Drishya 2 Review: ರಾಜೇಂದ್ರ ಪೊನ್ನಪ್ಪನ `ದೃಶ್ಯ’ ಜರ್ನಿ ಸಖತ್​ ಸಸ್ಪೆನ್ಸ್​​, ಸೂಪರ್​ ಥ್ರಿಲ್ಲಿಂಗ್​!

‘ದೃಶ್ಯ 2’ ಸಿನಿಮಾದಲ್ಲಿ ಆ ಕೇಸ್​ ರೀ-ಓಪನ್​ ಆಗುತ್ತದೆ. ಈ ಬಾರಿ ರಾಜೇಂದ್ರ ಪೊನ್ನಪ್ಪನಿಗಿಂತಲೂ ಬುದ್ಧಿವಂತಿಕೆಯಿಂದ ಪೊಲೀಸರು ಕೆಲಸ ಮಾಡುತ್ತಾರೆ. ಅದಕ್ಕೆ ಎದುರಾಗಿ ರಾಜೇಂದ್ರ ಪೊನ್ನಪ್ಪ ಬೇರೆ ರೀತಿಯಲ್ಲಿ ಪ್ಲಾನ್​ ಮಾಡುತ್ತಾನೆ. ನಿಮ್ಮ ಗೆಸ್ಸ್​​ಗಳನ್ನೆಲ್ಲ ರಾಜೇಂದ್ರ ಪೊನ್ನಪ್ಪ ಉಲ್ಟಾ ಮಾಡುತ್ತಾ ಹೋಗುತ್ತಾರೆ.

ದೃಶ್ಯ 2 ಚಿತ್ರದ ಪೋಸ್ಟರ್​​​

ದೃಶ್ಯ 2 ಚಿತ್ರದ ಪೋಸ್ಟರ್​​​

  • Share this:
ರವಿಚಂದ್ರನ್(Ravichandran)​ ನಟನೆಯ ‘ದೃಶ್ಯ’(Drishya) ಸಿನಿಮಾ 2014ರಲ್ಲಿ ಬಿಡುಗಡೆಯಾಗಿ ಕಮಾಲ್​ ಮಾಡಿತ್ತು. ರವಿಚಂದ್ರನ್​ ಅವರ ಸಿನಿಮಾಗಳು ಆ ಸಮಯದಲ್ಲಿ ಹೇಳಿಕೊಳ್ಳುವ ಯಶಸ್ಸು ಗಳಿಸುತ್ತಿರಲಿಲ್ಲ. ದೃಶ್ಯ ಸಿನಿಮಾ ಕೂಡ ಬಿಡುಗಡೆಯಾದ ಪ್ರಾರಂಭದ ದಿನಗಳಲ್ಲಿ ಜನ ಚಿತ್ರಮಂದಿರ(Theater)ಗಳತ್ತ ಬಂದಿರಲಿಲ್ಲ. 2 ದಿನ ಕಳೆದ ಮೇಲೆ ದೃಶ್ಯ ಸಿನಿಮಾ ನೋಡಿದವರ ಮಾತು ಕೇಳಿ ಇಡೀ ಕರುನಾಡೇ ಈ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ತನ್ನ ಕುಟುಂಬ ಉಳಿಸಿಕೊಳ್ಳಲು ಹೋರಾಡುವ ರಾಜೇಂದ್ರ ಪೊನ್ನಪ್ಪ(Rajendra Ponnappa)ನಾಗಿ ರವಿಚಂದ್ರನ್​ ಮಿಂಚಿದ್ದರು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್​​ ಮಾಡಿತ್ತು. ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆತಂದಿತ್ತು. ಮಲಯಾಳಂನ ದೃಶ್ಯಂ ಚಿತ್ರದ ರಿಮೇಕ್​(Remake) ಆಗಿದ್ದ  ದೃಶ್ಯ ಸೂಪರ್​ ಹಿಟ್​ ಆಗಿತ್ತು.  ನಿರ್ದೇಶಕ ಪಿ ವಾಸು(P Vasu) ನಮ್ಮ ನೆಟಿವಿಟಿಗೆ ತಕ್ಕಂತೆ ಸಿನಿಮಾ ಮಾಡಿದ್ದರಯ. ಒಂದು ಮರ್ಡರ್​ ಮಿಸ್ಟರಿ(Murder Mystery) ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು. ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​ ಮುಂತಾದವರು ನಟಿಸಿದ್ದ ಆ ಸಿನಿಮಾದ ಕ್ಲೈಮ್ಯಾಕ್ಸ್(Climax)​ ನೋಡಿ ಪ್ರೇಕ್ಷಕರು ಅಚ್ಚರಿಪಟ್ಟಿದ್ದರು. ಈ ಸಿನಿಮಾ ಮತ್ತೊಂದು ಪಾರ್ಟ್ ಬರಬಹುದು ಎಂದು ಆಗ ಪ್ರೇಕ್ಷಕರು ಊಹಿಸಿದ್ದರು. ಅದರಂತೆ ಈಗ ಆ ಚಿತ್ರದ ಎರಡನೇ ಪಾರ್ಟ್​ ರಿಲೀಸ್ಆ ಗಿದೆ. ದೃಶ್ಯ 2(Drishya 2)  ಬಿಡುಗಡೆಯಾಗಿದ್ದು, ಸಖತ್​ ಸೌಂಡ್​ ಮಾಡುತ್ತಿದೆ. ಮೊದಲೇ ಪಾರ್ಟ್​ಗಿಂತ 2ನೇ ಪಾರ್ಟ್​ ಸಖತ್​ ಥ್ರಿಲ್ಲಿಂಗ್​ ಆಗಿದೆ ಸಿನಿಮಾ ನೋಡಿದ ಪ್ರೇಕ್ಷಕರು ಹೇಳುತ್ತಿದ್ದಾರೆ. 

ಬಿಗಿಯಾದ ಸಿನಿಮಾ ಕಥೆ!

ಜೀತೂ ಜೋಸೆಫ್​ ಅವರು ನಿರ್ದೇಶಿಸಿದ ‘ದೃಶ್ಯಂ 2’ ಸಿನಿಮಾವನ್ನು ಕನ್ನಡದಲ್ಲಿ ‘ದೃಶ್ಯ 2’ ಎಂದು ರಿಮೇಕ್​ ಮಾಡಲಾಗಿದೆ. ಈ ಚಿತ್ರದಲ್ಲಿನ ದೊಡ್ಡ ಶಕ್ತಿಯೇ ಜೀತೂ ಜೋಸೆಫ್​ ಬರೆದಿರುವ ಅದ್ಭುತವಾದ ಕಥೆ. ಈ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್​ ಮಾಡಲಾಗಿದೆ. ‘ದೃಶ್ಯ’ ಸಿನಿಮಾದಲ್ಲಿ ಪೊಲೀಸ್​ ರಾಣೆಯ ಒಳಗೆ ಹೆಣ ಹೂತಿಡುವ ಮೂಲಕ ರಾಜೇಂದ್ರ ಪೊನ್ನಪ್ಪ ತನ್ನ ಕುಟುಂಬವನ್ನು ಕಾಪಾಡಿದ್ದ. ಆದರೆ ‘ದೃಶ್ಯ 2’ ಸಿನಿಮಾದಲ್ಲಿ ಆ ಕೇಸ್​ ರೀ-ಓಪನ್​ ಆಗುತ್ತದೆ. ಈ ಬಾರಿ ರಾಜೇಂದ್ರ ಪೊನ್ನಪ್ಪನಿಗಿಂತಲೂ ಬುದ್ಧಿವಂತಿಕೆಯಿಂದ ಪೊಲೀಸರು ಕೆಲಸ ಮಾಡುತ್ತಾರೆ. ಅದಕ್ಕೆ ಎದುರಾಗಿ ರಾಜೇಂದ್ರ ಪೊನ್ನಪ್ಪ ಬೇರೆ ರೀತಿಯಲ್ಲಿ ಪ್ಲಾನ್​ ಮಾಡುತ್ತಾನೆ. ನಿಮ್ಮ ಗೆಸ್ಸ್​​ಗಳನ್ನೆಲ್ಲ ರಾಜೇಂದ್ರ ಪೊನ್ನಪ್ಪ ಉಲ್ಟಾ ಮಾಡುತ್ತಾ ಹೋಗುತ್ತಾರೆ. ಕೊನೆಗೆ ಅವರು ಪೊಲೀಸ್​​ ಕೈಗೆ ಸಿಕ್ಕಿಬಿಳ್ತಾರಾ ಅಥವಾ ಈ ಬಾರಿಯೂ ತಪ್ಪಿಸಿಕೊಳ್ಳುತ್ತಾರಾ? ಎಂಬ ಪ್ರಶ್ನೆಗೆ ಸಿನಿಮಾ ನೋಡಿ..

ಇದನ್ನು ಓದಿ : ಈ ವರ್ಷದ ಟಾಪ್​ 10 ಬೆಸ್ಟ್​ ಸಿನಿಮಾ, ಸೀರೀಸ್​ಗಳು ಇವೆ: ನೋಡಿಲ್ಲ ಅಂದ್ರೆ ಮಿಸ್​ ಮಾಡ್ದೆ ನೋಡಿ..!

ಥ್ರಿಲ್ಲರ್ ಹಾದಿಯಲ್ಲಿಯೂ ‘ಹಾಸ್ಯ’ದೌತಣ!

ನಿರ್ದೇಶಕ ಜೀತು ಜೋಸೆಫ್ ಬರೆದಿರುವ 'ದೃಶ್ಯಂ 2' ಕಥೆಯನ್ನು ಬಹಳ ಅಚ್ಚುಕಟ್ಟಾಗಿ ಕನ್ನಡಕ್ಕೆ ತಂದಿದ್ದಾರೆ ನಿರ್ದೇಶಕ ಪಿ. ವಾಸು. ರಿಮೇಕ್ ಚಿತ್ರವಾಗಿದ್ದರೂ, ಎಲ್ಲಿಯೂ ಬೋರು ಎನಿಸದಂತೆ ಸಿನಿಮಾ ಮಾಡಿದ್ದಾರೆ. ಅಲ್ಲದೆ, ಸಾಧು ಕೋಕಿಲ ಪಾತ್ರವನ್ನು ಸೃಷ್ಟಿಸಿ, ಥ್ರಿಲ್ಲರ್ ಹಾದಿಯಲ್ಲಿಯೂ ಹಾಸ್ಯವನ್ನು ನೀಡಿದ್ದಾರೆ. 'ದೃಶ್ಯ' ಚಿತ್ರವನ್ನು ಎಲ್ಲೆಲ್ಲಿ ಚಿತ್ರೀಕರಣ ಮಾಡಲಾಗಿತ್ತೋ, ಅದದೇ ಜಾಗಗಳಲ್ಲಿ 'ದೃಶ್ಯ 2' ಶೂಟಿಂಗ್ ಮಾಡಲಾಗಿದೆ. ಮೊದಲ ಭಾಗದಲ್ಲಿದ್ದ ಬಹುತೇಕ ಕಲಾವಿದರು ಇಲ್ಲಿದ್ದಾರೆ.  ಆರಂಭದಲ್ಲಿ ಪ್ಯಾಸೆಂಜರ್‌ ಗಾಡಿಯಂತೆ ನಿಧಾನವಾಗಿ ಸಾಗುವ 'ದೃಶ್ಯ 2', ತರುಣ್ ಶವ ಸಿಕ್ಕ ನಂತರ ಎಕ್ಸ್‌ಪ್ರೆಸ್‌ ವೇಗ ಪಡೆದುಕೊಳ್ಳುತ್ತದೆ.

ಇದನ್ನು ಓದಿ: `ಪುಷ್ಪ’ ಚಿತ್ರದ ಹಾಟ್​ ಐಟಂ ಸಾಂಗ್​ ರಿಲೀಸ್​: ಸಮಂತಾ ಮಾದಕ ಲುಕ್​ಗೆ ಮನಸೋತ ಫ್ಯಾನ್ಸ್!

7 ವರ್ಷಗಳ ಬಳಿಕ ಮತ್ತೆ ಪೊನ್ನಾಪ್ಪನಾಗಿ ಮಿಂಚಿದ ಕ್ರೇಜಿಸ್ಟಾರ್​​!

ರವಿಚಂದ್ರನ್​ ಅವರು 7 ವರ್ಷಗಳ ಬಳಿಕ ರಾಜೇಂದ್ರ ಪೊನ್ನಪ್ಪನಾಗಿ ಆ ಪಾತ್ರವನ್ನು ಮತ್ತೊಮ್ಮೆ ಜೀವಿಸಿದ್ದಾರೆ. ಆರೋಹಿ ನಾರಾಯಣ್​, ನವ್ಯಾ ನಾಯರ್​, ಉನ್ನತಿ, ಆಶಾ ಶರತ್​, ಶಿವಾಜಿ ಪ್ರಭು ಮುಂತಾದವರ ಅಭಿನಯ ಕೂಡ ಮೆಚ್ಚುವಂತಿದೆ.  ಪ್ರಮೋದ್​ ಶೆಟ್ಟಿ ಅವರು ಖಡಕ್​ ಪೊಲೀಸ್​ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನಂತ್​ ನಾಗ್​ ಅವರ ಪಾತ್ರ ಕೂಡ ಕಥೆಗೆ ಬಹುಮುಖ್ಯ ತಿರುವು ನೀಡುತ್ತದೆ.ಕ್ಲೈಮ್ಯಾಕ್ಸ್‌ನಲ್ಲಿ ದೃಶ್ಯಗಳು ಒಂದಕ್ಕೊಂದು ಬೆಸೆಯುವ ಪರಿ ಥ್ರಿಲ್ಲಿಂಗ್ ಅನುಭವ ನೀಡುತ್ತದೆ. ಸಿನಿರಸಿಕರಿಗೆ ದೃಶ್ಯ ಸಿನಿಮಾ ನೀಡಿದ ಥ್ರಿಲ್ಲಿಂಗ್​ನಿಂದ ಹೆಚ್ಚು ಮಜಾ  ದೃಶ್ಯ - 2 ನೀಡುವುದರಲ್ಲಿ ಅನುಮಾನ ಇಲ್ಲ.
Published by:Vasudeva M
First published: