ದಕ್ಷಿಣ ಭಾರತೀಯ ಸಿನಿಮಾಗಳೇ ಬೆಸ್ಟ್ ಎಂದ ವೀರೇಂದ್ರ ಸೆಹವಾಗ್​!

news18
Updated:July 24, 2018, 1:11 PM IST
ದಕ್ಷಿಣ ಭಾರತೀಯ ಸಿನಿಮಾಗಳೇ ಬೆಸ್ಟ್ ಎಂದ ವೀರೇಂದ್ರ ಸೆಹವಾಗ್​!
news18
Updated: July 24, 2018, 1:11 PM IST
ಆನಂದ್​ ಸಾಲುಂಡಿ, ನ್ಯೂಸ್​ 18 ಕನ್ನಡ

ತಮ್ಮ ಡ್ಯಾಶಿಂಗ್ ಬ್ಯಾಟಿಂಗ್ ಮೂಲಕ ವಿಶ್ವಶ್ರೇಷ್ಠ ಬೌಲರ್​ಗಳಿಗೆಲ್ಲ ನೀರಿಳಿಸಿದ್ದ ವೀರೆಂದ್ರ ಸೆಹವಾಗ್ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಸ್ಯಾಂಡಲ್‍ವುಡ್‍ಕಿಂಗ್ ಶಿವಣ್ಣ, ಕಿಚ್ಚ ಸುದೀಪ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಅವರು ದಕ್ಷಿಣ ಭಾರತದ ಚಿತ್ರಗಳ ಬಗ್ಗೆ ಮಾತಾಡಿದ್ದಾರೆ. ಅದೇನು ಅಂತೀರಾ? ಈ ವರದಿ ಓದಿ ನಿಮಗೆ ತಿಳಿಯುತ್ತೆ.

ಹಿಂದಿ ಸಿನಿಮಾಗಳಲ್ಲಿ ಪ್ರೀತಿ-ಪ್ರೇಮ- ಪ್ರಣಯ- ಹಾಸ್ಯ ಎಲ್ಲವೂ ಇರುತ್ತೆ. ಅದರಲ್ಲೂ ಕಣ್ಣು ಕೋರೈಸೋ ರಿಚ್‍ನೆಸ್‍ಗಂತೂ ಒಂಚೂರು ಕೊರತೆಯಿರಲ್ಲ. ಆದರೆ ಇಷ್ಟೆಲ್ಲ ಇದ್ದೂ ದಕ್ಷಿಣ ಭಾರತೀಯ ಸಿನಿಮಾಗಳನ್ನು ಹೆಚ್ಚಾಗಿ ನೋಡುವವರಿಗೆ  ಬಾಲಿವುಡ್‍ನಲ್ಲಿ ಮಾಸ್ ಮಸಾಲ ಫ್ಲೇವರ್​ ಇಲ್ಲ ಅನ್ನಿಸುವುದು ಸಹಜ. ಅದರಲ್ಲೂ ಸಾಹಸ ದೃಶ್ಯಗಳಲ್ಲಿ ನಿರ್ದೇಶಕರು ಹೆಚ್ಚು ಒತ್ತು ಕೊಡೋದೆ ಇಲ್ಲ. ಈ ವಿಷಯದಲ್ಲಿ ಬಾಲಿವುಡ್ ಸಿನಿಮಾಗಳು ಎಲ್ಲವೂ ಇದ್ದು ಕೂಡ ಸಪ್ಪೆ ಸಪ್ಪೆ ಎನಿಸುತ್ತವೆ.

ಬಾಕ್ಸಾಫಿಸ್ ಸುಲ್ತಾನ ಸಲ್ಮಾನ್ ಸಿನಿಮಾಗಳು ಇದಕ್ಕೆ ಅಪವಾದ ಎನ್ನಬಹುದು. ಏಕೆಂದರೆ 'ಪೋಕಿರಿ' ಚಿತ್ರದ ರಿಮೇಕ್ 'ವಾಂಟೆಡ್‍'ನಲ್ಲಿ ಕಾಣಿಸಿಕೊಂಡ ನಂತರ ಅವರು ಪಕ್ಕಾ ಮಾಸ್ ಮಸಾಲ ಚಿತ್ರಗಳಲ್ಲೇ ಅಭಿನಯಿಸುತ್ತಿದ್ದಾರೆ. ಆ ಮೂಲಕ ಬ್ಯಾಕ್‍ಟು ಬ್ಯಾಕ್ ಯಶಸ್ಸು ಕಾಣುತ್ತಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೆಂದ್ರ ಸೆಹವಾಗ್ ಅವರ ಮಕ್ಕಳಿಗೆ  ದಕ್ಷಿಣ ಭಾರತದ ಸಿನಿಮಾಗಳೆಂದರೆ ಇಷ್ಟವಂತೆ. ಇದಕ್ಕೆ ಕಾರಣ ಇಲ್ಲಿನ ಚಿತ್ರಗಳಲ್ಲಿ ಮಾಸ್ ಮಸಾಲ ಜಾಸ್ತಿ ಇರುತ್ತದೆ. ಅದರಲ್ಲೂ ಸಾಹಸಿ ದೃಶ್ಯಗಳು ಜಾಸ್ತಿ ಇರುತ್ತದೆ ಅನ್ನೋದಾಗಿದೆ. ಹೀಗಾಗಿ ಸೆಹವಾಗ್ ಅವರ ಮಕ್ಕಳು ಯಾಕ್​ ಪಪ್ಪಾ ಹಿಂದಿ ಸಿನಿಮಾ ಮಂದಿಗೆ ಇಂಥ ಚಿತ್ರಗಳನ್ನ ಮಾಡಲು ಸಾಧ್ಯವಿಲ್ಲ ಅಂತ ಪ್ರಶ್ನೆ ಮಾಡುತ್ತಿದ್ದಾರಂತೆ.

ಅಂದಹಾಗೆ ವೀರೆಂದ್ರ ಸೆಹವಾಗ್ ಈ ಮಾತನ್ನ ಹೇಳಿದ್ದು ಕನ್ನಡ ಚಲನಚಿತ್ರ ಕಪ್ ಸೀಸನ್2 ಲಾಂಚ್ ಈವೆಂಟ್‍ನಲ್ಲಿ. ಕಿಚ್ಚ ಸುದೀಪ್ ನೇತೃತ್ವದ ಕನ್ನಡ ಚಲನಚಿತ್ರ ಕಪ್ ಸೀಸನ್2ನಲ್ಲಿ ಈ ಬಾರಿ ಸೆಹವಾಗ್ ಕೂಡ ಭಾಗವಹಿಸುತ್ತಾ ಇರೋದು ಟೂರ್ನಮೆಂಟ್‍ನ ಪ್ರಮುಖ ಆಕರ್ಷಣೆಯಾಗಿದೆ.

 
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ