• Home
  • »
  • News
  • »
  • entertainment
  • »
  • Shraddha Walker: ಕ್ರೈಂ ಪೆಟ್ರೋಲ್​ನಲ್ಲಿ ಶ್ರದ್ಧಾ ಕೊಲೆ ಪ್ರಕರಣ! ಚಾನೆಲ್​ಗೆ ಸಂಕಷ್ಟ

Shraddha Walker: ಕ್ರೈಂ ಪೆಟ್ರೋಲ್​ನಲ್ಲಿ ಶ್ರದ್ಧಾ ಕೊಲೆ ಪ್ರಕರಣ! ಚಾನೆಲ್​ಗೆ ಸಂಕಷ್ಟ

ಕೊಲೆಗೀಡಾದ ಶ್ರದ್ಧಾ ವಾಕರ್ ಹಾಗೂ ಆರೋಪಿ ಅಫ್ತಾಬ್

ಕೊಲೆಗೀಡಾದ ಶ್ರದ್ಧಾ ವಾಕರ್ ಹಾಗೂ ಆರೋಪಿ ಅಫ್ತಾಬ್

ಕ್ರೈಂ ಪೆಟ್ರೋಲ್​ನಲ್ಲಿ ಶ್ರದ್ಧಾ ವಾಕರ್ ಕೇಸ್ ಎಪಿಸೋಡ್ ಮಾಡಿ ತೋರಿಸುವ ಅಗತ್ಯವಿತ್ತೇ? ಎಪಿಸೋಡ್ ಪ್ರಸಾರ ಮಾಡಿ ಸಂಕಷ್ಟಕ್ಕೆ ಸಿಲುಕಿದೆ ಚಾನೆಲ್.

  • Trending Desk
  • 3-MIN READ
  • Last Updated :
  • Delhi, India
  • Share this:

ಜನಪ್ರಿಯ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಕ್ರೈಂ ಪೆಟ್ರೋಲ್ (Crime Petrol) ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ? ಹೌದು. ತುಂಬಾ ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಕ್ರೈಂ ಸ್ಟೋರಿಗಳ ಕಥೆಗಳ ಸುತ್ತ ಹೆಣೆದಿರುವ ಕಥೆಗಳನ್ನು ತೋರಿಸುವ ಧಾರಾವಾಹಿ (Serial) ಇದು. ಆದರೆ ಇದರಲ್ಲಿ ಬರುವ ಎಪಿಸೋಡ್ ಗಳನ್ನು ನೋಡಿದವರಿಗೆ ಇದೇ ರೀತಿಯ ಒಂದು ಪ್ರಕರಣವೊಂದು ಹಿಂದೆ ಯಾವತ್ತೋ ನಡೆದಿತ್ತಲ್ಲ ಅಂತ ಅನ್ನಿಸುವುದಂತೂ ನಿಜ.


ಕ್ರೈಂ ಪೆಟ್ರೋಲ್ ನ ಇತ್ತೀಚಿನ ಒಂದು ಎಪಿಸೋಡ್ ಶ್ರದ್ಧಾ ವಾಲ್ಕರ್ (Shraddha Walker) ಅವರ ಕೊಲೆ ಪ್ರಕರಣವನ್ನು ಹೋಲುವ ಕಥೆಯನ್ನು ಚಿತ್ರಿಸಿದೆ ಎಂದು ಕೆಲವು ಪ್ರೇಕ್ಷಕರು ಹೇಳಿದ್ದಾರೆ.


ಕ್ರೈಂ ಪೆಟ್ರೋಲ್ ನ ಈ ಎಪಿಸೋಡ್ ವಾಲ್ಕರ್ ಕೊಲೆ ಪ್ರಕರಣವನ್ನು ಹೋಲುತ್ತದೆಯೇ?


ಈ ಜನರ ಅಭಿಪ್ರಾಯವನ್ನು ಕೇಳಿದ ನಂತರ, ಸೋನಿ ಟಿವಿಯವರು ಕೂಡಲೇ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಸೋನಿ ಟಿವಿ ಸೋಮವಾರ ತಡರಾತ್ರಿ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಈ ಕೊಲೆ ಪ್ರಕರಣದೊಂದಿಗೆ ಈ ಎಪಿಸೋಡ್ ನ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ.




ವೀಕ್ಷಕರ ಭಾವನೆಗಳಿಗೆ ಧಕ್ಕೆ ಆದಲ್ಲಿ ಮತ್ತು ಮನಸ್ಸನ್ನು ನೋಯಿಸಿದ್ದರೆ ಚಾನೆಲ್ 'ಪ್ರಾಮಾಣಿಕವಾಗಿ ವಿಷಾದಿಸುತ್ತದೆ' ಎಂದಿದೆ.


ಇದನ್ನೂ ಓದಿ: Shraddha Murder Case: ಶ್ರದ್ಧಾಳ ದೇಹದ ತುಂಡುಗಳು ಇರುವಾಗಲೇ ವೈದ್ಯೆ ಜೊತೆ ಸರಸವಾಡಿದ್ದ ಅಫ್ತಾಬ್!


ಕೆಲವು ವೀಕ್ಷಕರು ಕ್ರೈಂ ಪೆಟ್ರೋಲ್ ನ ಇತ್ತೀಚಿನ ಎಪಿಸೋಡ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್ ಮಾಡಿದ್ದಾರೆ. ಇದು ಇತ್ತೀಚೆಗೆ ವರದಿಯಾದ ದೆಹಲಿ ಘಟನೆಯನ್ನು ಹೋಲುತ್ತದೆ ಎಂದು ಹೇಳಿದ್ದಾರೆ.


ಈ ಪ್ರಸಂಗವು ಕಾಲ್ಪನಿಕ ಕೃತಿಯಾಗಿದೆ. ಇದು 2011 ರಲ್ಲಿ ಸಂಭವಿಸಿದ ಕೆಲವು ಘಟನೆಗಳನ್ನು ಆಧರಿಸಿದೆ. ಇದಕ್ಕೂ ಇತ್ತೀಚಿನ ಯಾವುದೇ ಪ್ರಕರಣಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ಸೋನಿ ತಿಳಿಸಿದೆ.


ಏನ್ ಹೇಳಿದ್ದಾರೆ ಎಪಿಸೋಡ್ ಅನ್ನು ಪ್ರಸಾರ ಮಾಡಿದ ಟಿವಿಯವರು?


ನಮ್ಮ ಧಾರವಾಹಿಯಲ್ಲಿ ತೋರಿಸುವ ವಿಷಯವು ನಿಯಂತ್ರಕ ಸಂಸ್ಥೆಗಳು ನಿಗದಿಪಡಿಸಿದ ಪ್ರಸಾರ ಮಾನದಂಡಗಳನ್ನು ಫಾಲೋ ಮಾಡುತ್ತದೆ. ಆದರೂ ಪ್ರೇಕ್ಷಕರ ಭಾವನೆಗಳನ್ನು ಗೌರವಿಸಿ, ನಾವು ಸಂಚಿಕೆಯ ಪ್ರಸಾರವನ್ನು ನಿಲ್ಲಿಸಿದ್ದೇವೆ. ಪ್ರಸಾರವು ನಮ್ಮ ಯಾವುದೇ ವೀಕ್ಷಕರ ಭಾವನೆಗಳನ್ನು ನೋಯಿಸಿದ್ದರೆ, ನಾವು ನಮ್ಮ ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇವೆ ಎಂದಿದ್ದಾರೆ.




ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು ನೀವು ಈ ಎಲ್ಲ ಕಥೆ ಹೇಳೋದು ನಿಲ್ಲಿಸಿ. 2011 ರಲ್ಲಿ ನಡೆದಿದೆ ಎಂದಿರುವ ಪ್ರಕರಣದ ಸಂಪೂರ್ಣ ವಿವರಗಳನ್ನು ಸ್ಥಳ, ನಿಜವಾದ ಹೆಸರಿನಂತಹ ಸಂಪೂರ್ಣ ವಿವರಗಳನ್ನು ನಮಗೆ ಹೇಳಿ ಎಂದು ಚಾಲೆಂಜ್ ಮಾಡಿದ್ದಾರೆ.


ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯಿಸಿ "ಹಾನಿ ಈಗಾಗಲೇ ಸಂಭವಿಸಿದೆ. ಇತ್ತೀಚಿನ ದಿನಗಳಲ್ಲಿ ಮನರಂಜನಾ ಆ್ಯಪ್​ಗಳಿಗೆ ಯಾವುದೇ ಕೊರತೆಯಿಲ್ಲ" ಎಂದು ಅವರು ಹೇಳಿದರು. "ನೀವು ‘ಕ್ಷಮೆಯಾಚಿಸಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಕಮೆಂಟ್ ನಲ್ಲಿ ಬರೆದಿದ್ದಾರೆ.


ಏನದು ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ?


ಕ್ರೈಂ ಪೆಟ್ರೋಲ್ ತಯಾರಕರು ಇತ್ತೀಚೆಗೆ ಒಂದು ಸಂಚಿಕೆಯನ್ನು ಪ್ರಸಾರ ಮಾಡಿದರು. ಅದರಲ್ಲಿ ಪ್ರೇಕ್ಷಕರು ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ಸಾಮ್ಯತೆ ಗಮನಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವಿಭಾಗವು ಚಾನೆಲ್ ಅನ್ನು ಬಹಿಷ್ಕರಿಸಲು ಕರೆ ನೀಡಿತ್ತು.


ಶ್ರದ್ಧಾ ವಾಲ್ಕರ್ ಅವರ ಪ್ರಕರಣದ ಬಗ್ಗೆ ಮಾತನಾಡುವುದಾದರೆ, ಮುಂದಿನ ವಿಚಾರಣೆಯನ್ನು ಜನವರಿ 6 ರಂದು ನಿಗದಿಪಡಿಸಿದ್ದಾರೆ. ಅಫ್ತಾಬ್ ಪೂನವಾಲಾ ತನ್ನ ಲಿವ್-ಇನ್ ಪಾರ್ಟ್ನರ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಆಕೆಯ ದೇಹವನ್ನು ಕತ್ತರಿಸಿ ಎಸೆದ ಆರೋಪ ಎದುರಿಸುತ್ತಿದ್ದಾನೆ.

Published by:Divya D
First published: