸುತ್ತಿದೆ ಕನ್ನಡದ ಗ್ಯಾಂಗ್​ಸ್ಟರ್ ಸಿನಿಮಾಗಳು; ಮಿಸ್ ಮಾಡದೆ ನೋಡಿ
ಲಾಕ್​ಡೌನ್​ ಅವಧಿಯಲ್ಲಿ ಗ್ಯಾಂಗ್​ಸ್ಟರ್​ ಸಿನಿಮಾಗಳು ಹೆಚ್ಚುಹೆಚ್ಚು ಮರು ವೀಕ್ಷಣೆ ಕಾಣುತ್ತಿದೆ. ಅವುಗಳ ಬಗ್ಗೆ ಕೊಂಚ ಮೆಲುಕು ಹಾಕೋಣ....
  • Share this:
ಸ್ಯಾಂಡಲ್​ವುಡ್​ನಲ್ಲಿ ನಾನಾ ರೀತಿಯ ವಿಭಿನ್ನ ಸಿನಿಮಾಗಳು ಬಂದು ಹೋಗಿವೆ. ಆದರೆ, ಈ ಸಾಲಿನಲ್ಲಿ ಗ್ಯಾಂಗ್​ಸ್ಟಾರ್​ ಸಿನಿಮಾಗಳು ಕನ್ನಡದ ದಿಕ್ಕನ್ನೆ ಬದಲಾಯಿಸಿದ್ದು ಎಂದರೆ ತಪ್ಪಾಗಲಾರದು. ಹೊಸತನದ ಜೊತೆಗೆ ಹಿರೋಗಳ ದೆಸೆಯನ್ನೇ ಬದಲಾಯಿಸಿದ ಸಿನಿಮಾಗಳೆಂದರೆ ಗ್ಯಾಗ್​ಸ್ಟರ್​ ಚಿತ್ರಗಳು. ಅದೇರೀತಿ ಸದ್ಯ ಲಾಕ್​ಡೌನ್​ ಅವಧಿಯಲ್ಲಿ ಗ್ಯಾಂಗ್​ಸ್ಟರ್​ ಸಿನಿಮಾಗಳು ಹೆಚ್ಚುಹೆಚ್ಚು ಮರು ವೀಕ್ಷಣೆ ಕಾಣುತ್ತಿದೆ. ಅವುಗಳ ಬಗ್ಗೆ ಕೊಂಚ ಮೆಲುಕು ಹಾಕೋಣ....

ಅದು 1995ರ ಅವಧಿ. ರಿಯಲ್​ ಸ್ಟಾರ್​ ಉಪೇಂದ್ರ ಅವರ ‘ಓಂ‘ ಸಿನಿಮಾ ಅಂದಿಗೆ ಹೊಸ ಕಥೆ, ಹೊಸ ನಟನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ರಾಜ್​ ಕುಟುಂಬದಿಂದ ಶಿವರಾಜ್​ ಕುಮಾರ್​ ‘ಓಂ‘ ಸಿನಿಮಾದ ಮೂಲಕ ಮಾಸ್ ಹೀರೋ ಆಗಿ ಸ್ಯಾಂಡಲ್​ವುಡ್​ಗೆ ಕಾಲಿಟ್ಟದ್ದು ಎಂದರೆ ತಪ್ಪಾಗಲಾರದು. ನಿರ್ದೇಶಕ ಕಾಶಿನಾಥ್​​ ಅವರೊಂದಿಗೆ ಪಳಗಿದ್ದ ಉಪೇಂದ್ರ, ‘ಓಂ‘ ಎಂಬ ಕಥೆಯನ್ನು ಕಟ್ಟಿ ಸ್ಯಾಂಡಲ್​ವುಡ್​ ಪರದೆಯ ಮೇಲೆ ಬಿಟ್ಟಿದ್ದೇ ತಡ. ಚಿತ್ರ ನೂರು ದಿನವನ್ನು ಪೂರೈಸಿತ್ತು. ಮಾತ್ರವಲ್ಲ, ಈ ಸಿನಿಮಾದಲ್ಲಿ ನಟಿಸಿದ್ದ ಎಲ್ಲರಿಗೂ ಹೊಸ ಹಾದಿ ಹುಟ್ಟಿಕೊಂಡಿತು. ಇನ್ನು ಉಪೇಂದ್ರ ಅವರು ಬದುಕು ಕೂಡ ಬದಲಾಯಿತು. ಕನ್ನಡಿಗರಿಗೆ ಗ್ಯಾಂಗ್​ಸ್ಟರ್​ ಸಿನಿಮಾ ಪರಿಚಯವಾಗಿದ್ದು ಅಂದೆ.

ಪ್ರೀತಿಯ ಜೊತೆಗೆ ಅಂಡರ್​ ವಲ್ಡ್​​ ಅಂಗಳವನ್ನು ವಿಭಿನ್ನವಾಗಿ ಚಿತ್ರಿಸಿ ಪ್ರೇಕ್ಷಕರಿಗೆ ಉಣ ಬಡಿಸಿದ್ದ ಈ ಸಿನಿಮಾವನ್ನು ಜನರು ಈಗಲೂ ಇಷ್ಟ ಪಡುತ್ತಾರೆ. ‘ಓಂ‘ ಸಿನಿಮಾ ಹಲವು ಭಾರಿ ರಿಲೀಸ್​ ಆದ ಉದಾಹರಣೆಗಳಿದೆ. ಮಾತ್ರವಲ್ಲ ಥಿಯೇಟರ್​ನಲ್ಲಿ ಪ್ರೇಕ್ಷರರನ್ನು ತುಂಬಿ ತುಳುಕುವಂತೆ ಮಾಡಿದ ಶಕ್ತಿ ‘ಓಂ‘ ಸಿನಿಮಾಗೆ ಸಲ್ಲುತ್ತದೆ. ಈಗಲೂ ಜನ ಈ ಸಿನಿಮಾವನ್ನು ವೀಕ್ಷಣೆ ಮಾಡುತ್ತಾರೆ. ಸದ್ಯ ಎಮ್​ ಎಕ್ಸ್​ ಪ್ಲೇಯರ್​ನಲ್ಲಿ ‘ಓಂ‘ ಸಿನಿಮಾ ನೋಡಬಹುದಾಗಿದೆ.

‘ಓಂ‘


ಇದಾದ ನಂತರ ಕನ್ನಡದಲ್ಲಿ ಒಂದೊಂದೆ ಗ್ಯಾಂಗ್​ಸ್ಟರ್​ ಸಿನಿಮಾಗಳು ಸ್ಯಾಂಡಲ್​ವುಡ್​ನಲ್ಲಿ ಮೂಡಿಬಂದವು. ದರ್ಶನ್​ ನಟನೆಯ ಕರಿಯ (2003) ಸಿನಿಮಾ ಕೂಡ ಅಂದಿಗೆ ದೊಡ್ಡದಾಗಿ ಸೌಂಡ್​ ಮಾಡಿತ್ತು. ನಿರ್ದೇಶಕ ಪ್ರೇಮ್​ ಅವರ ಆ್ಯಕ್ಷನ್​ ಕಟ್​ನಲ್ಲಿ ಮೂಡಿಬಂದ  ‘ಕರಿಯ‘ ಸಿನಿಮಾ ದರ್ಶನ್​ ಅವರ ಬದುಕನ್ನೇ ಬದಲಾಯಿಸಿತು. ಸದ್ಯ ಅಮೆಜಾನ್ ಪ್ರೈಮ್​ನಲ್ಲಿ ಈ ಸಿನಿಮಾವನ್ನೂ ನೋಡಬಹುದಾಗಿದೆ.

ಕರಿಯ


ಇದಾದ ನಂತರ ನಿರ್ದೇಶಕ ಪ್ರೇಮ್​​​ ಮತ್ತೊಂದು ಗ್ಯಾಂಗ್​​ಸ್ಟರ್​ ಸಿನಿಮಾವನ್ನು ಕೈಗೆತ್ತಕೊಳ್ಳುತ್ತಾರೆ. ನಟ ಶಿವರಾಜ್​ ಕುಮಾರ್ ಅವರನ್ನು ಹಾಕಿಕೊಂಡು ‘ಜೋಗಿ‘ ಟೈಟಲ್​ನಲ್ಲಿ ಸಿನಿಮಾ ತೆರೆಕಾಣುತ್ತಿದೆ. ತಾಯಿ ಮತ್ತು ಅಂಡರ್ವಲ್ಡ್​ ಸೆಂಟಿಮೆಂಟ್​ ಇಟ್ಟುಕೊಂಡು ಮಾಡಿದ ‘ಜೋಗಿ‘ ಚಿತ್ರ ದೊಡ್ಡ ಮಟ್ಟದ ಹಿಟ್ ಆಗುತ್ತದೆ.‘ಜೋಗಿ‘ ಸಿನಿಮಾ ಶಿವರಾಜ್​ ಕುಮಾರ್​ ಅವರನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ಯುತ್ತದೆ. ಗಾಂಧಿ ನಗರದಲ್ಲಿ ಈ ಸಿನಿಮಾ 100ಕ್ಕೂ ಹೆಚ್ಚು ದಿನವನ್ನು ಪೂರೈಸಿತ್ತು. ಸದ್ಯ ಈ ಸಿನಿಮಾ ಯ್ಯೂಟೂಬ್​​ನಲ್ಲಿ ವೀಕ್ಷಕರಿಗೆ ಸಿಗುತ್ತಿದೆ.

‘ಜೋಗಿ‘


ಲಾಕ್​ಡೌನ್​ ಅವಧಿಯಲ್ಲಿ ಓಟಿಟಿ ಫ್ಲಾಟ್​ಫಾಮ್​ ಬಳಗೆ ಹೆಚ್ಚಾಗಿದ್ದು. ಈ ವೇಳೆ ಕನ್ನಡ ಅನೇಕ ಸಿನಿಮಾಗಳು ವೀಕ್ಷಣೆ ಕಂಡಿದೆ. ಹಳೆಯ ಸಿನಿಮಾಗಳು ಮತ್ತೆ ಹವಾ ಎಬ್ಬಿಸುವಂತೆ ಮಾಡಿದೆ. ಅದರಲ್ಲಿ ಗ್ಯಾಂಗ್​ಸ್ಟರ್​​ ಸಿನಿಮಾಗಳು ಕೂಡ ಅನೇಕರಿಂದ ವೀಕ್ಷಣೆ ಕಂಡಿದೆ.

200 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು; ಬೆಲೆ ತಿಳಿದರೆ ನಿಮಗೂ ಇಷ್ಟವಾದಿತು!
Youtube Video

 
First published: May 6, 2020, 7:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories