ಮುದ್ದಿನ ಮಗಳ ಮದುವೆಗೆ ತಾನೇ ಲಗ್ನಪತ್ರಿಕೆ ವಿನ್ಯಾಸ ಮಾಡಿದ ಕ್ರೇಜಿಸ್ಟಾರ್​ ರವಿಮಾಮ..!

ಸಿನಿಮಾವನ್ನು ಮಗುವಿನಂತೆ ಸಲಹುವ ನಟ, ತಮ್ಮ ಮಗಳ ಮದುವೆಗೆ ಯಾವೆಲ್ಲ ರೀತಿಯ ತಯಾರಿ ಮಾಡಿಕೊಂಡಿರಬೇಡ ಹೇಳಿ. ಮುದ್ದಿನ ಮಗಳು, ಅದರಲ್ಲೂ ಒಬ್ಬಳೇ ಮಗಳು ಗೀತಾಂಜಲಿ. ಮಗಳ ಮದುವೆಗೆ ರವಿಮಾಮ ಖುದ್ದು ಲಗ್ನಪತ್ರಿಕೆ ವಿನ್ಯಾಸ ಮಾಡಿದ್ದಾರಂತೆ. ಅದರ ವಿಶೇಷತೆಗಳು ಇಲ್ಲಿವೆ.

Anitha E | news18
Updated:April 19, 2019, 5:41 PM IST
ಮುದ್ದಿನ ಮಗಳ ಮದುವೆಗೆ ತಾನೇ ಲಗ್ನಪತ್ರಿಕೆ ವಿನ್ಯಾಸ ಮಾಡಿದ ಕ್ರೇಜಿಸ್ಟಾರ್​ ರವಿಮಾಮ..!
ರವಿಮಾಮನ ಮಗಳ ವಿವಾಹದ ಲಗ್ನಪತ್ರಿಕೆ
Anitha E | news18
Updated: April 19, 2019, 5:41 PM IST
- ಅನಿತಾ ಈ, 

ಕ್ರೇಜಿಸ್ಟಾರ್​ ಸಿನಿಮಾಗಳನ್ನು ನೋಡಿದವರಿಗೆ ಅವರು ಎಂಥಾ ರಸಿಕ ಎಂದು ಹೇಳುವ ಅಗತ್ಯ ಇಲ್ಲ. ಅದ್ಭುತವಾದ ಕಲರ್​ಫುಲ್​ ಸೆಟ್​ಗಳು, ಆರ್ಕಷ ವಿನ್ಯಾಸಿತ ಬಟ್ಟೆಗಳು, ರೊಮ್ಯಾಂಟಿಕ್​ ಹಾಡುಗಳಿಗೆ ಟಚ್ಚಿ ಟ್ಯೂನ್​ ಕೊಡುವ ರೊಮ್ಯಾನ್ಸ್​ನ ಹೀರೋ ರವಿಚಂದ್ರನ್​ ಸ್ಯಾಂಡಲ್​ವುಡ್​ನ ರವಿಮಾಮ ಎಂದೇ ಖ್ಯಾತರಾದವರು.

ಇದನ್ನೂ ಓದಿ: ಮತ ಹಾಕಿ ಟ್ರೆಂಡ್​ ಆದ ರಿಯಲ್​ ಸ್ಟಾರ್: ಉಪ್ಪಿ ಸ್ಟೈಲ್​ಗೆ ಫಿದಾ ಆದ ಅಭಿಮಾನಿಗಳು..!

ಸಿನಿಮಾವನ್ನು ಮಗುವಿನಂತೆ ಸಲಹುವ ನಟ, ತಮ್ಮ ಮಗಳ ಮದುವೆಗೆ ಯಾವೆಲ್ಲ ರೀತಿಯ ತಯಾರಿ ಮಾಡಿಕೊಂಡಿರಬೇಡ ಹೇಳಿ. ಮುದ್ದಿನ ಮಗಳು, ಅದರಲ್ಲೂ ಒಬ್ಬಳೇ ಮಗಳು ಗೀತಾಂಜಲಿ. ಮಗಳ ಮದುವೆಗೆ ಸಕಲ ರೀತಿಯಲ್ಲೂ ತಯಾರಿ ನಡೆದಿದೆ.

ಸಿನಿಮಾಗಳನ್ನೇ ಅದ್ಧೂರಿಯಾಗಿ ಮಾಡುವ ಕ್ರೇಜಿಸ್ಟಾರ್​ ಮಗಳ ಮದುವೆ ಎಷ್ಟು ಗ್ರ್ಯಾಂಡ್​ ಆಗಿ ಮಾಡಬೇಡ ನೀವೇ ಯೋಚಿಸಿ. ಈಗ ಮದುವೆ ಅಂದರೆ ಈವೆಂಟ್​ ಮ್ಯಾನೇಜ್ಮೆಂಟ್​ ಸಂಸ್ಥೆಗಳಿಗೆ ಒಪ್ಪಿಸಿ ಹಣ ನೀಡಿದರೆ ಮುಗಿದೇ ಹೋಯಿತು. ಯಾವುದಕ್ಕು ಯೋಚಿಸುವ ಅಗತ್ಯವೇ ಇರುವುದಿಲ್ಲ. ಆದರೆ ರವಿಮಾಮ ಮಾತ್ರ ಮಗಳ ಮದುವೆಗೆ ತಾವೇ ಮುಂದೆ ನಿಂತು ನೋಡಿಕೊಳ್ಳುತ್ತಿದ್ದಾರಂತೆ.

ಇದನ್ನೂ ಓದಿ: ಮಡದಿ ರಾಧಿಕಾ ಜತೆ ಸ್ಪರ್ಧೆಗಿಳಿದ ರಾಕಿಂಗ್​ ಸ್ಟಾರ್​ ಯಶ್​..!ಸದ್ಯ ರವಿಚಂದ್ರನ್​ ಮಗಳು ಗೀತಾಂಜಲಿ ವಿವಾಹದ ಲಗ್ನಪತ್ರಿಕೆ ಸಿದ್ಧವಾಗಿದ್ದು, ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಿಗೆ ತೆರಳಿ ಆತ್ಮೀಯವಾದ ಆಮಂತ್ರಣ ನೀಡುತ್ತಿದ್ದಾರಂತೆ.

ಅದರಲ್ಲೂ ಮುದ್ದಿನ ಮಗಳ ಮದುವೆಯ ಕರೆಯೋಲೆಯನ್ನು ಖುದ್ದು ರವಿಮಾಮನೇ ವಿನ್ಯಾಸ ಮಾಡಿದ್ದಾರಂತೆ. ರವಿಮಾಮ ವಿನ್ಯಾಸ ಮಾಡಿದ ಮೇಲೆ ಅದರಲ್ಲಿ ಪ್ರೀತಿಯ ಸಂಕೇತ ಲವ್​ ಸಿಂಬಲ್​ ಇರಲೇ ಬೇಕಲ್ಲವೆ.

ಲಗ್ನಪತ್ರಿಕೆಯ ವಿಶೇಷತೆಗಳು ಹೀಗಿವೆ:

ಗೀತಾಂಜಲಿ ಅವರ ಮತ್ತೊಂದು ಹೆಸರು ಅಂಜು. ಮನೆಯಲ್ಲಿ ಅವರನ್ನು ಪ್ರೀತಿಯಿಂದ ಅಂಜು ಎಂದು ಕರೆಯಲಾಗುತ್ತದೆ. ಅಂಜು ಮದುವೆಗೆ 3D ಲಗ್ನಪತ್ರಿಕೆ ಮಾಡಿಸಿದ್ದು, ಒಂದಕ್ಕೆ 3-4 ಸಾವಿರ ಖರ್ಚಾಗಿದೆಯಂತೆ. ಪತ್ರಿಕೆಯ ಕವರ್​ ಮೇಲೆ ರವಿಚಂದ್ರನ್​ ಅವರ ಸುಂದರವಾದ ಚಿತ್ರವಿದ್ದು, ಕೆಳಗೆ ನನ್ನ ಮಗಳ ಮದುವೆ (My Daughter's Wedding) ಎಂದು ಬರೆಯಲಾಗಿದೆ. ಅದರ ಮೇಲೆಯೇ ಮದುವೆ ಆಹ್ವಾನ ಮಾಡಲಿರುವ ಅತಿಥಿಗಳ ಹೆಸರನ್ನೂ ಪ್ರತ್ಯೇಕವಾಗಿ ಮುದ್ರಿಸಲಾಗಿದೆ.

ಇನ್ನು ಈ ಕವರ್​ ಒಳಗೆ ಎರಡು ಪತ್ರಿಕೆಗಳಿದ್ದು, ಅದರಲ್ಲಿ ಒಂದು ನೀಲಿ ಬಣ್ಣದ 3D ಪತ್ರಿಕೆಯಾಗಿದ್ದು, ಅದರ ಮೇಲೆ ಕುದುರೆ ಏರಿರುವ ರಾಜಕುಮಾರ ಹಾಗೂ ರಾಜಕುಮಾರಿಯ ಚಿತ್ರವಿದೆ. ಇದೂ ಸಹ ರವಿಮಾಮನ ಕಲ್ಪನೆಯೇ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ರವಿಮಾಮನ ಮಗಳ ಮದುವೆಯ ಕರೆಯೋಲೆ


ಅದರಲ್ಲೇ ಎರಡೂ ಕುಟುಂಗಳ ವಿವರ, ಮದುವೆಯ ದಿನಾಂಕ ಹಾಗೂ ಇತರೆ ಮಾಹಿತಿಗಳಿವೆ. ಮತ್ತೊಂದು ಕಾರ್ಡ್​ನಲ್ಲಿ ರವಿಮಾಮನ ಇಷ್ಟದ ಲವ್​ ಸಿಂಬಲ್​ ಇದ್ದು ಅದರ ಒಳಗೆ ರವಿಮಾಮ, ಪತ್ನಿ ಸುಮತಿ, ಮಕ್ಕಳು ಮನೋರಂಜನ್​ ಹಾಗೂ ವಿಕ್ರಮ್​ ಹೆಸರುಗಳಿವೆ. ಇದರ ಕೆಳಗೆ ಆರತಕ್ಷತೆ ಮತ್ತು ಮದುವೆ ನಡೆಯುವ ದಿನಾಂಕ ಮತ್ತು ಸ್ಥಳದ ವಿವರಗಳಿವೆ. ಇದರಲ್ಲಿ ಎಲ್ಲದಕ್ಕೂ ಮೇಲೆ ಅಂಜು ಹಾಗೂ ಅಜಯ್​ ಎಂದು ಬರೆಯಲಾಗಿದೆ.ಮದುವೆ ಎಲ್ಲಿ ಹಾಗೂ ಯಾವಾಗ ನಡೆಯಲಿದೆ: 

ಕಳೆದ ಫೆಬ್ರವರಿ 23ರಂದು ಗೀತಾ-ಅಜಯ್​ ನಿಶ್ಚಿತಾರ್ಥ ನಡೆದಿತ್ತು. ಮುಂದಿನ ತಿಂಗಳು ಅಂದರೆ ಮೇ 28-29ರಂದು ಅದ್ದೂರಿಯಾಗಿ ಅರಮನೆ ಮೈದಾನದಲ್ಲಿ ಕ್ರೇಜಿಸ್ಟಾರ್​ ಮಗಳು ಗೀತಾಂಜಲಿ ಉದ್ಯಮಿ ಅಜಯ್​ ಅವರನ್ನು ವರಿಸಲಿದ್ದಾರೆ. 28ರಂದು ಸಂಜೆ ಆರತಕ್ಷತೆ ನಡೆಯಲಿದ್ದು, 29ಕ್ಕೆ ವಿವಾಹ ನಡೆಯಲಿದೆ. ಇದಕ್ಕೆ ಚಂದನವನದ ಜತೆಗೆ ಬಾಲಿವುಡ್​, ಸ್ಯಾಂಡಲ್​ವುಡ್​, ಟಾಲಿವುಡ್​ ಹಾಗೂ ಕಾಲಿವುಡ್​ ಸೆಲೆಬ್ರಿಟಿಗಳೂ ಬರಲಿದ್ದಾರೆ.

PHOTOS: ಹಾಟ್ ಫೋಟೋಶೂಟ್​ಗೆ ಪೋಸ್​ ನೀಡಿದ ಕರಾವಳಿ ಕನ್ನಡತಿ ಲಕ್ಷ್ಮಿ ರೈ

First published:April 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ