HOME » NEWS » Entertainment » CREATOR RAJ AND DK COMMENTED ON THEIR DECISION TO PUT SAMANTHA AKKINENI IN BROWN FACE STG AE

The Family Man 2: ಸಮಂತಾ ನಟಿಸಿರುವ ರಾಜಿ ಪಾತ್ರದ ಬಗ್ಗೆ ಸ್ಪಷ್ಟನೆ ಕೊಟ್ಟ ರಾಜ್ - ಡಿಕೆ

ದ ಫ್ಯಾಮಿಲಿ ಮ್ಯಾನ್​ ಸೀಸನ್​ 2 ವೆಬ್ ಸರಣಿಯಲ್ಲಿ ಸಮಂತಾ ನಟಿಸಿರುವ ಪಾತ್ರದ ಬಗ್ಗೆ ಈಗಾಗಲೇ ಸಾಕಷ್ಟು ಮಂದಿ ಟೀಕೆ ಮಾಡುತ್ತಿದ್ದು, ಚರ್ಚೆಗಳೂ ನಡಯುತ್ತಿವೆ. ಈ ರಾಜಿ ಪಾತ್ರದ ಬಗ್ಗೆ ಡಿಕೆ ಹಾಗೂ ರಾಜ್​ ಸ್ಪಷ್ಟನೆ ನೀಡಿದ್ದಾರೆ.

Trending Desk
Updated:June 10, 2021, 3:22 PM IST
The Family Man 2: ಸಮಂತಾ ನಟಿಸಿರುವ ರಾಜಿ ಪಾತ್ರದ ಬಗ್ಗೆ ಸ್ಪಷ್ಟನೆ ಕೊಟ್ಟ ರಾಜ್ - ಡಿಕೆ
ದ ಫ್ಯಾಮಿಲಿ ಮ್ಯಾನ್​ 2 ವೆಬ್​ ಸರಣಿ
  • Share this:
ದ ಫ್ಯಾಮಿಲಿ ಮ್ಯಾನ್  2 ಸರಣಿಯಲ್ಲಿ ದಕ್ಷಿಣದ ಖ್ಯಾತ ತಾರೆ ಸಮಂತಾ ಅಕ್ಕಿನೇನಿ ಪ್ರಮುಖ ಪಾತ್ರವೊಂದಲ್ಲಿ ಕಾಣಿಸಿಕೊಂಡು, ಅದರಲ್ಲಿನ ತಮ್ಮ ನಟನೆಗಾಗಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಆದರೆ ಅವರ ಅಭಿನಯದ ಪಾತ್ರ ‘ರಾಜಲಕ್ಷ್ಮಿ’ ಟೀಕೆಗೆ ಗುರಿಯಾಗಿದೆ. ಅಂದರೆ ಸಮಂತಾ ಅವರು ನಿರ್ವಹಿಸಿರುವ ಪಾತ್ರ, ರಾಜಿ ಅಲಿಯಾಸ್ ರಾಜಲಕ್ಷ್ಮಿಯನ್ನು ಕಂದು ಮುಖದವಳಾಗಿ ತೋರಿಸಿರುವುದರ ಕುರಿತು ಬಹಳಷ್ಟು ಮಂದಿ ಆಕ್ಷೇಪವೆತ್ತಿದ್ದಾರೆ. ಅಂತಹ ಟೀಕೆಗಳ ಬಗ್ಗೆ ದ ಫ್ಯಾಮಿಲಿ ಮ್ಯಾನ್ 2 ಸರಣಿಯ ನಿರ್ಮಾಪಕರಾದ ರಾಜ್ ಮತ್ತು ಡಿಕೆ ಇತ್ತೀಚೆಗೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಫಿಲ್ಮ್ ಕಂಪ್ಯಾನಿಯನ್‍ಗೆ ನೀಡಿರುವ ಸಂದರ್ಶನದಲ್ಲಿ, ‘ಪಾತ್ರವನ್ನು ಕತೆಗೆ ತಕ್ಕಂತೆ ಸೃಷ್ಟಿಸಲು’ ಅವರ ನಿಜವಾದ ಚರ್ಮದ ಬಣ್ಣಕ್ಕಿಂತ ಹೆಚ್ಚು ಕಪ್ಪಾಗಿ ಅವರನ್ನು ತೋರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾವು ‘ಒಂದು ವಿಭಿನ್ನ ಜನಾಂಗ’ಕ್ಕೆ ಸೇರಿದ ನಟಿಯನ್ನು ಆ ಪಾತ್ರ ನಿಭಾಯಿಸಲು ಆಯ್ಕೆ ಮಾಡಿಲ್ಲ ಎಂದಿದ್ದಾರೆ.  ತನ್ನ ಸೌಂದರ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯವಿಲ್ಲದ, ದೈಹಿಕವಾಗಿ ಸದೃಢವಾಗಿದ್ದು ತನಗಿಂತ ದ್ವಿಗುಣ ತೂಕ ವ್ಯಕ್ತಿಯೊಂದಿಗೆ ಹೋರಾಡಬಲ್ಲ, ಆ್ಯಕ್ಷನ್ ಹುಡುಗಿಯ ಪಾತ್ರವನ್ನು ಸಮಂತಾ ಮಾಡಬೇಕೆಂದು ನಾವು ಬಯಸಿದ್ದೆವು ಎಂದು ರಾಜ್ ಹೇಳಿದ್ದಾರೆ.

ಬಿಳಿ ಬಣ್ಣ ಸುಂದರ ಹಾಗೂ ಕಪ್ಪು ಬಣ್ಣ ಸುಂದರವಲ್ಲ . . . .ಎಂಬಂತಹ ಸಂಗತಿಗಳು ಸೌಂದರ್ಯದ ವಿಷಯ ವಸ್ತುವಿಗೆ ಸಂಬಂಧಿಸಿದ್ದು, ಆದರೆ ಈ ಪಾತ್ರ ಅಂತಹ ವಿಷಯದ ವಸ್ತುವಲ್ಲ. ಇದರಲ್ಲಿ ಚರ್ಮದ ಬಣ್ಣದ ಸಂಗತಿಯೇ ಇಲ್ಲ. ನಾವೆಲ್ಲರೂ ಕಂದು ವರ್ಣದ ಛಾಯೆಗಳು. ಪ್ರತಿಯೊಬ್ಬರೂ ಕಂದು ಬಣ್ಣದ ಛಾಯೆಯಾಗಿದ್ದಾಗ, ಈ ಪಾತ್ರಕ್ಕೆ ವಿಭಿನ್ನ ಜನಾಂಗದವರನ್ನು ಆಯ್ಕೆ ಮಾಡಿಕೊಳ್ಳುವ ಪ್ರಶ್ನೆಯೇ ಹುಟ್ಟುವುದಿಲ್ಲ. ಅಲ್ಲದೇ ಇದು ಬೇರೆ ಜನಾಂಗಕ್ಕೆ ಸಂಬಂಧಿಸಿ ವಿಷಯವೂ ಅಲ್ಲ. ಅಂತಹ ವಿಷಯಗಳನ್ನು ತೋರಿಸಲು ನಾವೇನು ಬೇಜವಾಬ್ದಾರಿ ನಿರ್ಮಾಪಕರಲ್ಲ ಎಂದು ರಾಜ್ ಹೇಳಿದ್ದಾರೆ.

ಇದನ್ನೂ ಓದಿ: Kareena Kapoor: ಸೀತೆಯ ಪಾತ್ರಕ್ಕೆ ಸರಿ ಹೊಂದುವುದಿಲ್ಲವಂತೆ ಬಿ-ಟೌನ್​ ಬೇಬೊ ಕರೀನಾ ಕಪೂರ್​..!

ಸಮಂತಾ ಅಕ್ಕಿನೇನಿ ಅವರು ಈ ಪಾತ್ರಕ್ಕಾಗಿ ಮೂರು ತಿಂಗಳು ತರಬೇತಿ ಪಡೆದಿದ್ದರು. ಮಾರ್ಶಿಯಲ್‌ ಆರ್ಟ್ಸ್‌ ಕಲಿಯುವುದರೊಂದಿಗೆ ತಮಿಳಿನ ವಿಭಿನ್ನ ಉಪಭಾಷೆಯನ್ನು ಕೂಡ ಕಲಿತಿದ್ದರು. ಇನ್ನು ಕೂದಲು, ಮೇಕಪ್ ಮತ್ತು ಪೋಷಾಕು, ನಾವು ಪ್ರಸ್ತುತ ಪಡಿಸಿರುವ ಪಾತ್ರಕ್ಕೆ ಸಂಬಂಧಿಸಿರುವುದು. ಅದು ರಾಜಿಯ ಪಾತ್ರ ಹೀಗಿದೆ. ಆ ಪಾತ್ರಕ್ಕೆ ತನ್ನದೇ ಆದ ರೂಪವಿದೆ, ನಡೆಯುವ ಶೈಲಿ ಇದೆ ಮತ್ತು ಆಕೆ ಒಬ್ಬ ಕೊಲೆಗಡುಕ ಯಂತ್ರ.

People watched Family Man 2 complete series on Amazon Prime from Midnight to morning.
ದ ಫ್ಯಾಮಿಲಿ ಮ್ಯಾನ್​ 2 ವೆಬ್​ ಸರಣಿ


ಈ ಹಿಂದೆ ಹೃತಿಕ್ ರೋಷನ್ (ಸೂಪರ್ 30), ಭೂಮಿ ಪಡ್ನೇಕರ್ (ಬಾಲಾ), ರಣವೀರ್​ ಸಿಂಗ್ (ಗಲ್ಲಿ ಬಾಯ್), ಆಲಿಯಾ ಭಟ್ (ಉಡ್ತಾ ಪಂಜಾಬ್) ಅವರ ಪಾತ್ರಗಳನ್ನು ಕಂದು ಬಣ್ಣದಲ್ಲಿ ತೋರಿಸಿದಕ್ಕಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ದ ಫ್ಯಾಮಿಲಿ ಮ್ಯಾನ್ 2 ಸರಣಿಯ ಪಾತ್ರವರ್ಗದಲ್ಲಿ, ಮನೋಜ್ ಬಾಜಪೇಯಿ, ಶರೀಬ್ ಹಮ್ಶಿ, ಪ್ರಿಯಾಮಣಿ, ಶ್ರೇಯಾ ಧನ್ವಂತರಿ, ಸನ್ನಿ ಹಿಂದುಜಾ, ಶಹಾಬ್ ಅಲಿ, ಆಶ್ಲೇಷಾ ಠಾಕೂರ್ ಮತ್ತು ವೇದಾಂತ್ ಸಿನ್ಹಾ ಇದ್ದಾರೆ.
First published: June 10, 2021, 3:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories